ಮಹಿಳೆಯರು ಮುಖಕ್ಕೆ ಕ್ರೀಮ್, ಪೌಡರ್‌ ಮತ್ತು ಇತರ ಕಾಸ್ಮೆಟಿಕ್‌ ಉತ್ಪನ್ನಗಳನ್ನು ಹಚ್ಚಿಕೊಂಡರೆ ಸುಂದರವಾಗಿ ಕಾಣುತ್ತೇವೆಂದುಕೊಳ್ಳುವುದು ಅವರ ತಪ್ಪು ತಿಳಿವಳಿಕೆ. ಮೇಕಪ್‌ನ್ನು ಮುಖದ ಆಕಾರ ಮತ್ತು ತ್ವಚೆಯ ಬಣ್ಣವನ್ನು ಗಮನದಲ್ಲಿಟ್ಟುಕೊಂಡೇ ಮಾಡಿಕೊಳ್ಳಬೇಕು. ಆಗಲೇ ಅದು ಅವರನ್ನು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಪ್ರಸಿದ್ಧ ಬ್ಯೂಟಿ ಸಲೂನ್‌ನ ಮೇಕಪ್‌ ಆರ್ಟಿಸ್ಟ್ ಸಿತಾರಾ, ``ಮೇಕಪ್‌ ಹೇಗಿರಬೇಕೆಂದರೆ ಸೌಂದರ್ಯ ಹೊಳೆಯುವಂತಿರಬೇಕು,'' ಎನ್ನುತ್ತಾರೆ.

makeup

ಬಿಳಿಯ ತ್ವಚೆಗೆ ಮೇಕಪ್

ಫೇರ್‌ ಸ್ಕಿನ್‌ನವರು ಅಂದರೆ ಗೌರವರ್ಣದ ಮಹಿಳೆಯರ ತ್ವಚೆ ನಾಜೂಕಾಗಿರುತ್ತದೆ. ಕೊಂಚ ನವೆ ಅಥವಾ ಗೀರಿನಿಂದ ಅವರ ಮುಖ ಕೆಂಪಾಗುತ್ತದೆ. ತ್ವಚೆಯಲ್ಲಿ ಗುರುತುಗಳು ಎದ್ದು ಕಾಣುತ್ತವೆ. ಆದ್ದರಿಂದ ಈ ಬಣ್ಣವಿರುವ ಮಹಿಳೆಯರಿಗೆ ವಿಭಿನ್ನ ರೀತಿಯ ಮೇಕಪ್‌ನ ಅಗತ್ಯವಿದೆ. ಫೇರ್‌ ಸ್ಕಿನ್‌ ಮೇಲೆ ಮೇಕಪ್‌ ಮಾಡಿಕೊಳ್ಳುವಾಗ ತಪ್ಪಾಗುವ ಚಾನ್ಸೆಸ್‌ ಬಹಳ ಇವೆ. ಜೊತೆಗೆ ತಪ್ಪು ಟೆಕ್ನಿಕ್‌ನಿಂದ ಮಾಡಿದ ಮೇಕಪ್‌ನಿಂದಾಗಿ ಮುಖ ಕುರೂಪಿಯಾಗಿ ಕಾಣುತ್ತದೆ.

liquid-foundation

ಬಣ್ಣಗಳ ಉಪಯೋಗ

ಬಿಳಿಯ ಸ್ಕಿನ್‌ ಮೇಲೆ ಬ್ರೈಟ್‌ ಕಲರ್‌ ಯಾವಾಗಲೂ ಚೆನ್ನಾಗಿರುತ್ತದೆ. ಫೇರ್‌ ಕಲರ್‌ನ ಮಹಿಳೆಯರು ಮೇಕಪ್‌ನಲ್ಲಿ ಯಾವಾಗಲೂ ಡಾರ್ಕ್‌ ಮತ್ತು ಕೊಂಚ ಹೊಳೆಯುವ ಬಣ್ಣಗಳನ್ನು ಉಪಯೋಗಿಸಬೇಕು. ಅಂದಹಾಗೆ ಭ್ರಾಂಝ್ ಕಲರ್‌ ಫೇರ್‌ ಕಲರ್‌ನವರಿಗೆ ಬಹಳ ಸುಂದರವಾಗಿರುತ್ತದೆ. ವಿಶೇಷವಾಗಿ ತುಟಿಗಳ ಮೇಲೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಬೇಕು.

eye-mkp

ಫೌಂಡೇಶನ್

ಅನೇಕ ಬಾರಿ ಬಣ್ಣ ಹೋಗುವ ಕಾರಣದಿಂದಾಗಿ ಮಹಿಳೆಯರು ಮೇಕಪ್‌ ಬೇಸ್‌ಮಾಡಿಕೊಳ್ಳುವುದಿಲ್ಲ. ಆದರೆ ಅದು ತಪ್ಪು. ಫೌಂಡೇಶನ್‌ ಉಪಯೋಗದಿಂದ ತ್ವಚೆಗೆ ಸ್ಮೂಥ್‌ ಬೇಸ್‌ ಸಿಗುತ್ತದೆ. ಜೊತೆಗೆ ಸ್ಕಿನ್‌ ಟೋನ್‌ ಸಹ ಒಂದೇ ರೀತಿಯಂತೆ ಆಗುತ್ತದೆ. ಇಲ್ಲಿ ಒಂದು ವಿಷಯ ಗಮನಿಸಬೇಕು. ಫೇರ್‌ ಕಲರ್‌ನವರು ಫೌಂಡೇಶನ್‌ ಆರಿಸಿಕೊಳ್ಳುವಾಗ ಬಹಳ ಸತರ್ಕರಾಗಿರಬೇಕು. ಏಕೆಂದರೆ ಅವರು ತಪ್ಪು ಫೌಂಡೇಶನ್‌ ಆರಿಸಿಕೊಂಡರೆ ಅವರ ಬಣ್ಣ ಕಪ್ಪಗೆ ಅಥವಾ ಗ್ರೇ ಆಗಿ ಕಂಡುಬರುತ್ತದೆ. ವಿಶೇಷವಾಗಿ ಬೆಳಕಿನಲ್ಲಿ ತಪ್ಪು ಫೌಂಡೇಶನ್‌ನ ಪ್ರಭಾವ ಹೆಚ್ಚು ಕಂಡುಬರುತ್ತದೆ. ಆದ್ದರಿಂದ ಫೌಂಡೇಶನ್‌ ಹಚ್ಚುವ ಮೊದಲು ಒಮ್ಮೆ ತ್ವಚೆಗೆ ಹಚ್ಚಿ ಟೆಸ್ಟ್ ಮಾಡಬೇಕು.

blusher

ಕಣ್ಣುಗಳಿಗೆ ಸಾಧಾರಣ ಮೇಕಪ್

ಗೌರ ವರ್ಣದ ಮಹಿಳೆಯರಿಗೆ ಕಣ್ಣುಗಳ ಮೇಕಪ್‌ ಸಾಧ್ಯವಾದಷ್ಟು ಸಾಧಾರಣವಿರಬೇಕು. ಅವರಿಗೆ ಕಾಜಲ್ ಐ ಲೈನರ್‌ ಮತ್ತು ಮಸ್ಕರಾ ಸಾಕು. ಆದರೆ ತೆಳುಬಣ್ಣದ ಐಶ್ಯಾಡೋ ಕೂಡ ಉಪಯೋಗಿಸಬಹುದು.

ಬ್ಲಶರ್ಅಗತ್ಯವಾಗಿ ಹಚ್ಚಿ

ಕೆನ್ನೆಗಳ ಮೇಲೆ ಬ್ಲಶರ್‌ ಉಪಯೋಗಿಸುವುದನ್ನು ಎಂದೂ ಮರೆಯಬೇಡಿ. ಅದಲ್ಲದೆ ನಿಮ್ಮ ಮೇಕಪ್‌ ಪೂರ್ತಿಯಾಗುವುದಿಲ್ಲ. ಪೇರ್ ‌ಸ್ಕಿನ್‌ನ್ನು ಸುಂದರವಾಗಿ ಹಾಗೂ ಗ್ಲೋಯಿಂಗ್‌ ಆಗಿ ಕಾಣಿಸಲು ತೆಳುವಾದ ಬ್ಲಶರ್‌ನ ಅಗತ್ಯವಿದೆ.

sawli-twacha

ಶ್ಯಾಮಲ ವರ್ಣದವರ ಮೇಕಪ್

ಡಾರ್ಕ್‌ ಸ್ಕಿನ್‌ ಅಂದರೆ ಶ್ಯಾಮಲ ವರ್ಣದ ಮಹಿಳೆಯರಿಗೆ ತಮ್ಮ ತ್ವಚೆಯ ಬಣ್ಣ ಹೊಳೆಯುವಂತೆ ಮಾಡಲಾಗುತ್ತಿಲ್ಲ ಎಂದು ಅನ್ನಿಸುತ್ತಿರುತ್ತದೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹಳಷ್ಟು ಉತ್ಪನ್ನಗಳನ್ನು ಉಪಯೋಗಿಸುತ್ತಾರೆ. ಒಮ್ಮೊಮ್ಮೆ ಅದರಿಂದಾಗಿ ಕೀಳರಿಮೆಗೆ ಗುರಿಯಾಗುತ್ತಾರೆ. ಆದರೆ ಡಾರ್ಕ್‌ಸ್ಕಿನ್‌ನ ಮಹಿಳೆಯರೂ ಸಹ ಮೇಕಪ್‌ ಮೂಲಕ ತಮ್ಮ ತ್ವಚೆಯ ಬಣ್ಣ ಹೊಳೆಯುವಂತೆ ಮಾಡಬಹುದು. ಯಾವುದೇ ಸಮಾರಂಭದಲ್ಲಿ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಇಂತಹ ತ್ವಚೆಯ ಮಹಿಳೆಯರಿಗೆ ಮೇಕಪ್‌ ಸಂದರ್ಭದಲ್ಲಿ ತಮ್ಮ ಸ್ಕಿನ್‌ ಟೋನ್‌ ಬಗ್ಗೆ ಗಮನವಿರಬೇಕು. ಅದಲ್ಲದೆ, ತಮ್ಮ ಮುಖಕ್ಕೆ ಹೊಂದುವ ಬಣ್ಣದ ಲಿಪ್‌ ಲೈನರ್‌ ಮತ್ತು ಬ್ಲಶರ್‌ ಉಪಯೋಗಿಸಿ ಅವರು ಸುಂದರವಾಗಿ ಕಾಣಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ