ಅತ್ಯಂತ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದು ಎಲ್ಲ ಮಹಿಳೆಯರ ಸಹಜಗುಣ. ಹಿಂದಿನ ಕಾಲದಲ್ಲಿಯೂ ಸಹ ಸೌಂದರ್ಯ ಪ್ರಸಾಧನಗಳನ್ನು ಕಂಡುಹಿಡಿಯಲಾಗಿತ್ತು. ಅವುಗಳಿಂದ ಮಾಡಿದ ಮೇಕಪ್‌ಗೆ ಟ್ರೆಡಿಶನ್ ಮೇಕಪ್‌ ಎಂದು ಕರೆಯಲಾಯಿತು. ಆ ಸೌಂದರ್ಯ ಪ್ರಸಾಧನಗಳು ಕಡಿಮೆಯಾದಾಗ ಸೌಂದರ್ಯ ಜಗತ್ತಿನಲ್ಲಿ ಹೊಸ ಹೊಸ ಸಂಶೋಧನೆಗಳಾಗತೊಡಗಿದವು. ಅವುಗಳಲ್ಲಿ ಇದುವರೆಗಿನ ಅತ್ಯುತ್ತಮ ಸಂಶೋಧನೆ ಏರ್‌ ಬ್ರಶ್‌ ಮೇಕಪ್‌ ಟೆಕ್ನಿಕ್‌ ಆಗಿದ್ದು, ಅದು ಮಹಿಳೆಯ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಆಯಾಮವನ್ನು ಕೊಟ್ಟಿದೆ.

ಏರ್ಬ್ರಶ್ಮೇಕಪ್ಟೆಕ್ನಿಕ್

ವಿದೇಶಗಳಲ್ಲಿ 60-70 ವರ್ಷಗಳ ಹಿಂದೆ ಸ್ಪ್ರೇ ಟೆಕ್ನಿಕ್‌ ಮತ್ತು ಟ್ರ್ಯಾನ್ಸ್ ಪರೆನ್ಸಿ ಟೆಕ್ನಿಕ್‌ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. ಆದರೆ ಅದರಲ್ಲಿ ಕೆಲವು ಕೊರತೆಗಳೂ ಇದ್ದವು. ಬಾಟ್ಲಿಂಗ್‌ ಸ್ಪ್ರೇ ನಿಂದ ಚರ್ಮದ ಮೇಲೆ ನಿರೀಕ್ಷಿಸಿದಷ್ಟು ಪರಿಣಾಮ ಕಾಣುತ್ತಿರಲಿಲ್ಲ. ಹೀಗಾಗಿ ಅದನ್ನು ಪರಿಷ್ಕೃತಗೊಳಿಸಲಾಯಿತು. ಅದರ ಪರಿಷ್ಕೃತ ರೂಪವೇ ಏರ್‌ ಬ್ರಶ್‌ ಮೇಕಪ್‌ ಟೆಕ್ನಿಕ್‌ ಹೆಸರಿನಿಂದ ಪ್ರಸಿದ್ಧವಾಗಿದ್ದು ಅದರಲ್ಲಿ ಹೈವೋಲ್ಟೇಜ್‌ ಕಂಪ್ರೆಸರ್‌ ಸಹಾಯದಿಂದ ಏರ್‌ ಗನ್‌ ಮೂಲಕ ಸ್ಪ್ರೇ ಮಾಡಲಾಗುತ್ತದೆ.

ಬದಲಾದ ಟ್ರೆಂಡ್

ಭಾರತೀಯ ಮಹಿಳೆಯರಿಗೆ ಅನೇಕ ವರ್ಷಗಳಿಂದ ಫೌಂಡೇಶನ್‌, ಪೌಡರ್‌, ಲಿಪ್‌ಸ್ಟಿಕ್‌, ಬ್ಲಶರ್‌ ಮತ್ತು ಬಿಂದಿ ಮೇಕಪ್‌ನ ಸೂತ್ರಗಳಾಗಿವೆ. ಅವನ್ನು ಉಪಯೋಗಿಸಿಯೂ ಅವರು ಬಯಸಿದ ಸೌಂದರ್ಯ ಸಿಗುತ್ತಿರಲಿಲ್ಲ. ಏಕೆಂದರೆ ಟ್ರೆಡಿಶನಲ್ ಮೇಕಪ್‌ನ ಅತ್ಯಂತ ದೊಡ್ಡ ಅವಗುಣವೆಂದರೆ ಅದು ಅಸಹಜವಾಗಿ ಕಾಣಿಸುವಿಕೆ. ಒಂದು ವೇಳೆ ನಿಮಗೆ ಮೇಕಪ್‌ ಇಷ್ಟವಿದ್ದು ನ್ಯಾಚುರಲ್ ಲುಕ್‌ ಇಷ್ಟಪಡುವಿರಾದರೆ ನಿಮಗೆ ಏರ್‌ ಬ್ರಶ್‌ ಮೇಕಪ್‌ ಟೆಕ್ನಿಕ್‌ ಲಭ್ಯವಿದ್ದು, ಅದರಿಂದ ನ್ಯಾಚುರಲ್ ಗ್ಲೋಯಿಂಗ್ ಸಿಗುತ್ತದೆ.

ಸಾಧಾರಣಕ್ಕಿಂತ ಭಿನ್ನ

ಏರ್‌ ಬ್ರಶ್‌ ಮೇಕಪ್‌ ಪ್ರಾಡಕ್ಟ್ ಗಳು ಲಿಕ್ವಿಡ್‌ ಬೇಸ್ಡ್ ಪ್ರಾಡಕ್ಟ್ ಗಳಾಗಿರುವುದರಿಂದ ಟ್ರೆಡಿಶನ್‌ ಮೇಕಪ್‌ ಪ್ರಾಡಕ್ಟ್ ಗಳಿಗಿಂತ ಭಿನ್ನವಾಗಿರುತ್ತವೆ. ಅದರಿಂದಾಗಿ ಇವು ತ್ವಚೆಯಲ್ಲಿ ಚೆನ್ನಾಗಿ ಮಿಳಿತಗೊಂಡು ಪ್ರಾಕೃತಿಕ ಕಾಂತಿ ಕೊಡುತ್ತವೆ ಹಾಗೂ ಮುಖದ ಕಲೆಗಳು, ಮಚ್ಚೆಗಳು, ಕಪ್ಪು ವರ್ತುಲಗಳು, ಮೊಡವೆಗಳ ಗುರುತು ಇತ್ಯಾದಿ ಕೊರತೆಗಳನ್ನು ಕವರ್‌ ಮಾಡಿ ಮುಖಕ್ಕೆ ಒಂದು ಪಾರದರ್ಶಕ ಲುಕ್‌ ಕೊಡುತ್ತವೆ. ಇದರಿಂದ ಮುಖದ ಕುಂದುಗಳ ಬಗ್ಗೆಯಲ್ಲದೆ ವಿಶೇಷತೆಗಳ ಬಗ್ಗೆ ಜನರ ಗಮನ ಹೋಗುತ್ತದೆ. ಏಕೆಂದರೆ ಮುಖ ಮೊದಲಿಗಿಂತ ಸುಂದರವಾಗಿ ಕಾಣುತ್ತದೆ.

ಏರ್ಗನ್ಮೆಷಿನ್

ಏರ್‌ ಬ್ರಶ್‌ ಮೇಕಪ್‌ ಬಗ್ಗೆ ತಿಳಿಯುವ ಮೊದಲು ಅದರ ಮೆಷಿನ್‌ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ಮೇಕಪ್‌ನಲ್ಲಿ ಏರ್‌ ಗನ್ ಉಪಯೋಗಿಸಲಾಗುತ್ತದೆ. ಅದನ್ನು ಇದರ ಕಂಪ್ರೆಸರ್‌ನೊಂದಿಗೆ ಜೋಡಿಸಲಾಗಿರುತ್ತದೆ. ಏರ್‌ ಗನ್‌ನ ಟ್ಯಾಂಕ್‌ನಲ್ಲಿ ಕೆಲವು ಹನಿ ಪ್ರಾಡಕ್ಟ್ ಹಾಕಲಾಗುತ್ತದೆ. ನಂತರ ಕಂಪ್ರೆಸರ್‌ನ ಕೇಬಲ್‌ನ್ನು ಸ್ವಿಚ್‌ ಬೋರ್ಡ್‌ಗೆ ಕನೆಕ್ಟ್ ಮಾಡಿ ಹೈವೋಲ್ಟೇಜ್‌ ಕಂಪ್ರೆಸರ್ ಮೂಲಕ ಏರ್‌ ಗನ್‌ನಲ್ಲಿ ಹಾಕಿದ ಪ್ರಾಡಕ್ಟ್ ನ್ನು ಪ್ರೆಶರ್‌ನಿಂದ ಕ್ಲೈಂಟ್‌ರ ಮುಖ ಅಥವಾ ದೇಹದ ಭಾಗಗಳ ಮೇಲೆ ಸ್ಪ್ರೇ ಮಾಡಲಾಗುತ್ತದೆ.

ಗಮನಿಸಬೇಕಾದ ವಿಷಯವೆಂದರೆ ಇದರಲ್ಲಿ ಸಾಧಾರಣ ಪ್ರಾಡಕ್ಟ್ ನ್ನು ಉಪಯೋಗಿಸುವುದಿಲ್ಲ. ಇದರಲ್ಲಿ ಲಿಕ್ವಿಡ್‌ ಬೇಸ್ಡ್ ಪ್ರಾಡಕ್ಟ್ ನ್ನು  ಉಪಯೋಗಿಸುತ್ತಾರೆ. ಏರ್‌ ಗನ್‌ನ್ನು ಪ್ರೆಶರ್‌ ಗನ್‌ ಎಂದೂ ಕರೆಯುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ