- ರಾಘವೇಂದ್ರ ಅಡಿಗ ಎಚ್ಚೆನ್.
ಭಾರತದ ಪ್ರೀಮಿಯಂ ಫ್ಯಾಷನ್, ಸೌಂದರ್ಯ ಮತ್ತು ಉಡುಗೊರೆ ವಸ್ತುಗಳ ತಾಣವಾದ ಶಾಪರ್ಸ್ ಸ್ಟಾಪ್, ತನ್ನ ಮೈಸೂರಿನ ಮಳಿಗೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಹೊಚ್ಚಹೊಸ ಬಿಎಂಡಬ್ಲುö್ಯ 310ಆರ್‌ಆರ್‌ನೊಂದಿಗೆ ತನ್ನ ಬಹುನಿರೀಕ್ಷಿತ ಡೆನಿಮ್ ಡಿಕೋಡ್ ಅಭಿಯಾನದ ವಿಜೇತರಾದ ಹೆಮ್ಮೆಯ ಫಸ್ಟ್ ಸಿಟಿಜನ್ ಕ್ಲಬ್ (ಎಫ್‌ಸಿಸಿ) ಸದಸ್ಯರಾದ ಶ್ರೀ ಆರಿಫ್ ಎ. ಅವರನ್ನು ಸನ್ಮಾನಿಸಿದೆ. ಈ ಆಚರಣೆಯು ಶಾಪರ್ಸ್ ಸ್ಟಾಪ್‌ನ ಬಹುನಿರೀಕ್ಷಿತ ವಿಶೇಷ ಮಾರಾಟಕ್ಕೆ ಪ್ರಾರಂಭವಾಗಿದೆ. ಈಗ ದೇಶದ ಎಲ್ಲೆಡೆ ಮತ್ತು ಆನ್‌ಲೈನ್‌ನಲ್ಲಿ, ಅಂಗಡಿಗಳಲ್ಲಿ ಈ ನೇರ ಮಾರಾಟ ನಡೆಯುತ್ತಿದೆ. ಮಹಿಳೆಯರ, ಪುರುಷರ ಅಲ್ಲದೇ ಮಕ್ಕಳ ಉಡುಪುಗಳು, ಪಾದರಕ್ಷೆಗಳು, ಪರಿಕರಗಳು, ಕೈಚೀಲಗಳು, ಸೌಂದರ್ಯ ಮತ್ತು ಪ್ರಯಾಣದ ಅಗತ್ಯ ವಸ್ತುಗಳನ್ನು ಒಳಗೊಂಡ 500ಕ್ಕೂ ಹೆಚ್ಚಿನ ಪ್ರಮುಖ ಬ್ರಾಂಡ್‌ಗಳನ್ನು ಈ ಮಾರಾಟದಲ್ಲಿ ಸೇರಿಸಲಾಗಿದೆ.

ಶಾಪರ್ಸ್ ಸ್ಟಾಪ್‌ನ ಗ್ರಾಹಕ ಸೇವಾ ಸಹಯೋಗಿ ಮತ್ತು ಮುಖ್ಯ ಮಾರುಕಟ್ಟೆ ಕಾರ್ಯಾಧಿಕಾರಿ ಜಿತೆನ್ ಮಹೇಂದ್ರ ಅವರು ಮಾತನಾಡಿ, “ಶಾಪರ್ಸ್ ಸ್ಟಾಪ್‌ನಲ್ಲಿ, ಗ್ರಾಹಕರನ್ನು ತೊಡಗಿಸುವುದು, ಗುರುತಿಸುವಿಕೆ ಮತ್ತು ನಂಬಿಕೆಯ ಮೇಲೆ ಫ್ಯಾಷನ್ ಅನುಭವಗಳನ್ನು ನಿರ್ಮಿಸಲಾಗಿದೆ ಎಂದು ನಾವು ನಂಬುತ್ತೇವೆ. ಶೈಲಿಯನ್ನು ಅರ್ಥಪೂರ್ಣ ಕ್ಷಣಗಳೊಂದಿಗೆ ಸಂಯೋಜಿಸುವ ಮೂಲಕ ನಾವು ಹೇಗೆ ನಮ್ಮ ಅತ್ಯಂತ ನಿಷ್ಠಾವಂತ ಗ್ರಾಹಕರಿಗೆ ಪ್ರತಿಫಲ ನೀಡುತ್ತೇವೆ ಎಂಬುದನ್ನು ಡೆನಿಮ್ ಡಿಕೋಡ್ ಬಿಂಬಿಸುತ್ತದೆ. ನಾವು ಶ್ರೀ ಆರಿಫ್ ಎ. ಅವರನ್ನು ಗೌರವಿಸಿ ಸಂಭ್ರಮಿಸುವಾಗ, ದೇಶದ ಎಲ್ಲೆಡೆಯ ಖರೀದಿದಾರರಿಗೆ ನಮ್ಮ ಬಹುನಿರೀಕ್ಷಿತ ಮಾರಾಟ ತಲುಪಿಸಲು ನಾವು ಅಷ್ಟೇ ಉತ್ಸುಕರಾಗಿದ್ದೇವೆ, ಪ್ರೀಮಿಯಂ ಬ್ರ‍್ಯಾಂಡ್‌ಗಳ ಆಯ್ದ ಸಂಗ್ರಹ ಮತ್ತು ಶಾಪರ್ಸ್ ಸ್ಟಾಪ್ ಅನ್ನು ವ್ಯಾಖ್ಯಾನಿಸುವ ವೈಯಕ್ತೀಕರಿಸಿದ ಸೇವೆ ಸಾದರಪಡಿಸುತ್ತೇವೆ” ಎಂದರು.

ಡೆನಿಮ್ ಡಿಕೋಡ್ - ದಿ ಕೋಡ್ ಬಿಹೈಂಡ್ ಎವರಿ ಲುಕ್ ಅಭಿಯಾನವು ಲೆವಿಸ್, ಪೆಪೆ ಜೀನ್ಸ್ ಮತ್ತು ಜ್ಯಾಕ್ & ಜೋನ್ಸ್ನಂತಹ ಪ್ರಮುಖ ಬ್ರ‍್ಯಾಂಡ್‌ಗಳಿAದ 2,000 ಕ್ಕೂ ಹೆಚ್ಚು ಆಯ್ದ ಡೆನಿಮ್ ಶೈಲಿಗಳನ್ನು ಪ್ರದರ್ಶಿಸಿದೆ. ಇದು ಸಮಕಾಲೀನ ಡೆನಿಮ್ ಮತ್ತು ದೈನಂದಿನ ಫ್ಯಾಷನ್ ಅಗತ್ಯಗಳಿಗೆ ಆದ್ಯತೆಯ ತಾಣವಾಗಿ ಶಾಪರ್ಸ್ ಸ್ಟಾಪ್‌ನ ಸ್ಥಾನವನ್ನು ಬಲಪಡಿಸಿದೆ. ಫಸ್ಟ್ ಸಿಟಿಜನ್ ಕ್ಲಬ್ (ಎಫ್‌ಸಿಸಿ)ನಲ್ಲಿ ಅಡಿಯಲ್ಲಿ ನಡೆಸಲಾದ ಈ ಉಪಕ್ರಮದಲ್ಲಿ ದೇಶದ ಎಲ್ಲೆಡೆಯ ಡೆನಿಮ್ ಪ್ರಿಯರು ಉತ್ಸಾಹದೊಂದಿಗೆ ಭಾಗವಹಿಸಿದ್ದರು.

ಗ್ರಾಹಕರು ಖಾಸಗಿ ಬ್ರಾಂಡ್‌ಗಳಾದ ಫ್ರಾಟಿನಿ ಮತ್ತು ಸ್ಟಾಪ್‌ನಲ್ಲಿ ಶೇ. 40ರಷ್ಟು ಉಳಿತಾಯ ಹೊಂದಬಹುದು. ಜೊತೆಗೆ ಲೆವಿಸ್ ಮತ್ತು ಯುನೈಟೆಡ್ ಕಲರ್ಸ್ ಆಫ್ ಬೆನೆಟನ್‌ನಲ್ಲಿ 2 ಖರೀದಿಸಿ 2 ಉಚಿತವಾಗಿ ಪಡೆಯಿರಿ ಕೊಡುಗೆಗಳು ಅಲ್ಲದೇ ಮ್ಯಾಕ್ ಮತ್ತು ಯು.ಎಸ್. ಪೊಲೊ ಅಸೋಸಿಯೇಷನ್‌ನಲ್ಲಿ 2 ಖರೀದಿಸಿ 1 ಉಚಿತವಾಗಿ ಪಡೆಯಿರಿ ಡೀಲ್‌ಗಳನ್ನು ಆನಂದಿಸಬಹುದು. ಈ ಮಾರಾಟವು ಮೈಕೆಲ್ ಕೋರ್ಸ್, ಸೆರುಟಿ 1881, ಜ್ಯೂಸಿ ಕೌಚರ್, ಟಾಮಿ ಹಿಲ್ಫಿಗರ್, ಕ್ಯಾಲ್ವಿನ್ ಕ್ಲೈನ್, ವೆರೋ ಮೋಡಾ, ಡಬ್ಲ್ಯೂ, ಜ್ಯಾಕ್ & ಜೋನ್ಸ್, ಸ್ಕೆಚರ್ಸ್, ಅಡಿಡಾಸ್ ಮತ್ತು ಆಲ್ಡೊ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಮತ್ತು ಪ್ರೀಮಿಯಂ ಲೇಬಲ್‌ಗಳನ್ನು ಕೂಡ ಒಳಗೊಂಡಿದೆ. * ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.





