ಶುಷ್ಕ ಚರ್ಮವನ್ನು ಸರಿಪಡಿಸಲು ಹೆಂಗಸರು ಬಗೆಬಗೆಯ ಫೇಸ್‌ ಮಾಸ್ಕ್ ಬಳಸುತ್ತಾರೆ. ಆದರೆ ಇದರ ಪರಿಣಾಮ ಸಹ ಸ್ವಲ್ಪ ದಿನ ಮಾತ್ರ ಇರುತ್ತದೆ. ಆದರೆ ಕೆಲವು ನ್ಯಾಚುರಲ್ ಮಾಸ್ಕ್ ಗಳಿದ್ದು, ಇದನ್ನು ನೀವು ಸುಲಭವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇದನ್ನು ಬಳಸುವುದರಿಂದ ಬಹಳ ಹೊತ್ತು ಚರ್ಮದಲ್ಲಿ ಆರ್ದ್ರತೆ ಹಾಗೇ ಉಳಿಯುತ್ತದೆ :

ಆ್ಯಲೋವೇರಾ ಫೇಸ್ಮಾಸ್ಕ್

ಆ್ಯಲೋವೇರಾ (ಲೋಳೆಸರ)ದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ನಮ್ಮ ದೇಹ ಮತ್ತು ಚರ್ಮದ ಆರೋಗ್ಯ ಎರಡಕ್ಕೂ ಪೂರಕ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಮುಖ ಚರ್ಮದ ಹಲವು ಸಮಸ್ಯೆಗಳು ದೂರವಾಗುತ್ತವೆ. ಇದರ ಬಳಕೆಯಿಂದ ಮುಖಕ್ಕೆ ಆರ್ದ್ರತೆ ದೊರೆಯುವುದಲ್ಲದೆ ಬೇಕಾದ ಪೋಷಕಾಂಶಗಳೂ ಕೂಡುತ್ತವೆ.

ಇದರ ಫೇಸ್‌ ಮಾಸ್ಕ್ ತಯಾರಿಸಲು ಇದರ ತಾಜಾ ಜೆಲ್ ‌ತೆಗೆದುಕೊಳ್ಳಿ. ಇದಕ್ಕೆ ಸಮ ಪ್ರಮಾಣದಲ್ಲಿ ಸೌತೆರಸ ಬೆರೆಸಿರಿ. ಮೊದಲು ಮುಖವನ್ನು ಫೇಸ್‌ ವಾಶ್‌ನಿಂದ ತೊಳೆದು, ಒರೆಸಿಕೊಂಡು, ನಂತರ ಮುಖಕ್ಕೆ ಈ ಮಿಶ್ರಣ ಹಚ್ಚಿಕೊಂಡು ಅರ್ಧ ಗಂಟೆ ಒಣಗಲು ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಮುಖದ ಶುಷ್ಕತೆ ತೊಲಗಿ, ಅಪೂರ್ವ ಕಾಂತಿ ತುಂಬಿಕೊಳ್ಳುತ್ತದೆ.

ಆ್ಯವಕಾಡೋ ಫೇಸ್ಮಾಸ್ಕ್

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಿತಕರ. ಇದರಿಂದಾಗಿ ಆರೋಗ್ಯ ಸುಧಾರಿಸುವುದಲ್ಲದೆ, ಮುಖದಲ್ಲಿನ ಕಾಂತಿಯೂ ಹೆಚ್ಚುತ್ತದೆ. ಬೆಣ್ಣೆ ಹಣ್ಣು (ಆ್ಯವಕಾಡೋ) ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಡ್ರೈ ಡ್ಯಾಮೇಜ್ಡ್ ಸ್ಕಿನ್‌ನ್ನು ತೊಲಗಿಸಿ, ಚರ್ಮವನ್ನು ಮತ್ತಷ್ಟು ಕೋಮಲಗೊಳಿಸುತ್ತದೆ. ಇದರ ಫೇಸ್‌ ಮಾಸ್ಕ್ ಸಿದ್ಧಪಡಿಸಲು, 2 ಚಮಚ ಮಸೆದ ಬೆಣ್ಣೆ ಹಣ್ಣಿಗೆ 1-1 ಚಮಚ ಜೇನುತುಪ್ಪ, ರೋಸ್‌ ವಾಟರ್‌ ಬೆರೆಸಿರಿ. ಮುಖವನ್ನು ಫೇಸ್‌ ವಾಶ್‌ನಿಂದ ತೊಳೆದು ಒರೆಸಿಕೊಂಡ ನಂತರ, ಇದನ್ನು ಮುಖಕ್ಕೆ ನೀಟಾಗಿ ಸವರಿಡಿ. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಸ್ಟ್ರಾಬೆರಿ ಫೇಸ್ಮಾಸ್ಕ್

ಸ್ಟ್ರಾಬೆರಿಯಿಂದ ಚರ್ಮ ಅತಿ ಮೃದುವಾಗುವುದಲ್ಲದೆ, ಹೆಚ್ಚು ಕಾಂತಿಯುತ ಆಗುತ್ತದೆ. ಇದರಲ್ಲಿನ ವಿಟಮಿನ್‌ಸಿಯು, ಚರ್ಮದ ಶುಷ್ಕತೆ ತೊಲಗಿಸುವಲ್ಲಿ ಸಹಕಾರಿ. ಇದರ ಬಳಕೆಯಿಂದ ಚರ್ಮದಲ್ಲಿ ಜಮೆಗೊಂಡ ಡೆಡ್‌ ಸೆಲ್ಸ್ ತೊಲಗುತ್ತವೆ. ಇದರ ಫೇಸ್ ಮಾಸ್ಕ್ ತಯಾರಿಸಲು, 4-5 ಸ್ಟ್ರಾಬೆರಿಯನ್ನು ನೀಟಾಗಿ ಮ್ಯಾಶ್‌ ಮಾಡಿ. ಇದಕ್ಕೆ 1-1 ಚಮಚ ಓಟ್‌ ಮೀಲ್‌, ಜೇನು ಬೆರೆಸಿ ಮಿಶ್ರಣ ಕಲಸಿರಿ. ಮುಖವನ್ನು ಫೇಸ್‌ ವಾಶ್‌ನಿಂದ ತೊಳೆದು ಒರೆಸಿಕೊಂಡು ಈ ಮಿಶ್ರಣ ಹಚ್ಚಿ ಅರ್ಧ ಗಂಟೆ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೆ 2 ಸಲ ಅಗತ್ಯ ಹೀಗೆ ಮಾಡಿ ನೋಡಿ.

ಪರಂಗಿ ಫೇಸ್ಮಾಸ್ಕ್

ಮಾಗಿದ ಪರಂಗಿಹಣ್ಣು ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪೂರಕ. ಇದರಲ್ಲಿನ ಪೊಟ್ಯಾಶಿಯಂ ಚರ್ಮದ ಆರ್ದ್ರತೆ ಕಾಪಾಡುವಲ್ಲಿ ಮುಂದು, ಬ್ಯೂಟಿ ತಂತಾನೇ ಹೆಚ್ಚುತ್ತದೆ. ಇದು ಚರ್ಮದಲ್ಲಿನ ಡೆಡ್‌ ಸೆಲ್ಸ್ ಹಾಗೂ ಕಲೆ ಗುರುತುಗಳನ್ನು ನಿವಾರಿಸಲು ಪೂರಕ.

ಇದರ ಫೇಸ್‌ ಮಾಸ್ಕ್ ತಯಾರಿಸಲು ಅರ್ಧ ಕಪ್‌ ಮಾಗಿದ ಪರಂಗಿ ಹಣ್ಣಿನ ತಿರುಳಿಗೆ, 1-1 ಚಮಚ ಜೇನು, ನಿಂಬೆರಸ ಬೆರೆಸಿ ಗೊಟಾಯಿಸಿ, ಅದನ್ನು ಶುಚಿಗೊಳಿಸಿದ ಚರ್ಮಕ್ಕೆ ನೀಟಾಗಿ ಸವರಿ, ಅರ್ಧ ಗಂಟೆ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ 4-5 ಸಲ ಮರೆಯದೆ ಹೀಗೆ ಮಾಡುತ್ತಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ