ಫ್ಯಾಷನ್ನಿನ ಓಟದಲ್ಲಿ ಸದಾ ಮುಂದಿರಲು ಹೆಂಗಸರು ತಮ್ಮ ಕೂದಲಿನ ಮೇಕ್‌ಓವರ್ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಈ ಮೇಕ್‌ಓವರ್ ಹೇರ್ ಕಟಿಂಗ್, ಹೇರ್ ಕಲರಿಂಗ್, ಹೇರ್ ಸ್ಪಾ ಮೂಲಕ ನಡೆಯುತ್ತದೆ. ಆದರೆ ಎಷ್ಟೋ ಹೆಂಗಸರಿಗೆ ಈ ಮೇಕ್‌ಓವರ್ ಮಾಡಿಸುವುದು ಹೇಗೆ ಎಂಬ ಮಾಹಿತಿ ಇರುವುದಿಲ್ಲ. ಅಂದರೆ ಅವರ ಮುಖ ಚಹರೆಗೆ ಅನುಸಾರ ಎಂಥ ಬಣ್ಣ ಆರಿಸಿಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಹೇರ್ ಕಲರ್ ಮಾಡಿಸುವ ಮುನ್ನ ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಕೂದಲನ್ನು ಸದಾ ಯಂಗ್ ಎನರ್ಜಿಟಿಕ್ ಆಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಗಮನಿಸೋಣವೇ?
ಹೇರ್ ಕಲರ್‌ನಿಂದ ಮೇಕ್ ಓವರ್
ಇತ್ತೀಚೆಗೆ ಹೇರ್ ಕಲರ್‌ನ್ನು ಕೇವಲ ಗ್ರೇ ಯಾ ಲೈಟ್ ಹೇರ್ ಕಲರ್ ಮಾಡಲು ಮಾತ್ರ ಬಳಸುತ್ತಿಲ್ಲ, ಬದಲಿಗೆ ಕಂಪ್ಲೀಟ್ ಲುಕ್ ಚೇಂಜ್ ಮಾಡಲು ಸಹ ಬಳಸುತ್ತಾರೆ. ಇದರಲ್ಲಿ ಇಂದಿನ ಯುವಜನತೆ ಪೂರ್ತಿ ಕೂದಲಿಗೆ ಕಲರ್ ಮಾಡುವ ಬದಲು, ಅರ್ಧ ಭಾಗದಷ್ಟು ಅಥವಾ ಒಂದು ಸೈಡ್ ಮಾತ್ರ ಕಲರ್ ಮಾಡಿಸುತ್ತಾರೆ. ಇದನ್ನೇ ಹೈಲೈಟಿಂಗ್ ಎನ್ನುತ್ತಾರೆ. ಈ ಟೆಕ್ನಿಕ್‌ನಿಂದ ಕೂದಲಿಗೆ ಕೇವಲ ಸ್ಟೈಲಿಶ್ ಲುಕ್ ಸಿಗುವುದು ಮಾತ್ರವಲ್ಲ, ಅದರ ನೈಸರ್ಗಿಕ ಸೌಂದರ್ಯ ಹೆಚ್ಚುತ್ತದೆ. ಆದರೆ ಈ ನಿಟ್ಟಿನಲ್ಲಿ ತುಸು ನಿರ್ಲಕ್ಷ್ಯ ವಹಿಸಿದರೂ, ಕೂದಲಿಗೆ ಹಾನಿ ತಪ್ಪಿದ್ದಲ್ಲ.
ಹಾಗಿದ್ದರೆ ಕೂದಲಿಗೆ ಹಾನಿಯಾಗದಂತೆ ಹೇರ್ ಕಲರ್ ಮಾಡುವ ಅಥವಾ ಮಾಡಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?
- ಹೇರ್ ಕಲರ್ ಕೊಳ್ಳುವ ಮುನ್ನ ಕಲರ್ ಎಕ್ಸ್ ಪೈರಿ ಡೇಟ್ ಅಗತ್ಯ. ಗಮನಿಸಿ, ಇಲ್ಲದಿದ್ದರೆ ಕೂದಲಿಗೆ ಹಾನಿ ತಪ್ಪಿದ್ದಲ್ಲ.
- ಕೂದಲಿಗೆ ಕಲರ್ ಮಾಡಿಸುವ ಮುನ್ನ ಅಗತ್ಯವಾಗಿ ಅಲರ್ಜಿ ಟೆಸ್ಟ್ ಮಾಡಿಸಿ, ಏಕೆಂದರೆ ಎಷ್ಟೋ ಸಲ ಹಲವು ಬಣ್ಣಗಳು ಕೂದಲಿಗೆ ಹಾನಿ ಮಾಡುತ್ತವೆ. ಅಮೋನಿಯಾಯುಕ್ತ ಬಣ್ಣ ನಿಮಗೆ ಹೊಂದದಿದ್ದರೆ, ಪ್ರೋಟೀನ್‌ಯುಕ್ತ ಬಣ್ಣಗಳನ್ನೇ ಆರಿಸಿ. ಅಮೋನಿಯಾದಿಂದ ನೋವು, ಉರಿ, ಕಡಿತ, ಶುಷ್ಕತೆ ಕೂದಲು ಉದುರುವಿಕೆ ಮುಂತಾದ ಹಾನಿಗಳಾಗುತ್ತವೆ.
- ಪರ್ಮನೆಂಟ್ ಹೇರ್ ಕಲರ್ಸ್ ಕೂದಲಿಗೆ ಶಾಶ್ವತ ಬಣ್ಣ ಕೊಡಿಸಿದರೆ, ಟೆಂಪರರಿ ಹೇರ್ ಕಲರ್ಸ್ ಕೇವಲ 5-6 ವಾರ ಮಾತ್ರ ಉಳಿಯುತ್ತದೆ.
ಕೂದಲಿಗೆ ಬಣ್ಣ ಹಚ್ಚುವ ಮೊದಲು
ಶ್ಯಾಂಪೂನಿಂದ ಅದನ್ನು ಚೆನ್ನಾಗಿ ತೊಳೆದು ಒಣಗಿಸಿ. ಕೂದಲನ್ನು ಡೀಟ್ಯಾಂಗ್ ಮಾಡುತ್ತಾ, ಬ್ರಶ್‌ಗೆ ಬಣ್ಣ ಹಚ್ಚಿಕೊಂಡು, ಮೊದಲು ಇಡೀ ಹೇರ್‌ಲೈನ್‌ಗೆ ಅದನ್ನು ಹಚ್ಚಿರಿ. ನಂತರ ಮಧ್ಯ ಭಾಗಕ್ಕೆ ಬಣ್ಣ ಹಚ್ಚಿರಿ. ಅದಾದ ಮೇಲೆ ಇಯರ್ ಟು ಇಯರ್ ಪಾರ್ಟಿಂಗ್ ಮಾಡಿ, ತೆಳುವಾದ ಎಳೆಗಳನ್ನು ಹಿಡಿದು ಬಣ್ಣ ಹಚ್ಚಿರಿ.
- ನೀವು ಕೂದಲಿಗೆ ಸ್ಟ್ರೇಟ್‌ನಿಂಗ್ ಯಾ ಪರ್ಮಿಂಗ್ ಮಾಡಿಸುವುದಿದ್ದರೆ, ಹೇರ್ ಕಲರ್ ಮಾಡಿಸುವ 15-20 ದಿನಗಳ ನಂತರವೇ ಮಾಡಿಸಬೇಕು. ಏಕೆಂದರೆ ಹೇರ್ ಟ್ರೀಟ್‌ಮೆಂಟ್ ಹೇರ್ ಕಲರಿಂಗ್ ಮಧ್ಯೆ ಸಮಯಾಂತರದ ಕೊರತೆಯಾದರೆ, ಅದರಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ.
- ಇಡೀ ಕೂದಲಿಗೆ ಕಲರಿಂಗ್ ಮಾಡಿಸದಿದ್ದರೆ, 6 ವಾರಗಳಲ್ಲಿ ರೂಟ್ ಟಚ್ ಅಪ್ ಮಾಡಿಸುತ್ತಿರಬೇಕು. ಇಲ್ಲದಿದ್ದರೆ ರೂಟ್‌ನಿಂದ ಬರುವ ಕೂದಲು ಈಗಾಗಲೇ ಬಣ್ಣ ಉಳಿದಿರುವ ನಿಮ್ಮ ಕೂದಲಿಗೆ ಮ್ಯಾಚ್ ಆಗುವುದಿಲ್ಲ. ಕಲರ್ ಹೆಚ್ಚು ದಿನ ಉಳಿಯಬೇಕೆಂದರೆ ಆದಷ್ಟೂ ಡಾರ್ಕ್ ಕಲರ್ಸ್ ಆರಿಸಿ.