ತ್ವಚೆ ಹಾಗೂ ಕೂದಲಿನ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳಿರುತ್ತವೆ. ಜಾಗರೂಕತೆಯ ಅಭಾವದಲ್ಲಿ ಈ ತಪ್ಪು ಕಲ್ಪನೆಗಳ ಕಾರಣದಿಂದಾಗಿ ಒಮ್ಮೆ ಗಂಭೀರ ಸಮಸ್ಯೆ ಉಂಟಾದರೆ ಇನ್ನೊಮ್ಮೆ ಹಾಸ್ಯಾಸ್ಪದ ಸ್ಥಿತಿ ಬರುತ್ತದೆ. ಹಾಗಾದರೆ, ತ್ವಚೆ ಮತ್ತು ಕೂದಲಿಗೆ ಸಂಬಂಧಿಸಿದ ಮಿಥ್ಯೆ ಮತ್ತು ಅವುಗಳ ಸತ್ಯಾಂಶದ ಬಗ್ಗೆ ತಿಳಿದುಕೊಳ್ಳೋಣ :

hair color

ಮಿಥ್ಯೆ : ಬಿಳಿ ಕೂದಲಿಗೆ ಕಲರಿಂಗ್‌ ಮಾಡುವುದರಿಂದ ಅವು ಬೇಗನೆ ಬೆಳ್ಳಗಾಗುತ್ತವೆ.

ಸತ್ಯ : ಕೂದಲು ಬೆಳ್ಳಗಾಗುವುದು ಒಂದು ಹಂತದವರೆಗೆ ಆನುವಂಶಿಕತೆಯನ್ನು ಅವಲಂಬಿಸುತ್ತದೆ. ಕೆಲವು ವಿಷಯಗಳಲ್ಲಿ ಈ ಒತ್ತಡದಿಂದಾಗಿ ಕೂದಲು ಬೆಳ್ಳಗಾಗುತ್ತದೆ. ಕೂದಲು ಬೆಳ್ಳಗಾಗುವುದರಲ್ಲಿ ಯಾವುದೇ ಹೊರಗಿನ ಜವಾಬ್ದಾರರಿಲ್ಲ. ಯಾವ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುತ್ತದೆ ಎಂದು ಹೇಳಲಾಗುವುದಿಲ್ಲ.

skin-care

ಮಿಥ್ಯೆ : ಎಣ್ಣೆ ತಿಂಡಿಗಳನ್ನು ತಿನ್ನುವುದರಿಂದ ಮೊಡವೆಗಳು ಉಂಟಾಗುತ್ತವೆ.

ಸತ್ಯ : ಮೊಡವೆಗಳು ಹಾರ್ಮೋನ್‌ ಅಸಮತೋಲನದಿಂದ ಉಂಟಾಗುತ್ತವೆ. ಇವು ಎಣ್ಣೆ ತಿಂಡಿ ತಿನ್ನುವುದರಿಂದ ಬರುವುದಿಲ್ಲ. ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವುದು ಏನೆಂದರೆ ಬ್ರೆಡ್‌, ಆಲೂಗಡ್ಡೆ, ಪಿಜ್ಜಾ, ಪಾಸ್ತಾ, ಕೇಕ್‌ ಇತ್ಯಾದಿ ವೈಟ್‌ಕಾರ್ಬನ್ಸ್ ಗಳಲ್ಲಿ ತುಂಬಿರುವ ಅತ್ಯಧಿಕ ಗ್ಲೈಕೆಮಿಕಲ್ ಇರುವ ಆಹಾರವನ್ನು ಹೆಚ್ಚು ಸೇವಿಸಿದರೆ ಮೊಡವೆಗಳು ಹೆಚ್ಚಾಗುತ್ತವೆ. ಆದ್ದರಿಂದ ಅವನ್ನು ಹೆಚ್ಚು ಸೇವಿಸಬೇಡಿ.

ಮಿಥ್ಯೆ : ಫಿಲರ್ಸ್‌ನಿಂದ ನಿಮ್ಮ ಮುಖ  ಕೃತಕವಾಗಿ ಕಾಣುವುದು.

ಸತ್ಯ : ತರಬೇತಿ ಪಡೆದಿರುವ ಯೋಗ್ಯ ಪ್ರೊಫೆಶನಲ್ ನ ಉಸ್ತುವಾರಿಯಲ್ಲಿ ಹೀಗೆ ಮಾಡಿದರೆ ರೆಸ್ಟಿ ಲೇನ್‌ನಂತಹ ಫಿಲರ್ಸ್ ನಿಮ್ಮ ಮುಖಕ್ಕೆ ಕಾಂತಿ ತರಬಹುದು. ಅದರ ಪ್ರಭಾವ ಹಲವು ವರ್ಷಗಳು ಇರುತ್ತವೆ.

ಕಿಶೋರಾವಸ್ಥೆಯಲ್ಲೂ ಇವು ನಿಮ್ಮ ಕೆನ್ನೆ ಮತ್ತು ತುಟಿಗಳ ಕಾಂತಿ ಹೆಚ್ಚಿಸಿ ನಿಮ್ಮ ಆಕರ್ಷಣೆ ಹೆಚ್ಚಿಸುತ್ತವೆ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಅವುಗಳಲ್ಲಿ ಹ್ಯಾಲುರೋನಿಕ್‌ ಆ್ಯಸಿಡ್‌ ಇದ್ದು ಅದು ನಿಮ್ಮ ತ್ವಚೆಯ ಒಂದು ಸ್ವಾಭಾವಿಕ ಅಂಶವಾಗಿದೆ.

ಮಿಥ್ಯೆ : ನ್ಯೂರೋ ಮಾಡ್ಯುಲೇಟರ್ಸ್‌ ಚೆನ್ನಾಗಿರುವುದಿಲ್ಲ. ಅದರಿಂದ ನಿಮ್ಮ ಆಕರ್ಷಣೆಗೆ ಕುಂದು ಬರುತ್ತದೆ.

ಸತ್ಯ :  ಇದು ನಿಜವಲ್ಲ. ತರಬೇತಿ ಪಡೆದ ಅನುಭವಿ ಡರ್ಮಟಾಲಜಿಸ್ಟ್ ಅಥವಾ ಕಾಸ್ಮೆಟಿಕ್‌ ಸರ್ಜನ್‌ ಸಹಾಯದಿಂದ ಈ ಪದ್ಧತಿ ಅನುಸರಿಸಿದರೆ ನಿಮ್ಮ ಮುಖದಲ್ಲಿನ ನೆರಿಗೆಗಳು ಕಡಿಮೆಯಾಗುತ್ತವೆ. ಅದರ ಪ್ರಭಾವ ಹಲವು ವರ್ಷಗಳವರೆಗೆ ಇರುತ್ತವೆ.

ಅಂದಹಾಗೆ, ಇದು ಆ್ಯಂಟಿ ಏಜಿಂಗ್‌ನ ಅತ್ಯಂತ ಸುರಕ್ಷಿತ ಹಾಗೂ ಪ್ರಭಾವಶಾಲಿ ವಿಧಾನವಾಗಿದೆ.

ಮಿಥ್ಯೆ : ಬಿಸಿಲಿನಲ್ಲಿ ಹೊರಟಾಗ ಮಾತ್ರ ಸನ್‌ಸ್ಕ್ರೀನ್‌ ಉಪಯೋಗಿಸಬೇಕು.

ಸತ್ಯ : ಸನ್‌ಸ್ಕ್ರೀನ್‌ನ್ನು ಮನೆಯಲ್ಲಿ ಇರುವಾಗಲೂ ಪ್ರತಿದಿನ ಉಪಯೋಗಿಸಬೇಕು. ಕಿಟಕಿಗಳಿಂದ ಬರುವ ಸೂರ್ಯನ ಕಿರಣಗಳೂ ಸಹ ನಿಮ್ಮ ತ್ವಚೆಯ ಶ್ಯಾಮಲವರ್ಣ, ಪಿಗ್ಮೆಂಟೇಶನ್‌, ಏಜಿಂಗ್‌ ಲೈನ್ಸ್ ಮತ್ತು ನೆರಿಗೆಗಳನ್ನು ಹೆಚ್ಚಿಸುತ್ತವೆ. ಅವು ಅಲರ್ಜಿಯನ್ನೂ ಉಂಟುಮಾಡುತ್ತವೆ. ಆದ್ದರಿಂದ ನೀವು ದಿನವಿಡೀ ತ್ವಚೆಯನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.

ಮಿಥ್ಯೆ : ಸನ್‌ಸ್ಕ್ರೀನ್‌ ಜಿಡ್ಡಿನಿಂದ ಕೂಡಿದ್ದು ಅದರಿಂದ ಮೊಡವೆಗಳು ಹೆಚ್ಚುತ್ತವೆ.

ಸತ್ಯ : ಸನ್‌ಸ್ಕ್ರೀನ್‌ ವಿಶೇಷ ಫಾರ್ಮುಲಾದಿಂದ ತಯಾರಾಗುತ್ತದೆ ಮತ್ತು ಇವು ನಾನ್‌ ಆ್ಯಕ್ನೆಜೆನಿಕ್‌ (ಮೊಡವೆಗಳಿಂದ ರಕ್ಷಿಸುವ) ಮತ್ತು ನಾನ್‌ ಕೊಮೆಡೋಜೆನಿಕ್‌ (ಮೊಳೆ ನಾಶಕ) ಆಗಿರುತ್ತವೆ. ಅಂದರೆ ಅವನ್ನು ಉಪಯೋಗಿಸಿದರೆ ಮೊಡವೆಗಳು ಅಥವಾ ವೈಟ್‌ ಹೆಡ್ಸ್/ ಬ್ಲ್ಯಾಕ್‌ ಹೆಡ್ಸ್ ಬರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ