- ರಾಘವೇಂದ್ರ ಅಡಿಗ ಎಚ್ಚೆನ್.

ರಾಜೇಂದ್ರ ಸಿಂಗ್ ಬಾಬು  ಅವರು ಕನ್ನಡ ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 5 ದಿನಗಳ ಕಾಲ ಚಾಮರಾಜ ಪೇಟೆಯ ಕಲಾವಿದರ ಭವನದಲ್ಲಿ ಸಾಧನೆ..ಸಂಭ್ರಮ..ಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 23 ರಿಂದ 27ರ ವರೆಗೆ ರಾಜೇಂದ್ರಸಿಂಗ್ ಬಾಬು ಅವರ ಸಿನಿಮಾಗಳ ಪ್ರದರ್ಶನ, ಸಂವಾದ ಸಂಕೀರ್ಣ ಕಾರ್ಯಕ್ರಮಕ್ಕೆ ಅ.27ಕ್ಕೆ ತೆರೆ ಎಳೆಯಲಾಗಿದೆ.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜೇಂದ್ರ ಸಿಙಗ್ ಬಾಬು ಅವರ ಆಪ್ತರು, ಕುಟುಂಬಸ್ಥರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

Rajendra 1

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ, ನಟಿ ಸುಹಾಸಿನಿ, ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್, ನಟ ಡಾ.ವಿ.ರವಿಚಂದ್ರನ್, ನಿರ್ದೇಶಕ ಟಿಎನ್ ಸೀತಾರಾಮ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸೇರಿ ಇಡೀ ಚಿತ್ರರಂಗದ ಗಣ್ಯರು ಸಾಕ್ಷಿಯಾದರು. ಈ ವೇಳೆ ರಾಜೇಂದ್ರ ಸಿಂಗ್ ಬಾಬು ಅವರಿಗೆ "ನಿರ್ದೇಶಕ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವ ನೀಡಿದ್ದಾರೆ ಗಣ್ಯರು.
ಚಿತ್ರರಂಗದಲ್ಲಿ ಬೆಳೆಯಲು ಬಾಬು ಅವರ ಪ್ರೋಸ್ತಾಹವನ್ನು ನಟಿ ಸುಹಾಸಿನಿ, ಅರ್ಜುನ್ ಸರ್ಜಾ, ಹಂಸಲೇಖ, ರವಿಚಂದ್ರನ್ ಸಹ ಹಲವರು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ನಾನಿನ್ನೂ ಮುಂದಿನ ಹತ್ತು ಜನ್ಮ ಕನ್ನಡ ನಾಡಿನಲ್ಲೇ ಹುಟ್ಟಿ ಇದೇ ಕನ್ನಡ ಚಿತ್ರರಂಗದ ಸೇವೆ ಮಾಡಬೇಕೆನ್ನುವ ಆಸೆ ಇದೆ. ಪರಬಾಷೆಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡದ ನೆಲದ ಕಾಯಕ ಖುಷಿ ತಂದಿದೆ.ನಮ್ಮ ಮಣ್ಣು, ನೆಲ, ಗಾಳಿಯೇ ನನಗೆ ಸ್ಫೂರ್ತಿ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ