25 ವರ್ಷಗಳು, ಹಲವು ಭಾಷೆಗಳು, ನಿಲ್ಲಿಸಲಾಗದ ಆ ಒಂದು ರಾಗಲಹರಿಗೆ ಧ್ವನಿಯಾಗಿದ್ದಾರೆ ರಂಜನಿ ಜೋಸ್. ಇವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?
ರಂಜನಿ ಜೋಸ್ ರಿಗೆ ಓಣಂ ಕೇವಲ ಪರಂಪರೆ ಯಾವ ಸಂಪ್ರದಾಯದ ಭಾಗ ಮಾತ್ರವಲ್ಲ, ಕೇರಳದಾದ್ಯಂತ ಓಣಂ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಕಲಾ ಪ್ರದರ್ಶನ ನೀಡುತ್ತಾ ಕಳೆಯುವವರಿಗೆ, ಈ ಹಬ್ಬ ಅತ್ಯಂತ ವೈಯಕ್ತಿಕವಾಗಿರುತ್ತದೆ. ಇದು ತಮ್ಮ ಮೂಲ ಬೇರುಗಳು, ಅಲ್ಲಿನ ಲಯಕ್ಕೆ ಮತ್ತು ಮನೆಯೊಂದಿಗಿನ ತಮ್ಮ ಭಾಂದವ್ಯವನ್ನು ಭದ್ರವಾಗಿ ಬೆಸೆಯುತ್ತದೆ.
``ಕಳೆದ 25 ವರ್ಷಗಳಲ್ಲಿ ನಾನು ಓಣಂ ಹಬ್ಬಕ್ಕೆ ಮನೆಗೆ ಹೋಗಿದ್ದೇ ಕಡಿಮೆ,'' ಎನ್ನುತ್ತಾರ ಕಲಾವಿದೆ ರಂಜನಿ ಜೋಸ್.
``ಹೆಚ್ಚಿನ ಸಮಯದಲ್ಲಿ ನಾನು ಕೇರಳ ಸರ್ಕಾರದ ಆಚರಣೆಗಳ ಭಾಗವಾಗಿ ಪ್ರದರ್ಶನ ನೀಡಲು ಪ್ರಯಾಣಿಸುತ್ತಿರುತ್ತೇನೆ. ಮನೆಯಲ್ಲಿ ಸೀರೆ ತೊಟ್ಟು, ಮನೆಯಂಗಳದಲ್ಲಿ ಪುಷ್ಪಗಳಿಂದ ಪೂಕ್ಕೋಲಂ ಅಲಂಕರಿಸಿ, ಪೋಷಕರೊಂದಿಗೆ ಬಾಳೆ ಎಲೆ ಮೇಲೆ ಪಾಯಸ ಸವಿಯುವ ಕ್ಷಣಗಳು ಮಾತ್ರ ಅತ್ಯದ್ಭುತ!'' ಎಂದು ತಮ್ಮ ನೆಚ್ಚಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ ರಂಜನಿ.
ಈ ವರ್ಷ ಓಣಂ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಎರಡು ಕಾರಣಗಳಿವೆ. ರಂಜನಿ ಇದೀಗ ಭಾರತೀಯ ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ತಾನು ಹದಿಹರೆಯದರಿದ್ದಾಗ ಆರಂಭವಾದ ಈ ಪ್ರಯಾಣ ಈಗ 200ಕ್ಕೂ ಹೆಚ್ಚು ಚಲನಚಿತ್ರಗಳು, 5 ಭಾಷೆಗಳು, ಅಂತಾರಾಷ್ಟ್ರೀಯ ಪ್ರವಾಸಗಳು ಹಾಗೂ ತಮ್ಮದೇ ಆದ `ಆರ್ ಜೆ ದಿ ಬ್ಯಾಂಡ್' ಮೂಲಕ ಇಂಡೀ ಸಂಗೀತ ಕ್ಷೇತ್ರವನ್ನೇ ಪರಿವರ್ತಿಸಿದ್ದಾರೆ. ಅವರ ಧ್ವನಿ ವೃತ್ತಿ ಜೀವನದಷ್ಟೇ ಬಹುಮುಖವಾಗಿ ಎಲ್ಲೆಡೆ ಪಸರಿಸಿದೆ. ಶಾಸ್ತ್ರೀಯದಿಂದ ಹಿಡಿದು ರಾಕ್ ವರೆಗೆ, ಮಲೆಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪ್ಲೇಬ್ಯಾಕ್ ಹಾಡುಗಳಿಂದ ಮೂಲ ಗೀತೆಗಳವರೆಗೆ ನಿರ್ಭೀತ ಸ್ವಾತಂತ್ರ್ಯದೊಂದಿಗೆ ಮುಂದೆ ಸಾಗಿದೆ.
ರಂಜನಿ ತಮ್ಮ ಹೊಸ ಆಲ್ಬಮ್, ಹೊಸ ಉದ್ದೇಶದ ಭಾವನೆ ಮತ್ತು ಸಂಗೀತದಿಂದ ತುಂಬಿದ ಹೃದಯದೊಂದಿಗೆ ಈ ಮೈಲಿಗಲ್ಲು ತಲುಪಿದ್ದು, ತಮ್ಮ ಹೃದಯಾಂತರಾಳದ ಒಂದಷ್ಟು ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ನಿಮಗೆ ಹೇಗನ್ನಿಸುತ್ತದೆ?
ಕೃತಜ್ಞತೆ, ವಿನಮ್ರತೆ ಹಾಗೂ ಕೆಲವೊಮ್ಮೆ ಆಶ್ಚರ್ಯ ಆಗುತ್ತದೆ! ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ನನಗೆ ಒಂದಿಷ್ಟು ವಿರಾಮ ದೊರೆಯಿತು ಹಾಗೂ ಆಲೋಚಿಸಲು ಸಮಯವಿತ್ತು. ಅದೇ ಸಮಯದಲ್ಲಿ ನಾನು ಎಷ್ಟು ದೂರ ಬಂದಿದ್ದೇನೆ ಎಂಬ ಅರಿವು ಆಯಿತು. ಕೋವಿಡ್ ನಂತರ, ನಾನು ನೇರವಾಗಿ ಕೆಲಸ, ಪ್ರವಾಸ, ರೆಕಾರ್ಡಿಂಗ್, ವೇದಿಕೆ ಪ್ರದರ್ಶನಗಳಿಗೆ ಮರಳಿದೆ. `ನಾನು ಇನ್ನೂ ನನ್ನ ಇಷ್ಟವಾದ ಕೆಲಸ ಮಾಡುತ್ತಿದ್ದೇನೆ ಹಾಗೂ ನಾನು ನನ್ನ ಸಂಗೀತವನ್ನು ಎಂದಿಗಿಂತಲೂ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದೇನೆ,' ಎಂದು ಅಗ ನನಗೆ ಸರಿಯಾಗಿ ತಿಳಿದಿತ್ತು.
ನಿಮ್ಮ ಇತ್ತೀಚಿನ ಪ್ರಾಜೆಕ್ಟ್ `ಮೆಟಾಮಾರ್ಫ್' ಬಗ್ಗೆ ಹೇಳಿ.
ಮೆಟಾಮಾರ್ಫ್ ತುಂಬಾ ವೈಯಕ್ತಿಕವಾಗಿದೆ. ಇದು ನನ್ನ ಮೊದಲ ಸ್ವತಂತ್ರ ಆಲ್ಬಂ ಮತ್ತು ಎಲ್ಲಾ ಗೀತೆಗಳು ನನ್ನ ಸ್ವಂತ ರಚನೆಗಳೇ ಆಗಿವೆ ಮೊದಲ ಟ್ರ್ಯಾಕ್ `ಹ್ಯೂಸ್' ಈಗಾಗಲೇ ಬಿಡುಗಡೆಯಾಗಿದೆ. ನಾನು ಯಾವಾಗಲೂ ಹಿನ್ನೆಲೆ ಗಾಯನನ್ನು ಮೀರಿ ನನ್ನನ್ನು ನಾನು ಅನ್ವೇಷಿಸಲು ಬಯಸುತ್ತೇನೆ. ಸಾಹಿತ್ಯ ಬರೆಯುವುದು ಒಂದು ರೀತಿಯ ಚಿಕಿತ್ಸೆಯಾಗಿದೆ. ನಾನು ಎಂದಿಗೂ ಗಟ್ಟಿಯಾಗಿ ಅಥವಾ ಜೋರಾಗಿ ಹೇಳದ ವಿಷಯಗಳನ್ನು ಈ ಮೂಲಕ ಹೇಳಬಲ್ಲೆ. ಆರ್ ಜೆ ದಿ ಬ್ಯಾಂಡ್ ಮತ್ತು ನಾನು, ನನ್ನ ನಿರ್ಮಾಪಕ ಚಾರ್ಲ್ಸ್ ನಜ್ರೆತ್ ಒಟ್ಟಿಗೆ ಸೇರಿ ಸತ್ಯವಾಗಿ ಪ್ರತಿನಿಧಿಸುವ ಮೂಲಗೀತೆಗಳ ಕುರಿತು ಕೆಲಸ ಮಾಡುತ್ತಿದ್ದೇವೆ. ನೀವು ಹಲವು ಭಾರತೀಯ ಭಾಷೆಗಳಲ್ಲಿ ಹಾಡುತ್ತೀರಿ. ಅವುಗಳನ್ನು ನೀವು ಹೇಗೆ ಅಳವಡಿಸಿಕೊಂಡಿದ್ದೀರಿ?





