ಈಚೆಗೆ ಡಿಸ್ಕೋಗೆ ಹೋಗುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ನೀವು ಯಾವುದಾದರೊಂದು ಡಿಸ್ಕೋಗೆ ಹೋಗಬೇಕೆಂದಿದ್ದರೆ, ಬೇರೆಯವರ ಮೇಲೆ ನಿಮ್ಮ ಪ್ರಭಾವದ ಪಡಿಯಚ್ಚು ಬೀರಬೇಕೆಂದಿದ್ದರೆ, ನಾವಿಲ್ಲಿ ವಿವರಿಸುವ ಮೇಕಪ್‌ನ ವಿಧಾನಗಳನ್ನು ತಿಳಿದುಕೊಳ್ಳಿ.

ಫ್ಲ್ಯಾಶಿ ಮೇಕಪ್

ಇಂತಹ ಸಂದರ್ಭದಲ್ಲಿ ಅಷ್ಟಿಷ್ಟು ಫ್ಲ್ಯಾಶಿ ಮೇಕಪ್‌ ಚಮತ್ಕಾರವನ್ನೇ ಮಾಡುತ್ತದೆ. ಜೊತೆಗೆ ಸ್ಪಾರ್ಕ್ಸ್‌ ಮತ್ತು ಬೋಲ್ಡ್ ಕಲರ್ಸ್‌ ನಿಮ್ಮನ್ನು ಪಾರ್ಟಿಗಾಗಿ ಪರ್ಫೆಕ್ಟ್ ಗೊಳಿಸುತ್ತವೆ. ನಿಮ್ಮ ಫೀಚರ್ಸ್ ಬಗ್ಗೆ ಫೋಕಸ್‌ ಮಾಡಿ. ಆದರೆ ಮೇಕಪ್ ಹೆಚ್ಚು ಪ್ರಖರವಾಗದಿರಲಿ. ಏಕೆಂದರೆ ನಿಮಗೆ ಸ್ಟೈಲಿಶ್‌ ಆಗಿ ಕಾಣಬೇಕೇ ಹೊರತು ಚಿತ್ರವಿಚಿತ್ರ ಅಸ್ತವ್ಯಸ್ತದಂತೆ ಕಾಣಬಾರದು.

foundation-1

ಫೌಂಡೇಶನ್

ನೀವು ಡ್ಯಾನ್ಸ್ ಫ್ಲೋರ್‌ ಮೇಲೆ ಹಾಟ್‌ ಲೈಟ್ಸ್ನಲ್ಲಿ ಡ್ಯಾನ್ಸ್ ಮಾಡಲು ಆಸಕ್ತರಾಗಿದ್ದಲ್ಲಿ, ಕೇಕ್‌ ಫೌಂಡೇಶನ್‌ನ ವೈಟ್‌ ಲೇಯರ್ ಹಚ್ಚುವ ಬದಲು ಲೂಸ್‌ ಪೌಡರ್‌ನಿಂದ ಟಚ್‌ ಅಪ್‌ ಮಾಡಿ ಹಾಗೂ ನಿಮ್ಮ ಮುಖದ ಕೊರತೆಗಳನ್ನು ಕವರ್‌ ಮಾಡಿ. ಏಕೆಂದರೆ ಬೆಳಕಿನಲ್ಲಿ ಅವು ಸ್ಪಷ್ಟವಾಗಿ ಗೋಚರಿಸುತ್ತವೆ. ಹೀಗಾಗಿ ಅವನ್ನು ಬಚ್ಚಿಡುವುದು ಅತ್ಯವಶ್ಯ.

glitter

ಆಕರ್ಷಕ ಕಣ್ಣುಗಳು

ಪಾರ್ಟಿ ಮೇಕಪ್‌ ಯಾವಾಗಲೂ ಬೋಲ್ಡ್ ಆಗಿರಬೇಕು. ರಾತ್ರಿಯ ಪಾರ್ಟಿಗಂತೂ ಇದು ತುಂಬಾ ಅತ್ಯವಶ್ಯ. ಕಣ್ಣಿನ ಆಸುಪಾಸು ಲೂಸ್‌ ಗ್ಲಿಟರ್‌ ಹಚ್ಚಿ. ವೈಟ್‌ ಶೇಡ್‌ನ ಮಸ್ಕರಾ ನಿಮ್ಮ ಪಾರ್ಟಿಯನ್ನು ವಿಶೇಷಗೊಳಿಸುತ್ತದೆ.

ಚೀಕ್ಸ್ ಹಾಟ್‌ ಆಗಿ ಕಂಡುಬರಲು ಚೀಕ್ಸ್ ನ್ನು ಹೈಲೈಟ್‌ ಮಾಡಿ. ಡಾರ್ಕ್‌ ಬ್ರೌನಿಶ್‌ ಬ್ಲಶ್‌ ಮತ್ತು ಬಾಡಿ ಗ್ಲಿಟರ್‌ನಿಂದ ಚೀಕ್ ಬೋನ್‌ನ್ನು ಹೈಲೈಟ್‌ ಮಾಡುತ್ತ ಮುಖಕ್ಕೆ ಹೊಸ ರೂಪ ಕೊಡಿ.

beautiful-woman-with-red-lips-girl-322075

ಹಾಟ್ಲಿಪ್ಸ್

ರೆಟ್ರೊ ರೆಡ್‌ ಲಿಪ್‌ಸ್ಟಿಕ್‌ಗೆ ಆದ್ಯತೆ ಕೊಡಿ. ನೈಟ್‌ ಪಾರ್ಟಿಗೆ ಇದು ಅತ್ಯಂತ ಸೂಕ್ತವಾದುದಾಗಿದೆ. ಒಂದು ವೇಳೆ ನೀವು ಕ್ಲಾಸಿಕ್‌ ಲುಕ್ಸ್ ಬದಲಿಗೆ ‌ಪ್ರಾಮುಖ್ಯತೆ ಕೊಡುವವರಾಗಿದ್ದರೆ, ಡಾರ್ಕ್‌ ಪ್ಲಮ್ ಅಥವಾ ಲೈನ್‌ ಶೇಡ್‌ನ ಲಿಪ್‌ಸ್ಟಿಕ್ ಆಯ್ದುಕೊಳ್ಳಿ. ನೀವು ತುಟಿಗಳಿಗೆ ನೈಸರ್ಗಿಕ ಲುಕ್ಸ್ ಬಯಸುವಿರಾದರೆ, ಅದರ ಮೇಲೆ ನಿಮ್ಮ ಮೆಚ್ಚಿನ ಲಿಪ್‌ಸ್ಟಿಕ್‌ ಅಥವಾ ಶಿಮರಿ ಲಿಪ್‌ಗ್ಲಾಸ್‌ ಬಳಸಿ ನೋಡಿ.

ಸ್ಕಿನ್ಟೋನ್ಬಗ್ಗೆ ಗಮನ

ಫೇರ್ಸ್ಕಿನ್‌ : ನಿಮ್ಮದು ಫೇರ್‌ ಕಲರ್‌ ಆಗಿದ್ದಲ್ಲಿ ನೈಟ್‌ ಪಾರ್ಟಿಗಾಗಿ ನಿಮಗೆ ಪಾರದರ್ಶಿ ಕಲರ್ಸ್‌ ಹೆಚ್ಚು ಸೂಕ್ತ. ಲೈಟ್‌ ಅರ್ದಿ ಟೋನ್‌ ಮತ್ತು ಸಾಫ್ಟ್ ಪೇಸ್ಟಲ್ ಶೇಡ್ಸ್ ಅಂದರೆ ಬ್ಲೂ ಮತ್ತು ಲ್ಯಾವೆಂಡರ್‌ ನಿಮಗೆ ಸೂಕ್ತ ಎನಿಸುತ್ತವೆ. ಮಸ್ಕರಾ ಬ್ರೌನ್‌ ಅಥವಾ ಬ್ರೌನ್‌ ಬ್ಲ್ಯಾಕ್‌ ಆಗಿರಲಿ. ಫಿನಿಶಿಂಗ್‌ ಟಚ್‌ಗೆ ವೈಟ್‌ ಪಾರದರ್ಶಿ ಲಿಪ್‌ಸ್ಟಿಕ್‌ ಆಯ್ಕೆ ಮಾಡಿಕೊಳ್ಳಿ. ಫೇರ್‌ ಕಲೆಕ್ಷನ್‌ಗಾಗಿ ಪೀಚ್‌ ಶೇಡ್‌ ಹೆಚ್ಚು ಸೂಕ್ತ.

ಮೀಡಿಯಂ ಟೋನ್ಡ್ ಸ್ಕಿನ್‌ : ನಿಮ್ಮ ವಾರ್ಮರ್‌ ಕಾಂಪ್ಲೆಕ್ಷನ್‌ ನಿಮ್ಮನ್ನು ಅತಿ ಸುಂದರವಾಗಿ ಕಾಣಲು ಸಾಕಷ್ಟು ಆಪ್ಶನ್ಸ್ ನೀಡುತ್ತದೆ. ಅದರ ಲಾಭ ಪಡೆದುಕೊಳ್ಳಿ. ಡೀಪ್‌ ಮ್ಯಾಚ್‌ ಅರ್ದಿ ಟೋನ್ಸ್ ಮತ್ತು ಜ್ಯೂವೆಲ್ ‌ಕಲರ್ಸ್‌ ಅಂದರೆ ಹಂಟರ್‌ ಗ್ರೀನ್ ಡಾರ್ಕ್‌ ಗ್ರೇ ಮತ್ತು ಬ್ರೌನ್‌ ಕಣ್ಣುಗಳ ಮೇಕಪ್‌ಗಾಗಿ ಉತ್ತಮವಾಗಿರುತ್ತವೆ. ಚೀಕ್‌ ಬೋನ್‌ಗಾಗಿ ಕೋರ್‌ನಂತಹ ಶೇಡ್ಸ್ ಸರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ