- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಜೆಸಿ: ದಿ ಯೂನಿವರ್ಸಿಟಿ
ನಿರ್ಮಾಣ: ಡಾಲಿ ಧನಂಜಯ್
ನಿರ್ದೇಶನ: ಚೇತನ್ ಜಯರಾಮ್
ತಾರಾಂಗಣ: ಸೂರ್ಯ ಪ್ರಖ್ಯಾತ್, ರಂಗಾಯಣ ರಘು, ಥ್ರಿಲ್ಲರ್ ಮಂಜು, ಭಾವನಾ ರೆಡ್ಡಿ ಪ್ರಖ್ಯಾತ್ ಪರಮೇಶ್ ಹಾಗೂ ವಿಜಯ್ ಸಿಂಹ ಇತರರು.
ರೇಟಿಂಗ್: 3/5
ಮಧುಸೂಧನ್ ಅಲಿಯಾಸ್ ಮ್ಯಾಡಿ (ಸೂರ್ಯ ಪ್ರಖ್ಯಾತ್) ಕಾಲೇಜು ವಿದ್ಯಾರ್ಥಿ. ತಂದೆಯ ಪ್ರೀತಿಯ ಮಗ. ಅವನಿಗೆ ತನ್ನ ಸಹಪಾಠಿ ಮೇಘನಾ (ಭಾವನಾ) ಮೇಲೆ ಪ್ರೀತಿ ಆಗುತ್ತದೆ. ಅವಳಿಗೆ ಓರ್ವ ಅನಾಮಿಕ ಕಿರುಕುಳ ಕೊಟ್ತಾಗ ಅದರಿಂದ ಅವಳನ್ನು ಫಾರು ಮಾಡಲು ಹೋಗಿ ತಾನು ರೌಡಿಗಳ ಸಂಪರ್ಕಕ್ಕೆ ಬರುವ ಮ್ಯಾಡಿ ಅಲ್ಲಿಂದ ಆಕಸ್ಮಿಕವಾಗಿ ನ್ಯಾಯಾಂಗ ಬಂಧನ (ಜುಡಿಷಿಯಲ್ ಕಸ್ಟಡಿ - ಜೆಸಿ) ಕ್ಕೆ ಒಆಲಗಾಗಿ ಜೈಲುಪಾಲಾಗುತ್ತಾನೆ. ಅಲ್ಲಿಂದ ಅವನ ಜೀವನ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಮುಂದೆ ಜೀವನ ಹೇಗೆ ಸಾಗುತ್ತದೆ ಅಂತಿಮವಾಗಿ ಅವನು ಮೇಘನಾಳ ಜೊತೆ ಸೇರಿದನೆ? ಇದನ್ನು ತಿಳಿಯಲು ನೀವು ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ನೋಡಬೇಕು..
ಇತ್ತೀಚೆಗೆ ಆಗಾಗಾ ಸುದ್ದಿಯಾಗುತ್ತಿರುವ ಜೈಲಿನಲ್ಲಿನ ಅಕ್ರಮ ಅವ್ಯವಹಾರಗಳನ್ನೆಲ್ಲಾ ಚಿತ್ರದಲ್ಲಿ ತೋರಿಸುವ ಪ್ರಯತ್ನವಾಗಿದೆ. ಇದೊಂದು ಪಕ್ಕಾ ರಾ ಚಿತ್ರ. ಇಲ್ಲಿ ಸಾಕಷ್ಟು ರಕ್ತ ಹರಿಯುತ್ತವೆ. ಕೊಲೆಗಳಾಗುತ್ತವೆ. ಈ ಕಾರಣದಿಂದಲೇ ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡಲಾಗಿದೆ. ಕೆಟ್ಟ ಕೆಲಸ ಮಾಡಿ ಜೈಲು ಸೇರಿದರೆ ಅದು ನಮ್ಮನ್ನು ಕಾಡುವ ಪಶ್ಚತಾಪಕ್ಕಿಂತಲೂ ಕ್ರೂರವಾಗಿರುತ್ತದೆ ಎಂಬುದನ್ನು ನಿರ್ದೇಶಕರು ಮನದಟ್ಟು ಮಾಡೋ ಪ್ರಯತ್ನ ಮಾಡಿದ್ದಾರೆ. ಭೂಗತಲೋಕದ ಕಥೆಯನ್ನು ನಾನ್-ಲೀನಿಯರ್ ನಿರೂಪಣೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರೂಪಣೆ ನೀರಸವಾಗಿದ್ದರೂ ಚಿತ್ರದ ಸಂಬಾಷಣೆಯ ಮೂಲಕ ಅದನ್ನು ಸರಿದೂಗಿಸುವ ಪ್ರಯತ್ನ ನೋಡಬಹುದು. ಇನ್ನು ದ್ವಿತೀಯಾರ್ಧಕ್ಕಿಂತ ಮೊದಲ ಭಾಗ ಹೆಚ್ಚು ಗಟ್ಟಿಯಾದ ಕಥೆ ಹೊಂದಿದೆ.
ನಟನೆ ವಿಷಯಕ್ಕೆ ಬಂದರೆ ‘ನಡುವೆ ಅಂತರವಿರಲಿ’ ಚಿತ್ರದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರ್ಯ ಪ್ರಖ್ಯಾತ್, ಜೆಸಿ ಯಲ್ಲಿ ರಕ್ತದಲ್ಲೇ ಸ್ನಾನ ಮಾಡಿದ್ದಾರೆ. ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಪ್ರೇಯಸಿ ಪಾತ್ರದಲ್ಲಿ ಭಾವನಾ ರೆಡ್ಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.ಲ್ಲರ್ ಮಂಜು ‘ಗುರು’ವಾಗಿ, ರಂಗಾಯಣ ರಘು ತಂದೆಯಾಗಿ ತಮ್ಮ ಎಂದಿನ ಅನುಭವಪೂರ್ಣ ನಟನೆ ಪ್ರದರ್ಶಿಸಿದ್ದಾರೆ. ವಿಲನ್ಗಳಾದ ಕವಳ, ರಾಕಾ ಟ್ವಿನ್ಸ್ ಪಾತ್ರಗಳು ಹೈಲೈಟ್ ಆಗುತ್ತದೆ..
ಸಿನಿಮಾದಲ್ಲಿ ನಾಲ್ಕೈದು ಹಾಡುಗಳು ಬರುತ್ತವೆಯಾದರೂ ಹಿನ್ನೆಲೆ ಸಂಗೀತ, ಹಾಡು ಯಾವುದು ಸಹ ಮನಸ್ಸಿಗೆ ತಟ್ಟುವುದಿಲ್ಲ.
ಒಟ್ಟಾರೆ ಹೇಳಬೇಕೆಂದರೆ ಕನ್ನಡದಲ್ಲಿ ಈ ಹಿಂದೆ "ಜೋಗಿ", "ಎಕ್ಕ" ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಇರುವಂತೆ ಮುಗ್ದ ಯುವಕನೊಬ್ಬ ಆಕಸ್ಮಿಕವಾಗಿ ಭೂಗತ ಲೋಕ ಪ್ರವೇಶಿಸುವುದು ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ಅವನಿಗೊಂದು ಪರಿವರ್ತನೆ ಕೊಡುವುದು ಇಂತಹಾ ಸಿನಿಮಾಗಳ ಸಾಲಿಗೆ ಈ "ಜೆಸಿ : ದಿ ಯೂನಿವರ್ಸಿಟಿ" ಚಿತ್ರವೂ ಸೇರಿದೆ. ಒಮ್ಮೆ ನೋಡಬಹುದಾದ ಚಿತ್ರ ಎನ್ನಲು ಅಡ್ಡಿ ಇಲ್ಲ...





