``ಕಾಲೇಜು ಕಿಶೋರಿಯರಿರಲಿ ಅಥವಾ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ವನಿತೆಯರಿರಲಿ, ಮನೆಯಿಂದ ಹೊರ ಹೊರಡುವ ಮೊದಲು ಅವರಿಗೆ ತಮ್ಮ ಉಡುಗೆ ಆರಿಸಲು ತಗಲುವ ಸಮಯಕ್ಕಿಂತ ಹೇರ್‌ಸ್ಟೈಲ್‌ ಮಾಡಿಕೊಳ್ಳಲು ತಗಲುವ ಸಮಯವೇ ಹೆಚ್ಚು ಎಂಬುದು ನಿಸ್ಸಂಶಯ. ಅವರ ಈ ಸಮಸ್ಯೆಯನ್ನು ಸರಿಪಡಿಸಲೆಂದೇ ಹೊಸ ಹೇರ್‌ ಸ್ಟೈಲಿಂಗ್‌ ವಿಧಾನ ಬಂದಿದೆ. ಏಕೆಂದರೆ ಹೇರ್‌ ಸ್ಟೈಲಿಂಗ್‌ ಎಂಬುದು ತನ್ನಿಂತಾನೇ ಒಂದು ಕಂಪ್ಲೀಟ್‌ ಹೇರ್‌ಸ್ಟೈಲ್ ಎನಿಸಿದೆ. ಇದನ್ನು ಮಾಡಿಸಿದ ಮೇಲೆ ಹೇರ್‌ನ್ನು ಓಪನ್‌ ಆಗಿಯೇ ಇಳಿಬಿಡಬೇಕು. ಬೇಕೆಂದರೆ ಪೋನಿಟೇಲ್‌ ಸಹ ಮಾಡಿಕೊಳ್ಳಬಹುದು,'' ಎಂದು ಹೇಳುತ್ತಾರೆ, ಕೇಶ ವಿನ್ಯಾಸದ ಬಗ್ಗೆ ಸಂದೇಹ ನಿವಾರಿಸುವ ಎಕ್ಸ್ ಪರ್ಟ್ಸ್.ಓದುಗರಿಗೆ ತಮ್ಮ ಕೇಶ ವಿನ್ಯಾಸದ ಸಮಸ್ಯೆಯ ಬಗ್ಗೆ ಪರಿಹಾರ ದೊರಕಿದಂತೆಯೇ ಅಲ್ಲವೇ? ಬನ್ನಿ ಅದರ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

ಹೇರ್‌ ಸ್ಟೈಲಿಂಗ್‌ ಮಾಡಿಸಿಕೊಳ್ಳುವ ಮೊದಲು ಯಾವ ವಿಷಯಗಳ ಬಗ್ಗೆ ಎಚ್ಚರ ವಹಿಸಬೇಕು?

ಪಾರ್ಲರ್‌ಗೆ ಹೋಗುವ ಹೆಂಗಸರು ಯೋಚಿಸಿ ಹೇರ್‌ ಕಲರ್‌ ಮತ್ತು ಹೈಲೈಟಿಂಗ್‌ ಏರಿಯಾ ಸರಿಯಾಗಿ ಆರಿಸದಿದ್ದರೆ, ಹೇರ್‌ ಹೈಲೈಟಿಂಗ್‌ ಕೂದಲನ್ನು ಎಷ್ಟು ಸ್ಟೈಲಿಶ್‌ಗೊಳಿಸಲು ಸಾಧ್ಯವೋ ಅಷ್ಟೇ ಹಾಳು ಮಾಡುವುದೂ ನಿಜ. ಹೀಗಾಗಿ ಈ ಕೆಳಗಿನ ಸಲಹೆಗಳತ್ತ ಅಗತ್ಯ ಗಮನಹರಿಸಿ :

- ಕೂದಲಿಗೆ ಹೈಲೈಟಿಂಗ್‌ ಮಾಡಿಸುವ ಮೊದಲು, ಅದಕ್ಕೆ ಮೆಹಂದಿ ಹಾಕಿಸಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅಸಲಿಗೆ, ಮೆಹಂದಿ ಬಳಿದ ಕೂದಲಿಗೆ ಹೈಲೈಟಿಂಗ್‌ ಮಾಡಿದಾಗ ಕಿತ್ತಳೆ ಬಣ್ಣದ ಎಫೆಕ್ಟ್ ಬರುತ್ತದೆ, ಜೊತೆಗೆ ಕೂದಲು ಸೀಳುವ ಭಯ ಇರುತ್ತದೆ. ಹೀಗಾಗಿ ಒಂದು ಪಕ್ಷ ಮೆಹಂದಿ ಹಾಕಿಸಿದ್ದರೆ, ಅದರ ಎಫೆಕ್ಟ್ ಸಂಪೂರ್ಣ ಖಾಲಿ ಆದ ನಂತರವೇ ಈ ಹೈಲೈಟಿಂಗ್‌ ಮಾಡಿಸಬೇಕು. ಸಹಜ ಬಿಳಿ ಕೂದಲು ಬಂದಿದ್ದರೆ ತೊಂದರೆ ಇಲ್ಲ.

- ಕೂದಲು ಹೈ ಟೆಕ್ಸ್ಚರ್‌ನದಾಗಿದ್ದರೆ, ಹೇರ್‌ ಹೈಲೈಟಿಂಗ್‌ಗಿಂತ ಮೊದಲು ಹೇರ್‌ ಸ್ಪಾ ಅಗತ್ಯ ಮಾಡಿಸಿ. ಡ್ರೈ ಹೇರ್ ಗೆ ಸ್ಪಾ ಒಂದು ಪ್ರೀ ಪ್ರೊಟೆಕ್ಷನ್‌ ಪ್ರಕ್ರಿಯೆ ಆಗಿದೆ. ಇಂಥ ಕೂದಲಿಗೆ ಮಾಯಿಶ್ಚರೈಸರ್‌ ಬೇಸ್ಡ್ ಹೇರ್‌ ಕಲರ್‌ ಆಗಿರಬೇಕು. ಇದರಿಂದ ಕೂದಲು ಉದ್ದ, ದಟ್ಟ, ಶೈನಿ  ಸಾಫ್ಟ್ ಆಗುತ್ತದೆ.

- ನೀವು ಮೊದಲ ಸಲ ಹೇರ್‌ ಹೈಲೈಟ್‌ ಮಾಡಲು ಹೊರಟಿದ್ದರೆ, ಬಣ್ಣದ ಆಯ್ಕೆಯನ್ನು ಬಲು ಎಚ್ಚರಿಕೆಯಿಂದ ಮಾಡಿ. ಏಕೆಂದರೆ ಈ ಬಣ್ಣ ನಿಮ್ಮ ಕೂದಲಿನಿಂದ ಲೆಂಥ್‌ ಕತ್ತರಿಸಿದ ನಂತರವೇ ಹೋಗುವಂಥದ್ದು. ಒಂದು ಪಕ್ಷ ನೀವು ಆರಿಸಿದ ಬಣ್ಣ ನಿಮಗೆ ಹೊಂದುತ್ತಿಲ್ಲ ಎನಿಸಿದರೆ ನೀವು ಮತ್ತೆ ಕೂದಲಿಗೆ ಬೇಸ್‌ ಕಲರ್‌ ಹಾಕಿಸಿ, ಬಣ್ಣ ಬದಲಾಯಿಸಬೇಕಾಗುತ್ತದೆ. ಹಾಗಿರುವಾಗ ನೀವು ಮೊದಲು ನಿಮ್ಮ ಸ್ಕಿನ್‌ ಟೋನ್‌ ಬಗ್ಗೆ ತಿಳಿಯುವುದು ಮೇಲು. ನಿಮ್ಮ ತ್ವಚೆಯ ಬಣ್ಣ ತುಸು ಹಳದಿ ಎನಿಸಿದರೆ, ಆ್ಯಶ್‌ ಟೋನ್ಡ್ ಹೈಲೈಟ್ಸ್ ನಿಮ್ಮ ಬಣ್ಣಕ್ಕೆ ಕಾಂಪ್ಲಿಮೆಂಟ್‌ ಮಾಡುತ್ತದೆ. ನಿಮ್ಮ ಮೈ ಬಣ್ಣ ಫೇರ್‌ ಆಗಿದ್ದರೆ, ಬ್ಲಾಂಡ್‌ ಕಲರ್ಸ್‌ ನಿಮಗೆ ಹೆಚ್ಚು ಸೂಟ್‌ ಆಗುತ್ತದೆ. ನಿಮ್ಮದು ಶ್ಯಾಮಲ ವರ್ಣವಾಗಿದ್ದರೆ, ಆಗ ಕ್ಯಾರಮೆಲ್ ಶೇಡ್ಸ್ ಟ್ರೈ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ