ಬಾಲಿವುಡ್‌ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಬಹುತೇಕ ನಟಿಯರು ತಮ್ಮ ತೆಳುಕಾಯ ಇನ್ನಷ್ಟು ಚಂದ ಕಾಣಬೇಕೆಂದು, ಮುಖದ ಕಳೆ ಹೆಚ್ಚಿಸಲೆಂದು ಈ ರೀತಿಯ ಮೇಕಪ್‌ಗೆ ಮೊರೆಹೋಗುತ್ತಾರೆ. ಆದರೆ ಅವರ ತೆಳುಕಾಯಕ್ಕೆ ಹೊಂದದೆ ಅವರ ಮುಖ ಬೇರೆ ತರಹ ಇರುತ್ತದೆ, ಭಾರಿ ಎನಿಸುತ್ತದೆ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಇಲ್ಲ ಅಲ್ಲವೇ...? ಏಕೆಂದರೆ ಅಲ್ಲೇನೂ ಲೋಪದೋಷ ಕಾಣಿಸದಂತೆ ಈ ತರಹದ ಮೇಕಪ್‌ನಿಂದ ಮುಖವನ್ನು ಅಷ್ಟು ಬ್ಯೂಟಿಫುಲ್ ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲ ಕೆಲವು ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್ಸ್ ಮೂಲಾಧಾರ. ಇದರಿಂದ ದುಬಾರಿ ಸರ್ಜರಿಯ ನೆರವಿಲ್ಲದೆ ನಿಮ್ಮ ಮುಖವನ್ನು ತೆಳು ಹಾಗೂ ಸುಂದರವಾಗಿ ತೋರಿಸಬಹುದು.

ಪರ್ಫೆಕ್ಟ್ ಐಸ್

ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನಲ್ಲಿ ಮುಖ್ಯವಾಗಿ ಕಣ್ಣುಮೂಗು ಹುಬ್ಬುಗಳು ಇತ್ಯಾದಿ ಎಲ್ಲ ನೀಟಾಗಿ ಕಾಣುವಂತೆ ಮಾಡಲಾಗುತ್ತದೆ. ಉದಾ : ನಿಮ್ಮ ಕೆನ್ನೆ ತುಂಬಿಕೊಂಡಿದೆ ಎನಿಸಿದರೆ, ಅವನ್ನು ತುಸು ಕಡಿಮೆ ಮಾಡಿ ತೋರಿಸಲು, ಕಂಗಳ ಮೇಕಪ್‌ ಹೇಗಿರಬೇಕೆಂದರೆ ಸಣ್ಣ ಕಂಗಳು ಸಹ ದೊಡ್ಡದಾಗಿ ಕಾಣುವಂತಿರಬೇಕು. ಅದಕ್ಕಾಗಿ ಈ ಸಲಹೆ ಅನುಸರಿಸಿ :

ಕೃತಕ ರೆಪ್ಪೆ ಬಳಸಿರಿ. ನೈಜ ರೆಪ್ಪೆಯ ಜೊತೆ ಬೆರೆಸಿ, ಮಸ್ಕರಾದ ಡಬಲ್ ಕೋಟಿಂಗ್‌ ಮಾಡಿ.

ಔಟರ್‌ ಕಾರ್ನರ್‌ ಬಳಿ ಲೈನರ್‌ನ್ನು ಸ್ಮಜ್‌ ಮಾಡಿ ಹಚ್ಚಿರಿ.

ಬ್ಲ್ಯಾಕ್‌ ಕಾಜಲ್ ಬದಲು ಲೈಟ್‌ ಪೆನ್ಸಿಲ್ ‌ಬಳಸಿರಿ.

ಲೈನರ್‌ ಹಚ್ಚುವಾಗ ಮೇಲಿನ ರೆಪ್ಪೆಗೆ ಲೈನರ್‌ನ ದಪ್ಪ ಲೈನ್‌ ಹಾಗೂ ಕೆಳ ರೆಪ್ಪೆಗೆ ತೆಳು ಲೈನ್‌ ಎಳೆಯಿರಿ.

ಕ್ಯಾಟ್‌ ಐಸ್‌ ಲುಕ್‌ ಕ್ರಿಯೇಟ್‌ ಮಾಡಿ. ಆದರೆ ಬ್ಲ್ಯಾಕ್‌ ಕಲರ್‌ ಬಳಸಬೇಡಿ, ಬದಲಿಗೆ ಬ್ಲ್ಯಾಕ್‌ನ್ನು ಶೇಡಿಂಗ್‌ ಸಮಯದಲ್ಲಿ ಮಾತ್ರ ಬಳಸಿರಿ.

ಕಂಗಳನ್ನು ದೊಡ್ಡದಾಗಿ ತೋರಿಸಲು ಕಲರ್‌ ಬ್ಲಾಸ್ಟ್ ಯಾ ಕಾಂಟ್ರಾಕ್ಟ್ ಲೈನರ್‌ ಬಳಸಿರಿ.

ಕೆಳ ಭಾಗದ ರೆಪ್ಪೆಗೆ ಪಾರದರ್ಶಕ ಮಸ್ಕರಾ ಹಚ್ಚಿರಿ.

ಕಂಗಳನ್ನು ಬೋಲ್ಡ್ ಆಗಿಸಲು ಕಲರ್‌ ಕಾಂಟ್ಯಾಕ್ಟ್ ಲೆನ್ಸ್ ಬಳಸಿರಿ.

ಕಂಗಳ ರೆಪ್ಪೆ ಮೇಲೆ ಶಿಮರ್‌ ಬೇಜ್‌ ಐ ಶೇಡ್‌ನ್ನು ಬಳಸಿ.

ಐ ಶೇಡ್‌ನ 2-3 ಕಲರ್‌ ಮ್ಯಾಚ್‌ ಮಾಡಿ ಐ ಮೇಕಪ್‌ ಮಾಡುವುದರಿಂದ ಕಂಗಳು ಮತ್ತಷ್ಟು ಎದ್ದು ಕಾಣುತ್ತವೆ.

ಜೂಸಿ ಲಿಪ್ಸ್

ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನಲ್ಲಿ ಚಬ್ಬಿ ಚೀಕ್ಸ್ ನ್ನು ತಗ್ಗಿಸಿ ತೋರಿಸಲು ತುಟಿಗಳನ್ನು ಕೂಡ ಎತ್ತಿ ತೋರಿಸಬೇಕು. ಮೇಕಪ್

ಆರ್ಟಿಸ್ಟ್ ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನ್ನು ಬಳಸಿ ಸ್ಕಿನ್‌ ಟೋನ್‌ಗೆ ತಕ್ಕಂತೆ, ತುಟಿಗಳ ಬ್ಯೂಟಿ ಮತ್ತಷ್ಟು ಢಾಳಾಗಿ ಎದ್ದು ಕಾಣುವಂತೆ, ಸೆನ್ಶುಯೆಲ್ ‌ಲಿಪ್‌ ಸ್ಟಿಕ್‌ ಶೇಡ್‌ ಬಳಸುತ್ತಾರೆ.

ಲಿಪ್‌ಸ್ಟಿಕ್‌ನ್ನು ಸದಾ ತುಟಿಗಳ ಮೂಲೆಯಿಂದ ಮಧ್ಯ ಭಾಗದಲ್ಲಿ ತುಂಬಿಸಬೇಕು.

ಲಿಪ್‌ಸ್ಟಿಕ್‌ ಹಚ್ಚಿದ ನಂತರ ಅದರ ಮೇಲೆ ಲಘುವಾಗಿ ಲಿಪ್‌ ಗ್ಲಾಸ್‌ ಯಾ ಹೈಗ್ಲಾಸ್‌ ತೀಡಿರಿ.

ಲಿಪ್‌ಸ್ಟಿಕ್‌ ಹಚ್ಚಿದ ಮೇಲೆ ಮ್ಯಾಟ್‌ ಎಫೆಕ್ಟ್ ಗಾಗಿ ಟಿಶ್ಶು ಪೇಪರ್‌ ಇರಿಸಿ, ಪೌಡರ್‌ ಹಚ್ಚಿರಿ.

ಗ್ಲಾಮರಸ್‌ ಲುಕ್ಸ್ ಗಾಗಿ, ರೆಗ್ಯುಲರ್‌ ಲಿಪ್‌ಸ್ಟಿಕ್‌ಗೆ ಗೋಲ್ಡ್ ಪಿಗ್ಮೆಂಟ್‌ ಮಿಕ್ಸ್ ಮಾಡಿ.

ಮ್ಯಾಕ್‌ ಕ್ರೆವ್‌ ಸ್ಟಿಕ್‌ ಲಿಪ್‌ ಲೈನರ್‌ನಿಂದ ತುಟಿಗಳಿಗೆ ಸೆನ್ಶುಯೆಸ್‌ ಲುಕ್ಸ್  ನೀಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ