ಚುಮು ಚುಮು ಚಳಿ ಈಗಾಗಲೇ ಶುರುವಾಗಿದೆ. ಜೊತೆಗೆ ಸಮಾರಂಭ, ಪಾರ್ಟಿಗಳೂ ಜೋರಾಗುತ್ತವೆ. ಹೀಗಿರುವಾಗ ಬೇಗ ಬೇಗ ಮೇಕಪ್‌ ಮಾಡಿಕೊಂಡು ಪಾರ್ಟಿಗೆ ಹೊರಡುವುದು ಹೇಗೆ ಎಂದು ನೀವು ಆತಂಕಕ್ಕೆ ಒಳಗಾಗುವಿರಿ. ಅಂಥ ಚಿಂತೆ ಬಿಡಿ, ಇಲ್ಲಿವೆ ಪರಿಹಾರದ ಟಿಪ್ಸ್. ಈ ಟಿಪ್ಸ್ ಅನುಸರಿಸಿ ನೀವು ನಿಮ್ಮ ಸಮಯ ಉಳಿಸಿಕೊಳ್ಳುವುದು ಮಾತ್ರವಲ್ಲದೆ, ಟ್ರೆಂಡಿ ಬ್ಯೂಟಿಫುಲ್ ಲುಕ್ಸ್ ಪಡೆಯಬಹುದು.

- ಮುಖಕ್ಕೆ ಫ್ಲಾಲೆಸ್‌ ಎಫೆಕ್ಟ್ ಒದಗಿಸಲು ಟಿಂಟೆಡ್‌ ಮಾಯಿಶ್ಚರೈಸರ್‌ ಬಳಸಬಹುದು, ಏಕೆಂದರೆ ಈ ದಿನಗಳಲ್ಲಿ ಸ್ಕಿನ್‌ ಲಘುವಾಗಿ ಎಳೆದಂತೆ ಕಂಡುಬರುತ್ತದೆ. ಹೀಗಿರುವಾಗ ಈ ಪದರ ಸ್ಕಿನ್‌ಗೆ ಸಾಫ್ಟ್ ಟಚ್‌ ನೀಡುತ್ತದೆ. ಲೈಟ್‌ ಲುಕ್ಸ್ ನ್ನು ಸದಾ ಹೊಳೆಯುತ್ತಿರುವಂತೆ ಮಾಡಲು ಚೀಕ್ಸ್ ಮೇಲೆ ಸ್ಟ್ಯಾನಿಂಗ್‌ ಮಾಡಿ. ಇದಕ್ಕಾಗಿ  ತುಸು ಜೆಲ್‌ನ್ನು ಚೀಕ್ಸ್ ಮೇಲೆ ಹಚ್ಚಿರಿ, ಮೇಲುಭಾಗಕ್ಕೆ ಮರ್ಜ್‌ ಮಾಡಿ. ಇತ್ತೀಚೆಗೆ ಬ್ಲಶರ್‌ಗಿಂತ ಬ್ರಾಂಝರ್‌ಗೆ ಹೆಚ್ಚು ಮಹತ್ವವಿದೆ. ಹೀಗಾಗಿ ನೀವು ಮುಖಕ್ಕೆ ಕಾಂಟೂರಿಂಗ್‌ ಕೂಡ ಮಾಡಿಸಬಹುದು. ಚೀಕ್‌ ಬೋನ್ಸ್ ನ್ನು ಹೈಲೈಟ್‌ಗೊಳಿಸಲು, ಉತ್ತಮ ಹೈಲೈಟರ್‌ ಬಳಸಿರಿ.

- ನೀವು ಲೈಟ್‌ ಮೇಕಪ್‌ ಇಷ್ಟಪಡುವಿರಾದರೆ ಕಂಗಳಿಗೆ ಬ್ರೌನ್‌, ಬೇಜ್‌ ಇತ್ಯಾದಿ ಶೇಡ್ಸ್ ಬಳಸಬಹುದು. ಬ್ರೈಟ್‌ ಮೇಕಪ್‌ಗಾಗಿ ಕಂಗಳಿಗೆ ಡ್ರೆಸ್ಸಿಗೆ ಹೊಂದುವಂಥ ಅಥವಾ ಕಾಂಪ್ಲಿಮೆಂಟಿಂಗ್‌ ಶಿಮರ್‌ಬೇಸ್ಡ್ ಐಶ್ಯಾಡೋ ಹಚ್ಚಿರಿ. ಐಬ್ರೋಸ್‌ ಕೆಳಗೆ ಡ್ರೆಸ್‌ಗೆ ತಕ್ಕಂತೆ ಗೋಲ್ಡ್, ಸಿಲ್ವರ್‌, ಕಾಪರ್‌ ಕಲರ್‌ಗಳಿಂದ ಹೈಲೈಟ್‌ಗೊಳಿಸಿ. ಇತ್ತೀಚೆಗೆ ವಾಟರ್‌ಲೈನ್‌ ಮೇಲೆ ಕಾಜಲ್ ಔಟ್‌ ಆಫ್‌ ಟ್ರೆಂಡ್‌ ಆಗಿದೆ. ಹೀಗಾಗಿ ಯಾವ ಶೇಡ್‌ನಿಂದ ಹೈಲೈಟ್‌ ಮಾಡುತ್ತೀರೋ, ಅದೇ ಶೇಡ್‌ನ್ನು ವಾಟರ್‌ ಲೈನ್‌ ಮೇಲೆ ಹಾಕಿಡಿ. ಬ್ಲ್ಯಾಕ್‌ ಲೈನರ್‌ ಮಸ್ಕರಾದ ಮಲ್ಟಿಪಲ್ ಕೋಟ್ಸ್ ನಿಂದ ಕಂಗಳನ್ನು ಸಜ್ಜುಗೊಳಿಸಿ.

- ಕಂಗಳಿಗೆ ನ್ಯೂಡ್‌ ಮೇಕಪ್‌ ಮಾಡಿದ್ದರೆ, ಆಗ ತುಟಿಗಳಿಗೆ ಮಾರ್ಸೆಲ್, ರೋಸ್ಟೆಡ್‌ ಕಾಫಿ ಯಾ ಆಕ್ಸ್ ಬ್ಲಡ್‌ ಲಿಪ್‌ಸ್ಟಿಕ್ಸ್ ತೀಡಿರಿ. ಸಂಜೆಯ ಪಾರ್ಟಿಗಳಿಗೆ ಐ ಮೇಕಪ್‌ ಡಾರ್ಕ್‌ ಆಗಿದ್ದರೆ, ಮುಖದಲ್ಲಿ ಮೇಕಪ್‌ ಬ್ಯಾಲೆನ್ಸ್ ಆಗಿರಲು ತುಟಿಗಳಿಗೆ ಲೈಟ್‌ ಶೇಡ್‌ ಅಂದರೆ ಬೇಬಿ ಪಿಂಕ್‌, ಲೈಟ್‌ ಪೀಚ್‌ ಹಚ್ಚಿರಿ.

- ಇತ್ತೀಚೆಗೆ ಉಗುರಿಗೆ ಗ್ಲಿಟರಿ ಎಫೆಕ್ಟ್ ಜೊತೆ ಡೆಕೋರೇಟ್‌ ಸಹ ಮಾಡಬಹುದು. ಇದಕ್ಕೆ ಗ್ಲಿಟರ್‌ ಬೇಸ್ಡ್ ಕೋಟ್ಸ್ ಬಳಸಬಹುದು.  3ಡಿ ಆರ್ಟ್‌ನಲ್ಲಿ  ಸ್ಟಡ್ಸ್ ಯಾ ಸ್ವರೋಸ್ಕಿ ಬಳಸಿ, ನಿಮ್ಮ ಸರಳ ಉಡುಗೆಯನ್ನೂ ಬ್ಯೂಟಿಫುಲ್ ಮಾಡಬಹುದು. ಜೊತೆಗೆ ಆಂಬ್ರೆ ಟ್ರೆಂಡ್‌ ಫಾಲೋ ಮಾಡುತ್ತಾ ನೇಲ್‌‌ಪೇಂಟ್‌ ಹಚ್ಚಿ.

- ಕೂದಲಿಗೆ ಬಣ್ಣ ಹಚ್ಚಿ ಇನ್ನಷ್ಟು ಫ್ಯಾಷನೆಬಲ್ ಆಗಲು, ನಿಮ್ಮ ಕಲರಿಂಗ್‌ನಲ್ಲಿ ಲೇಟೆಸ್ಟ್ ಪ್ಯಾಟರ್ನ್‌ ಬಳಸಿರಿ. ಉದಾ : ಡಿಪ್‌  ಡೈ, ರೇನ್‌ಬೋ, ಆಂಬ್ರೆ ಇತ್ಯಾದಿ. ಇವೆಲ್ಲ ಹೇರ್‌ ಕಲರಿಂಗ್‌ನ ಲೇಟೆಸ್ಟ್ ಪ್ಯಾಟರ್ನ್ಸ್. ಬಣ್ಣ ಹಚ್ಚದೆ ಗಾರ್ಜಿಯಸ್‌ ಲುಕ್‌ ಪಡೆಯಲು, ಕಲರ್‌ಫುಲ್ ಹೇರ್‌ ಎಕ್ಸ್ ಟೆನ್ಶನ್ಸ್ ಬಳಸಿಕೊಳ್ಳಿ.

- ತನುಜಾ ಮೂರ್ತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ