ಬೇಸಿಗೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ವಿಶೇಷವಾಗಿ ಕಂಡುಬರಲು ಅಲಂಕರಿಸಿಕೊಳ್ಳುವ ಸರಿಯಾದ ವಿಧಾನಗಳನ್ನು ಇಲ್ಲಿ ಕೊಟ್ಟಿದೆ.

ವೈಟ್ರೇಡಿಯೆಂಟ್‌ : ಈ ಲುಕ್ಸ್ ನಲ್ಲಿ ಎಲ್ಲವೂ ತೆಳುವಾಗಿ ಗ್ಲಾಸಿ ಮತ್ತು ರೇಡಿಯೆಂಟ್‌ ಆಗಿ ಕಂಡುಬರುತ್ತದೆ. ಪರ್ಫೆಕ್ಟ್ ಸ್ಕಿನ್‌ಟೋನ್‌ಗಾಗಿ ವೈಟ್‌ ಬೇಸ್‌ ಹಚ್ಚಿ. ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವ ವೈಟ್‌ ಶೇಡ್‌ನ್ನು ಕಣ್ಣುಗಳಿಗೆ ಹಚ್ಚಿ. ಅದರ ಮೇಲೆ ತೆಳುವಾಗಿ ವ್ಯಾಸಲೀನ್‌ ಟಚ್‌ ಕೊಡಿ. ತುಟಿಗಳಿಗೆ ಲಿಪ್‌ಸ್ಟಿಕ್‌ ಹಚ್ಚಿದ ನಂತರ, ಅದರ ಮೇಲೆ ವ್ಯಾಸಲೀನ್‌ ಹಚ್ಚಿ. ಗ್ಲಾಸಿ ಲುಕ್‌ ಕೊಡಿ. ಲೈನರ್‌ ಬದಲು ಮಸ್ಕರಾದ ಡಬಲ್ ಕೋಟ್‌ ಹಚ್ಚಿ ಮತ್ತು ಚೀಕ್‌ ಬೋನ್ಸ್ ನ್ನು ಹೈಲೈಟ್‌ ಮಾಡಲು ಅವುಗಳ ಮೇಲೆ ವ್ಯಾಸಲೀನ್‌ ಹಚ್ಚಿ ಚೆನ್ನಾಗಿ ಬ್ಲೆಂಡ್‌ಮಾಡಿ. ಕೂದಲನ್ನು ಸ್ಟ್ರೇಟ್‌ ಮಾಡಿಸಿ ಹಾಗೆಯೇ ಬಿಡಬಹುದು.

ನಿಮ್ಮ ಹೇರ್‌ಸ್ಟೈಲ್‌ನ್ನು ಇನ್ನೂ ಗ್ರ್ಯಾಂಡ್‌ ಆಗಿಸಲು ಫ್ರಂಟ್‌ನಿಂದ ಫ್ರಿಂಜ್‌ ತೆಗೆಯಿರಿ ಮತ್ತು ಅದಕ್ಕೆ ಹೇರ್‌ ಚಾಕ್‌ನಿಂದ ಟೆಂಪೊರರಿ ಕಲರ್‌ ಮಾಡಿ. ಏಕೆಂದರೆ ಈ ದಿನಗಳಲ್ಲಿ ಕಲರ್‌ಫುಲ್ ಫ್ರಿಂಜ್‌ ಫ್ಯಾಷನ್‌ನಲ್ಲಿದೆ.

ಕಲರ್ಸ್ಮೋಕಿ

ನಿಮ್ಮ ಸ್ಕಿನ್‌ಗೆ ದೋಷರಹಿತ ಲುಕ್‌ ಕೊಡಲು ಟಿಂಟೆಡ್‌ ಮಾಯಿಶ್ಚರೈಸರ್‌ ಹಚ್ಚಿ. ಹೀಗೆ ಮಾಡುವುದರಿಂದ ಸ್ಕಿನ್‌ ಮಾಯಿಶ್ಚರೈಸ್‌ ಮತ್ತು ಸ್ಕಿನ್‌ ಟೋನ್‌ ಈವೆನ್‌ ಆಗಿ ಕಾಣಿಸುತ್ತದೆ. ಕೆನ್ನೆಗಳ ಮೇಲೆ ಪೀಚ್‌ ಶೇಡ್‌ನ ಬ್ಲಶ್‌ ಆನ್‌ ಹಚ್ಚಿ. ಜೊತೆಗೆ ಚೀಕ್ಸ್ ಮೇಲೆ ಅಗತ್ಯವಾಗಿ ಹೈಲೈಟ್‌ ಮಾಡಿ. ಫ್ಯಾಷನ್‌ ಮತ್ತು ಲೇಟೆಸ್ಟ್ ಮೇಕಪ್‌ನ ಮೂಲೋದ್ದೇಶದಂತೆ ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವ ಕಲರ್‌ನ್ನು ಕಣ್ಣುಗಳಿಗೆ ಆ್ಯಡ್‌ ಮಾಡಿ. ಅದಕ್ಕೆ ಬ್ಲ್ಯಾಕ್‌ ಅಥವಾ ಗ್ರೇ ಶ್ರೇಡ್‌ನೊಂದಿಗೆ ಮರ್ಜ್‌ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣುಗಳಿಗೆ ಸ್ಮೋಕಿ ಲುಕ್‌ ಬರುತ್ತದೆ. ಐ ಮೇಕಪ್‌ ಡಾರ್ಕ್‌ ಆಗಿದ್ದರೆ ಮುಖದ ಮೇಲೆ ಮೇಕಪ್‌ನ್ನು ಬ್ಯಾಲೆನ್ಸ್ ಆಗಿಡಲು ಲಿಪ್ಸ್ ಮೇಲೆ ಬೇಬಿ ಪಿಂಕ್‌ ಅಥವಾ ಲೈಟ್‌ ಪೀಚ್‌ನಂತಹ ಲೈಟ್‌ ಶೇಡ್‌ ಹಚ್ಚಿ. ಈಗೀಗ ಮ್ಯಾಸಿ ಲುಕ್‌ಹೆಚ್ಚಾಗಿದೆ. ನೀವು ಕೂದಲಿನಲ್ಲಿ ಮ್ಯಾಸಿ ಸೈಡ್‌ ಲೋ ಬನ್‌ ಮಾಡಬಹುದು. ಮುಖದ ಮೇಲೆ ಮೇಕಪ್‌ ಲುಕ್‌ನ ಬದಲು ನ್ಯಾಚುರಲ್ ಲುಕ್‌ ತರಲು ಜಡೆಯಲ್ಲಿ ಕೆಲವು ಕುಚ್ಚುಗಳನ್ನು ಅಗತ್ಯವಾಗಿ ತೆಗೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲೆ ರಿಯಲ್ ಲುಕ್‌ ಕಂಡುಬರುತ್ತದೆ.

ಬ್ರಾಂಝ್ ಕ್ರೇಝ್

ಮುಖಕ್ಕೆ ‌ಕ್ರೀಂ ಹಚ್ಚಿ. ಬ್ಲಶ್‌ ಆನ್‌ ಬದಲು ಚೀಕ್ಸ್ ಮೇಲೆ ಬ್ರೌಸಿಂಗ್‌ ಮಾಡಿ. ಆಗ ನಿಮ್ಮ ಮುಖ ತೆಳ್ಳಗೆ ಕಂಡುಬರುತ್ತದೆ. ಬ್ರಾಂಝ್ ಶೇಡ್‌ನ ಐ ಶ್ಯಾಡೋನೊಂದಿಗೆ ಕಣ್ಣುಗಳಿಗೆ ಬ್ರಾಂಝ್ ಟಚ್‌ ಕೊಡಿ. ಕಣ್ಣುಗಳ ಹೊರಗಿನ ತುದಿಗಳಲ್ಲಿ ಬ್ರೌನ್‌ ಶೇಡ್‌ನಿಂದ ಕಾಂಟೂರಿಂಗ್‌ ಮಾಡಿದ ನಂತರ ಕಣ್ಣುಗಳ ಕೆಳಗೆ ಕಾಜಲ್ ಸ್ಮಜ್‌ ಮಾಡಿ ಹಚ್ಚಿ. ನಿಮ್ಮ ಲುಕ್‌ಗೆ ಸೆನ್ಶುಯಲ್ ಮತ್ತು ಸೆಕ್ಸಿ ಲುಕ್‌ ಕೊಡಲು ಲೈನರ್‌ ಮತ್ತು ಮಸ್ಕರಾ ಅಗತ್ಯವಾಗಿ ಹಚ್ಚಿ. ಬ್ರಾಂಝಿಶ್‌ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚಿ ಲಿಪ್ಸ್ ಗೆ ಸ್ಟನಿಂಗ್‌ ಲುಕ್‌ಕೊಡಿ. ಕೂದಲಿಗೆ ಸಾಫ್ಟ್ ಕಲರ್‌ ಹಚ್ಚಿ. ಮುಖದ ಮೇಲೆ ಕೂದಲು ಬರದಂತೆ ಸೈಡ್‌ ಪಾರ್ಟಿಶನ್‌ ಮಾಡಿ ಕ್ಲಿಪ್‌ ಹಾಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ