ಬಿಝಿ ಶೆಡ್ಯೂಲ್ ಇರುವಂಥ ಉದ್ಯೋಗಸ್ಥ ವನಿತೆ ಇರಲಿ ಅಥವಾ ಫೆಸ್ಟಿವ್‌ ಸೀಸನ್‌ನಲ್ಲಿ ಬಹಳ ಬಿಝಿಯಾದ ಗೃಹಿಣಿ ಇರಲಿ, ಅವರುಗಳ ಬಳಿ ಫೌಂಡೇಶನ್‌ನಿಂದ ಮೇಕಪ್‌ ಶುರು ಮಾಡಿ ಸೆಟಿಂಗ್‌ ಪೌಡರ್‌ನಿಂದ ಮೇಕಪ್‌ ಕಂಪ್ಲೀಟ್‌ ಮಾಡಿಕೊಳ್ಳುವಷ್ಟು ಸಮಯ ಖಂಡಿತಾ ಇರುವುದಿಲ್ಲ. ಆದರೂ ಇವರುಗಳೂ ಸಹ ಪ್ರೆಸೆಂಟೆಬಲ್ ಲುಕ್ಸ್ ಹೊಂದಲು ಮೇಕಪ್‌ ಮಾಡಿಕೊಳ್ಳಬಹುದು. ಅದು ಹೇಗೆ? ಯಾವ ಟಿಪ್ಸ್ ಇಂಥವರಿಗೆ ಆಗ ನೆರವಾಗುತ್ತದೆ?

BB ಅಥವಾ CC ಕ್ರೀಂ ಬಳಸಿಕೊಳ್ಳಿ : ಮೇಕಪ್‌ ಬೇಸ್‌ ಚೆನ್ನಾಗಿ ಮೂಡಿ ಬಂದಾಗ ಮಾತ್ರ ಓವರ್‌ಆಲ್ ಮೇಕಪ್‌ ಕ್ಯೂಟ್‌ ಆಗಿರಲು ಸಾಧ್ಯ. ಹೀಗಾಗಿ ಹೆಚ್ಚಿನ ಮಹಿಳೆಯರು ಮಾಯಿಶ್ಚರೈಸರ್‌, ಪ್ರೈಮರ್‌, ಕನ್ಸೀಲರ್‌ ಇತ್ಯಾದಿಗಳನ್ನು ಬೇಸ್‌ ಮೇಕಪ್‌ಗಾಗಿ ಬಳಸುತ್ತಾರೆ. ಇದರಿಂದಾಗಿ ಇವರಿಗೆ ಸಾಕಷ್ಟು ಸಮಯವನ್ನು ಬೇಸ್‌ ಮೇಕಪ್‌ಗೇ ಮೀಸಲಿಡಬೇಕಾಗುತ್ತದೆ. ಇಂಥವರು ಸಮಯದ ಉಳಿತಾಯಕ್ಕಾಗಿ BB‌ ಅಥವಾ CC ಕ್ರೀಮ್ ನ್ನು ಬೇಸ್‌ ಮೇಕಪ್‌ಗಾಗಿ ಮಾಡಬೇಕು. ಇಂಥ ಕ್ರೀಮುಗಳು ಮಲ್ಟಿಟಾಸ್ಕಿಂಗ್‌ ಆಗಿರುತ್ತವೆ. ಇವು ಫೌಂಡೇಶನ್‌, ಪ್ರೈಮರ್‌, ಮಾಯಿಶ್ಚರೈಸರ್‌ ಮಾಡುವ ಕೆಲಸನ್ನೂ ಒಟ್ಟಿಗೆ ಮಾಡುತ್ತವೆ.

ಫ್ಲಾಟ್‌ ಟಿಪ್‌ ಐಲೈನರ್‌ ಬಳಸಿ : ಐ ಲೈನರ್‌ ಬಳಸದೆ ಐ ಮೇಕಪ್‌ ಕಂಪ್ಲೀಟ್‌ ಎನಿಸುವುದಿಲ್ಲ. ಆದರೆ ಐ ಶ್ಯಾಡೋ, ಮಸ್ಕರಾ ಹಚ್ಚಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೋ ಅದಕ್ಕಿಂತಲೂ ಎರಡರಷ್ಟು ಸಮಯ ಐ ಲೈನರ್‌ ಹಚ್ಚುವುದಕ್ಕೆ ಹಿಡಿಯುತ್ತದೆ ಎಂಬುದು ನಿಜ. ಹೀಗಾಗಿ ನೀವು ನಿಮ್ಮ ಸಮಯ ಉಳಿಸ ಬಯಸಿದರೆ ಪೆನ್ಸಿಲ್‌ ಯಾ ಬ್ರಶ್‌ನಿಂದ ಲಿಕ್ವಿಡ್‌ ಐ ಲೈನರ್‌ ಹಚ್ಚಿಕೊಳ್ಳುವ ಬದಲು ಫ್ಲಾಟ್‌ ಟಿಪ್‌ ಐ ಲೈನರ್‌ (ಪೆನ್ಸಿಲ್‌ನಂಥ ಐ ಲೈನರ್‌) ಬಳಸಿರಿ. ಇದರಿಂದ ಎಳೆದ ಕೇವಲ ಒಂದು ಲೈನ್‌ ಐ ಮೇಕಪ್‌ಗೆ ಸಾಕಾಗುತ್ತದೆ.

ಚೀಕ್‌ ಬೋನ್‌ ಹೈಲೈಟ್‌ ಮಾಡಿ : ಚೀಕ್‌ ಬೋನ್‌ ಹೈಲೈಟ್‌ ಮಾಡಲು ನೀವು ಸಹ ಬ್ರಶ್‌ನಿಂದ ಬ್ಲಶ್‌ಆನ್‌ ಯಾ ಬ್ಲಶರ್‌ ಹಚ್ಚುವುದರಿಂದ, ಈಗ ನಿಮ್ಮ ವ್ಯಾನಿಟಿಯಲ್ಲಿ ಇದರ ಜಾಗದಲ್ಲಿ ಚೀಕ್‌ ಸ್ಟೇನ್‌ ಇರಿಸಿ. ಇದನ್ನು ಒಂದು ಸಲ ಕೆನ್ನೆಗಳ ಮೇಲೆ ಟಚ್‌ ಮಾಡಿ, ನಂತರ ಬೆರಳುಗಳಿಂದ ಚೀಕ್‌ ಬೋನ್ಸ್ ಮೇಲೆ ಹರಡಿರಿ.

ಮಲ್ಟಿಪಲ್ ಮೇಕಪ್‌ ಪ್ರಾಡಕ್ಟ್ : ಎಷ್ಟು ಸಮಯ ಮುಖದ ಮೇಕಪ್‌ ಮಾಡಲು ಹಿಡಿಸುತ್ತದೋ, ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಿನ ಸಮಯ ವಿಭಿನ್ನ ಪ್ರಾಡಕ್ಟ್ಸ್ ನ್ನು ತೆರೆದು ಬಳಸಿದ ನಂತರ ಮುಚ್ಚಿಡುವುದರಲ್ಲಿ ಆಗಿಹೋಗುತ್ತದೆ. ಆದ್ದರಿಂದ ತರತರಹದ ಪ್ರಾಡಕ್ಟ್ಸ್ ಬಳಸುವ ಬದಲು ಮಲ್ಟಿಪಲ್ ಪ್ರಾಡಕ್ಟ್ಸ್ ನ್ನು ನಿಮ್ಮ ವ್ಯಾನಿಟಿಯಲ್ಲಿ ಇರಿಸಿಕೊಳ್ಳಿ.

- ಮಾಯಿಶ್ಚರೈಸರ್‌ + ಸನ್‌ಸ್ಕ್ರೀನ್‌ ಕೊಳ್ಳುವ ಬದಲು ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್‌ ಕೊಳ್ಳಿರಿ.

- ಎಂಥ ಪೆನ್ಸಿಲ್ ಐ ಲೈನರ್‌ ಕೊಳ್ಳಬೇಕೆಂದರೆ ಅದು ಕಾಜಲ್ + ಐ ಲೈನರ್‌ ಎರಡರ ಕೆಲಸ ಮಾಡುವಂತಿರಬೇಕು. ಹೀಗೆ ಮಾಡುವುದರಿಂದ ಸಮಯದ ಜೊತೆ ಹಣ ಉಳಿತಾಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ