ಬೊಟಾಕ್ಸ್ : ಮಾಂಸಖಂಡಗಳಿಗೆ ಇದರ ಇಂಜೆಕ್ಷನ್‌ ನೀಡಲಾಗುತ್ತದೆ. ಇದರಿಂದ ವಯಸ್ಸು ದಿನೇದಿನೇ ಕಡಿಮೆ ಆಗುತ್ತಿರುವಂತೆ ತೋರುತ್ತದೆ. ಏಕೆಂದರೆ ಇದು ಮುಖದಲ್ಲಿನ ಸುಕ್ಕು, ನೆರಿಗೆ ಇತ್ಯಾದಿಗಳನ್ನು ನಿವಾರಿಸುವ ಕೆಲಸ ಮಾಡುತ್ತದೆ. ಇದರ ಪರಿಣಾಮ ಶಾಶ್ವತ ಏನಲ್ಲ, ಆಗಾಗ ಈ ಇಂಜೆಕ್ಷನ್‌ ಪಡೆಯುತ್ತಿರಬೇಕು. 28-65ರ ಹರೆಯದವರು ಇದನ್ನು ಬಳಸಿಕೊಳ್ಳಬಹುದು.

ಫಿಲರ್ಸ್‌ : ಇದೂ ಸಹ ಒಂದು ಬಗೆಯ ಇಂಜೆಕ್ಷನ್‌. ಇದರ ಬಳಕೆಯಿಂದ ಜೋತು ಬೀಳಲಿರುವ ಚರ್ಮದಲ್ಲಿ ಬಿಗಿತ ಬಂದು, ಸುಕ್ಕು ನಿವಾರಿಸುತ್ತದೆ. ಈ ಇಂಜೆಕ್ಷನ್‌ ಕೇವಲ ಚರ್ಮದ ಮೇಲ್ಪದರವನ್ನು ಮಾತ್ರ ಟಚ್‌ ಮಾಡುತ್ತದೆ. ಇದು ಬೊಟಾಕ್ಸ್ ತರಹ ಚರ್ಮದ ಆಳಕ್ಕೆ ಇಳಿಯುವುದಿಲ್ಲ.

ಲೈಪೋಸಕ್ಷನ್‌ : ಇದು ಕೊಬ್ಬಿನ ಪದರಗಳನ್ನು ಕರಗಿಸುವ ಚಿಕಿತ್ಸೆ. ಸ್ಥೂಲತೆಯಿಂದ ಬೇಸತ್ತಿರುವ ಜನ ಇದರ ನೆರವು ಪಡೆಯಬಹುದು. ಈ ಮೂಲಕ ಒಂದು ಸಣ್ಣ ಸರ್ಜರಿಯಿಂದ ಹೊಟ್ಟೆ, ನಿತಂಬ ಅಥವಾ ಇನ್ನಿತರ ಕೊಬ್ಬು ಭರಿತ ಅಂಗಗಳ ಫ್ಯಾಟ್‌ ಹೊರತೆಗೆಯುತ್ತಾರೆ.

ಲೇಸರ್‌ ಥೆರಪಿ : ಈ ಚಿಕತ್ಸೆ ಚರ್ಮದ ಕಲೆ, ಗುರುತು, ಬೊಕ್ಕೆಗಳನ್ನು ನಿವಾರಿಸಲು ಪೂರಕ. ಮುಖದ ಮೇಲಿನ ಅನಗತ್ಯ ಕೂದಲನ್ನು ನಿವಾರಿಸಲು ಈ ಥೆರಪಿ ಹೆಚ್ಚು ಪೂರಕ.

ಹೆಚ್ಚುತ್ತಿರುವ ಜನಪ್ರಿಯತೆ

ಬ್ಯೂಟಿ ಹೆಚ್ಚಿಸಿಕೊಳ್ಳುವ ಈ ಮೆಡಿಕಲ್ ಟ್ರೀಟ್‌ಮೆಂಟ್ಸ್ ಹಿಂದೆಯೂ ಇತ್ತು, ಆದರೆ ಆಗೆಲ್ಲ ಇದನ್ನು ಕೇವಲ ಸಿನಿಮಾ ನಟರು, ಮಾಡೆಲ್ಸ್, ಹೈ ಪ್ರೊಫೆಶನ್‌ ಮಂದಿ ಮಾತ್ರ ಬಳಸುತ್ತಿದ್ದರು. ಆದರೆ ಈಗ 40+ ದಾಟಿದ ಬಹುತೇಕ ಶ್ರೀಮಂತರು, ಮೇಲು ಮಧ್ಯಮ ವರ್ಗದವರು ಧಾರಾಳವಾಗಿ ಇದಕ್ಕಾಗಿ ಖರ್ಚು ಮಾಡುತ್ತಾರೆ.

ಸಮರ್ಪಕ ಕೇಂದ್ರದ ಆಯ್ಕೆ

ಸೌಂದರ್ಯದ ಕಡೆ ದಿನೇ ದಿನೇ ಹೆಚ್ಚುತ್ತಿರುವ ಗಂಡಸರ ಆಸಕ್ತಿ, ಎಲ್ಲೋ ಒಂದು ಕಡೆ ತುಸು ಅಗ್ಗವಾಗಿ ಸಿಕ್ಕಿತೆಂದು ಇಂಥ ಚಿಕಿತ್ಸೆ ಮಾಡಿಸಿಕೊಳ್ಳಲು ಧಾವಿಸಬಾರದು. ಅದು ಜೀವನವಿಡೀ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸೌಂದರ್ಯ ಗಿಟ್ಟಿಸುವ ಆವೇಶದಲ್ಲಿ ಇಂಥ ತಪ್ಪು ಮಾಡಬಾರದು. ಎಷ್ಟೋ ಜನ ಇಂಥ ಬ್ಯೂಟಿ ಸೆಂಟರ್‌ಗಳ ಜಾಹೀರಾತುಗಳಿಗೆ ಮರುಳಾಗಿ ಅಲ್ಲಿಗೆ ಧಾವಿಸುತ್ತಾರೆ. ಅಲ್ಲಂತೂ ಯಾವ ಕಾಸ್ಮೆಟಿಕ್‌ ಸರ್ಜನ್‌ ಅಥವಾ ಡರ್ಮಟಾಲಜಿಸ್ಟ್ ಕೂಡ ಇರುವುದಿಲ್ಲ. ಬ್ಯೂಟಿ ಎಕ್ಸ್ ಪರ್ಟ್ಸ್ ಇಂಥ ಸೇವೆ ಒದಗಿಸಲು ಮುಂದಾಗುತ್ತಾರೆ, ಅದು ಮುಂದೆ ಅಪಾಯಕ್ಕೆ ನಾಂದಿ ಹಾಡುತ್ತದೆ.

ಒಂದು ವಿಷಯ ಚೆನ್ನಾಗಿ ನೆನಪಿಡಿ. ನುರಿತ ಕಾಸ್ಮೆಟಿಕ್‌ ಸರ್ಜನ್‌, ಡರ್ಮಟಾಲಜಿಸ್ಟ್ ರು ಮಾತ್ರ ಇಂಥ ದುಬಾರಿ ಶಸ್ತ್ರಚಿಕಿತ್ಸೆಯನ್ನು ಸುಸೂತ್ರವಾಗಿ ನಡೆಸಬಲ್ಲರು. ಇಂಥ ಚಿಕಿತ್ಸೆಗಳಲ್ಲಿ ಹಲವು ಬಗೆಯ ಅಡ್ಡ ಪರಿಣಾಮಗಳಿರುತ್ತವೆ, ಅವನ್ನು ನಿರ್ಲಕ್ಷಿಸುವಂತಿಲ್ಲ.

ಸೈಡ್‌ ಎಫೆಕ್ಟ್ಸ್ : ಇಂಥ ಬ್ಯೂಟಿ ಟ್ರೀಟ್‌ಮೆಂಟ್ಸ್ 100% ಹಾನಿಕಾರಕವಲ್ಲ ಎಂದು ಹೇಳಲಾಗದು. ಖಂಡಿತಾ ಇದರ ಸೈಡ್‌ ಎಫೆಕ್ಟ್ಸ್ ಇದ್ದೇ ಇರುತ್ತದೆ. ಯಾರು ತಮ್ಮ ಇಳಿ ವಯಸ್ಸಿನಲ್ಲಿ ಒಮ್ಮೊಮ್ಮೆ ಅಂದ್ರೆ ಅರ್ಥಾತ್‌ 2-3 ಸಲ ಮಾತ್ರ ಇಂಥ ಚಿಕಿತ್ಸೆ ಪಡೆಯುತ್ತಾರೋ ಅವರು ಅಪಾಯದಿಂದ ಪಾರು! ಆದರೆ ಯಾರು ಚಿಕ್ಕ ವಯಸ್ಸಿನಲ್ಲೇ ಅಂದ್ರೆ 18-20 ವರ್ಷದವರು ಇಂಥ ಚಿಕಿತ್ಸೆಗಳ ನೆರವು ಪಡೆದರೆ ಅವರಿಗೆ ಅಪಾಯ ತಪ್ಪಿದ್ದಲ್ಲ. ಎಷ್ಟೋ ಸಲ ಯಾವ ಭಾಗದಲ್ಲಿ ಈ ಚಿಕಿತ್ಸೆ ನೀಡಲಾಗಿತ್ತೋ ಅದರ ಅಕ್ಕಪಕ್ಕದ ಚರ್ಮ ಸೋಂಕಿಗೆ ಒಳಗಾಗುವ ಸಂಭವವಿದೆ. ಚರ್ಮ ಕೆಂಪು ಕೆಂಪಾಗಬಹುದು, ಡ್ರೈ ಆಗಿ ಒರಟಾಗುತ್ತದೆ. ಇದರ ಮೇಲೆ ಸಣ್ಣ ಸಾಸುವೆ ಗಾತ್ರದ ಗುಳ್ಳೆಗಳಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ