ನೀವು ಸಹ ನಿಮ್ಮ ಚರ್ಮನ್ನು ಹೆಲ್ದಿ ಬೆಟರ್ಆಗಿಸಲು ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ......!

ನ್ಯೂಟ್ರಿಶನ್‌ ನಿಂದ ನಮ್ಮ ಚರ್ಮದ ಹೆಲ್ತ್ ಗೆ ಹೆಚ್ಚಿನ ಲಾಭವಿದೆ. ಹೀಗಾಗಿ ವಿಟಮಿನ್ಸ್ ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಈ ನಿಟ್ಟಿನಲ್ಲಿ ಬಲು ಸಹಕಾರಿ. ಏಕೆಂದರೆ ಇವು ಚರ್ಮಕ್ಕೆ ಬಿಲ್ದಿಂಗ್‌ ಬ್ಲಾಕ್ಸ್ ಆಗಿ ಕೆಲಸ ಮಾಡುತ್ತವೆ. ಇವು ಹಾನಿಗೊಳಗಾದ ಚರ್ಮವನ್ನು ಬೇಗನೆ ಸುಧಾರಿಸಲು ಬಹಳ ಸಹಾಯ ಮಾಡುತ್ತವೆ. ಇವುಗಳ ಕುರಿತು ಹೆಚ್ಚಿನ ವಿವರ ತಿಳಿಯೋಣವೇ?

ಈ ಕುರಿತಾಗಿ ತಜ್ಞರ ಅಭಿಪ್ರಾಯ ಎಂದರೆ, ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಇತ್ತೀಚೆಗೆ ಬಲು ಚರ್ಚೆಯಲ್ಲಿವೆ. ಆದರೆ ಇವು ನಿಮ್ಮ ಓವರ್‌ ಆಲ್ ಡಯೆಟ್‌ ನ ದೃಷ್ಟಿಯಿಂದ ತೀವ್ರ ಪರಿಣಾಮಕಾರಿ ಆದುದರಿಂದ, ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇವು ಬೇರೆಯಾಗಿ ತಾವೇ ಕೆಲಸ ನಿರ್ವಹಿಸಲಾರವು, ನಿಮ್ಮ ಡಯೆಟ್‌ (ಆಹಾರದ ಅಭ್ಯಾಸ) ಇಲ್ಲಿ ಬಲು ಮುಖ್ಯ. ನಿಮ್ಮದು ಬ್ಯಾಲೆನ್ಸ್ಡ್ ಡಯೆಟ್ ಆಗಿದ್ದರೆ, ಲೈಫ್‌ ಸ್ಟೈಲ್ ಹೆಲ್ದಿ ಆಗಿದ್ದರೆ, ಆಗ ಇವು ನಿಮ್ಮ ಚರ್ಮಕ್ಕೆ ಉತ್ತಮ ಪರಿಣಾಮ ತರಬಲ್ಲವು.

ಆದರೆ ನಿಮ್ಮ ಡಯೆಟ್‌ ಬ್ಯಾಲೆನ್ಸ್ಡ್ ಆಗಿರದೆ ಹೇಗೋ ಹಾಗಿದ್ದರೆ (ಜಂಕ್‌ ಫುಡ್‌ ಗಳ ಸೇವನೆ), ಓವರ್‌ ಆಲ್ ಹೆಲ್ತ್ ಉತ್ತಮ ಅಲ್ಲದಿದ್ದರೆ, ಇದರ ಸ್ಪೆಷಲ್ ಎಫೆಕ್ಟ್ ಏನೂ ಇರದು! ಕೆಲವು ಹೆಂಗಸರಿಗೆ ಇದರಿಂದ ಉತ್ತಮ ಪರಿಣಾಮ ಸಿಗಬಹುದು, ಇನ್ನುಳಿದ ಹಲವರಿಗೆ ಇದರಿಂದ ಯಾವ ಪರಿಣಾಮ ಆಗದು. ಹೀಗಾಗಿ ಇದರ ರಿಸಲ್ಟ್ 100% ನಿಮ್ಮ ಡಯೆಟ್‌, ಲೈಫ್‌ ಸೆಲ್‌, ಹೆಲ್ತ್ ಆಧರಿಸಿದೆ ಎಂಬುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಜೆನಿಟಿಕ್‌ ಕಾಂಪೊಸಿಷನ್‌ ಹಾಗೂ ಎಂಥ ಸಪ್ಲಿಮೆಂಟ್ಸ್ ಆರಿಸಿದ್ದೀರಿ ಎಂಬುದು ಸಹ ಇಲ್ಲಿ ಅಷ್ಟೇ ಮುಖ್ಯ.

ನೀವಾಗಿ ನೀವೇ ಹೋಗಿ, ಯಾರೋ ಹೇಳಿದರೆಂದು ಮನ ಬಯಸಿದ ಇಂಥ ಉತ್ಪನ್ನ ಖರೀದಿಸದಿರಿ. ಏಕೆಂದರೆ ಇನ್ನು ಯಾವಾಗ, ಎಂಥದ್ದನ್ನು, ಎಷ್ಟು ಕಾಲ ಸೇವಿಸಬೇಕು ಎಂಬುದನ್ನು ನಿಮ್ಮ ಸ್ಕಿನ್‌ ಸ್ಪೆಷಲಿಸ್ಟ್ ಮಾತ್ರ ನಿರ್ಧರಿಸಿ ಹೇಳಬಲ್ಲರು.

ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಆಯ್ಲಿ, ಡ್ರೈ, ನಾರ್ಮಲ್ ಇತ್ಯಾದಿ ಎಲ್ಲಾ ಬಗೆಯ ಚರ್ಮಕ್ಕೂ ಸೂಟ್‌ ಆಗುತ್ತದೆ, ಆದರೆ ಅವು ಭಿನ್ನವಾಗಿರುತ್ತವೆ ಎಂಬುದನ್ನು ಗಮನಿಸಿ. ಹೀಗಾಗಿ ನಿಮ್ಮ ಸ್ಕಿನ್‌ ಸ್ಪೆಷಲಿಸ್ಟ್ ಮಾತ್ರ ನಿಮ್ಮನ್ನು ಇದಕ್ಕಾಗಿ ಪ್ರತ್ಯೇಕ ಪರೀಕ್ಷಿಸಿ, ಸಲಹೆ ನೀಡಬಲ್ಲರು. ಅವರು ಸೂಚಿಸಿದ್ದನ್ನು ಮಾತ್ರ ಸೇವಿಸಿ. ಇದರ ಬಗ್ಗೆ ತಜ್ಞರ ಸಲಹೆ ಗಮನಿಸೋಣ :

ವಿಟಮಿನ್‌ C ಇದರಿಂದ ಚರ್ಮಕ್ಕೆ ಬೇಕಾದ ಎಲಾಸ್ಟಿಸಿಟಿ ಸುಲಭ ಲಭ್ಯ. ನಿಮ್ಮ ಚರ್ಮ ನಿಮ್ಮ ವಯಸ್ಸು ತಗ್ಗಿರುವಂತೆ ತೋರಿಸುತ್ತದೆ. ಕೊಲೋಜೆನ್‌ಎಲಾಸ್ಟಿಸಿಟಿ ಎರಡೂ ಪ್ರೋಟೀನ್‌ ಫೈಬರ್ಸ್‌. ಇವು ಸ್ಕಿನ್‌ ಸೆಲ್ಸ್ ನ್ನು ರೀಜನರೇಟ್‌ ಮಾಡುವ ಜೊತೆ ಜೊತೆಗೆ ಚರ್ಮವನ್ನು ಫರ್ಮ್ ಟೈಟ್‌ ಮಾಡುವಲ್ಲಿಯೂ ಮುಂದು. ಏಜಿಂಗ್‌ ಪ್ರೋಸೆಸ್‌ ನ್ನು ಕೊಲೋಜೆನ್ ನಿಧಾನಗೊಳಿಸುತ್ತದೆ. ಚರ್ಮದ ಪಿಗ್ಮೆಂಟೇಶನ್‌ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಒಬ್ಬ ಹೆಂಗಸು ಪ್ರತಿದಿನ 80 ಮಿ.ಗ್ರಾಂ. ವಿಟಮಿನ್‌ C ಸೇವಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ