ಒಂದೆಡೆ ಸಂಸ್ಥೆಯು 12ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಒಂದೆಡೆಯ ಪಯಣ, ಪುಸ್ತಕ ಬಿಡುಗಡೆ, ಸಮುದಾಯದವರಿಂದ ನಾಟಕ ಪ್ರದರ್ಶನವನ್ನು ಇದೇ ಗುರುವಾರ ನವೆಂಬರ್ 20ರಂದು ಬೆಳಗ್ಗೆ 9.45ಕ್ಕೆ ಕನ್ನಡ ಭವನದ ನಯನಾ ಸಭಾಂಗಣದಲ್ಲಿ ಏರ್ಪಡಿಸಿದೆ.
ಒಂದೆಡೆ ಸಂಸ್ಥೆಯ ಸ್ಥಾಪಕಿ, ಲೇಖಕಿ ಹಾಗೂ ಸಾಮಾಜಿಕ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರು ಬರೆದಿರುವ “ಯಾರು ಸೂಳೆಯರು?” ಪುಸ್ತಕ ಬಿಡುಗಡೆ ಹಾಗೂ ಸಾಧನ ಮಹಿಳಾ ಸಂಘ ಪ್ರಸ್ತುತಪಡಿಸುವ ಸಮುದಾಯ ಆಧಾರಿತ “ಹಸಿವು ಕನಸು” ಭಾಗ -2 ನಾಟಕ ಈ ಸಂದರ್ಭದಲ್ಲಿ ಪ್ರದರ್ಶನವಾಗಲಿದೆ.
ಅಂಚಿಗೆ ತಳ್ಳಲ್ಪಟ್ಟ ಸಮುದಾಯ ಕರ್ನಾಟಕ ಕಾರ್ಮಿಕ ವರ್ಗದ ಮಹಿಳೆಯರ ಜೀವನಾನುಭವಗಳ “ಹಸಿವು ಕನಸು- ಭಾಗ 2” ನಾಟಕವನ್ನು ದು.ಸರಸ್ವತಿ ರಚಿಸಿದ್ದು, ದೀಪಕ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ ಎನ್ ಮುಕುಂದರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಸೌಮ್ಯ ಎ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ ಎಂ ಗಾಯಿತ್ರಿ, ಖ್ಯಾತ ಮನೋರಂಜನಕಾರರಾದ ಶಾಲಿನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಚಿಂತಕರು ಹಾಗೂ ಲೇಖಕಿ ಡಾ ಕೆ ಶರೀಫಾ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ರಂಗಭೂಮಿ ಹಿರಿಯ ಕಲಾವಿದೆ ಮಂಗಳಾ ಎನ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಶಕುತ್ ಮೋಹಿನಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿಪಿಒ ಚಂದ್ರು, ಲೈಂಗಿಕ ಕಾರ್ಯಕತೆರ್ಯರ ಹಕ್ಕುಗಳ ಹೋರಾಟಗಾರ್ತಿ ಅನಿತಾ ಕುಮಾರಿ, ಹಿಜ್ರಾ ಸಮುದಾಯದ ನಾಯಕಿ ಮೋನಿಕಾ ಮತ್ತಿತರು ಪಾಲ್ಗೊಳ್ಳಲಿದ್ದಾರೆ.





