ಮದುವೆ, ಮುಂಜಿ, ಎಂಗೇಜ್‌ಮೆಂಟ್ ಯಾವುದೇ ಪಾರ್ಟಿ ಆಗಲಿ, ಅದಕ್ಕಾಗಿ ಅಲಂಕರಿಸಿಕೊಳ್ಳುವ ಬಯಕೆ ಎಲ್ಲರಿಗೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಸುಂದರವಾಗಿ ಹಾಗೂ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಪಾರ್ಟಿ ಮೇಕಪ್ ಮತ್ತು ಹೇರ್ ಸ್ಟೈಲ್ ಬಗ್ಗೆ ಕೆಲವು ಟಿಪ್ಸ್ ತಿಳಿದುಕೊಳ್ಳಿ. ಪರ್ಲ್ ಅಕಾಡೆಮಿಯ ಮೇಕಪ್ ಡಿಸೈನರ್ ಮತ್ತು ಹೇರ್ ಸ್ಟೈಲ್ ಎಕ್ಸ್ ಪರ್ಟ್ ಪರಮ್ ಜೀತ್ ಹೀಗೆ ಹೇಳುತ್ತಾರೆ.
ಪಾರ್ಟಿ ಮೇಕಪ್
ಎಲ್ಲಕ್ಕೂ ಮೊದಲು ಮುಖಕ್ಕೆ ಕ್ಲೆನ್ಸಿಂಗ್, ಟೋನಿಂಗ್ ಹಾಗೂ ಮಾಯಿಶ್ಚರೈಸಿಂಗ್ ಮಾಡಿ ನಂತರ ಪ್ರೈಮರ್ ಹಚ್ಚಿ. ಅದಕ್ಕೆ ಸ್ಕಿನ್ ಟೋನ್‌ನಿಂದ ಒಂದು ಶೇಡ್ ಫೇರ್ ಬೇಸ್ ತೆಗೆದುಕೊಳ್ಳಿ, ಮುಖಕ್ಕೆ ಚೆನ್ನಾಗಿ ಹಚ್ಚಿ. ನಂತರ ಪಾಲಿಶಿಂಗ್ ಬ್ರಶ್ ತೆಗೆದುಕೊಂಡು ಮುಖದಲ್ಲಿ ಬೇಸ್‌ನ್ನು ಚೆನ್ನಾಗಿ ಮರ್ಜ್ ಮಾಡಿ. ಅದರಿಂದ ಮುಖಕ್ಕೆ ಶೈನಿಂಗ್ ಬರುತ್ತದೆ, ಪೌಡರ್ ಹಚ್ಚಿ.
ಐ ಮೇಕಪ್
ಐ ಮೇಕಪ್ ಮಾಡಿಕೊಳ್ಳುವ ಮೊದಲು ಕಣ್ಣುಗಳ ಕೆಳಗೆ ಪೌಡರ್ ಹಚ್ಚಿ. ಹೀಗೆ ಮಾಡುವುದರಿಂದ ಐ ಮೇಕಪ್ ಮಾಡಿಕೊಳ್ಳುವಾಗ ಡೋ ಬಿದ್ದರೆ ಪೌಡರ್ ಮೇಲೆ ಬೀಳುತ್ತದೆ. ಅದರಿಂದ ಬೇಸ್ ಹಾಳಾಗುವುದಿಲ್ಲ. ನಂತರ ಡ್ರೆಸ್‌ಗೆ ಮ್ಯಾಚ್ ಆಗುವ ಐ ಶ್ಯಾಡೋ ಹಚ್ಚಿ. ಐ ಬ್ರೋಸ್ ಕೆಳಗೆ ಹೈಲೈಟರ್ ಹಚ್ಚಿ ಮತ್ತು ಐ ಬಾಲ್ಸ್ ನ ಸೈಡ್‌ನಲ್ಲಿ ಬ್ರೌನ್ ಶ್ಯಾಡೋ ಹಚ್ಚಿ. ಶ್ಯಾಡೋನ ಮೇಲೆಯೇ ಜೆಲ್ ಕಾಜಲ್‌ನಿಂದ ಲೈನರ್ ಹಚ್ಚಿ. ನಂತರ ಐ ಲ್ಯಾಶಸ್ ಮೇಲೆ ಮಸ್ಕರಾ ಹಚ್ಚಿ ಕಣ್ಣುಗಳಿಗೆ ಪರ್ಫೆಕ್ಟ್ ಲುಕ್ ಕೊಡಿ.
ಫೇಸ್ ಕಾಂಟೂರಿಂಗ್
ಫೇಸ್ ಕಟ್‌ನ್ನು ಶಾರ್ಪ್ ಆಗಿ ಕಾಣಿಸಲು ಕಾಂಟೂರಿಂಗ್ ಬಹಳ ಅಗತ್ಯ. ಇದರಿಂದ ಮುಖದ ಲುಕ್ ಬದಲಾಗಿ ಸುಂದರವಾಗುತ್ತದೆ. ಎಲ್ಲಕ್ಕೂ ಮೊದಲು ನೋಸ್‌ನ ಕಾಂಟೂರಿಂಗ್ ಮಾಡಿ. ನೋಸ್‌ನ ಎರಡೂ ಕಡೆ ಡಾರ್ಕ್ ಶೇಡ್ ಶ್ಯಾಡೋನಿಂದ ಅಥವಾ ಡಾರ್ಕ್ ಬೇಸ್‌ನಿಂದ ಹಚ್ಚಿ. ಸೆಂಟರ್‌ನಲ್ಲಿ ಲೈಟ್ ಶೇಡ್ಸ್ ಹಚ್ಚಿ ನಂತರ ಚೀಕ್ಸ್ ಗಳನ್ನು ಬ್ರಶ್ ಮೂಲಕ ಉಬ್ಬಿಸಿ. ನಂತರ ಪಿಂಕ್ ಕಲರ್‌ನ ಶೈನರ್‌ನ್ನು ಚೀಕ್ಸ್ ಮೇಲೆ ಹಚ್ಚಿ. ಒಂದು ವೇಳೆ ಫೇಸ್ ಅಗಲವಾಗಿದ್ದರೆ ಜಾ ಲೈನ್‌ನ ಬೋನ್ ಮೇಲೆ ಡಾರ್ಕ್ ಬೇಸ್ ಹಚ್ಚಿ ಮರ್ಜ್ ಮಾಡಿ.
ಲಿಪ್ ಮೇಕಪ್
ಮೇಕಪ್ ಪೂರ್ತಿಯಾದ ನಂತರ ಲಿಪ್ ಮೇಕಪ್ ಮಾಡಿ. ಮೊದಲು ಲಿಪ್ಸ್ ಗೆ ಹಗುರವಾಗಿ ಮಾಯಿಶ್ಚರೈಸರ್ ಹಚ್ಚಿ. ನಂತರ ಲಿಪ್‌ಸ್ಟಿಕ್‌ನಿಂದ ಲಿಪ್ಸ್ ನ ಔಟ್ ಲೈನ್ ಮಾಡಿ ನಿಮಗಿಷ್ಟವಾದ ಲಿಪ್‌ಸ್ಟಿಕ್ ತುಂಬಿ ಗ್ಲಾಸ್ ಹಚ್ಚಿ.
ಪಾರ್ಟಿ ಹೇರ್ ಸ್ಟೈಲ್
ಕೂದಲನ್ನು ಬಾಚಿ ಸೈಡ್‌ನಲ್ಲಿ ಬೈತಲೆ ತೆಗೆದು ಇಯರ್ ಟು ಇಯರ್ ಕೂದಲನ್ನು ಬೇರೆ ಮಾಡಿ. ನಂತರ ಟಾಪ್‌ನ ಕೂದಲಿನಲ್ಲಿ ರಬ್ಬರ್ ಬ್ಯಾಂಡ್‌ನಿಂದ ಒಂದು ಎತ್ತರದ ಪೋನಿ ಮಾಡಿ. ಪೋನಿಯ ಕೂದಲಿನಲ್ಲಿ ಒಂದು ಜುಟ್ಟನ್ನು ತೆಗೆದುಕೊಂಡು ರಬ್ಬರ್ ಬ್ಯಾಂಡ್‌ನ್ನು ಕವರ್ ಮಾಡಿ. ಈಗ ಮುಂದಿನ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ. ಎರಡೂ ಕಡೆಯ ಕೂದಲನ್ನು ಬಿಟ್ಟು ಅವುಗಳಿಂದ ಪಫ್ ಮಾಡುತ್ತಾ ಪೋನಿಯ ಬಳಿಯಲ್ಲೇ ಪಿನ್‌ನಿಂದ ಸೆಟ್ ಮಾಡಿ. ಎರಡೂ ಸೈಡ್‌ನ ಉಳಿದ ಕೂದಲಿನ 2 ಗಂಟುಗಳನ್ನು ಸೇರಿಸಿ ಟ್ವಿಸ್ಟ್ ಮಾಡುತ್ತಾ ಪಫ್‌ನತ್ತ ತನ್ನಿ. ಹೀಗೆಯೇ ಇನ್ನೊಂದು ಕಡೆಯೂ ಮಾಡಿ. ನಂತರ ಪೋನಿಯ ಕೆಳಗಿನ ಕೂದಲಿನಿಂದ ಒಂದು ಸೆಕ್ಷನ್ ತೆಗೆದುಕೊಂಡು ಗಂಟು ಹಾಕಿ. ಈಗ ಪೋನಿಯ ಕೂದಲಿನ 1-1 ಗಂಟು ತೆಗೆದುಕೊಂಡು ಅವನ್ನು ರೋಲ್ ಮಾಡುತ್ತಾ ಜಡೆಯಂತೆ ಮಾಡಿ. ಹೀಗೆಯೇ 6 ಜಡೆಗಳ ರೋಲ್ ಮಾಡಿ ಅದಕ್ಕೆ ಗಂಟು ಹಾಕಿ ಸ್ಪ್ರೇ ಮಾಡಿ. ಇದು ಚೆನ್ನಾಗಿ ಸೆಟ್ ಆದಾಗ ಈ ರೋಲ್ ಜಡೆಯ ಕೆಳಗೆ ಆ್ಯಕ್ಸೆಸರೀಸ್ ಸಿಕ್ಕಿಸಿ.