ಫ್ಯಾಷನ್ನಿನ ಪ್ರಪಂಚದಲ್ಲಿ ಮೇಕಪ್‌ಗೆ ತನ್ನದೇ ಆದ ಪ್ರಮುಖ ಪಾತ್ರವಿದೆ. ಪತ್ರಿಕೆಗಳ ಮುಖಪುಟ, ಮಾಡೆಲಿಂಗ್‌, ಸಿನಿಮಾ, ಕಿರುತೆರೆ, ಫ್ಯಾಷನ್‌ ರನ್‌ ರೇಸ್‌ನಿಂದ ಹಿಡಿದು ಫ್ಯಾಷನ್‌ ಇಂಡಸ್ಟ್ರಿಗೆ ವಿಡಿಯೋ ಪ್ರಮೋಶನ್ಸ್ ವರೆಗೂ ಪ್ರತಿ ರಂಗದಲ್ಲೂ ಫ್ಯಾಷನ್‌ ಮೇಕಪ್‌ ಆರ್ಟಿಸ್ಟ್ ತಮ್ಮ ಕೈಚಳಕ ಪ್ರದರ್ಶಿಸುತ್ತಾರೆ.

ಹೀಗಿರಲಿ ಪ್ರಾರಂಭ

ಫ್ಯಾಷನ್‌ ಮೇಕಪ್‌ ಮಾಡಿಕೊಳ್ಳಲು ಎಲ್ಲಕ್ಕಿಂತ ಮೊದಲು ಮುಖ, ಕುತ್ತಿಗೆ ಭಾಗಗಳನ್ನು ವೆಟ್‌ ಟಿಶ್ಯುವಿನಿಂದ ಸ್ವಚ್ಛಗೊಳಿಸಿ. ಕಣ್ಣಿನ ರೆಪ್ಪೆಗಳ ಮೇಲೆ, ಕಂಗಳ ಕೆಳಗೆ ಅಂಡರ್‌ ಐ ಕ್ರೀಂ ಹಚ್ಚಿರಿ. ಇದಾದ ಮೇಲೆ ಚರ್ಮಕ್ಕೆ ಹೊಂದುವ ಫೌಂಡೇಶನ್ನಿನ ತೆಳುವಾದ ಪದರ ಹಚ್ಚಿರಿ. ಆಗ ಐ ಬಾಲ್ಸ್ ಸ್ಕಿನ್‌ ಟೋನ್‌ ತರಹವೇ ಆಗಿಬಿಡುತ್ತದೆ. ನಿಮ್ಮ ಮೆಚ್ಚಿನ ಬಣ್ಣ ಆಗ ಅತ್ಯುತ್ತಮವಾಗಿ ಹೊರಹೊಮ್ಮಲಿದೆ. ಹೆಚ್ಚು ಹೊತ್ತು ಐ ಶ್ಯಾಡೋ ಉಳಿದಿರಬೇಕು ಎಂದರೆ, ಫೌಂಡೇಶನ್‌ ಮೇಲೆ ಟ್ರಾನ್ಸ್ ಲೂಶನ್‌ ಪೌಡರ್ ಬಳಸಿಕೊಳ್ಳಿ.

ಕಂಗಳಿಗೆ ನಿಮ್ಮ ನೆಚ್ಚಿನ ಆಕಾರ ನೀಡಲು ನಿಮ್ಮ ಉಡುಗೆಗೆ ಹೊಂದುವ ಒಂದು ಐ ಶೇಪ್‌ ತಯಾರು ಮಾಡಿ. ಹೀಗೆ ತಯಾರು ಮಾಡಿದ ನಂತರ ಐ ಲ್ಯಾಶೆಸ್‌, ಐ ಲೈನರ್‌, ಮಸ್ಕರಾ ಹಚ್ಚಬೇಕು.

ಇಡೀ ಮುಖ ಮತ್ತು ಕುತ್ತಿಗೆಗೆ ವಿಟಮಿನ್‌ ಕ್ರೀಂ ಹಚ್ಚಿ, ತ್ವಚೆಯನ್ನು ಚೆನ್ನಾಗಿ ಮಾಯಿಶ್ಚರೈಸ್‌ಗೊಳಿಸಿರಿ. ಸ್ಕಿನ್‌ಗೆ ಹೊಂದುವ ಫೌಂಡೇಶನ್‌ ಹಚ್ಚಿರಿ. ಮೇಲ್ಭಾಗದಿಂದ  ಕಾಂಪ್ಯಾಕ್ಟ್ ಹಚ್ಚಿ, ಸ್ಕಿನ್‌ ತಯಾರು ಮಾಡಿ.

ಡಾರ್ಕ್‌ ಬ್ರೌನ್‌ ಕಲರ್‌ ಬಳಸುತ್ತಾ ಫೇಸ್‌ ಕಂಟೂರಿಂಗ್‌ ಮಾಡಿ. ಈ ರೀತಿ ಮುಖಕ್ಕೆ  ಓವಲ್ ಶೇಪ್‌ ನೀಡಿದ ಮೇಲೆ ಕೆನ್ನೆಗಳ ಮೇಲೆ ಸಾಫ್ಟ್ ಪೀಚ್‌ ಕಲರ್‌ನ ಬ್ಲಶರ್‌ ಹಚ್ಚಿರಿ, ಸಹಜವಾಗಿ ಬ್ಯೂಟಿ ಹೆಚ್ಚುತ್ತದೆ. ಆಕರ್ಷಣೆ ಹೆಚ್ಚಿಸಲು ಹೈ ಲೈಟರ್‌ ಬಳಸಿರಿ.

ಹೈ ಡೆಫ್‌ನೆಶನ್‌ ಫ್ಯಾಷನ್‌ ಮೇಕಪ್‌

ಈ ಮೇಕಪ್‌ ಬ್ರೈಡಲ್ ಮತ್ತು ಪಾರ್ಟಿಗಳಿಗೆ ಹೆಚ್ಚು ಒಪ್ಪುತ್ತದೆ. ಈ ಮೇಕಪ್‌ಗೆ ತುಸು ಸಾಫ್ಟ್ ಕಲರ್‌ ಬಳಸುತ್ತಾ ಹೇರ್‌ ಸ್ಟೈಲ್ ಬೋಲ್ಡ್ ಇರಿಸಬೇಕು.

ಎಲ್ಲಕ್ಕೂ ಮೊದಲು ಸ್ಕಿನ್‌ನ್ನು ವೆಟ್‌ ಟಿಶ್ಯುವಿನಿಂದ ಸ್ವಚ್ಛಗೊಳಿಸಿ. ನಂತರ ಕಂಗಳ ಬಳಿ ಅಂಡರ್‌ ಐ ಕ್ರೀಂ ಹಚ್ಚಿರಿ. ಇದರ ಮೇಲೆ ಸ್ಕಿನ್‌ಗೆ ಹೊಂದುವಂಥ ಫೌಂಡೇಶನ್‌ ಬಳಸಿರಿ. ಫೌಂಡೇಶನ್‌ ಹಚ್ಚುವ ಸಮಯದಲ್ಲಿ ಲಾಫಿಂಗ್‌ ಲೈನ್ಸ್, ಐ ಕಾರ್ನರ್ಸ್‌, ಲಿಪ್ ಕಾರ್ನರ್ಸ್‌ಗಳ ಕಡೆ ಹೆಚ್ಚು ಗಮನವಿರಲಿ. ಓಪನ್‌ ಪೋರ್ಸ್‌ನ್ನು ಚೆನ್ನಾಗಿ ಫಿಲ್ ಮಾಡಬೇಕು. ಈಗ ಟ್ರಾನ್ಸ್ ಲೂಶನ್‌ ಪೌಡರ್ ತೀಡಿ ಸ್ಕಿನ್‌ನ್ನು ಒಂದೇ ಸಮನಾಗಿ ಮಾಡಿಕೊಳ್ಳಿ.

ಲಿಪ್‌ ಮೇಕಪ್‌

ಬಣ್ಣಗಳು ಅಂದರೆ ತೆಳು ಮತ್ತು ಗಾಢ ನೀಲಿ ಬೆರೆಸುತ್ತಾ ಲಿಪ್‌ ಶೇಪ್‌ ತಯಾರು ಮಾಡಿ. ಫ್ಯಾಷನ್‌ ಮೇಕಪ್‌ನಲ್ಲಿ ಡಾರ್ಕ್‌ ಕಲರ್ಸ್‌ ಲಿಪ್‌ಸ್ಟಿಕ್‌ ಎದ್ದು ಕಾಣುತ್ತವೆ. ಮೇಕಪ್‌ ಸುದೀರ್ಘ ಕಾಲ ಉಳಿಯಲು, ಮೇಕಪ್‌ ಫಿಕ್ಸರ್‌ ಬಳಸಿಕೊಳ್ಳಿ. ಮಾಡೆಲ್ ‌ಲುಕ್ ಬೇಕೆನಿಸಿದರೆ, ಹೇರ್‌ಸ್ಟೈಲ್ ಅದೇ ತರಹ ಮಾಡಿ ಮೇಕಪ್‌ ಕಂಪ್ಲೀಟ್‌ ಮಾಡಿ.

ಐ ಮೇಕಪ್

ಕಂಗಳಿಗೆ ಬೇಕಾದ ಆಕಾರ ನೀಡಲು ನಿಮ್ಮ ಡ್ರೆಸ್‌ಗೆ ಹೊಂದುವ ಬಣ್ಣಗಳದ್ದನ್ನೇ ಆರಿಸಿ. ನಂತರ ಲೈನರ್ಸ್ ಕಾಜಲ್‌ನಿಂದ ಇನ್ನು ಮತ್ತಷ್ಟು ಸುಂದರಗೊಳಿಸಿ. ಮುಖಕ್ಕೆ ಫೇಸ್‌ ಪ್ರೈಮರ್‌ ಹಚ್ಚಿ ಸಿಲಿಕಾನ್‌ ಫೌಂಡೇಶನ್‌ ಬಳಸಿರಿ. ಆಗ ಮೇಕಪ್‌ ಹೆಚ್ಚು ಹೊತ್ತು ಉಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ