ಕೂದಲಿಗೆ ಸಂಬಂಧಿಸಿದ ಅತಿ ದೊಡ್ಡ ಸಮಸ್ಯೆ ಎಂದರೆ ಹೇರ್‌ ಫಾಲ್ ‌ಅಂದ್ರೆ ಕೂದಲು ಉದುರುವಿಕೆಯದು. ಇದಕ್ಕೆ ಹಲವು ಕಾರಣಗಳಿವೆ. ಹೀಗಾಗಿ ಪ್ರತಿ ಕೇಸಿನಲ್ಲೂ ಚಿಕಿತ್ಸೆ ಬೇರೆ ಬೇರೆಯೇ ಆಗಿರಬೇಕು. ಆದರೆ ಜನ ಈ ಕಡೆ ಗಮನ ಕೊಡುವುದೇ ಇಲ್ಲ, ಹೀಗಾಗಿ ಈ ಸಮಸ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ತಜ್ಞರ ಸಲಹೆಯ ಪ್ರಕಾರ ಇಲ್ಲಿನ ವಿಭಿನ್ನ ವಿಷಯ ಗಮನಿಸಿ, ಯಾವ ಸಮಸ್ಯೆಗೆ ನೀವು ಎಂಥ ಪರಿಹಾರ ಕಂಡುಕೊಳ್ಳಬೇಕು ಎಂಬುದರತ್ತ ಗಮನ ಕೊಡಿ :

ನಿರ್ಲಕ್ಷ್ಯವೇ ಪ್ರಧಾನ

ಇಂದಿನ ಯುವಜನತೆ ಹೆಚ್ಚಾಗಿ ಈ ಸಮಸ್ಯೆಗೆ ಬಲಿಯಾಗಲು ಮುಖ್ಯ ಕಾರಣ, ಪ್ರತಿಯೊಬ್ಬರೂ ತಮ್ಮ ಕೂದಲು, ಹೇರ್‌ ಸ್ಟೈಲ್ ವಿಭಿನ್ನವಾಗಿ ಕಾಣಲಿ ಎಂದು ಏನೇನೋ ಹುಚ್ಚು ಪ್ರಯೋಗ ಮಾಡುತ್ತಾರೆ. ದಿನೇದಿನೇ ಮಾರುಕಟ್ಟೆಯಲ್ಲಿ ಹೇರ್‌ ಸ್ಟೈಲಿಂಗ್ ಉಪಕರಣಗಳು ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.

ಇಂದಿನ ಸ್ಥಿತಿ ಹೇಗಿದೆ ಎಂದರೆ ನಾವೇನೋ ನಮ್ಮ ಕೂದಲನ್ನು ಸುಂದರವಾಗಿ ತೋರ್ಪಡಿಸಲು ಬಯಸುತ್ತೇವೆ, ಆದರೆ ಅದರ ಕಡೆ ಗಮನ ಹರಿಸುವುದೇ ಇಲ್ಲ. ಆಧುನಿಕ ಫ್ಯಾಷನ್ನಿಗೆ ಮರುಳಾಗಿ ಇಂದಿನ ಯುವಜನತೆ ಕೂದಲಿಗೆ ಕಂಡ ಕಂಡ ಬಣ್ಣ ಮೆತ್ತಿಕೊಳ್ಳುತ್ತಾರೆ. ಕಲರ್‌ ಹಚ್ಚಿದ ವಾರದಲ್ಲೇ ಮತ್ತೊಂದು ಬಣ್ಣ ಬೇಕೆಂದು ಬದಲಿಸುತ್ತಿರುತ್ತಾರೆ. ಜೊತೆಗೆ ಕೂದಲಿನ ಆರೈಕೆಯತ್ತ ಗಮನ ಕೊಡುವುದೇ ಇಲ್ಲ.

ಕೂದಲಿನ ಆಂತರಿಕ ಆರೋಗ್ಯಕ್ಕಾಗಿ ನಿಮ್ಮ ಡಯೆಟ್‌ ಸದಾ ಅಚ್ಚುಕಟ್ಟಾಗಿರಲಿ. ಕೂದಲನ್ನು ಸದಾ ಸ್ವಚ್ಛ, ಶುಭ್ರವಾಗಿಡಿ. ಧೂಳು ಮಣ್ಣು ಅಧಿಕ ಇರುವ ಕಡೆ ಓಡಾಡುವಾಗ ಅಗತ್ಯವಾಗಿ ತಲೆಗೊಂದು ಸ್ಕಾರ್ಫ್‌ ಕಟ್ಟಿಕೊಳ್ಳಿ. ನಿಯಮಿತವಾಗಿ ಹೆಡ್‌ ಮಸಾಜ್ ಮಾಡಿಸಿ. ಕೂದಲು ಸಿಕ್ಕಾಗಿದ್ದರೆ ರಭಸವಾಗಿ ನೀವೇ ಕೂದಲು ಉದುರಿಸುವಂತೆ ರಫ್‌ & ಟಫ್‌ ಆಗಿ ತಲೆ ಬಾಚಬೇಡಿ. ಯಾವುದೇ ಹೇರ್‌ ಸ್ಟೈಲ್ ‌ನಲ್ಲಿದ್ದರೂ ರಾತ್ರಿ ಹೊತ್ತು ತಲೆಗೂದಲನ್ನು ಹರಡಿ ಮಲಗಿರಿ. ಕೂದಲಿನ ಆಂತರಿಕ ಹಾಗೂ ಬಾಹ್ಯ ಆರೋಗ್ಯ ಎರಡೂ ಗಮನಿಸತಕ್ಕದ್ದು.

ಪಾರ್ಲರ್‌ ಗೆ ಹೋದಾಗ ಸಾಮಾನ್ಯವಾಗಿ ನೀವು ಪಾರ್ಲರ್‌ ಗೆ ಹೋದಾಗ, ನಿಮ್ಮ ಕೂದಲು ಕತ್ತರಿಸುವವರು ಅನಗತ್ಯವಾಗಿ ನಿಮಗೇನಾದರೂ ಸಲಹೆ ಕೊಡುತ್ತಲೇ ಇರುತ್ತಾರೆ. ಮಾತುಮಾತಿನ ಮಧ್ಯೆ ಅವರ ಬಳಿ ಇರುವ ಶ್ಯಾಂಪೂ ಹಾಗೂ ಇತರ ಬ್ಯೂಟಿ ಪ್ರಾಡಕ್ಟ್ಸ್, ಹೇರ್‌ ಕೇರ್‌ ಉತ್ಪನ್ನ ಕೊಳ್ಳಬೇಕೆಂದು ಒತ್ತಾಯಿಸುತ್ತಿರುತ್ತಾರೆ. ಇಂಥವರ ಮಾತಿಗೆ ಎಂದೂ ಮರುಳಾಗಬೇಡಿ. ಅಂಥ ಉತ್ಪನ್ನಗಳ ಕುರಿತಾಗಿ ಅವರ ಬಳಿಯೇ ಇದು ಯಾವ ರೀತಿ ಪ್ರಯೋಜನಕಾರಿ, ಇದರಲ್ಲಿ ಏನೇನು ಬೆರೆತಿದೆ ಎಂದು ಕೇಳಿ ತಿಳಿಯಿರಿ. ನಿಮಗೆ ಬ್ಯೂಟಿ ಪ್ರಾಡಕ್ಟ್ ಬಗ್ಗೆ ಹೆಚ್ಚಿನ ಅರಿವಿದೆ ಎಂದು ಗೊತ್ತಾದರೆ ಅವರೆಂದೂ ನಿಮ್ಮನ್ನು ಆ ಬಗ್ಗೆ ಕೊಳ್ಳಲು ಒತ್ತಾಯಿಸುವುದಿಲ್ಲ.

ಯಾವುದೋ ಜಾಹೀರಾತು ನಂಬಿಕೊಂಡು ಯಾವುದೇ ಬ್ಯೂಟಿ ಪ್ರಾಡಕ್ಟ್ ಕೊಳ್ಳಬೇಡಿ. ಮೊದಲು ಅದನ್ನು ಬಳಸಿದ ಜನರಿಂದ ಫೀಡ್‌ ಬ್ಯಾಕ್‌ ಪಡೆಯಿರಿ. ಇಂಟರ್‌ ನೆಟ್‌ ನಲ್ಲಿ ಆ ಪ್ರಾಡಕ್ಟ್ ಕುರಿತ ರಿವ್ಯೂ ಓದಿರಿ. ಆ ಕುರಿತು ಯಾರಾದರೂ ಡಾಕ್ಟರಿಂದ ಸಲಹೆ ಪಡೆದರೆ ಇನ್ನೂ ಒಳ್ಳೆಯದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ