ತುಸು ಹೆಚ್ಚೇ ಪ್ಯಾಚೆಸ್ ಇರುವಂಥ ಮುಖದ ಮೇಲೆ ಬ್ರೈಡಲ್ ಕರೆಕ್ಟಿವ್ ಮೇಕಪ್ ಹಾಗೂ ಉತ್ತಮ ಹೇರ್‌ಸ್ಟೈಲ್ ಕೂಡ ಸಾಧ್ಯ ಎಂದು ಎಕ್ಸ್ ಪರ್ಟ್ಸ್ ಹೇಳಿದರೆ ನಿಮಗೆ ಆಶ್ಚರ್ಯವಾಗದೇ? ಇದಕ್ಕಾಗಿ ಸರಳ ಸ್ಟೆಪ್ಸ್ ಮೂಲಕ ಮೇಕಪ್ ಮಾಡಬೇಕಾಗುತ್ತದೆ, ಬನ್ನಿ ಈ ವಿಧಾನ ತಿಳಿಯೋಣ.
ಮೇಕಪ್ ಸ್ಟೆಪ್ಸ್ ಎಲ್ಲಕ್ಕೂ ಮೊದಲು ವೆಟ್ ಟಿಶ್ಯು ತೆಗೆದುಕೊಂಡು ಕಂಗಳ ಕೆಳಗೆ, ಹೊರಗಿನ ಕಡೆಗೆ ಶುಚಿಗೊಳಿಸಿ. ಆದರೆ ಇಲ್ಲಿ ಉಜ್ಜಬಾರದು, ಮೃದು ಕೈಗಳಿಂದ ಇಡೀ ಮುಖ ಶುಚಿಗೊಳಿಸಿ.
ನಂತರ ಮಾಯಿಶ್ಚರೈಸರ್ ಹಚ್ಚಿರಿ. 2 ನಿಮಿಷ ಹಾಗೇ ಹಚ್ಚುತ್ತಿರಬೇಕು.
ಮೇಕಪ್ ಮಾಡಿಕೊಳ್ಳುವಾಗ, ನೀವು ಮುಖಕ್ಕೆ ಏನೇ ಹಚ್ಚಿದರೂ, ಅದನ್ನು ನಿಧಾನವಾಗಿ ತಟ್ಟುತ್ತಾ ಹಚ್ಚಬೇಕು, ಉಜ್ಜಬಾರದು.
ಈಗ ಉತ್ತಮ ಕ್ವಾಲಿಟಿಯ ಪ್ರೈಮರ್‌ನ್ನು ಬ್ರಶ್ ನೆರವಿನಿಂದ ಹಚ್ಚಬೇಕು.
ನಂತರ ಯೆಲ್ಲೋ ಟೋನ್‌ನ ಕನ್ಸೀಲರನ್ನು ಹಚ್ಚಬೇಕು ಹಾಗೂ ಪ್ಯಾಚೆಸ್ (ಕಪ್ಪು ಅಥವಾ ಬಿಳುಪು) ಮೇಲೆ ಬೆರಳಿನಿಂದ ಆರೆಂಜ್ ಬೇಸ್ ಹಚ್ಚಿ. ಇಡೀ ಮುಖಕ್ಕೆ ಅಪ್ಲೈ ಮಾಡಿ.
ನಂತರ ಬ್ಲಶರ್‌ನಿಂದ ಟ್ರಾನ್ಸ್ ಲೂಶನ್ ಪೌಡರ್ ಹಚ್ಚಬೇಕು. ಇಷ್ಟವಾದ ಮೇಲೆ ಕಂಗಳ ಮೇಕಪ್ ಮಾಡಿ. ಕಂಗಳನ್ನು ಎಳೆದು ಬ್ರಶ್ಶಿನಿಂದ ಗೋಲ್ಡನ್ ಕಲರ್ ಶೇಡ್ ಹಚ್ಚಬೇಕು. ಇದನ್ನು ನಿಧಾನವಾಗಿ ತಟ್ಟುತ್ತಾ ಹಚ್ಚಬೇಕು.
ಈಗ ಲೈಟ್ ಬ್ರೌನ್ ಕಲರ್‌ನ್ನು ಕಂಗಳ ಸೈಡ್ಸ್ ನಲ್ಲಿ ಕಂಗಳನ್ನು ಸ್ಟ್ರೆಚ್ ಮಾಡಿ ಹಚ್ಚಬೇಕು.
ನಂತರ ಹೈಲೈಟರ್ ಬಳಸಬೇಕು.
ಲೈನರ್ ಜೆಲ್‌ನ್ನು ಕೆಳಗೆ ಹಚ್ಚಿರಿ.
ಐ ಲ್ಯಾಶೆಸ್ ಬಳಿ ರಿಂಕಲ್ಸ್ ಇದ್ದರೆ, ಅಲ್ಲಿ ಕಾಡಿಗೆ ಬದಲಿಗೆ ಜೆಲ್ ಲೈೈನರ್ ಹಚ್ಚಿರಿ.
ನಕಲಿ ಐ ಲ್ಯಾಶೆಸ್‌ನ್ನು ಕೈಗಳಿಂದ ಮಡಿಚಿ ಬಳಸಿರಿ.
ಇದೀಗ ಉತ್ತಮ ರೀತಿಯಲ್ಲಿ ಮಸ್ಕರಾ ತೀಡಿರಿ.
ಕಂಗಳ ಕೆಳಗೆ ಆರೆಂಜ್ ಕನ್ಸೀಲರ್ ಬಳಸಿರಿ ಹಾಗೂ ಸ್ಕಿನ್‌ಗಾಗಿ ಕೂಲಿಂಗ್ ಎಫೆಕ್ಟ್ ವುಳ್ಳ ಬಣ್ಣಗಳನ್ನೇ ಆರಿಸಿ.
ಈಗ ಬ್ರೌನ್ ಐ ಶ್ಯಾಡೋನಿಂದ ಶೇಪ್ ನೀಡುತ್ತಾ ಹಚ್ಚಿಕೊಳ್ಳಿ.
ನಂತರ ಮುಖಕ್ಕೆ ಪಿಂಕ್ ಕಲರ್ ತೀಡಿ, ಕಿವಿಗಳವರೆಗೂ ಪೌಡರ್ ಹಚ್ಚಿರಿ.
ಲೈಟ್ ಕಂಟೂರಿಂಗ್ ಮಾಡಿ. ಹಗಲಿನ ಮೇಕಪ್‌ನಲ್ಲಿ ಪೌಡರ್ ಹಚ್ಚುತ್ತಾ, ಕಿವಿಗಳ ಬಳಿ ಚೀಕ್ ಬೋನ್ಸ್ ವರೆಗೂ ಕೊಂಡುಹೋಗಿ. ಇದೇ ತರಹ ಜಾ ಲೈನ್ಸ್ ಮತ್ತು ಮೂಗಿನ ಬಳಿಯೂ ಮಾಡಿ.
ಈಗ ಬ್ಲಶರ್‌ನಿಂದ ಪಿಂಕ್ ಕಲರ್‌ನ್ನು ಚೀಕ್ಸ್ ಮೇಲೆ ಹಚ್ಚಬೇಕು. ಬ್ಲಶರ್ ಮೇಲೆ ಎಕ್ಸ್ ಟ್ರಾ ಕಲರ್ ಇದ್ದರೆ ಅದನ್ನು ಒದರಿ ಅಪ್ಲೈ ಮಾಡಿ.
ಮೇಕಪ್ ಮಾಡಿಕೊಳ್ಳುವಾಗ 5 ಅಂಶಗಳು ಮಾತ್ರವೇ ಹೈಲೈಟ್ ಆಗಬೇಕು. ಅಂದರೆ ಕೆನ್ನೆ, ಗಲ್ಲ, ಹಣೆ, ತುಟಿ ಮತ್ತು ಮೂಗು.
ಈಗ ಪಿಂಕ್ ಬಣ್ಣ ಹಚ್ಚಿರುವ ಕಡೆ, ಅಲ್ಲಿ ಬಿಳಿ ಅಥವಾ ಕ್ರೀಂ ಕಲರ್‌ನ ಹೈಲೈಟ್‌ನಿಂದ ಡಂಪಿಂಗ್ ಮಾಡಿ ಏಕಗೊಳಿಸಿ.
ಲಿಪ್‌ಸ್ಟಿಕ್ ಹಚ್ಚುವ ಮೊದಲು ಲಿಪ್ ಪೆನ್ಸಿಲ್ ಅಗತ್ಯವಾಗಿ ಬಳಸಿ. ತುಟಿಗಳ ವೀ ಶೇಪ್‌ನಿಂದ ಶುರುಮಾಡಿ, ಕೊನೆಯವರೆಗೂ ಹೋಗಿ. ನಂತರ ತೆಳು ಬ್ರಶ್‌ನಿಂದ ಲಿಪ್‌ಸ್ಟಿಕ್ ಹಚ್ಚಬೇಕು.
ಮೇಕಪ್ ಸೆಟ್ ಮಾಡಲು ಸ್ಟುಡಿಯೋ ಫಿಕ್ಸ್ ಅಗತ್ಯ ಮಾಡಿ. ಇದರಿಂದ ಮೇಕಪ್ ಸುಲಭವಾಗಿ ಸೆಟ್ ಆಗುತ್ತದೆ.