ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ತನುಮನಗಳು ಸಂತೋಷದಿಂದ ಪುಳಕಗೊಳ್ಳುತ್ತವೆ. ಆದರೆ ಹಬ್ಬದ ಗಡಿಬಿಡಿಯಲ್ಲಿ ನಿಮ್ಮ ಸೌಂದರ್ಯವನ್ನು ಮೇಂಟೇನ್ ಮಾಡುವುದು ಕಷ್ಟವಾಗುತ್ತದೆ. ನಿಮ್ಮ ಸೌಂದರ್ಯ ರಕ್ಷಣೆಗಾಗಿ ನೀವೇನು ಮಾಡಬೇಕೆಂಬುದನ್ನು ತಿಳಿಯಿರಿ.
ಚರ್ಮದ ಮೇಲೆ ಏನಾದರೂ ಕಲೆಯಾಗಿದ್ದರೆ, ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಕನ್ಸೀಲರ್‌ನ ಸಹಾಯದಿಂದ ಅದನ್ನು ಕನ್ಸೀಲ್ ಮಾಡಿ. ಹಬ್ಬದ ಎಕ್ಸೈಟ್‌ಮೆಂಟ್‌ನ ಓಡಾಟದಿಂದ ಬೆವರುವುದು ಸಹಜ. ಅದಕ್ಕಾಗಿ ಮುಖಕ್ಕೆ ವಾಟರ್‌ಪ್ರೂಫ್ ಫೌಂಡೇಶನ್ ಹಚ್ಚಿ ಮತ್ತು ಅದು ಸೆಟ್ ಆಗುವಂತೆ ಮಾಡಲು ಕಾಂಪ್ಯಾಕ್ಟ್ ಬಳಸಿ. ಆಗಾಗ ಕಾಂಪ್ಯಾಕ್ಟ್ ನಿಂದ ಟಚ್‌ಅಪ್ ಮಾಡುತ್ತಿರಿ.
ನಿಮ್ಮ ಡ್ರೆಸ್‌ಗೆ ಮ್ಯಾಚಿಂಗ್ ಅಥವಾ ಕಾಂಪ್ಲಿಮೆಂಟಿಂಗ್ ಗ್ಲಿಟರ್ ಬೇಸ್ಡ್ ಶೇಡ್‌ನ್ನು ನಿಮ್ಮ ಕಣ್ಣುಗಳ ಮೇಲೆ ಬ್ಲೆಂಡ್ ಮಾಡಿ. ಐ ಲಿಡ್ ಮೇಲೆ ಕಾಂಟ್ರಾಸ್ಟಿಂಗ್ ಬ್ಲ್ಯಾಕ್ ಐ ಲೈನರ್‌ನಿಂದ ಕಣ್ಣುಗಳಿಗೆ ಶೇಪ್ ಕೊಡಿ. ನಿಮಗೆ ಐ ಶ್ಯಾಡೋ ಹಚ್ಚಲು ಇಷ್ಟವಿಲ್ಲದಿದ್ದರೆ ಕಲರ್‌ಪುಲ್ ಲೈನರ್‌ನಿಂದ ಕಣ್ಣುಗಳನ್ನು ವರ್ಕ್ ಮಾಡಿ. ವಾಟರ್‌ಪ್ರೂಫ್ ಮಸ್ಕರಾದ ಕೋಟ್ ಹಚ್ಚಿ ಕಣ್ಣುಗಳು ದೊಡ್ಡದಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಬಹುದು. ಕಣ್ಣುಗಳ ಒಳಭಾಗಕ್ಕೆ ಅಂದರೆ ವಾಟರ್ ಲೈನರ್ ಮೇಲೆ ಜೆಲ್ ಕಾಜಲ್ ಹಚ್ಚಿ.
ಫೆಸ್ಟಿವ್ ಸೀಸನ್‌ನಲ್ಲಿ ನೀವು ಬ್ಯಾಕ್‌ಲೆಸ್, ಕ್ರಾಸ್‌ಲೆಸ್ ಮತ್ತು ಫ್ಯಾಷನೆಬಲ್ ಹಾಲ್ಟರ್ ಲುಕ್ ಡ್ರೆಸ್ ಧರಿಸಬೇಕೆಂದಿದ್ದರೆ, ನಿಮ್ಮ ಕತ್ತು, ಬೆನ್ನು ಅಥವಾ ಇತರೆ ತೆರೆದ ಭಾಗಗಳ ಮೇಲೆ ಫ್ಯಾಂಟೆಸಿ ಮೇಕಪ್ ಮಾಡಿಸಬಹುದು. ಕೈಗಳಿಗೆ ಬಳೆಗಳ ಬದಲು ಫ್ಯಾಂಟೆಸಿ ಮೇಕಪ್ ಮಾಡಿಸಿಕೊಳ್ಳಿ. ನಿಮ್ಮ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಬಣ್ಣಗಳ ಫ್ಯಾಂಟೆಸಿ ಮೇಕಪ್‌ನಿಂದ ನೀವು ಆಕರ್ಷಣೆಯ ಕೇಂದ್ರಬಿಂದುವಾಗುವಿರಿ.
ಕೆನ್ನೆಗಳಿಗೆ ಪಿಂಕ್ ಮತ್ತು ಪೀಚ್ ಕಲರ್‌ನ ಬ್ಲಶ್ ಆನ್ ಬಳಸಿ. ಚೀಕ್ ಬೋನ್ಸ್ ಮತ್ತು ಡಬಲ್ ಚಿನ್‌ನ್ನು ಮರೆಮಾಡಲು ಡಾರ್ಕ್ ಬ್ರೌನ್ ಶೇಡ್‌ನ ಬ್ಲಶ್ ಆನ್‌ನಿಂದ ಕಾಂಟೂರಿಂಗ್ ಮಾಡಿ. ಇದರಿಂದ ಮುಖ ತೆಳುವಾಗಿ ತೋರುತ್ತದೆ. ರಾತ್ರಿ ಸಮಯದ ಕಾರ್ಯಕ್ರಮಕ್ಕೆ ಚೀಕ್ ಬೋನ್ಸ್ ಮೇಲೆಯೂ ಹೈಲೈಟರ್‌ನ್ನು ತಪ್ಪದೆ ಬಳಸಿ.
ಉಗುರುಗಳ ಸೌಂದರ್ಯಕ್ಕೆ ನೇಲ್ ಆರ್ಟ್ ಮಾಡಿಸಬಹುದು. ನಿಮ್ಮ ಉಡುಪಿಗೆ ಮ್ಯಾಚ್ ಆಗುವ ಗೋಲ್ಡನ್ ಬೀಡ್ಸ್, ಸಿಲ್ವರ್ ಬೀಡ್ಸ್, ಸ್ಟಡ್ ಅಥವಾ ಸ್ವರೋಸ್ಕಿಗಳನ್ನು ನೇಲ್ಸ್ ಮೇಲೆ ಅಲಂಕರಿಸಬಹುದು. ಸ್ಪೆಷಲ್ ಲುಕ್ಸ್ ಗಾಗಿ ಯಾವುದಾದರೂ ಒಂದು ಉಗುರಿಗೆ ನೇಲ್ ಪಿಯರ್ಸಿಂಗ್ ಸಹ ಮಾಡಿಸಬಹುದು. ಇದರಲ್ಲಿ ಉಗುರನ್ನು ತೂತು ಮಾಡಿ ಅದನ್ನು ಗೆಜ್ಜೆಯಿಂದ ಅಲಂಕರಿಸಲಾಗುತ್ತದೆ. ಇದರಿಂದ ಉಗುರು ಬಹಳ ಆಕರ್ಷಕವಾಗಿ ಕಾಣುತ್ತದೆ. ಹಬ್ಬದ ವಾರವಿಡೀ ನಿಮ್ಮ ಕೈಗಳ ಸೌಂದರ್ಯವನ್ನು ಕಾಪಾಡಲು ಉಗುರುಗಳ ಮೇಲ್ಭಾಗಕ್ಕೆ ಟಾಪ್‌ಕೋಟ್ ಹಚ್ಚಬಹುದು.
ನಿಮ್ಮ ಉಗುರು ಚಿಕ್ಕದಿದ್ದರೆ ಅಥವಾ ಬೆಳೆಯುತ್ತಿದ್ದಂತೆ ಮುರಿದುಹೋದರೆ ನೀವು ನೇಲ್ ಕಲ್ಚರ್ ಟೆಕ್ನಿಕ್‌ನ ಬೆಂಬಲ ಪಡೆದುಕೊಳ್ಳಬಹುದು. ಈ ಟೆಕ್ನಿಕ್‌ನಿಂದ ಮುರಿದ ಉಗುರನ್ನು ಪುನಃ ನ್ಯಾಚುರಲ್ ಶೇಪ್‌ಗೆ ತರಬಹುದು. ನೇಲ್ ಕಲ್ಚರ್ ಮಾಡಲಾದ ಉಗುರು ನೋಡಲು ಮತ್ತು ಕೆಲಸ ಮಾಡಲು ನಿಜವಾದ ಉಗುರಿನಂತೆಯೇ ಇರುತ್ತದೆ. ಹೀಗೆ ನಿಮ್ಮ ಉಗುರಿಗೆ ಬೇಕಾದ ಆಕಾರ ಮತ್ತು ರೂಪ ದೊರೆಯುತ್ತದೆ. ಮತ್ತೆ ಮತ್ತೆ ನೇಲ್ ಪಾಲಿಶ್ ಹಚ್ಚುವ ಗೊಡವೆಯನ್ನು ತಪ್ಪಿಸಲು ಕಲರ್‌ಫುಲ್ ನೇಲ್ ಎಕ್ಸ್ ಟೆನ್ಶನ್‌ನ್ನು ಸಹ ಮಾಡಿಸಬಹುದು.