ಅದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ :

ಚರ್ಮದ ಆರೈಕೆಗಾಗಿ

ಫೇಸ್‌ವಾಶ್‌ : ಚರ್ಮವನ್ನು ಪರಿಸರ ಮಾಲಿನ್ಯದ ಹಾನಿಯಿಂದ ದೂರವಿರಿಸಲು ಇದು ಉತ್ತಮ ಉಪಾಯ. ಪ್ರತಿದಿನ ಕನಿಷ್ಠ 2-3 ಸಲ ಫೇಸ್‌ವಾಶ್‌ ಬಳಸಿ ಮುಖ ತೊಳೆದು ಸ್ವಚ್ಛವಾಗಿರಿಸಿಕೊಳ್ಳಿ. ಆದರೆ ನೀವು ಬಳಸುತ್ತಿರುವ ಈ ಪ್ರಾಡಕ್ಟ್ ಚರ್ಮದ ಮೇಲೆ ಹಾನಿಕಾರಕ ಒರಟುತನ ತರಬಾರದು. ಮುಖ ಒರೆಸಿಕೊಳ್ಳಲು ಫೇಶಿಯಲ್ ವೈಪ್‌ ಬಳಸಿರಿ. ಜೊತೆಗೆ ನಿಯಮಿತವಾಗಿ ಚರ್ಮವನ್ನು ಎಕ್ಸ್ ಫಾಲಿಯೇಟ್‌ಗೊಳಿಸುತ್ತಿರಬೇಕು.

ಇಂಡೋರ್‌ ಆಯಿಲ್‌ ಥೆರಪಿ : ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ವಿಟಮಿನ್‌, ಆರ್ಗನ್‌ ಆಯಿಲ್‌ ಇತ್ಯಾದಿ ನಮ್ಮ ಚರ್ಮಕ್ಕೆ ಹೆಚ್ಚು ಲಾಭಕಾರಿ. ಇದೆಲ್ಲವನ್ನೂ 2-3 ಚಮಚ ಪ್ರಮಾಣದಲ್ಲಿ ಬೆರೆಸಿಡಿ. ವಾರಕ್ಕೆ ಕನಿಷ್ಠ 2-3 ಸಲ ಈ ಆಯಿಲ್‌ ಥೆರಪಿ ಖಂಡಿತಾ ಮಾಡಬೇಕು. ಇದು ಚರ್ಮಕ್ಕೆ ನೈಸರ್ಗಿಕವಾಗಿ ಮಾಯಿಶ್ಚರೈಸ್‌ ಮಾಡಬಲ್ಲದು. ಇದರಿಂದ ಚರ್ಮ ಕೇವಲ ಕೋಮಲ, ಮೃದು ಆಗುವುದಲ್ಲದೆ, ಹೆಚ್ಚಿನ ಕಾಂತಿಯನ್ನೂ ತಂದುಕೊಡುತ್ತದೆ.

ಮಾಸ್ಕ್ : ಪರಂಗಿ, ಬಾಳೆಹಣ್ಣು ಮುಂತಾದವನ್ನು ಕಿವುಚಿ ಬೆರೆಸಿಕೊಂಡು ನಂತರ ಮುಖಕ್ಕೆ ಹಚ್ಚಿ ಮಾಸ್ಕ್ ತರಹ 1-2 ತಾಸು ಹಾಗೇ ಬಿಡಿ. ಇದರಲ್ಲಿ ಆ್ಯಂಟಿಟಾಕ್ಸಿನ್‌ ಗುಣಗಳು ಧಾರಾಳ ಅಡಗಿವೆ. ಹೀಗೆ ಮಾಡಿ ಹೆಚ್ಚಿನ ಲಾಭ ಪಡೆಯಿರಿ. ನಿಮ್ಮದು ಆಯ್ಲಿ ಚರ್ಮ ಆಗಿದ್ದರೆ ನೀವು ಮುಲ್ತಾನಿ ಮಿಟ್ಟಿ ಅಥವಾ ಕ್ಲೇ ಪ್ಯಾಕ್‌ ಸಹ ಕೊಡಬಹುದು.

ನೀವು ಪರ್ಯಾಯವಾಗಿ ಶೀಟ್‌ ಮಾಸ್ಕ್ ಸಹ ಬಳಸಬಹುದು. ಇದರಲ್ಲಿ ಅಡಗಿದ ಅಂಶಗಳು ಚರ್ಮವನ್ನು ಮೃದು, ಕೋಮಲಗೊಳಿಸುತ್ತವೆ.

ತುಟಿಗಳೂ ಕೋಮಲ : ತುಟಿಗಳಿಗಾಗಿ ಅತ್ಯುತ್ತಮ ಲಿಪ್‌ ಬಾಮ್ ಬಳಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಇದರ ಜೊತೆ ಬ್ರಾಂಡೆಡ್‌ ಪೆಟ್ರೋಲಿಯಂ ಜೆಲ್ಲಿ ಹಚ್ಚಬೇಕು.

ಚರ್ಮ ಉಸಿರಾಡುತ್ತಿರಲಿ : ಪ್ರತಿದಿನ ಚರ್ಮವನ್ನು ಕ್ಲೆನ್ಸಿಂಗ್‌, ಟೋನಿಂಗ್‌ ಇತ್ಯಾದಿಗಳಿಗೆ ಗುರಿ ಮಾಡಿ. ಜೊತೆಗೆ ಅದನ್ನು ಮಾಯಿಶ್ಚರೈಸ್‌ ಮಾಡಲು ಮರೆಯದಿರಿ. ನೀವು ಹಾಗೆ ಮಾಡದಿದ್ದರೆ, ರಾತ್ರಿ ಹೊತ್ತು ಮೇಕಪ್‌ಗಾಗಿ ಬಳಸಿದ ಅಂಶಗಳು ನಿಮ್ಮ ಚರ್ಮಕ್ಕೆ ಹಾನಿ ಮಾಡಬಲ್ಲವು.

ಕೂದಲಿನ ಆರೈಕೆ ಸ್ವಚ್ಛತೆ : ಚರ್ಮದ ತರಹವೇ ಕೂದಲಿಗೂ ಸಹ ನಿಯಮಿತವಾಗಿ ಆರೈಕೆ ಮಾಡಬೇಕು. ನಿಮ್ಮ ಕೂದಲು ಕಲರ್ಡ್‌ ಯಾ ಕೆಮಿಕಲಿ ಟ್ರೀಟೆಡ್‌ ಆಗಿದ್ದರೆ, ಆಗ ನೀವು ವಿಶೇಷ ಬಗೆಯ ಮಾಯಿಶ್ಚರೈಸಿಂಗ್‌ ಶ್ಯಾಂಪೂ ಬಳಸಬೇಕು. ಆಗ ಮಾತ್ರ ಕೂದಲಿನ ಪಿಎಚ್ ಲೆವೆಲ್ ಸಮರ್ಪಕವಾಗಿರಲು ಸಾಧ್ಯ. ನೀವು ಆಗಾಗ ತಲೆಗೆ ಸ್ನಾನ ಮಾಡುವವರಾದರೆ, ಸಲ್ಫೇಟ್ ರಹಿತ ಶ್ಯಾಂಪೂ ಮಾತ್ರ ಬಳಸಬೇಕು. ಇದರಿಂದ ಸ್ಕಾಲ್ಪ್ ಡ್ರೈ ಆಗುವುದಿಲ್ಲ.

ಡೀಪ್‌ ಕಂಡೀಶನಿಂಗ್‌ : ಇದರಲ್ಲಿ ಕಂಡೀಶನರ್‌ ನಂತರ ಹೇರ್‌ ಸ್ಟೀಮರ್‌ ಯಾ ಹಾಟ್‌ ಟವೆಲ್‌ನಿಂದ ಸ್ಟೀಂ ನೀಡಬಹುದು. ಆಗ ಕಂಡೀಶನರ್‌ ಕೂದಲಿನ ಬುಡದಲ್ಲಿ ಚೆನ್ನಾಗಿ ಜಮೆಗೊಳ್ಳುತ್ತದೆ. ನಿಮ್ಮ ಬಳಿ ಹೇರ್‌ ಸ್ಟೀಮರ್‌ ಇಲ್ಲದಿದ್ದರೆ, ನೀವು ಹೇರ್‌ ಕಂಡೀಶನಿಂಗ್‌ ಮಾಸ್ಕ್  ಬಳಸಿಕೊಳ್ಳಿ. ಇದರಲ್ಲಿನ ಆ್ಯಲೋವೇರಾ, ಕೊಬ್ಬರಿ ಎಣ್ಣೆ, ಹಿಪ್ಪೆ ಎಣ್ಣೆ (ಆಲಿವ್‌ ಆಯಿಲ್) ಬೆರೆಸಿ ಬಳಸಿಕೊಳ್ಳಬಹುದು. ಇದರಲ್ಲಿ ಧಾರಾಳ ಮಾಯಿಶ್ಚರೈಸಿಂಗ್‌ ಅಂಶಗಳಿವೆ.

ಹೇರ್‌ ಮಸಾಜ್‌ : ಉತ್ತಮ ಹೆಡ್‌ ಮಸಾಜ್‌ ಕೂದಲಿಗೆ ಹೆಚ್ಚು ಲಾಭಕಾರಿ. ವಾರದಲ್ಲಿ ಕನಿಷ್ಠ 1-2 ಸಲ ಕೂದಲಿಗೆ ಮಸಾಜ್‌ ಮಾಡಬೇಕು. ಉತ್ತಮ ಹೆಡ್‌ ಮಸಾಜ್‌ನಿಂದಾಗಿ ಸ್ಕಾಲ್ಪ್ ಬಳಿಯ ಚರ್ಮದಲ್ಲಿ ರಕ್ತದ ಸಂಚಾರ ಚುರುಕಾಗುತ್ತದೆ. ಇದರಿಂದ ಕೂದಲಿನ ಡ್ರೈನೆಸ್‌ ತಗ್ಗುತ್ತದೆ.

– ಡಾ. ಸಾಕ್ಷಿ ಶಿವಾನಂದ

ಬ್ಯೂಟಿ ಟಿಪ್ಸ್

ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ 2 ಗ್ಲಾಸ್‌ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದಲ್ಲಿನ ಟಾಕ್ಸಿನ್ಸ್ ಕಡಿಮೆಯಾಗುತ್ತದೆ ಹಾಗೂ ದೇಹದಲ್ಲಿ ಜಮೆಗೊಂಡ ಕೊಬ್ಬು ಕರಗುತ್ತದೆ. ಹೀಗಾಗಿ ನಿಮ್ಮ ಚರ್ಮ ಕಾಂತಿಯುತ ಆಗುತ್ತದೆ.

ಸದಾ ತಾಜಾ ಹಣ್ಣು ತರಕಾರಿ ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಹೊಸ ಉತ್ಸಾಹ, ಲವಲವಿಕೆ ತುಂಬಿಕೊಂಡು ಚರ್ಮಕ್ಕೆ ವಿಟಮಿನ್‌, ಮಿನರಲ್ಸ್ ತುಂಬಿಕೊಳ್ಳುತ್ತವೆ. ಹೊಟ್ಟೆ ನೀಟಾಗಿ ಶುಚಿಗೊಳ್ಳುತ್ತದೆ. ದೇಹ ಮತ್ತು ಚರ್ಮ ಸದಾ ಸ್ವಸ್ಥವಾಗಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ