ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರರಂಗದ ಚಾಕೋಲೇಟ್ ಬಾಯ್ ಧರ್ಮಕೀರ್ತಿರಾಜ್ ನಾಯಕತ್ವದ 25ನೇ ಚಿತ್ರ ’ನಯನ ಮನೋಹರ’’ ಸಿನಿಮಾದ ಶೀರ್ಷಿಕೆ ಅನಾವರಣ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವು ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್‌ ನಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಂಗಳೂರು ಮೂಲದ ಯುವ ಉದ್ಯಮಿ, ಬಿಲ್ಡರ್ ಅನುಷ್ ಸಿದ್ದಪ್ಪ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಅಭಿಲಾಷೆಯಿಂದ ‘ನಯನ ಮನೋಹರ’  ಚಿತ್ರವನ್ನು ತಮ್ಮದೇ ಎಕ್ಸ್ಕ್ವಿಸೈಟ್ ಎಂಟರ್‌ಟೈನ್‌ಮೆಂಟ್ಸ್  ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

images (1)

ಯುವ ಪ್ರತಿಭೆ ನಿರ್ದೇಶಕ ಪುನೀತ್ ಕೆಜಿಆರ್* ಚೊಚ್ಚಲ ಚಿತ್ರಕ್ಕೆ ತಮ್ಮದೇ ’ಲಾಸ್ಟ್ ಬೆಂಚ್ ವಂಡರ್ಸ್ ಸಿನ್ಸ್ 1990’ ತಂಡದೊಂದಿಗೆ ನಿರ್ದೇಶನ ಮಾಡುತ್ತಿದ್ದು, ’ಇದು ನಿಮ್ಮನ್ನು ನಿಮಗೆ ಪರಿಚಯಿಸುವ ಸುಂದರ ಕಾವ್ಯ’ ಎಂಬ ಶೀರ್ಷಿಕೆಯ ಅರ್ಥಪೂರ್ಣ ಅಡಿಬರಹವಿಶೇಷವಾಗಿದೆ.
“ಅಪ್ಪ, ಅಮ್ಮ, ಅಕ್ಕ ಬಂದಿರುವುದು ನನಗೆ ಶಕ್ತಿ ಬಂದಿದೆ. ಎಲ್ಲರೂ ಸಮಯ ಬಿಡುವು ಮಾಡಿಕೊಂಡು ತಂಡಕ್ಕೆ ಹರಸಲು ಆಗಮಿಸಿದಕ್ಕೆ ತುಂಬಾ ಥ್ಯಾಂಕ್ಸ್. 25ನೇ ಫಿಲಂ ಮೈಲ್‌ಸ್ಟೋನ್ ಅಂತ ಹೇಳಬಹುದು. ಮೇಜರ್ ಹೀರೋ ಅಂದರೆ ನಿರ್ಮಾಪಕರು.

download (5)

ನನ್ನ ಲುಕ್ಕಿಗೆ ಅವರೇ ಕಾರಣ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಪ್ರಿಯಾಂಕ ಮೇಡಂ ಜತೆಗೆ ’ವೈರಸ್’ನಲ್ಲಿ ನಟಿಸಿದ್ದೇನೆ. ಅವರು ತುಂಬಾ ಸರಳವ್ಯಕ್ತಿ. ಗೆಳೆಯ ವಿನೋಧ್ ಪ್ರಭಾಕರ್ ಮೊದಲಿನಿಂದಲೂ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಏನೇ ತಪ್ಪು ಮಾಡಿದರೂ, ಮನೆಗೆ ಕರೆಸಿಕೊಂಡು ಬುದ್ದಿವಾದ ಹೇಳುತ್ತಾರೆ. ಸುಮಾರು ಸಲ ಲುಕ್ ಚೇಂಜ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದು ನನಗೆ ಹೆಸರು ತಂದುಕೊಡುತ್ತದೆಂಬ ನಂಬಿಕೆ ಇದೆ” ಅಂತ ಧರ್ಮಕೀರ್ತಿರಾಜ್ “ಎಲ್ಲರಿಗೂ ಥ್ಯಾಂಕ್ಸ್” ಎನ್ನುತ್ತಾ ಮೈಕ್‌ನ್ನು ಹಸ್ತಾಂತರಿಸಿದರು.

dharmaraj-11-860x384

ನಿರ್ದೇಶಕರು ಹೇಳುವಂತೆ “ಈಗಲೇ ಏನನ್ನು ಹೇಳಲಾಗದು. ಸಿನಿಮಾ ಯಾವ ರೀತಿ ಇರುತ್ತದೆಂದು ಟೀಸರ್ ಅಲ್ಲದೆ ಪೋಸ್ಟರ್‌ದಲ್ಲಿ ಸಣ್ಣದೊಂದು ಸುಳಿವು ನೀಡಿದ್ದೇನೆ. ಖಂಡಿತ ಭರವಸೆ ಕಾಪಾಡುತ್ತೇನೆ. ’ನಮ’ ಎಲ್ಲರಿಗೂ ತಲುಪುವಂತೆ ಮಾಡುತ್ತೇನೆ. ಧರ್ಮ ಸರ್‌ಗೆ ಗೆಲುವು ಕೊಡುತ್ತದೆ” ಎಂಬ ಆಶಾಭಾವನೆ ವ್ಯಕ್ತಪಡಿಸಿ, ನಾಯಕಿ ಇನ್ನುಳಿದಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಸಿನಿಮಾದ ಕುರಿತಂತೆ ಪುನೀತ್.ಕೆಜಿಆರ್ ಗೌಪ್ಯತೆ ಕಾಪಾಡಿಕೊಂಡರು.
ನಿರ್ಮಾಪಕ ಅನುಷ್ ಸಿದ್ದಪ್ಪ ಅತಿಥಿಗಳು, ಕಾರ್ಯಕ್ರಮ ರೂಪರೇಷೆಯಲ್ಲಿ ತಲ್ಲೀನರಾಗಿದ್ದರಿಂದ ಮಿತಭಾಷಿಯಾಗಿ “ಮೊದಲ ಪ್ರಯತ್ನ. ನಿಮ್ಮಗಳ ಆರ್ಶಿವಾದ ಬೇಕು” ಎಂದು ಕೋರಿಕೊಂಡರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ