ಒಮ್ಮೊಮ್ಮೆ ಹೀಗಾಗುವುದುಂಟು, ನಿಮ್ಮ ಸಣ್ಣ ಮಿಸ್ಟೇಕ್‌ನಿಂದ ಇಡೀ ಮೇಕಪ್‌ ಕೆಟ್ಟದಾಗಿ ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಸಮಯದ ಅಭಾವ ಇರುವಾಗ ಹೀಗಾಗಿ ಹೋದರೆ, ಬಹಳ ಇಕ್ಕಟ್ಟಿಗೆ ಸಿಲುಕಿದಂತಾಗುತ್ತದೆ. ಈ ಗಡಿಬಿಡಿಯಲ್ಲಿ ನಾವು ಬೇಸ್‌, ಫೌಂಡೇಶನ್‌, ಲೈನರ್‌, ಕಾಜಲ್, ಲಿಪ್‌ಸ್ಟಿಕ್‌, ಮಸ್ಕರಾ ಇತ್ಯಾದಿ ಏನೇ ಬಳಸುತ್ತಿರಲಿ, ಅದು ಹರಡಿಕೊಂಡಾಗ ಅಥವಾ ಆಕಾರ ಬಿಗಡಾಯಿಸಿದಾಗ ಇಂಥ ಎಡವಟ್ಟು ಸರ್ವೇಸಾಮಾನ್ಯ.

ಹೀಗಾದಾಗ ಬ್ಯೂಟಿಫುಲ್ ಕ್ಯೂಟ್‌ ಆಗಿ ನಿಮ್ಮನ್ನು ನೀವು ತೋರ್ಪಡಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ ಹೀಗಾದಾಗಲೂ ಸಹ ನಿಮ್ಮ ಮೂಡ್‌ ಕೆಡದಂತೆ, ಕೆಟ್ಟಿರುವ ಮುಖದ ಅಂದವನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ :

ಫೌಂಡೇಶನ್‌/ ಬೇಸ್‌ : ಇದನ್ನು ನಿಮ್ಮ ಮುಖಕ್ಕೆ ಹಚ್ಚುತ್ತವೆ, ನಿಮ್ಮ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಂಡರೆ ಅಥವಾ ಮುಖ ವಿಚಿತ್ರವಾಗಿ ಕಾಣಿಸತೊಡಗಿದರೆ, ಅದರ ಮೇಲೆ ಎಂದೂ ಕಾಂಪ್ಯಾಕ್ಟ್ ಹಚ್ಚಬೇಡಿ. ಸಾಮಾನ್ಯವಾಗಿ ಡ್ರೈ ಸ್ಕಿನ್‌ ಇದ್ದವರಿಗೆ ಹೀಗೆ ಫೌಂಡೇಶನ್‌ ಮೇಲೆ ಸುಕ್ಕುಗಳು ಕಾಣಿಸುತ್ತವೆ. ಆದ್ದರಿಂದ ಡ್ರೈ ಸ್ಕಿನ್‌ನವರು ಮುಖಕ್ಕೆ ಫೌಂಡೇಶನ್‌ ಹಚ್ಚಿಕೊಳ್ಳುವ ಮೊದಲೇ ಅಗತ್ಯ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಬೇಕು. ಅಕಸ್ಮಾತ್‌ ಫೌಂಡೇಶನ್‌ ಹೆಚ್ಚು ಮೆತ್ತಿಕೊಂಡಿದ್ದರೆ, ಅದನ್ನು ರೌಂಡಾಗಿ ತಿರುಗಿಸುತ್ತಾ ಹೆಚ್ಚುವರಿ ಫೌಂಡೇಶನ್‌ ತೆಗೆದೇಬಿಡಿ.

ಲೈನರ್‌ : ನೀವು ಯಾವುದೇ ಪಾರ್ಟಿಗೆ ಅವಸರವಾಗಿ ಹೊರಡಬೇಕಿದ್ದರೆ, ಕಾಡಿಗೆ ಪೆನ್ಸಿಲ್‌ನ್ನೇ ಬಳಸಿರಿ. ಆ ಅವಸರದ ಮಧ್ಯೆ ಲಿಕ್ವಿಡ್‌ ಐ ಲೈನರ್‌ ಎಂದೂ ಬಳಸಬೇಡಿ. ಆದರೆ ಲಿಕ್ವಿಡ್‌ ಐ ಲೈನರ್‌ ಬಳಸಿ ಅದು ಹರಡಿಕೊಂಡುಬಿಟ್ಟಿದ್ದರೆ ಅಥವಾ ದಪ್ಪ ಗೆರೆಯಾಗಿ ಕಾಣಿಸಿದರೆ, ಅದನ್ನು ಒಮ್ಮೆಲೇ ಇಡಿಯಾಗಿ ತೆಗೆದುಹಾಕುವ ಆತುರ ತೋರಿಸಬೇಡಿ. ಅದನ್ನು ಪೆನ್ಸಿಲ್‌‌ನಿಂದ ಬಲು ಸಾವಧಾನವಾಗಿ ಎಷ್ಟು ಅಗತ್ಯವೋ ಅಷ್ಟನ್ನೇ ತೆಗೆಯಬೇಕು. ಇದಕ್ಕಾಗಿ ಎಂದೂ ಒದ್ದೆ ಕಾಟನ್‌ ಬಳಸಬೇಡಿ.

ಶ್ಯಾಡೋ : ಇದನ್ನು ತೆಳು ಒದ್ದೆ ಬ್ರಶ್‌ನಿಂದಲೇ ಹಚ್ಚಬೇಕು. ಇದರಿಂದ ಐ ಶ್ಯಾಡೋ ನಿಮ್ಮ ಮುಖದಿಂದ ಜಾರಿ ಬೇಸ್‌ನ್ನು ಹಾಳು ಮಾಡುವುದಿಲ್ಲ. ಅಕಸ್ಮಾತ್‌ ಐ ಶ್ಯಾಡೋ ಹೆಚ್ಚಾಗಿ ಹೋಗಿದ್ದರೆ, ಆಗ ಬ್ರಶ್‌ನಿಂದ ಅದರ ಮೇಲೆ ಲಘುವಾಗಿ ಕಾಂಪ್ಯಾಕ್ಟ್ ಪೌಡರ್‌ ಹಚ್ಚಿ ಅದನ್ನು ತುಸು ತೆಳ್ಳಗೆ ಮಾಡಿಕೊಳ್ಳಬಹುದು.

ಮಸ್ಕರಾ : ಪಾರ್ಟಿಗೆ ರೆಡಿಯಾಗಬೇಕು ಅಂತ ಅವಸರದಲ್ಲಿ ಎಂದಿಗೂ ಆರ್ಟಿಫಿಶಿಯಲ್ ಐ ಲ್ಯಾಶೆಸ್‌ ಬಳಸದಿರಿ. ಏಕೆಂದರೆ ಅವಸರದಲ್ಲಿ ಅದು ಕಣ್ಣಿನ ಜಾಗದಲ್ಲಿ ಅಂಟಿಕೊಳ್ಳುವುದಿಲ್ಲ, ಅದು ಬಿದ್ದುಹೋಗುವ ಅಪಾಯ ಇದೆ. ಹಾಗಿರುವಾಗ ನಿಮ್ಮ ಕಂಗಳನ್ನು ಬ್ಯೂಟಿಫುಲ್ ಆಗಿ ತೋರ್ಪಡಿಸಲು, ಕಾಜಲ್ ಮತ್ತು ವಾಟರ್‌ಪ್ರೂಫ್‌ ಮಸ್ಕರಾವನ್ನು ಒಟ್ಟಿಗೆ ಬಳಸಿರಿ. ಇದನ್ನು ಮಸ್ಕರಾ ಬ್ರಶ್‌ನಿಂದ 1-1 ಐ ಲ್ಯಾಶೆಸ್‌ ಬಳಿ ಸಮಾನವಾಗಿ ಬರುವಂತೆ ಎಳೆಯಿರಿ.

ಲಿಪ್ಸ್ಟಿಕ್‌: ತುಟಿಗಳ ಮೇಲೆ ಲಿಪ್‌ಸ್ಟಿಕ್‌ ಹರಡಿಕೊಂಡಿದ್ದರೆ, ಅದನ್ನು ಪೂರ್ತಿ ಉಜ್ಜಿ ತೆಗೆಯಲು ಹೋಗಬೇಡಿ. ಇದರಿಂದ ಅದು ಇನ್ನಷ್ಟು ಮತ್ತಷ್ಟು ಕೆಡುತ್ತದೆ. ಜೊತೆಗೆ ಇದರಿಂದ ಬೇಸ್‌ ಕೂಡ ಹಾಳಾಗುತ್ತದೆ. ಆದ್ದರಿಂದ ಇದನ್ನು ಫೌಂಡೇಶನ್‌ ಸ್ಪಾಂಜ್‌ನಿಂದ, ತುಸು ಫೌಂಡೇಶನ್‌ ಹಾಕಿ, ಚೆನ್ನಾಗಿ ಮರ್ಜ್‌ ಮಾಡಿ. ಲಿಪ್‌ಸ್ಟಿಕ್‌ ಹರಡಿಕೊಳ್ಳದಂತೆ ಮಾಡಲು ತುಟಿಗಳಿಗೆ ಮೊದಲು ಒಂದು ಲಿಪ್‌ ಬೇಸ್‌ ಕೋಟ್‌ ಹಚ್ಚಿರಿ. ನಂತರ ಔಟ್‌ಲೈನ್‌ ಮಾಡಿ ಲಿಪ್‌ಸ್ಟಿಕ್‌ ಫಿಲ್ ‌ಮಾಡಿ. ಅಗತ್ಯವೆನಿಸಿದರೆ ಲಿಪ್‌ ಬಾಮ್ ಸಹ ಹಚ್ಚಬಹುದು, ಲಿಪ್‌ ಡಸ್ಟ್ ಸಿಂಪಡಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ