ಬ್ಯೂಟಿಪುಲ್ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಈ ಎಡೆಬಿಡದ ಧಾವಂತದ ಯುಗದಲ್ಲಿ ಎಲ್ಲೆಲ್ಲೂ ಪರಿಸರ ಮಾಲಿನ್ಯವೇ ಪ್ರಧಾನವಾಗಿರುವಾಗ, ಹಿಂದಿನ ಕಾಲದಂತೆ ಧಾರಾಳ ಸಮಯಾವಕಾಶ ಇರಿಸಿಕೊಂಡು ಅದರ ಆರೈಕೆ ಮಾಡಲು ಯಾರಿಗೆ ಪುರಸತ್ತಿದೆ? ಹಾಗೇಂತ ಅದನ್ನು ಸಂಪೂರ್ಣ ನಿರ್ಲಕ್ಷಿಸಲಿಕ್ಕೂ ಸಾಧ್ಯವಿಲ್ಲ. ಕೂದಲನ್ನು ಅಕ್ಕರೆಯಿಂದ ಆರೈಕೆ ಮಾಡಿದ್ದೇ ಆದರೆ, ನೀವು ಕೇಶ ಸೌಂದರ್ಯದಲ್ಲಿ ಎಲ್ಲರನ್ನೂ ಮೀರಿಸಬಲ್ಲಿರಿ.

ಕೇಶ ತಜ್ಞೆಯರ ಈ ಅಮೂಲ್ಯ ಸಲಹೆಗಳನ್ನು ಅನುಸರಿಸಿ. ಈ ಹೊಸ ವರ್ಷದಲ್ಲಿ ನಿಮ್ಮ ಕೇಶ ಸೌಂದರ್ಯ ದುಪ್ಪಟ್ಟುಗೊಳ್ಳುವಂತೆ ಮಾಡಬಾರದೇಕೆ?

ನಿಮ್ಮ ಸ್ಕಾಲ್ಪ್ ಗೆ ತಕ್ಕಂತೆ ವಾರಕ್ಕೆ ಎಲ್ಲಕ್ಕೂ ಮೊದಲು ಎಷ್ಟು ಸಲ, ಯಾವಾಗ ಶಾಂಪೂ ಮಾಡಿಕೊಳ್ಳಬೇಕೆಂದು ನಿರ್ಧರಿಸಿಕೊಳ್ಳಿ. ವಾರಕ್ಕೆ 2-3 ಸಲ ಮಾಡಿಕೊಂಡರೆ ಬೇಕಾದಷ್ಟಾಯಿತು. ನಿಮ್ಮ ಸ್ಕಾಲ್ಪ್ ಹೆಚ್ಚು ಆಯ್ಲಿ ಆಗಿದ್ದರೆ, ದಿನ ಬಿಟ್ಟು ದಿನ ಶ್ಯಾಂಪೂ ಬಳಸಿ ತಲೆ ಸ್ನಾನ ಮಾಡಿ.

ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದು ಎಂಬುದು ಹಳೆಯ ಪದ್ಧತಿ, ಇದರಿಂದ ಕೂದಲಿನ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮವಾಗದು, ಏಕೆಂದರೆ ಎಣ್ಣೆ ಇಂದಿನ ಮಾಲಿನ್ಯ, ಧೂಳು ಇತ್ಯಾದಿಗಳನ್ನು ಹೆಚ್ಚು ಆಕರ್ಷಿಸುತ್ತದೆ. ಇದರಿಂದ ಅನಗತ್ಯವಾಗಿ ತಲೆ ಹೊಟ್ಟು ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಎಣ್ಣೆ ಹಚ್ಚದಿರುವುದೇ ಲೇಸು.

ಸದಾ ಲೂಸ್‌ ಹೇರ್‌ ಸ್ಟೈಲ್ ‌ನಿಮ್ಮದಾಗಿರಲಿ. ಬಿಗಿಯಾದ ಪೋನಿ ಟೇಲ್ ‌ಯಾ ಜಡೆ, ಕೂದಲಿನ ಉದುರುವಿಕೆಗೆ ಕಾರಣವಾದೀತು.

ಶ್ಯಾಂಪೂ ಮಾಡಿಕೊಳ್ಳುವಾಗ ಕೂದಲಿಗಿಂತ ಹೆಚ್ಚಾಗಿ ಸ್ಕಾಲ್ಪ್ ನ ಶುಚಿತ್ವದತ್ತ ಹೆಚ್ಚಿನ ಗಮನ ಕೊಡಿ. ಹೆಚ್ಚು ಶ್ಯಾಂಪೂ ಬಳಸಿದಷ್ಟೂ ಕೂದಲು ಹೆಚ್ಚು ಶುಷ್ಕ, ಸಿಕ್ಕಾಗುತ್ತದೆ.

ಕಂಡೀಶನರ್‌ನ್ನು ತಲೆಗೂದಲಿಗೆ ಬದಲಾಗಿ ಸ್ಕಾಲ್ಪ್ ಗೆ ಚೆನ್ನಾಗಿ ತಿಕ್ಕಿ ತೊಳೆಯಿರಿ. ಸ್ಕಾಲ್ಪ್ ಗೆ ಅತ್ಯಧಿಕ ಕಂಡೀಶನರ್ ಬಳಸಬೇಡಿ, ಆಗ ಕೂದಲು ಬೇಗ ನಿರ್ಜೀವವಾಗುತ್ತದೆ.

ಆರೋಗ್ಯಕರ ದೇಹದಲ್ಲಿ ಮಾತ್ರ ಸ್ವಸ್ಥ ಕೂದಲು ಬೆಳೆಯಬಲ್ಲದು ಎಂಬುದು ನಿಜ. ಹೀಗಾಗಿ ನಿಮ್ಮ ಊಟ ತಿಂಡಿಯ ಕಡೆ ಸದಾ ಗಮನವಿರಲಿ, ಅದು ಸದಾ ಪೌಷ್ಟಿಕವಾಗಿರಲಿ. ಆಹಾರದಲ್ಲಿ ಪ್ರೋಟೀನ್‌ ಅಂಶ ಅಧಿಕ ಇರಲಿ. ಇದರಿಂದ ಕೂದಲು ಹೆಲ್ದಿ  ಸ್ಟ್ರಾಂಗ್ ಆಗುತ್ತದೆ. ಹಸಿರು ತರಕಾರಿ, ಮೊಳಕೆಕಾಳು, ಮೊಟ್ಟೆ, ಮೀನು, ಸೋಯಾಬೀನ್ಸ್ ಇತ್ಯಾದಿಗಳಲ್ಲಿ ಪ್ರೋಟೀನ್‌ ರಿಚ್‌ ಆಗಿರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಅಗತ್ಯವಾಗಿ ಬಳಸಿರಿ.

ಸದಾ ನಿಮ್ಮ ವಿಟಮಿನ್‌ ಲೆವೆಲ್ ‌ಚೆಕ್‌ ಮಾಡಿಸಿ. ಅಗತ್ಯಕ್ಕೆ ತಕ್ಕಂತೆ ಸಪ್ಲಿಮೆಂಟ್ಸ್ ಸೇವಿಸಿ. ರಕ್ತಹೀನತೆ (ಅನೀಮಿಯಾ)ಗೆ ಅವಕಾಶ ಕೊಡಬೇಡಿ. ಕಬ್ಬಿಣಾಂಶದ ಕೊರತೆಯಿಂದಾಗಿ ಕೂದಲು ಉದುರುವಿಕೆ ಹೆಚ್ಚುತ್ತದೆ. ನಿಮಗೆ ಕೂದಲು ಹೆಚ್ಚಾಗಿಯೇ ಉದುರಿ ಹೋಗುತ್ತಿದ್ದರೆ ಕೂಡಲೇ ತಜ್ಞರ ಸಲಹೆ ಪಡೆಯಿರಿ.

ಮೆಡಿಟೇಶನ್‌ ಒಂದು ಉತ್ತಮ ಉಪಾಯ. ಇದು ಒತ್ತಡವನ್ನು ನಿವಾರಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ನಿಮ್ಮ ನರಗಳನ್ನು ನಿಯಂತ್ರಿಸಲು ಅಗತ್ಯ ಮೆಡಿಟೇಶನ್‌ ಮಾಡುತ್ತಿರಿ.

ಧೂಮಪಾನದಿಂದ ದೂರವಿರಿ. ಹಲವು ಸಂಶೋಧನೆಗಳಿಂದ ತಿಳಿದು ಬಂದಿರುವ ಸಂಗತಿ ಎಂದರೆ, ಧೂಮಪಾನದಿಂದ ಕೂದಲು ಹೆಚ್ಚಾಗಿ ಉದುರುತ್ತದೆ.

Baalo-ko-Khoobsurt

ನಿಮ್ಮ ಆಹಾರದಲ್ಲಿ ಸದಾ ರಿಚ್‌ ಆ್ಯಂಟಿ ಆಕ್ಸಿಡೆಂಟ್ಸ್ ತುಂಬಿರಲಿ. ಚೆರೀಸ್‌, ಆ್ಯವಕಾಡೋ, ನಟ್ಸ್ ಅಧಿಕ ಸೇವಿಸಿ.

ಸಮರ್ಪಕ ರೀತಿಯಲ್ಲಿ ಹೇರ್‌ ಸ್ಟೈಲಿಂಗ್‌ ಮಾಡಿ. ಟೆಕ್ಸ್ ಚರ್‌ವಾಲ್ಯೂಂ ಸ್ಪ್ರೆ ಪರ್ಕ್‌ ಎರಡೂ ನಿರ್ಜೀವ ಕೂದಲಿಗೆ ಅತ್ಯುತ್ತಮ ಎನಿಸಿದೆ. ಅದೇ ತರಹ ಕಂಡೀಶನರ್‌ಕರ್ಲ್ ಕ್ರೀಂ ಎರಡೂ ಕರ್ಲಿ ಹೇರ್‌ಗೆ ಒಳ್ಳೆಯದು.

ಒದ್ದೆ ತಲೆಗೂದಲನ್ನು ಒಣಗಿಸಲು ಡ್ರೈಯರ್‌ನಂಥ ಹೀಟ್‌ ಪ್ರೊವೈಡರ್ಸ್‌ ಬಳಸುವ ಮೊದಲು ಅಗತ್ಯವಾಗಿ ತಲೆಗೆ ಹೀಟ್ ಪ್ರೊಟೆಕ್ಟ್ ಸ್ಪ್ರೇ ಸೀರಂ ಅಗತ್ಯ ಹಚ್ಚಿಕೊಳ್ಳಿ.

ಬ್ಲೋ ಡ್ರೈ ಬಳಸಬೇಕಿದ್ದರೆ ಮೊದಲು ಅದರ ಬಳಸುವ ವಿಧಾನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಮನೆಯಲ್ಲೇ ಹೇರ್‌ ಡ್ರೈ‌ಮಾಡಿಕೊಳ್ಳುವುದು ಸರಿ, ಆದರೆ ಸ್ಚ್ರೇಟ್‌ ಮಾಡಬೇಕಿದ್ದರೆ ಸೆಲೂನ್‌ಗೇ ಹೋಗಿ. ಮನೆಯಲ್ಲೇ ಹೇರ್‌ ಸ್ಚ್ರೇಟ್‌ ಮಾಡುವುದಿದ್ದರೆ, ಹೀಟ್‌ ಮೀಡಿಯಂ ಆಗಿರಲಿ. ಅದನ್ನು ಹೇರ್‌ ರೂಟ್‌ನಿಂದ ಟಿಪ್‌ವರೆಗೂ ಕೊಂಡೊಯ್ಯಿರಿ. ಇದರಿಂದ ಕೂದಲು ಸ್ಲೀಕ್‌ ರೂಪ ಪಡೆಯುತ್ತದೆ.

ಬ್ಲಾಂಡ್‌ರೆಡ್‌ ಹೇರ್‌ ಸಹ ಆಕರ್ಷಕ ಎನಿಸುತ್ತದೆ, ಏಕೆಂದರೆ ಕೂದಲನ್ನು ಹೊಸ ಹೊಸ ಪ್ರಯೋಗಕ್ಕೆ ಒಡ್ಡಲು ಇದು ಸದವಕಾಶ. ಹೀಗೆ ಹೇರ್‌ ಕಲರ್‌ ಮಾಡಿದ ನಂತರ ಸರಿಯಾದ ಶ್ಯಾಂಪೂ, ಕಂಡೀಶನರ್‌ ಬಳಸಬೇಕಾದುದು ಅತ್ಯಗತ್ಯ.

ಡ್ರೈ ಶ್ಯಾಂಪೂ ಬಳಸುವುದು ಕೂದಲಿಗೆ ದೊಡ್ಡ ಹ್ಯಾಕ್ಸ್ ಆಗಬಲ್ಲದು. ಅದರಲ್ಲೂ ನಿಮ್ಮ ಬಳಿ ಮಾಮೂಲಿ ಶ್ಯಾಂಪೂ ಬಳಸಲು ಸಮಯ ಇಲ್ಲದಿರುವಾಗ, ಆದರೆ ಡ್ರೈ ಶ್ಯಾಂಪೂ ಕೂದಲನ್ನು ತೊಳೆಯುವ ಉತ್ತಮ ಉಪಾಯ ಅಲ್ಲ ಎಂಬುದನ್ನು ನೆನಪಿಡಿ.

ಕೇಶ ಸಂರಕ್ಷಣೆಗಾಗಿ ಮನೆಮದ್ದು ಅನುಸರಿಸುವುದು ಲೇಸು. ಇದಕ್ಕಾಗಿ ಮನೆಯಲ್ಲೇ ಒಂದು ಹೇರ್‌ ಮಾಸ್ಕ್ ತಯಾರಿಸಿ. ಇದರಿಂದ ನಿಮ್ಮ ಕೂದಲು ಹೊಳೆಹೊಳೆಯುವ, ಮೃದುವಾಗುವ ಸಂಭವವಿದೆ. ಒಂದು ಸಣ್ಣ ಬಟ್ಟಲಿಗೆ ಮೊಟ್ಟೆ ಒಡೆದು ಅದರ ಬಿಳಿ ಭಾಗ ಹಾಕಿಡಿ. ಇದನ್ನು ಚೆನ್ನಾಗಿ ಗೊಟಾಯಿಸಿ ತಲೆಗೂದಲಿಗೆ ಹಚ್ಚಿ ಒಣಗಿಸಿ. ನಂತರ ಬಿಸಿ ನೀರಲ್ಲಿ ಸ್ನಾನ ಮಾಡಿ. ಆಮೇಲೆ ನೀಟಾಗಿ ತಲೆ ಬಾಚಿ.

ಟವೆಲ್‌‌ನಿಂದ ಒದ್ದೆ ಕೂದಲನ್ನು ಒರಟಾಗಿ ಒರೆಸುವುದು, ತಿಕ್ಕುವುದು ಬೇಡ. ಬದಲಿಗೆ ಟವೆಲ್‌‌ನಲ್ಲಿ ಸುತ್ತಿಕೊಂಡು ನಿಧಾನ ಒಣಗಿಸಿ.

2 ವಾರಕ್ಕೊಮ್ಮೆ ಶ್ಯಾಂಪೂನಲ್ಲಿ 1 ಮಾತ್ರೆ ಆ್ಯಸ್ಪಿರಿನ್‌ ಕರಗಿಸಿ, ತಲೆಗೆ ಬಳಸಿರಿ. ನಿರ್ಜೀವ ಕೂದಲು ಜೀವ ಪಡೆಯುತ್ತದೆ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ