ಹೆಚ್ಚುತ್ತಿರುವ ವಯಸ್ಸಿನ ಪ್ರಭಾವವನ್ನು ತಗ್ಗಿಸಿ, 40+ ಆಗಿದ್ದರೂ ನೀವು ಸದಾ ಚಿರಯೌವನ ಉಳಿಸಿಕೊಳ್ಳ ಬಯಸಿದರೆ ಈ ಮಾಹಿತಿ ನಿಮಗೆ ಪೂರಕ.........!
ಹೆಚ್ಚುತ್ತಿರುವ ವಯಸ್ಸು ಹಾಗೂ ಟೆನ್ಶನ್ ತುಂಬಿದ ಆಧುನಿಕ ಜೀವನ ಶೈಲಿಯಿಂದಾಗಿ, ಮುಖದ ಚರ್ಮದಲ್ಲಿನ ಟಿಶ್ಯೂ ಸಡಿಲ ಆಗತೊಡಗುತ್ತವೆ. ಕ್ರಮೇಣ ನಿಧಾನವಾಗಿ ಮೂಗು, ಬಾಯಿಯ ಬಳಿಯಲ್ಲೂ ಸುಕ್ಕು, ನಿರಿಗೆ, ಫೈನಲ್ ಲೈನ್ಸ್ ಕಾಣಿಸತೊಡಗುತ್ತವೆ, ಇದರಿಂದ ನಮ್ಮ ಆತ್ಮವಿಶ್ವಾಸ ಸಹಜವಾಗಿ ಕುಗ್ಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕಾಸ್ಮೆಟಿಕ್ ಆ್ಯಂಟಿ ಏಜಿಂಗ್ ಪ್ರಕ್ರಿಯೆಗಳು ಬಹಳ ಜನಪ್ರಿಯ ಆಗತೊಡಗಿವೆ. ಕೆಲವು ಮಹಿಳೆಯರು ತಮ್ಮ ಮುಖದ ಚರ್ಮ ಬೆಟರ್ ಆಗಿಸಲು ಕೆಲವು ಇನ್ವೇಸಿವ್ ಟೆಕ್ನಿಕ್ಸ್ ಆರಿಸುತ್ತಾರೆ, ಉದಾ : ಇಂಜೆಕ್ಷನ್ ಮತ್ತು ಡರ್ಮ್ ಫಿಲ್ಲರ್. ಈ ಪ್ರಕ್ರಿಯೆಗಳು ಆರಂಭದ ಅಸ್ಥೆಯಲ್ಲಿ ಬಹು ಉಪಯುಕ್ತ ಅನಿಸಬಹುದು. ಆದರೆ ಕೆಲವು ಹೆಂಗಸರು ಫೇಶಿಯಲ್ ರಿಜವಿನೇಶನ್ ಸರ್ಜರಿ ಅಂದ್ರೆ ಫೇಸ್ ಲಿಫ್ಟ್ ಸರ್ಜರಿಯನ್ನು ಆಯ್ಕೆ ಮಾಡುತ್ತಾರೆ.
ಇದನ್ನು ಯಾರು ಮಾಡಿಸಬೇಕು?
ಯಾವ ಹೆಂಗಸರ ಮುಖದ ಚರ್ಮ ಹೆಚ್ಚುತ್ತಿರುವ ವಯಸ್ಸನ್ನು ಸೂಚಿಸುವುದರ ಜೊತೆ, ಈ ಕೆಳಗಿನ ಲಕ್ಷಣಗಳನ್ನೂ ತೋರಿಸುತ್ತದೋ ಅಂಥವರು ಫೇಸ್ ಲಿಫ್ಟ್ ಗೆ ಮೊರೆ ಹೋಗಬಹುದು.
ಬಿ.ಪಿ, ಶುಗರ್ ಇಲ್ಲದೆ ಆರೋಗ್ಯವಾಗಿ ಇರುವವರು
ಧೂಮಪಾನ, ಮಧುಪಾನಕ್ಕೆ ಶರಣಾಗದವರು
ಫೇಸ್ ಲಿಫ್ಟ್ ನ ಲಾಭಗಳು
ಇದು ಮುಖದಲ್ಲಿನ ಮಾಂಸಖಂಡಗಳನ್ನು ಟೈಟ್ ಗೊಳಿಸಿ, ಚರ್ಮದಲ್ಲಿ ಬಿಸುಪು ಮೂಡಿಸುತ್ತದೆ.
ಗಲ್ಲ, ಕುತ್ತಿಗೆಯ ಶೇಪ್ ಸುಧಾರಿಸಲು ಪ್ರಧಾನ ಪಾತ್ರ ವಹಿಸುತ್ತದೆ.
ಇದು ಗಂಡಸರಿಗೂ ಲಾಭಕಾರಿ.
ಸರ್ಜರಿಯಿಂದ ಆಗುವ ಗುರುತನ್ನು ಇದು ಅಡಗಿಸುತ್ತದೆ.
ನೈಸರ್ಗಿಕ ಎನಿಸುವ ಇದರ ಪರಿಣಾಮ, ಚರ್ಮ ದೀರ್ಘಕಾಲದವರೆಗೆ ಚಿರಯೌವನ ಉಳಿಸಿಕೊಳ್ಳಲು ಮೂಲ.
ಫೇಸ್ ಲಿಫ್ಟ್ ನ ಸೈಡ್ ಎಫೆಕ್ಟ್ಸ್
ಪ್ರತಿ ಸರ್ಜರಿಗೂ ತನ್ನದೇ ಆದ ಸೈಡ್ ಎಫೆಕ್ಟ್ಸ್ ಇದ್ದೇ ಇರುತ್ತದೆ. ಇದರಲ್ಲೂ ಸಹ ಈ ಕೆಳಗಿನ ಆತಂಕ ಕಾಡಬಹುದು.
ಅನಸ್ಥೇಶಿಯಾದ ತಪ್ಪಾದ ಬಳಕೆಯ ಪರಿಣಾಮ.
ರಕ್ತ ತೊಟ್ಟಿಕ್ಕುವುದು
ಸೋಂಕು
ಬ್ಲಡ್ ಕ್ಲಾಟ್
ನೋವು ಉರಿ
ದೀರ್ಘಾವಧಿ ಕಾಡುವ ಊತ
ಗಾಯ ವಾಸಿ ಆಗಲು ತಡ
ಆದರೆ ಸೂಕ್ತ ಆರೈಕೆ, ಔಷಧಿ ಸರ್ಜಿಕಲ್ ಸುಧಾರಣೆಗಳಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಕೆಲವು ಜಟಿಲತೆಗಳಿಂದಾಗಿ ನಿಮ್ಮ ಒಟ್ಟಾರೆ ಲುಕ್ಸ್ ನಲ್ಲಿ ಬದಲಾವಣೆ ಕಾಣಿಸಬಹುದು. ಉದಾ : ಹಿಮೆಟೋಮಾ ಗಾಯಗಳ ಗುರುತು
ಕಲೆ ಆಂತರಿಕ ಅಂಗಗಳಿಗೆ ತುಸು ಹಾನಿ
ಕತ್ತರಿ ಬಿದ್ದ ಜಾಗದಲ್ಲಿ ಕೂದಲು ಬೆಳೆಯದೇ ಇರುವುದು
ಚರ್ಮಕ್ಕೆ ತುಸು ಹಾನಿ.
ಕೆಲವು ರೋಗಗಳು ಮತ್ತು ನಮ್ಮ ಜೀವನಶೈಲಿ ಸಹ ಈ ಜಟಿಲತೆ ಹೆಚ್ಚಲು ಕಾರಣ ಆಗಬಹುದು. ಈ ಕೆಳಗಿನ ಕಾರಣಗಳಿಂದ ಕೆಲವು ತದ್ವಿರುದ್ಧ ಪರಿಣಾಮ ಆಗಬಹುದು :
ರೋಗಿ ಬ್ಲಡ್ ಥಿನ್ನರ್ ಔಷಧಿ ಯಾ ಸಪ್ಲಿಮೆಂಟ್ ಸೇವಿಸುತ್ತಿದ್ದರೆ, ಇವು ರಕ್ತವನ್ನು ಇನ್ನಷ್ಟು ತೆಳು ಮಾಡುತ್ತವೆ. ಇದರ ನೇರ ಪರಿಣಾಮ ಬ್ಲಡ್ ಕ್ಲಾಟಿಂಗ್ ನ ಸಾಮರ್ಥ್ಯದ ಮೇಲೆ ಆಗುತ್ತದೆ. ಸರ್ಜರಿ ನಂತರ ಹಿಮೆಟೊಮಾ ಆಗುವ ಸಾಧ್ಯತೆಗಳು ಹೆಚ್ಚಬಹುದು.
ಇತರ ರೋಗಗಳು : ರೋಗಿಗೆ ಅಕಸ್ಮಾತ್ ಡಯಾಬಿಟೀಸ್, ಬಿ.ಪಿ ಇತ್ಯಾದಿಗಳಿದ್ದರೆ ಗಾಯ ವಾಸಿಯಾಗಲು ತಡವಾಗುತ್ತದೆ. ಹಿಮೆಟೋಮಾ ಅಥವಾ ಹೃದ್ರೋಗ ಹೆಚ್ಚುವ ಸಂಭವವಿದೆ.