- ರಾಘವೇಂದ್ರ ಅಡಿಗ ಎಚ್ಚೆನ್.

ಕರುನಾಡಿನ ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್ ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಅಪ್ಪು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯಗಳಲ್ಲಿ ಸದಾ ಜೀವಂತವಾಗಿದ್ದಾರೆ. ಇಂದು (ಅಕ್ಟೋಬರ್‌ 29) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ, ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಸ್ಥಳವನ್ನು ಹೂವುಗಳಿಂದ ಸಿಂಗರಿಸಲಾಗಿದೆ.
ಇಂದು ಬೆಳಗ್ಗಿನಿಂದಲೇ ಸಾವಿರಾರು ಅಭಿಮಾನಿಗಳು ಅಪ್ಪು ಸಮಾಧಿಗೆ ಆಗಮಿಸಿ, ಅಪ್ಪುವಿನ ಸ್ಮಾರಕದ ಮುಂದೆ ಕಣ್ಣೀರಿನ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್‌ ಕುಟುಂಬದ ಸದಸ್ಯರೂ ಸಹ ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸ್ಮಾರಕದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತಾ ಒದಗಿಸಲಾಗಿದ್ದು, ಅಪ್ಪು ಅಭಿಮಾನಿಗಳ ಆಗಮನಕ್ಕಾಗಿ ಎಲ್ಲ ಸೌಲಭ್ಯಗಳೂ ಒದಗಿಸಲಾಗಿದೆ. ಅಪ್ಪು ಸ್ಮಾರಕದ ಬಳಿ ಅನ್ನದಾನ, ರಕ್ತದಾನ, ಹಾಗೂ ಬಡ ಮಕ್ಕಳಿಗೆ ನೋಟ್‌ಬುಕ್‌ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಇಂದು ಇಡೀ ದಿನ ಅಭಿಮಾನಿಗಳಿಗೆ ಅನ್ನದಾನ ನಡೆಯಲಿದೆ.
2021ರ ಅಕ್ಟೋಬರ್‌ 29ರಂದು ಅಪ್ಪು ಹೃದಯಾಘಾತದಿಂದ ನಿಧನರಾದರು. ಆ ಸುದ್ದಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆ ದಿನ ಜನರು ತಮ್ಮ ಮನೆಯ ಮಗನನ್ನೇ ಕಳೆದುಕೊಂಡಂತೆ ದುಃಖಗೊಂಡಿದ್ದರು.
ಇಂದು ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ, ಆ ಸೇವಾ ಮನೋಭಾವವನ್ನೇ ಅಭಿಮಾನಿಗಳು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಸ್ಮರಣೆ, ಕೃತಿಗಳು ಹಾಗೂ ಪ್ರೀತಿ ಕರುನಾಡಿನ ಹೃದಯಗಳಲ್ಲಿ ಅಚ್ಚೊತ್ತಾಗಿದೆ.
ಇನ್ನೂ ಪುನೀತ್ ನಿಧನದ ಬಳಿಕ ಪಿಆರ್ಕೆ ಜವಾಬ್ದಾರಿ ಅಶ್ವಿನಿ ಅವರ ಹೆಗಲೇರಿದೆ. ಇದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗ್ತಿದ್ದಾರೆ. ಪುನೀತ್ ನಿಧನದ ಬಳಿಕ ಪಿಆರ್ಕೆಯಿಂದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಗಂಧದಗುಡಿ’, ‘ಆಚಾರ್ ಆ್ಯಂಡ್ ಕೋ’, ‘ಒ2’ ಹಾಗೂ ‘ಎಕ್ಕ’ ಸಿನಿಮಾಗಳು ತೆರೆಗೆ ಬಂದಿವೆ. ಪಿಆರ್‌ ಕೆ ಬ್ಯಾನರ್‌ ಮೂಲಕ ಅಶ್ವೀನಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ