ಬಾಲಿವುಡ್‌ ಸುಂದರಿಯರ ಸೌಂದರ್ಯ ಕಂಡ ಹುಡುಗಿಯರು ನಾವು ಆ ತಾರೆಗಳಂತೆ ಸುಂದರವಾಗಿ, ಕಲೆರಹಿತರಾಗಿ ಕಂಡರೆ ಹೇಗಿರುತ್ತದೆ ಎಂದುಕೊಳ್ಳುತ್ತಾರೆ. ಚಿತ್ರನಟಿಯರು ಸುಂದರವಾಗಿ ಕಾಣುವಲ್ಲಿ ಮೇಕಪ್‌ನ ಪಾತ್ರ ಹಿರಿದು ಎಂದು ನಿಮಗೆ ಗೊತ್ತೆ? ನ್ಯಾಚುರಲ್ ಲುಕ್‌ ಜೊತೆಗೆ ಸೌಂದರ್ಯವನ್ನು ಕೊಡುವ ಹಾಗೂ ಹೆಚ್ಚು ಕಾಲ ಉಳಿಯುವ ಆ ಮೇಕಪ್‌ ಹೇಗಿರಬಹುದು ಎಂದು ನೀವು ಯೋಚಿಸುತ್ತಿರಬಹುದು.

ಇದರ ಬಗ್ಗೆ ನಿಮಗೆ ಬಾಲಿವುಡ್‌ ಮೇಕಪ್‌ ಆರ್ಟಿಸ್ಟ್ ಮಿಥಿಲೇಶ್‌ ತಿಳಿಸಿಕೊಡುತ್ತಿದ್ದಾರೆ. ನಟಿಯರು ಸ್ಮೂಥ್‌ ಮತ್ತು ನ್ಯಾಚುರಲ್ ಆಗಿ ಕಾಣುವಲ್ಲಿ ಮಿನರಲ್ ಮೇಕಪ್‌ ಮಹತ್ವದ ಪಾತ್ರ ವಹಿಸುತ್ತದೆ. ಇದರ ಉತ್ಪನ್ನ ಪ್ಯೂರಿಫೈಡ್‌ ಆಗಿದ್ದು ನೀರು ಬಿದ್ದರೂ ಏನೂ ಆಗದೆ ಬಹಳ ಹೊತ್ತು ಉಳಿಯುತ್ತದೆ. ಅದನ್ನು ಸುಲಭವಾಗಿ ಹಚ್ಚುವಂತೆ ಮೃದುವಾಗಿಯೂ ಇದೆ. ಇನ್ನು ಯಾವುದೇ ಏಜ್‌ ಗ್ರೂಪ್‌ನ ಸ್ಕಿನ್‌ಗೆ ಹಚ್ಚಬಹುದು ಮತ್ತು ಬಾಲಿವುಡ್‌ ಸುಂದರಿಯರ ಲುಕ್‌ ಪಡೆಯಬಹುದು.

ಮೇಕಪ್‌ಗೆ ಮೊದಲು ಮಿನರಲ್ ಮೇಕಪ್‌ ಶುರು ಮಾಡು ಮೊದಲು ಫೇಸ್‌ ಮತ್ತು ಮೇಕಪ್‌ ಬಗ್ಗೆ ಕೆಲವು ಅಗತ್ಯ ಮಾಹಿತಿ ತಿಳಿದುಕೊಳ್ಳಿ.

ಎಲ್ಲಕ್ಕೂ ಮೊದಲು ಫೇಸ್‌ಗೆ ಏನು ಅವಶ್ಯಕವೆಂದು ರೀಡ್‌ ಮಾಡಿ.

ಫೇಸ್‌ನ ಆ್ಯಂಗಲ್ ಏನೆಂದು ನೋಡಿ. ಸಾಮಾನ್ಯವಾಗಿ ಎಲ್ಲ ಫೇಸ್‌ಗಳೂ 6 8 ಆ್ಯಂಗಲ್‌ನಾಗಿರುತ್ತವೆ.

ಫೇಸ್‌ನಲ್ಲಿ ಎರಡೂ ಕಣ್ಣುಗಳ ನಡುವಿನ ಅಂತರ ಹೆಚ್ಚಿದೆಯೋ ಕಡಿಮೆ ಇದೆಯೋ ಎಂದು ಗಮನಿಸಿ.

ಸ್ಕಿನ್‌ ಟೋನ್‌ ಹೇಗೆ ಇದೆಯೆಂದು ತಿಳಿದುಕೊಳ್ಳಿ. ಅದಕ್ಕೆ ತಕ್ಕಂತೆ ಬೇಸ್‌ ಉಪಯೋಗಿಸಿ.

ಮಿನರಲ್ ಮೇಕಪ್‌ ಮಾಡಿಕೊಂಡಾಗೆಲ್ಲಾ ಕಣ್ಣುಗಳಿಗೆ ಲೌಡ್‌ ಮತ್ತು ತುಟಿಗಳಿಗೆ ನ್ಯೂಡ್‌ ಮೇಕಪ್‌ ಮಾಡಿ.

ಮೂವಿ ಮೇಕಪ್‌ಗೆ ಯಾವಾಗಲೂ ಪಿಂಕ್‌ ಟೋನ್‌ ಬೇಸ್‌ನ್ನೇ ಉಪಯೋಗಿಸಿ. ಫೇರ್‌ ಟೋನ್‌ ಬೇಡ.

ಬೇಸ್‌ನ್ನು ಸರಿಯಾದ ರೀತಿಯಲ್ಲಿ ಮರ್ಜ್‌ ಮಾಡಿ. ಅದರಿಂದ ಬೇಸ್‌ ಹೆಚ್ಚು ಹೊತ್ತು ಅಂಟಿಕೊಂಡಿರುತ್ತದೆ. ನೀರು ಬಿದ್ದರೂ ಸಹ ಬಿಟ್ಟುಕೊಳ್ಳುವುದಿಲ್ಲ.

ಬೇಸ್ ಆಯ್ಕೆ

ಮಿನರಲ್ ಬೇಸ್‌ನ್ನು ನಿಮ್ಮ ಕಾಂಪ್ಲೆಕ್ಷನ್‌ಗೆ ತಕ್ಕಂತೆಯೇ ಆರಿಸಿ.

ಫೇರ್ಕಾಂಪ್ಲೆಕ್ಷನ್ಗೆ : 3 ಫೌಂಡೇಶನ್‌ ಎನ್‌ಸಿಬಿ, ಎನ್‌ಸಿ22 ಮತ್ತು ಎನ್‌ಸಿ25 ತೆಗೆದುಕೊಳ್ಳಿ.

ಮೀಡಿಯಂ ಕಾಂಪ್ಲೆಕ್ಷನ್ಗೆ : ಎನ್‌ಸಿ30 ರಿಂದ ಎನ್‌ಸಿ35ರವರೆಗೆ.

ಡಾರ್ಕ್ಕಾಂಪ್ಲೆಕ್ಷನ್ಗೆ : ಎನ್‌ಸಿ42 ರಿಂದ ಎನ್‌ಸಿ45ರವರೆಗೆ.

ಹೈಲೈಟಿಂಗ್ಮತ್ತು ಶೇಡಿಂಗ್ಗಾಗಿ : ಇ30 ರಿಂದ ಇ37ರವರೆಗಿನ ಬೇಸ್‌ ಸರಿಯಾಗಿರುತ್ತದೆ. ಸ್ಕಿನ್‌ನಲ್ಲಿ ಕಲೆಗಳ ಸಮಸ್ಯೆ ಇದ್ದರೆ ಕನ್ಸೀಲರ್‌ ಉಪಯೋಗಿಸಿ.

ಮೇಕಪ್ನಿಂದ ಹೆಲೆನ್ರಂತಹ ಲುಕ್ಸ್ ಮಿನರಲ್ ಫೇಸ್ಮೇಕಪ್‌ : ಇದನ್ನು ಆರಂಭಿಸುವ ಮೊದಲು ನಿಮ್ಮ ಕೈಗಳನ್ನು ಮಾಯಿಶ್ಚರೈಸರ್‌ನಿಂದ ಚೆನ್ನಾಗಿ ಮಸಾಜ್‌ ಮಾಡಿ. ನಂತರ ಫೇಸ್‌ನ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡಿ. ಇದಾದ 7 ನಿಮಿಷಗಳ ನಂತರವೇ ಮೇಕಪ್‌ ಶುರು ಮಾಡಿ.

ಎನ್‌ಸಿ20 ಬೇಸ್‌ನ್ನು ಬ್ರಶ್‌ನಿಂದ ಮುಖಕ್ಕೆ ಹಚ್ಚಿ. ನಂತರ ಬಫಿಂಗ್‌ ಬ್ರಶ್‌ನಿಂದ ಫೇಸ್‌ನ ಪಾಲಿಶಿಂಗ್‌ ಮಾಡಿ. ಇದರಿಂದ ಫೇಸ್‌ಗೆ ಶೈನಿಂಗ್‌ ಬರುತ್ತದೆ. ಈಗ ಡ್ರೈ ಸ್ಪಾಂಜ್‌ನಿಂದ ಫೇಸ್‌ ಮೇಲೆ ತಪತಪನೆ ಒತ್ತಿ. ಇದರಿಂದ ಫೇಸ್‌ನ ಬ್ಲಡ್‌ ಸರ್ಕ್ಯುಲೇಶನ್‌ವೇಗವಾಗುತ್ತದೆ. ಫೇಸ್‌ನಲ್ಲಿ ಗ್ಲೋ ಬರುತ್ತದೆ. ಫೇಸ್‌ ಮೇಲೆ ವೈಬ್ರೇಟ್‌ ಮಾಡಿದಷ್ಟೂ ಮೇಕಪ್‌ನಲ್ಲಿ ಇಂಟರ್‌ನ್‌ ಗ್ಲೋ ಬರುತ್ತದೆ. ನಂತರ ಮೀಡಿಯಂ ಕಲರ್‌ನ ಕಾಂಪ್ಯಾಕ್ಟ್ ಹಚ್ಚಿ.

ಐಸ್ಮೇಕಪ್‌ : ಇದಕ್ಕಾಗಿ ಮೇಕಪ್‌ ಸ್ಟುಡಿಯೋನ ಪ್ರಾಡಕ್ಟ್ ನ್ನೇ ತೆಗೆದುಕೊಳ್ಳಿ. ಅವು ಬೆಸ್ಟ್. ಐ ಮೇಕಪ್‌ಗೆ ಮುಂಚೆ ಕಣ್ಣುಗಳ ಕೆಳಗೆ ಐ ಪ್ಯಾಡ್‌ ಹಚ್ಚಿ. ಅದರಿಂದ ಶ್ಯಾಡೋ ಬಿದ್ದರೆ ಪ್ಯಾಡ್‌ ಮೇಲೇ ಬೀಳುತ್ತದೆ. ಬೇಸ್‌ ಮೇಲೆ ಬೀಳುವುದಿಲ್ಲ. ಐ ಬ್ರೋಸ್‌ ಕೆಳಗೆ ಸಿಲ್ವರ್‌ ಕಲರ್‌ನ ಶ್ಯಾಡೋ ಹಚ್ಚಿ ಪೂರ್ತಿ ಕಣ್ಣಿನ ಮೇಲೆ ಹರಡಿ. ಕಣ್ಣುಗಳ ಇನ್ನರ್‌ ಪಾರ್ಟ್‌ನಲ್ಲಿ ರೆಡ್‌ ಶ್ಯಾಡೋ ಮತ್ತು ಔಟರ್‌ ಪಾರ್ಟ್‌ನಲ್ಲಿ ಬ್ಲ್ಯಾಕ್‌ ಕಲರ್‌ನ್ನು ಬ್ರಶ್‌ನಿಂದ ಹಚ್ಚಿ. ಈಗ ಜೆಲ್ ‌ಕಾಜಲ್‌ನ್ನು ಎರಡೂ ಕಣ್ಣುಗಳಿಗೆ ಬೇರೆ ಬೇರೆ ಸ್ಟಿಕ್‌ಗಳಿಂದ ಹಚ್ಚಿ. ಅದರಿಂದ ಇನ್‌ಫೆಕ್ಷನ್‌ ಆಗುವುದಿಲ್ಲ. ದಪ್ಪ ಕಾಜಲ್ ಹಾಕಲು ದಪ್ಪ ಸ್ಟಿಕ್‌ ಉಪಯೋಗಿಸಿ. ತೆಳು ಕಾಜಲ್‌ಗೆ ತೆಳುವಾದ ಸ್ಟಿಕ್‌ ಉಪಯೋಗಿಸಿ. ಈಗ ಆರ್ಟಿಫಿಶಿಯಲ್ ಐ ಲ್ಯಾಶಸ್‌ ತೆಗೆದುಕೊಂಡು ಅವನ್ನು ಕಣ್ಣುಗಳ ಆಕಾರಕ್ಕೆ ತಕ್ಕಂತೆ ಕಟ್‌ ಮಾಡಿ ಗಮ್ ನಿಂದ ಅಂಟಿಸಿ. ನಂತರ ಐ ಬಾಲ್ಸ್ ಮೇಲೆ ಗ್ಲಿಟರ್‌ ಹಚ್ಚಿ ಮತ್ತು  ಜೆಲ್ ಐ ಲೈನರ್‌ ಉಪಯೋಗಿಸಿ. ಲೈನರ್‌ನ ಕೊನೆಯಲ್ಲಿ ಬ್ರಶ್‌ನಿಂದ 2 ಸ್ಟ್ರೋಕ್‌ ಕೊಡಿ. ನಂತರ ಆ್ಯಕ್ವಾ ಕಲರ್‌ ಬ್ರಶ್‌ನಿಂದ ತೆಗೆದುಕೊಂಡು ಹಚ್ಚಿ. ಈಗ ಐ ಬ್ರೋಸ್‌ಗೆ ಬ್ರೌನ್‌ ಮತ್ತು ಬ್ಲ್ಯಾಕ್‌ ಕಲರ್‌ ಶೇಡ್‌ ಕೊಟ್ಟು ಲಿಫ್ಟ್ ಮಾಡಿ. ಈಗ ಕಣ್ಣುಗಳ ಕೆಳಗಿನಿಂದ ಐ ಪ್ಯಾಡ್‌ ತೆಗೆದು ಸ್ಪಾಂಜ್‌ನಿಂದ ಮರ್ಜ್‌ ಮಾಡಿ.

ಫೇಸ್ಕರೆಕ್ಷನ್‌ : ಫೇಸ್‌ನ್ನು ಶಾರ್ಪ್‌ ಆಗಿ ಕಾಣುವಂತೆ ಮಾಡಲು ಫೇಸ್‌ ಕರೆಕ್ಷನ್‌ ಮಾಡಿ. ಅದುಮಿದಂತೆ ಇರುವ ಪಾರ್ಟ್‌ನ್ನು ಕರೆಕ್ಷನ್‌ ಮೂಲಕ ಉಬ್ಬಿಸಿ. ನೋಸ್‌ ಪಾರ್ಟ್‌, ಸೈಡ್‌ ಬೋನ್‌, ಫೋರ್‌ ಹೆಡ್‌ ಇತ್ಯಾದಿಗಳನ್ನು ಪಿಓ37 ಬೇಸ್‌ನಿಂದ ಮಾಡಿ. ಸೈಡ್‌ ಬೋನ್‌ ಏರಿಯಾವನ್ನು ಡೌನ್‌ ಸ್ಟ್ರೋಕ್‌ನಿಂದ ಕಟ್‌ ಮಾಡಿ. ಫೋರ್‌ ಹೆಡ್‌ ಏರಿಯಾದಲ್ಲಿ ಮೂನ್‌ ಮಾಡುತ್ತಾ ಕವರ್‌ ಮಾಡಿ. ನೋಸ್‌ನ ಎರಡೂ ಕಡೆ ಡಾರ್ಕ್‌ ಶೇಡ್‌ ಹಚ್ಚಿ. ಮಧ್ಯೆ ಲೈಟ್‌ ಶೇಡ್‌ ಹಚ್ಚಿ. ಅದರಿಂದ ನೋಸ್‌ ಶಾರ್ಪ್‌ ಆಗಿ ಕಾಣುತ್ತದೆ.

ಚೀಕ್ಸ್ ಮೇಕಪ್‌: ಚೀಕ್ಸ್ ಮೇಲೆ ಬ್ರೌನ್‌ ಬ್ಲಶರ್‌ ಹಚ್ಚಿ. ಕ್ರೈಲಾನ್‌ನ ಟಿಂಟೆಡ್‌ ಮಾಯಿಶ್ಚರೈಸರ್‌ನ ಒಂದು ಹನಿಯನ್ನು ಚೀಕ್ಸ್ ಮೇಲೆ ಹಚ್ಚಿ. ನಂತರ ಬಫಿಂಗ್‌ ಬ್ರಶ್‌ನಿಂದ ಪಾಲಿಶಿಂಗ್‌ ಮಾಡಿ ಈಗ ಖಾಲಿ ಪಫ್‌ನಿಂದ ಪೂರ್ತಿ ಮುಖಕ್ಕೆ ಪಫಿಂಗ್‌ ಮಾಡಿ.

ಲಿಪ್ಮೇಕಪ್

ಲಿಪ್‌ ಮೇಕಪ್‌ ಮಾಡುವಾಗ ಮೇಲಿನ ಲಿಪ್‌ನ ಔಟ್‌ ಲೈನ್‌ ಎರಡೂ ಕಡೆಯಿಂದ ಮೇಲೆ ಎತ್ತುತ್ತಾ ಸ್ಟೈಲಿ ಲಿಪ್ಸ್ ಮಾಡಿ. ಅಂತಹ  ಲಿಪ್ಸ್ ಸೌಂದರ್ಯವನ್ನು ಹೆಚ್ಚು ಪ್ರಕಾಶಿಸುತ್ತದೆ. ಒಂದು ವೇಳೆ ಲಿಪ್ಸ್ ಚಿಕ್ಕದಾಗಿದ್ದರೆ ಹೊರಗಿನ ಕಡೆಗೆ ಔಟ್‌ ಲೈನ್‌ ಮಾಡಿ ಲಿಪ್ಸ್ ನ್ನು ದೊಡ್ಡದಾಗಿಸಿ. ಒಂದು ವೇಳೆ ಅವು ದೊಡ್ಡದಾಗಿದ್ದರೆ ಒಳಗಿನ ಕಡೆಗೆ ಔಟ್‌ ಲೈನ್‌ ಮಾಡಿ. ಲಿಪ್ಸ್ ನ ಕೊನೆಗೆ ಬರುವಾಗ ಕ್ಲೋಸ್‌ ಮಾಡಿ ಕೆಳಗಿನ ಲಿಪ್‌ಸ್ಟಿಕ್‌ ಹಚ್ಚಿ. ಅದರ ಮೇಲೆ ಲಿಪ್‌ ಗ್ಲಾಸ್‌ ಹಚ್ಚಬೇಡಿ. ಅದರ ಜಾಗದಲ್ಲಿ ಗ್ಲಿಟರ್‌ ಹಚ್ಚಬಹುದು. ನಂತರ ಅದರ ಮೇಲೆ ಲಿಪ್‌ ಫಿಕ್ಸರ್‌ ಹಚ್ಚಿ.

ಹೇರ್ಸ್ಟೈಲ್

ಹೇರ್‌ ಸ್ಟೈಲಿಸ್ಟ್ ಕಿಶೋರ್‌ ನಟಿ ಹೆಲೆನ್‌ರ ಸುಂದರ ಹೇರ್‌ ಸ್ಟೈಲ್ ಮಾಡಿ ತೋರಿಸಿ ಹೀಗೆ ಹೇಳಿದರು. ಮೊದಲಿಗೆ ಕೂದಲನ್ನು ಶ್ಯಾಂಪೂನಿಂದ ಕ್ಲೀನ್‌ ಮಾಡಿ ಸೆಮಿ ಡ್ರೈ ಮಾಡಿ. ನಂತರ ಕೂದಲನ್ನು ಬ್ಲೋ ಡ್ರೈ ಮಾಡಿ. ಇಯರ್‌ ಟು ಇಯರ್‌ ಸೆಕ್ಷನ್‌ ತೆಗೆಯಿರಿ. ಹಿಂದಿನ ಕೂದಲನ್ನು ಸೆಕ್ಷನ್‌ನಲ್ಲಿ ತೆಗೆದುಕೊಳ್ಳಿ. ಟಾಪ್‌ನ ಕೂದಲನ್ನು 2 ಭಾಗಗಳಾಗಿ ಮಾಡಿ. ಹಿಂದಿನಿಂದ ಟಾಪ್‌ನ ಕೂದಲನ್ನು  ಪೋನಿ ಮಾಡಿ, ಪಿನ್‌ಗೆ ರಬ್ಬರ್‌ ಬ್ಯಾಂಡ್‌ ಕಟ್ಟಿ ಪೋನಿಯಲ್ಲಿ  ಸಿಕ್ಕಿಸಿ. ಇದರ ಹಿಂದಿನ ಕೂದಲನ್ನೂ ಪೋನಿ ಮಾಡಿ. ಮೇಲಿನ ಪೋನಿಯ ಕೆಳಗೆ ಸ್ಟ್ರೇ ಮಾಡಿ ಬಾಚಣಿಗೆಯಿಂದ ನೀಡ್‌ ಮಾಡಿ.

ನಂತರ ಟಾಪ್‌ನ ಪೋನಿಯ ಕೆಳಗೆ 4, 5 ಪಿನ್‌ಗಳನ್ನು ಕ್ರಾಸ್‌ ಆಗಿ ಸಿಕ್ಕಿಸಿ. ಪೋನಿಯನ್ನು ಮೇಲೆ ಮಾಡಿ. ಕೆಳಗಿನ ಪೋನಿಯಿಂದ ಒಂದು ಬಾಕ್ಸ್ ಸೆಕ್ಷನ್‌ ತೆಗೆದುಕೊಂಡು ಅದನ್ನು ಫಿಕ್ಸ್ ಮಾಡಿ. ಸೈಡ್‌ನ ಕೂದಲನ್ನು ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಮೇಲಿನ ಲೇಯರ್‌ ಮೇಲೆ ಸ್ಪ್ರೇ ಮಾಡಿ ಮತ್ತು ಆ ಲೇಯರ್‌ನ್ನು ಟಾಪ್‌ ಪೋನಿಯ ಮೇಲೆ ತೆಗೆದುಕೊಂಡು ಪಿನ್‌ ಅಪ್ ಕ್ರಾಸ್‌ನಲ್ಲಿ ಮಾಡಿ. ಹೀಗೆಯೇ ಇನ್ನೊಂದು ಕಡೆಯೂ ಮಾಡಿ.

ಬಾಕ್ಸ್ ಸೆಕ್ಷನ್‌ನ ಹಿಂದಿನ ಪಾರ್ಟ್‌ ತೆಗೆದುಕೊಂಡು ಹೆಚ್ಚು ಬ್ಯಾಕ್‌ ಕೂಂಬಿಂಗ್‌ ಮಾಡಿ ಸ್ಪ್ರೇ ಮಾಡಿ. ನಂತರ ಮುಂದಿನ ಕೂದಲನ್ನು ಬ್ಯಾಕ್‌ ಕೂಂಬಿಂಗ್‌ ಕೂದಲಿನ ಮೇಲೆ ತೆಗೆದುಕೊಳ್ಳಿ. ಬಾಚುತ್ತಾ ಕೂದಲಿನ ಮೇಲೆ ಸ್ಪ್ರೇ ಮಾಡಿ. ಈಗ ಪಫ್ ಮಾಡುತ್ತಾ ಟಾಪ್‌ನ ಪೋನಿಯ ಮೇಲೆ ತೆಗೆದುಕೊಂಡು ಪಿನ್‌ನಿಂದ ಸೆಟ್‌ ಮಾಡಿ ಮತ್ತು ಸ್ಪ್ರೇ ಮಾಡಿ. ನಂತರ ಮುಂದೆ ಹಾಗೂ ಸೈಡ್‌ನಲ್ಲಿ ಉಳಿದ ಕೂದಲನ್ನು ಪೋನಿಯಲ್ಲೇ ಸುತ್ತಿಬಿಡಿ. ನಂತರ ಸೈಡ್‌ನ ಕೂದಲನ್ನು ಟ್ವಿಸ್ಟ್ ಮಾಡಿ. ಫ್ಲವರ್‌ ಮಾಡಿ ಪಿನ್‌ನಿಂದ ಸೆಟ್‌ ಮಾಡಿ. ಈಗ ಕೆಳಗಿನ ಪೋನಿಯನ್ನು ಮೇಲೆ ಪಿನ್‌ ಅಪ್‌ ಮಾಡಿ. ನಂತರ ಆರ್ಟಿಫಿಶಿಯ್‌ ಕೂದಲಿನ 3 ಗಂಟುಗಳು ಹಾಗೂ ಬ್ಲ್ಯಾಕ್‌ ರೆಕ್ಕೆ ಮತ್ತು ಕ್ರೌನ್‌ ಸಿಕ್ಕಿಸಿ.

ದೀಪಿಕಾ ಪಡುಕೋಣೆಯಂತಹ ಮೇಕಪ್‌

ಸಿಲಿಕಾನ್ಮೇಕಪ್‌ : ಅನ್‌ ಈವನ್‌ ಸ್ಕಿನ್‌ನ್ನು ಈವನ್‌ ಆಗಿಸಲು ಸಿಲಿಕಾನ್‌ ಮೇಕಪ್‌ ಮಾಡಲಾಗುತ್ತದೆ. ಇದರಲ್ಲಿ ಕ್ರೈಲಾನ್‌ನ ಸಿಲಿಕಾನ್‌ ಬೇಸ್‌ನ್ನೇ ಉಪಯೋಗಿಸಿ.

ಫೇರ್ಕಾಂಪ್ಲೆಕ್ಷನ್ಗೆ : ಆಲಿವ್ ಬೇಸ್‌ ನಂ.1

ಮೀಡಿಯಂ ಕಾಂಪ್ಲೆಕ್ಷನ್ಗೆ : ಆಲಿವ್ ಬೇಸ್‌ ನಂ.2

ಡಾರ್ಕ್ಕಾಂಪ್ಲೆಕ್ಷನ್ಗೆ : ಟೆನ್‌ ಟೋನ್‌ ನಂ.10

ಮೇಕಪ್‌ : ಮೇಕಪ್‌ ಶುರು ಮಾಡುವ ಮೊದಲು ಜಾಲೈನ್‌ ಏರಿಯಾದಲ್ಲಿ ಮೊದಲು ಕೊಂಚ ಸಿಲಿಕಾನ್‌ ಬೇಸ್‌ ಹಾಕಿ ಚೆಕ್‌ಮಾಡಿ. ಈಗ ಫೇಸ್‌ನ್ನು ಕ್ಲೀನ್‌ ಮಾಡಿ ಮೇಕಪ್‌ ಫಿಕ್ಸರ್‌ ಫಿಕ್ಸ್ ಪ್ಲಸ್‌ನ 10 ಡ್ರಾಪ್‌ ಬೇಸ್‌ನಲ್ಲಿ ಸ್ಪ್ರೇ ಮಾಡಿ. ನಂತರ ಬ್ರಶ್‌ನಿಂದ ಮಿಕ್ಸ್ ಮಾಡಿ ಬೇಸ್‌ ಹಚ್ಚಿ.

ನಂತರ ಡ್ರೈ ಬ್ರಶ್‌ ತೆಗೆದುಕೊಂಡು ಫೇಸ್‌ನ ಪಾಲಿಶಿಂಗ್‌ ಮಾಡಿ. ಪಫ್‌ನಿಂದ ಫೇಸ್‌ನ್ನು ತಪತಪನೆ ಒತ್ತಿ. ಬ್ಲೆಂಡ್‌ ಮಾಡುವ ಅಗತ್ಯವಿರುವ ಕಡೆ ಬ್ಲೆಂಡ್‌ ಮಾಡಿ. ನಂತರ ಫೋರ್‌ ಹೆಡ್‌, ನೋಸ್‌ ಮತ್ತು ಚೀಕ್ಸ್ ನ ಕರೆಕ್ಷನ್‌ ಸ್ಪಾಂಜ್‌ನಿಂದ ಮೇಲಿನ ಕಡೆ ಮಾಡಿ. ಅದರಿಂದ ಫೇಸ್‌ ಶಾರ್ಪ್‌ ಆಗಿ ಕಾಣುತ್ತದೆ.

ಈಗ ನೋಸ್‌ನ ಫ್ರಂಟ್‌ನಲ್ಲಿ ವೈಟ್‌ ಬೇಸ್‌ನಿಂದ ಹೈಲೈಟಿಂಗ್‌ ಮಾಡಿ. ನಂತರ ಮಿಕ್ಸ್ ಪೌಡರ್‌ ಹಾಕಿ ಬ್ರಶ್‌ನಿಂದ ಫೇಸ್‌ನ ಪಾಲಿಶಿಂಗ್‌ ಮಾಡಿ.

face-correction

ಐಸ್ಮೇಕಪ್‌ : ಕಣ್ಣುಗಳ ಕೆಳಗೆ ಐ ಪಾಡ್‌ ಹಾಕಿ ಮೇಕಪ್‌ ಶುರು ಮಾಡಿ. ನಂತರ ಕಣ್ಣುಗಳ ಮೇಲೆ ಸಿಲ್ವರ್‌ ಕಲರ್‌ನ ಬೇಸ್‌ಹಚ್ಚಿ. ಕಣ್ಣುಗಳ ಮೇಲೆ ಪೀಚ್‌ ಕಲರ್‌, ಲೈನರ್‌ ಏರಿಯಾದಲ್ಲಿ ಬ್ಲ್ಯಾಕ್‌ ಕಲರ್‌ನ ಶ್ಯಾಡೋ ಹಚ್ಚಿ. ನಂತರ ಆರ್ಟಿಫಿಶಿಯಲ್ ಐ ಲ್ಯಾಶಸ್‌ ಹಚ್ಚಿ ಆಮೇಲೆ ಐಸ್‌ ಓಪನ್‌ ಮಾಡಿ, ಇಯರ್‌ ಬಡ್‌ನಿಂದ ಕ್ಲೀನ್‌ ಮಾಡಿ. ಕಣ್ಣುಗಳು ಅಂಟಿಕೊಳ್ಳುವುದಿಲ್ಲ. ಈ ಜೆಲ್ ‌ಐ ಲೈನರ್‌ ಹಚ್ಚಿ ಮತ್ತು ವಾಟರ್‌ ಲೈನ್‌ ಏರಿಯಾದಲ್ಲಿ ಕಾಜಲ್ ಹಚ್ಚಿ. ಐ ಬ್ರೋಸ್‌ಗೆ ಬ್ರೌನ್‌ ಶ್ಯಾಡೋನಿಂದ ಡಾರ್ಕ್‌ ಮಾಡಿ.

ಈಗ ಫೇಸ್‌ ಮೇಲೆ ಬ್ರಾಂಝ್ ಕಲರ್‌ನ ಹೈ ಲೈಟರ್‌ ಹಚ್ಚಿ ಚೀಕ್ಸ್ ಮೇಲೆ ಬೆರಳುಗಳಿಂದಲೇ ಹಚ್ಚಿ.

ಲಿಪ್ಮೇಕಪ್‌ : ಲಿಪ್ಸ್ ಮೇಲೆ ಬೇಸ್‌ ಹಚ್ಚಿ ಔಟರ್‌ ಲೈನ್‌ ಮಾಡಿ ಮತ್ತು ಲೈಟ್‌ ಕಲರ್‌ನ ಲಿಪ್‌ಸ್ಟಿಕ್‌ ಅದರಲ್ಲಿ ತುಂಬಿ. ಲಿಪ್‌ಸ್ಟಿಕ್‌ನ ಔಟ್‌ ಲೈನ್‌ ಮಾಡಿದಾಗ ಫೇಸ್‌ ಸ್ಮೈಲಿಯಂತೆ ಕಾಣುತ್ತದೆ.

ಹೇರ್‌ ಸ್ಟೈಲ್ ‌ಕೂದಲನ್ನು ಇಯರ್‌ ಟು ಇಯರ್‌ ಸೆಕ್ಷನ್‌ ತೆಗೆದುಕೊಂಡು ಅದನ್ನು ಪಿನ್‌ನಿಂದ ಮೇಲೆ ಸೆಟ್‌ ಮಾಡಿ. ಟಾಪ್‌ನಿಂದ ವಿ ಸೆಕ್ಷನ್‌ ಮಾಡಿ. ಮೇಲಿನಿಂದ ಅಗಲ ಹಾಗೂ ಕೆಳಗಿನಿಂದ ತೆಳುವಾಗಿರುತ್ತದೆ. ಸೈಡ್‌ನ ಕೂದಲನ್ನು ಬಿಟ್ಟು ವಿ ಸೆಕ್ಷನ್‌ನ್ನು ಮೇಲೆ ಟ್ಯಾಗ್‌ ಮಾಡಿ. ಸೈಡ್‌ನಲ್ಲಿ ಒಂದು ಪೋನಿ ಮಾಡಿ. ಅದನ್ನೂ ಟ್ಯಾಗ್‌ ಮಾಡಿ.

ಈಗ ಪೋನಿಯ ಕೆಳಗೆ ಸ್ಪ್ರೇ ಮಾಡಿ ಕ್ರಾಸ್‌ ಪಿನ್‌ ಹಚ್ಚಿ. ಪೋನಿಯ ಕೂದಲಿಗೆ ಸ್ಪ್ರೇ ಮಾಡಿ ಬ್ಯಾಂಡ್‌ ಹಾಕಿ. ಪೋನಿಯ ಕೂದಲಿನ 1-1 ತೆಳುವಾದ ಜುಟ್ಟು ತೆಗೆದುಕೊಂಡು ಅವಕ್ಕೆ ಡ್ರೈಯರ್‌ನಿಂದ ಹೀಟ್‌ ಕೊಡಿ.

ಈಗ ಮುಂದಿನ ಕೂದಲಿಂದ ಒಂದು ಬಾಕ್ಸ್ ಸೆಕ್ಷನ್‌ ತೆಗೆದುಕೊಳ್ಳಿ. ಇದರಲ್ಲಿ ಹಿಂದಿನ ಜುಟ್ಟಿನಲ್ಲಿ ಬ್ಯಾಕ್‌ ಕೂಂಬಿಂಗ್‌ ಮಾಡಿ ಸ್ಪ್ರೇ ಮಾಡಿ.

ಈಗ ಅದನ್ನು ಕೂಂಬ್‌ ಮಾಡಿ ಪಫ್‌ ಮಾಡುತ್ತಾ ಟಾಪ್‌ನಲ್ಲಿ ಹಿಂದೆ ಪಿನ್‌ನಿಂದ ಕ್ರಾಸ್‌ ಸೆಟ್‌ ಮಾಡಿ ರೋಲ್ ಮಾಡಿದ ಕೂದಲನ್ನು 10 ನಿಮಿಷಗಳ ನಂತರ ಡ್ರೈ ಮಾಡಿ ಸುತ್ತಿ ನಂತರ ತೆರೆಯಿರಿ. ಈಗ ಆರ್ಟಿಫಿಶಿಯಲ್ ಕೂದಲು ತೆಗೆದುಕೊಂಡು ಪಿನ್‌ನಿಂದ ರೋಲ್ ‌ಮಾಡಿದ ಕೂದಲಿನಲ್ಲಿ ಸುತ್ತಿಬಿಡಿ.

ಮುಂದಿನ ಫ್ರಿಂಜೆಜ್‌ ಏರಿಯಾದಲ್ಲಿ ಸ್ಪ್ರೇ ಮಾಡಿ ಬ್ಯಾಕ್‌ ಕೂಂಬಿಂಗ್‌ ಮಾಡಿ. ನಂತರ ಅವನ್ನು ಟ್ವಿಸ್ಟ್ ಮಾಡಿ ಸೈಡ್‌ನಲ್ಲಿ ಪಿನ್‌ನಿಂದ ಸೆಟ್‌ ಮಾಡಿ. 1-1 ಸೆಕ್ಷನ್‌ ತೆಗೆದುಕೊಂಡು ಟ್ವಿಸ್ಟ್ ಮಾಡಿ. ಇನ್ನೊಂದು ಕಡೆಯೂ ಹೀಗೆಯೇ ಮಾಡಿ. ಎಲ್ಲ ಕೂದಲನ್ನೂ ಮೇಲೆ ಸೆಟ್‌ ಮಾಡಿ ಯು ಪಿನ್‌ ಇರುವ ಬೀಡ್ಸ್ ಜುಟ್ಟಿನಲ್ಲಿ ಸಿಕ್ಕಿಸಿ. ನಂತರ ಸ್ಪ್ರೇನಿಂದ ಫಿನಿಶಿಂಗ್‌ ಕೊಡಿ.

ಥೀಮ್ ಪಾರ್ಟಿ ಅಥವಾ ಈವ್ನಿಂಗ್‌ ಪಾರ್ಟಿಗಳಲ್ಲಿ ಬಾಲಿವುಡ್‌ ತಾರೆಗಳಂತಹ ಮೇಕಪ್‌ ಮತ್ತು ಹೇರ್‌ ಸ್ಟೈಲ್ ಮಾಡಿಕೊಂಡು ನೀವು ಗ್ಲಾಮರಸ್‌ ಲುಕ್‌ ಪಡೆಯಬಹುದು. ಪರ್ಫೆಕ್ಟ್ ಲುಕ್‌ ಪಡೆಯಲು ಫ್ಯಾಷನ್‌ ಆ್ಯಕ್ಸೆಸರೀಸ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಉಪಯೋಗಿಸಬೇಡಿ. ಅದರಿಂದ ನಿಮ್ಮ ಲುಕ್‌ ಹಾಳಾಗುತ್ತದೆ. ಜೊತೆಗೆ ಮ್ಯಾಚಿಂಗ್‌ ಡ್ರೆಸ್‌ ಮತ್ತು ಫುಟ್‌ವೇರ್‌ ಕೂಡ ಇದ್ದರೆ ಬೇರೇನು ಬೇಕು?

ಪಿ. ವಿನುತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ