ಮಾಹಿತಿ ಅಭಾವದ ಕಾರಣ, ನೀವು ಮಗುವಿಗಾಗಿ ಖರೀದಿಸುವ ಬೇಬಿ ಸ್ಕಿನ್ಕೇರ್ಪ್ರಾಡಕ್ಟ್ಸ್ ನಲ್ಲಿ ಎಷ್ಟೋ ಅನಗತ್ಯ ವಸ್ತುಗಳೂ ಸೇರಿಕೊಳ್ಳಬಹುದು. ಇದು ಮಗುವಿನ ನಾಜೂಕು ತ್ವಚೆಗೆ ಎಷ್ಟು ಹಾನಿಕರ ಎಂದು ನಿಮಗೆ ಗೊತ್ತೇ.....?

ಮೊದಲ ಸಲ ತಾಯಿ ತಂದೆ ಆಗುವ ಅನುಭವ ಎಲ್ಲಕ್ಕಿಂತ ಹಿರಿದು, ಹೆಮ್ಮೆ ಎನಿಸುತ್ತದೆ. ಮನೆಯಲ್ಲಿ ಮಗುವಿನ ಆಗಮನದಿಂದ ತಾಯಿ ತಂದೆಗೆ ಮಗುವೇ ಅವರ ಲೋಕವಾಗುತ್ತದೆ. ಮಗುವಿನ ಅಗತ್ಯಗಳ ಕಡೆ ಗಮನ ಹರಿಸುವುದು, ಅದಕ್ಕೆ ಸದಾ ಖುಷಿ ನೀಡುತ್ತಾ ಬೇಕಾದ್ದನ್ನು ಒದಗಿಸುವುದು, ಹೊಸ ತಾಯಿ ತಂದೆಯರ ಮುಖ್ಯ ಗುರಿ ಆಗುತ್ತದೆ. ಅದಕ್ಕಾಗಿ ಅತಿ ಉತ್ತಮ ಬಟ್ಟೆಬರೆ, ಆಟಿಕೆ, ಡೈಪರ್‌, ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಇತ್ಯಾದಿ ಕೊಳ್ಳಲು ಹಣ ಖರ್ಚು ಮಾಡಲು ಹಿಂಜರಿಯದೆ ಉತ್ತಮ ಗುಣಮಟ್ಟ ಮಾತ್ರ ನೋಡುತ್ತಾರೆ.

ಆದರೆ ಮಾಹಿತಿಯ ಅಭಾವದ ಕಾರಣ, ಅವರು ಕೊಳ್ಳುವ ಬೇಬಿ ಕೇರ್‌ ಪ್ರಾಡಕ್ಟ್ಸ್ ಎಷ್ಟೋ ಸಲ ಮಗುವಿನ ಕೋಮಲ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಇಂಥ ಪ್ರಾಡಕ್ಟ್ಸ್ ಮಾರಾಟ ಮಾಡುವ ದೊಡ್ಡ ಪೈಪೋಟಿಯೇ ಇರುತ್ತದೆ. ಹೀಗಾಗಿ ಲಾಭ ಬಾಚಿಕೊಳ್ಳುವ ತರಾತುರಿಯಲ್ಲಿ ಮಗುವಿನ ಇಂಥ ಪ್ರಾಡಕ್ಟ್ಸ್ ಗೂ ಹಾರ್ಶ್‌ ಕೆಮಿಕಲ್ಸ್ ಬೆರೆಸಿ ಎಳೆ ಮಕ್ಕಳ ಚರ್ಮದ ಜೊತೆ ಆಟವಾಡುತ್ತಾರೆ. ಅದರಿಂದ ಮಕ್ಕಳಿಗೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಇಂಥ ಪ್ರಾಡಕ್ಟ್ಸ್ ಕೊಳ್ಳುವಾಗ ಯಾವುದು ಹಾನಿಕರ, ಯಾವುದನ್ನು ಕೊಳ್ಳಬಾರದು ಎಂದು ತಿಳಿದಿರಬೇಕು.

ಪ್ಯಾರಾಬೀನ್‌ ಇದೊಂದು ತರಹ ಕೆಮಿಕಲ್ ಕಾಂಪೌಂಡ್‌ ಆಗಿದ್ದು, ಬೇಬಿ ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ದೀರ್ಘಕಾಲ ಬಾಳಿಕೆ ಬರಲೆಂದು ಅದರಲ್ಲಿ ಇದನ್ನು ಬೆರೆಸುತ್ತಾರೆ. ಆದರೆ ಇದು ಸಣ್ಣ ಮಕ್ಕಳ ನಾಜೂಕು ತ್ವಚೆಗೆ ಹಾನಿಕಾರಕ ಆಗಿದೆ. ಇದು ಶಿಶುವಿನ ಚರ್ಮ ಪ್ರವೇಶಿಸಿದರೆ, ಇಮ್ಯೂನ್‌ ಸಿಸ್ಟಮ್ ಗೆ ಕೆಟ್ಟ ರೀತಿಯಲ್ಲಿ ಡ್ಯಾಮೇಜ್‌ ಮಾಡುತ್ತದೆ. ಹೀಗಾಗಿ ಬೇಬಿಗಾಗಿ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಖರೀದಿಸುವಾಗ ಇದನ್ನು ಮರೆಯದೆ ಚೆಕ್‌ ಮಾಡಿ, ಪ್ಯಾರಾಬೀನ್‌ ಅಂಶವಿರುವ ಪ್ರಾಡಕ್ಟ್ ಕೊಳ್ಳಲೇಬೇಡಿ!

ಅನಿಮಲ್ ಆಯಿಲ್

ಬೇಬಿ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಎಷ್ಟೋ ಸಲ ಮಾಯಿಶ್ಚರೈಸೇಷನ್‌ ಗಾಗಿ ಅನಿಮಲ್ ಆಯಿಲ್ ‌ಬೆರೆಸಲಾಗುತ್ತದೆ. ಇದು ಶಿಶುಗಳ ಸೆನ್ಸಿಟಿವ್ ‌ತ್ವಚೆಗೆ ಹಾನಿಕಾರಕ ಆಗಿದೆ. ಇದರ ಬಳಕೆಯಿಂದ ಶಿಶುಗಳಿಗೆ ಸ್ಕಿನ್‌ ಅಲರ್ಜಿ, ರಾಶೆಸ್‌, ಕೆಂಪು ದದ್ದು ಇತ್ಯಾದಿ ಕಾಡಬಹುದು.

ಮಿನರಲ್ ಆಯಿಲ್

ಲಿಕ್ವಿಡ್‌ ಯಾ ಕ್ರೀಮೀ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಮಿನರಲ್ ಆಯಿಲ್ ‌ಬೆರೆಸಲಾಗುತ್ತದೆ. ಆದರೆ ಇದು ಮಗುವಿನ ಕೋಮಲ ಚರ್ಮಕ್ಕೆ ಹಾನಿಕರ. ಅದರ ರೋಮಛಿದ್ರಗಳನ್ನು ಬ್ಲಾಕ್‌ ಮಾಡಿಬಿಡುತ್ತದೆ. ಇದರಿಂದ ಮಗುವಿನ ಸಾಫ್ಟ್ ಸ್ಕಿನ್‌ ಗೆ ಹೊರಗಿನ ಆಮ್ಲಜನಕದ ಪೂರೈಕೆ ಆಗುವುದೇ ಇಲ್ಲ. ಹೀಗಾಗಿ ಮಗುವಿನ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಮಿನರಲ್ ಆಯಿಲ್ ‌ಇಲ್ಲದೆ ಇರುವಂಥದ್ದನ್ನೇ ಖರೀದಿಸಿ.

ಆಲ್ಕೋಹಾಲ್

‌ಮಕ್ಕಳ ಅನೇಕ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಆಲ್ಕೋಹಾಲ್ ‌ಬಳಕೆ ಇದ್ದೇ ಇರುತ್ತದೆ. ಇದರ ಬಳಕೆಯಿಂದ ಇಂಥ ಪ್ರಾಡಕ್ಟ್ಸ್ ಚರ್ಮದಲ್ಲಿ ಬೇಗ ವಿಲೀನವಾಗಿ, ಮೇಲೆ ಒಣಗಿದಂತೆ ಕಾಣುತ್ತದೆ. ಆದರೆ ಇಂಥ ಪ್ರಾಡಕ್ಟ್ಸ್ ನ್ನು ಸುದೀರ್ಘ ಕಾಲ ಬಳಸುದರಿಂದ, ಇದರಲ್ಲಿನ ಆಲ್ಕೋಹಾಲ್ ‌ನ ಅಂಶ ಶಿಶುಗಳ ನಾಜೂಕು ತ್ವಚೆಗೆ ಬಲು ಹಾನಿಕಾರಕ ಎಂಬುದು ನಿಜ. ಈ ಕಾರಣದಿಂದಲೇ ಮಕ್ಕಳಿಗೆ ಡಿಯೋ ಯಾ ಪರ್ಫ್ಯೂಮ್ ಬಳಸಲೇಬಾರದು. ಇವುಗಳಲ್ಲಿ ಆಲ್ಕೋಹಾಲ್ ‌ಅಂಶ ಇರುವುದು ಎಲ್ಲರಿಗೂ ತಿಳಿದ  ಸಂಗತಿ. ಆದ್ದರಿಂದ ಮಗುವಿಗಾಗಿ ನೀವು ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಕೊಳ್ಳುವಾಗ ಅದರಲ್ಲಿ ಆಲ್ಕೊಹಾಲ್ ‌ಅಂಶ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ