ಮಾಯಿಶ್ಚರೈಸಿಂಗ್‌ ನಿಮ್ಮ ಸ್ಕಿನ್‌ ಶೇರ್‌ಗಾಗಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಲು ಮರೆಯಬೇಡಿ. ಮಾಯಿಶ್ಚರೈಸರ್‌ ಕೊಳ್ಳುವಾಗ ಅದರಲ್ಲಿ ಆಯಿಲ್‌ ಬ್ಯಾಲೆನ್ಸ್ ಸರಿ ಇದೆಯೇ  ಎಂದು ನೋಡಿ. ನೀವು ರಾತ್ರಿ ಮಲಗುವಾಗ ಚರ್ಮಕ್ಕೆ ಎಣ್ಣೆ ಹಚ್ಚುವಿರಾದರೆ ಬಾದಾಮಿ, ಆಲಿವ್‌, ಕೋಕೋನಟ್‌ ಮತ್ತು ಅವಕ್ಯಾಡೊ ಆಯಿಲ್‌ನ್ನೇ ಬಳಸಿ.

ಸನ್‌ಸ್ಕ್ರೀನ್‌ನ ಅಗತ್ಯ

ಚಳಿಗಾಲದಲ್ಲಿ  ಸನ್‌ಸ್ಕ್ರೀನ್‌ನ ಅವಶ್ಯಕತೆ ಇರುವುದಿಲ್ಲ ಎಂಬುದೊಂದು ತಪ್ಪು ಗ್ರಹಿಕೆ. ವಾಸ್ತವವಾಗಿ ಚಳಿಗಾಲದಲ್ಲೂ ನಮ್ಮ ಚರ್ಮ ಬಿಸಿಲಿನ ಸಂಪರ್ಕದಲ್ಲಿರುತ್ತದೆ. ಆದ್ದರಿಂದ ಮನೆಯಿಂದ ಹೊರಡುವ ಮೊದಲು ಸನ್‌ಸ್ಕ್ರೀನ್‌ ಅಗತ್ಯವಾಗಿ ಹಚ್ಚಿಕೊಳ್ಳಿ. ಹೆಚ್ಚು ಕಾಲ ಬಿಸಿಲಿನಲ್ಲಿರುವುದಾದರೆ 2-3 ಗಂಟೆಗಳ ನಂತರ ಇದನ್ನು ಮತ್ತೆ ಹಚ್ಚಿಕೊಳ್ಳಿ.

ಸ್ಕಿನ್‌ ಎಕ್ಸ್ ಪೋಲಿಯೇಶನ್‌

ಚಳಿಗಾಲದಲ್ಲಿ ಸ್ಕಿನ್‌ ಎಕ್ಸ್ ಪೋಲಿಯೇಶನ್‌ ಅಂದರೆ ಚರ್ಮದಿಂದ ಡೆಡ್‌ ಸ್ಕಿನ್‌ಗಳನ್ನು ತೆಗೆಯಲು ಸ್ಕ್ರಬಿಂಗ್‌ನ ಅವಶ್ಯಕತೆ ಇಲ್ಲ ಎನ್ನುವುದೊಂದು ಮಿಥ್ಯೆ. ಚರ್ಮದ ಕೋಮಲತೆ ಮತ್ತು ತಾಜಾತನಕ್ಕಾಗಿ ಸ್ಕಿನ್‌ ಎಕ್ಸ್ ಪೋಲಿಯೇಶನ್‌ ಅವಶ್ಯಕತೆ ಇರುತ್ತದೆ. ಇದರಿಂದ ಡೆಡ್‌ ಸ್ಕಿನ್‌ಗಳು ಹೋಗಿ ಬ್ಲಡ್‌ ಸರ್ಕ್ಯುಲೇಶನ್‌ ಸರಾಗವಾಗಲು ಸಹಕಾರಿಯಾಗುತ್ತದೆ. ಎಕ್ಸ್ ಪೋಲಿಯೇಶನ್‌ ಗೆಮೈಲ್ಡ್ ಮತ್ತು ಸಿ ಮಿನರಲ್‌ಯುಕ್ತ ಸ್ಕ್ರಬ್‌ನ್ನೇ ಬಳಸುವುದು ಒಳ್ಳೆಯದು.

ಬಾಡಿ ರಾಪ್

ಬಾಡಿ ಸ್ಪಾನಲ್ಲಿ ಬಾಡಿ ರಾಪ್‌ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುವುದರಿಂದ ಚಳಿಗಾಲದಲ್ಲಿ ಶರೀರಕ್ಕೆ ಸ್ಛೂರ್ತಿ ದೊರೆಯುತ್ತದೆ. ಈ ಟ್ರೀಟ್‌ಮೆಂಟ್‌ನಲ್ಲಿ ಮಡ್‌ ರಾಪಿಂಗ್‌ ಸೇರಿದಂತೆ ಬಗೆಬಗೆಯ ಲೇಪಗಳನ್ನು ಹಚ್ಚಲಾಗುತ್ತದೆ. ಇದರಿಂದ ಡೆಡ್‌ ಸ್ಕಿನ್‌ಗಳು ಹೋಗಿ ಬ್ಲಡ್‌ ಸರ್ಕ್ಯುಲೇಶನ್‌ ಸರಾಗವಾಗಲು ಸಹಕಾರಿಯಾಗುತ್ತದೆ. ಎಕ್ಸ್ ಪೋಲಿಯೇಶನ್‌ಗೆ ಮೈಲ್ಡ್ ಮತ್ತು ಸಿ ಮಿನರಲ್‌ಯುಕ್ತ  ಸ್ಕ್ರಬ್‌ನ್ನೇ ಬಳಸುವುದು ಒಳ್ಳೆಯದು.

ರಿಫ್ರೆಶಿಂಗ್‌ ಫೇಶಿಯಲ್ ವೈಪ್ಸ್

ಮುಖಕ್ಕೆ ಫೇಸ್‌ ವಾಶ್‌ ಬದಲು ಫೇಸ್‌ ವೈಪ್ಸ್ ಬಳಸಿ. ಇದು ನಿಮ್ಮ ಮುಖಕ್ಕೆ ಫ್ರೆಶ್‌, ಕ್ಲೀನ್‌ ಮತ್ತು ಗ್ಲೋಯಿಂಗ್‌ ಲುಕ್‌ ನೀಡಬಲ್ಲದು. ಮುಖವನ್ನು ಬಾರಿಬಾರಿಗೆ ತೊಳೆಯುವ, ಒಣಗಿಸುವ ಕೆಲಸವಿರುವುದಿಲ್ಲ.

ಗ್ಲೋಯಿಂಗ್‌ ಮೇಕಪ್‌

ಚಳಿಗಾಲದ ತಣ್ಣನೆಯ ಗಾಳಿಯು ಚರ್ಮದ ಕಾಂತಿಯನ್ನು ಕಳೆದುಬಿಡುವುದರಿಂದ ಮೇಕಪ್‌ನ ನಂತರ ಮುಖಕ್ಕೆ ಗ್ಲೋ ಬರುವುದಿಲ್ಲ. ನ್ಯಾಚುರಲ್ ಗ್ಲೋ ಲುಕ್ಸ್ ಗಾಗಿ ಮೊದಲು ಮುಖವನ್ನು ಮಾಯಿಶ್ಚರೈಸ್‌ ಮಾಡಿ. ನಂತರ ನಿಮ್ಮ ಸ್ಕಿನ್‌ಟೋನ್‌ಗಿಂತ ಒಂದು ಶೇಡ್‌ ಡೀಪರ್‌ ಮ್ಯಾಟ್‌ ಪೌಡರನ್ನು ಹಣೆ, ಮೂಗು ಮತ್ತು ಕೆನ್ನೆಗಳಿಗೆ ಹಚ್ಚಿ. ಚರ್ಮದ ಡೆಡ್‌ನೆಸ್‌ ದೂರ ಮಾಡಲು ಫೈನ್‌ ಹೈಲೈಟರ್‌ ಬಳಸಿ. ಆಮೇಲೆ ಗ್ಲಾಮರ್‌ ಗ್ಲೋನಿಂದ ಫೈನ್‌ ಟಚ್‌ ಕೊಡಿ. ಗ್ಲಾಮರ್‌ ಗ್ಲೋ ಪೌಡರ್‌ ನಿಮ್ಮ ಚರ್ಮಕ್ಕೆ ಫ್ರೆಶ್‌ ಅಂಡ್‌ ಟೆಂಡರ್‌ ಲುಕ್ಸ್ ನೀಡುತ್ತದೆ.

ಕಣ್ಣುಗಳ ರಕ್ಷಣೆ

ಬೇಸಿಗೆ ಅಥವಾ ಚಳಿ ಎಲ್ಲ ಕಾಲಗಳಲ್ಲಿಯೂ ನಾವು ಚರ್ಮದ ರಕ್ಷಣೆಗೆ ಹಲವಾರು ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ ಕಣ್ಣುಗಳ ಬಗ್ಗೆ ಅಷ್ಟು ಗಮನ ಕೊಡುವುದಿಲ್ಲ. ಹವಾ ಬದಲಾವಣೆಯು ನಮ್ಮ ಕಣ್ಣುಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಸೀನಿಯರ್‌ ಕನ್ಸಲ್ಟೆಂಟ್‌ ಮತ್ತು ಐ ಸರ್ಜನ್‌ ಆಗಿರುವ ಡಾ. ವಿನೋದ್‌ ಹೇಳುತ್ತಾರೆ. ಅವರ ಪ್ರಕಾರ ಕಣ್ಣುಗಳ ರಕ್ಷಣೆಗೆ ಕನ್ನಡಕ ಬಳಸಬೇಕು. ಆಯಾಸಪೂರ್ಣ ಕಣ್ಣುಗಳಿಗೆ ನ್ಯಾಚುರಲ್ ರಿಲ್ಯಾಕ್ಸರ್‌ ಆದ ರೋಸ್‌ ವಾಟರ್‌ ಉಪಯೋಗಿಸಬಹುದು. ಏನಾದರೂ ಹೆಚ್ಚಿನ ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ