ಮೇಕಪ್‌ ಹೇಗೆ ಮಾಡಿಕೊಳ್ಳಬೇಕೆಂದರೆ ಅದು ಕುರೂಪಿ ಎನಿಸಬಾರದು. ನಿಮಗೆ ನ್ಯಾಚುರಲ್ ಲುಕ್ಸ್ ಕೊಟ್ಟು ನಿಮ್ಮ ಸೌಂದರ್ಯಕ್ಕೆ ಇನ್ನಷ್ಟು ಕಾಂತಿ ತರುವಂತಿರಬೇಕು. ಆಗಲೇ ಜನ ನಿಮ್ಮ ಸೌಂದರ್ಯವನ್ನು ಹೊಗಳತೊಡಗುವರು.

ಕಡಿಮೆ ಮೇಕಪ್‌ನಲ್ಲೂ ಸಹ ನೀವು ಸ್ಪೆಷಲ್ ಆಗಿ ಕಾಣಬಹುದು. ನೋಡಿದವರು ನೀವು ಮೇಕಪ್‌ ಮಾಡಿಕೊಂಡಿದ್ದೀರೋ ಇಲ್ಲವೋ ಎಂದು ಯೋಚಿಸತೊಡಗುತ್ತಾರೆ.

ಫೌಂಡೇಶನ್

ಬ್ಲೆಂಡೆಡ್‌ ಲುಕ್ಸ್ ಗಾಗಿ ಲಿಕ್ವಿಡ್‌ ಅಥವಾ ಸ್ಟಿಕ್‌ ಫೌಂಡೇಶನ್‌ನ್ನು ಸ್ಪಂಜಿನ ಬದಲು ಬೆರಳಿನಿಂದ ಹಚ್ಚಿ. ಹೀಗೆ ಮಾಡುವುದರಿಂದ ಮುಖದ ಮೇಲೆ ಫೌಂಡೇಶನ್‌ ಚೆನ್ನಾಗಿ ಬ್ಲೆಂಡ್‌ ಆಗುತ್ತದೆ.

ಒಂದು ವೇಳೆ ಲಿಕ್ವಿಡ್‌ ಫೌಂಡೇಶನ್‌ ಉಪಯೋಗಿಸುತ್ತಿದ್ದರೆ, ಉಪಯೋಗಿಸುವ ಮೊದಲು ಬಾಟಲ್‌ನ್ನು ಚೆನ್ನಾಗಿ ಕುಲುಕಬೇಕು. ಹೀಗೆ ಮಾಡುವುದರಿಂದ ಕೆಳಗೆ ಸೆಟ್‌ ಆದ ಬಣ್ಣ ಸಮನಾಗಿ ಹರಡುತ್ತದೆ, ಮುಖ ಪ್ಯಾಚಿಯಾಗಿ ಕಾಣುವುದಿಲ್ಲ.

ಕನ್ಸೀಲರ್

ಸಾಮಾನ್ಯವಾಗಿ ಮೇಕಪ್‌ ರೂಲ್ಸ್ ‌ಪ್ರಕಾರ, ಕಂಗಳು ಅಥವಾ ತುಟಿಗಳಲ್ಲಿ ಒಂದಕ್ಕೆ ಮಾತ್ರ ಹೆವಿ ಮೇಕಪ್‌ ಮಾಡಬೇಕು. ನಿಮ್ಮ ಕಂಗಳು ಸುಮಾರಾಗಿವೆ ಎನಿಸಿದರೆ, ಅದಕ್ಕೆ ಹೆವಿ ಮೇಕಪ್‌ ನೀಡಿ ಇನ್ನಷ್ಟು ಸುಂದರವಾಗಿ ಕಂಗೊಳಿಸುವಂತೆ ಮಾಡಬಹುದು.

ಎಲ್ಲಕ್ಕೂ ಮೊದಲು ಕಂಗಳ ಅಕ್ಕಪಕ್ಕದ ಕಪ್ಪು ವೃತ್ತಗಳು ಹಾಗೂ ತೆಳು ಗೆರೆಗಳನ್ನು ಅಡಗಿಸಲು, ತ್ವಚೆಗೆ ಹೊಂದಿಕೊಳ್ಳುವ ಕನ್ಸೀಲರ್‌ ಮತ್ತು ಫೌಂಡೇಶನ್‌ ಬಳಸಿರಿ.

ಐ ಮೇಕಪ್‌ ಬಹಳ ಹೊತ್ತು ಉಳಿಯಬೇಕಾದರೆ, ಅದಕ್ಕಾಗಿ ಎಲ್ಲಕ್ಕೂ ಮೊದಲು ಐ ಲಿಡ್‌ ಮೇಲೆ ಕನ್ಸೀಲರ್‌ ಹಚ್ಚಿರಿ, ಆಗ ಕನ್ಸೀಲರ್‌ ಸೆಟ್‌ ಆಗುತ್ತದೆ. ಈ ತರಹ ಮೇಕಪ್‌ನ ಬೇಸ್‌ ರೆಡಿಯಾಗುತ್ತದೆ, ಅದು ಬಹಳ ಹೊತ್ತು ಹಾಗೇ ಉಳಿಯುತ್ತದೆ.

ಲಿಪ್ಗ್ಲಾಸ್

ನೀವು ನಿಮ್ಮ ತುಟಿಗಳನ್ನು ಆಕರ್ಷಕಗೊಳಿಸಲು ಬಯಸಿದರೆ ಲಿಪ್‌ ಗ್ಲಾಸ್‌ ಸದಾ ನ್ಯಾಚುರಲ್ ಕಲರ್‌ಗೆ ಹತ್ತಿರವಾಗಿರುವಂಥದ್ದನ್ನೇ ಆರಿಸಿ. ಇದನ್ನು ತಿಳಿಯುವುದಕ್ಕಾಗಿ, ಲಿಪ್‌ ಗ್ಲಾಸ್‌ನ ಯಾವ ಬಣ್ಣ ನಿಮಗಿಷ್ಟವೋ ಅದನ್ನು ತುಟಿಗಳಿಗೆ ಲಘುವಾಗಿ ತೀಡಿ ಅದು ಹೊಂದುತ್ತದೆಯೇ ಎಂದು ಪರೀಕ್ಷಿಸಿ. ಇದು ನಿಮ್ಮ ತುಟಿಗಳ ಬಣ್ಣಕ್ಕಿಂತ 1-2 ಶೇಡ್ಸ್ ಡೀಪ್‌ ಆಗಿದ್ದರೆ ಆಗಲೂ ಸುಂದರವಾಗಿರುತ್ತದೆ.

ಕಂಗಳ ಮೇಕಪ್

ಕಂಗಳ ಮೇಕಪ್‌ ಡಿಫೈನ್‌ ಮಾಡಲು, ಶಿಮರ್‌ ಮತ್ತು ಮೆಟಾಲಿಕ್‌ ಲೈನರ್‌ ಬಳಸಿ ನೋಡಿ.

ಲುಕ್ಸ್ ಗೆ ಕಂಪ್ಲೀಟ್‌ ಟಚ್‌ ನೀಡಲು ಐ ಶ್ಯಾಡೋಸ್‌ನ ಸಾಫ್ಟ್ ಶೇಡ್ಸ್ ಬಳಸಿರಿ. ಶ್ಯಾಮಲ ಸೌಂದರ್ಯಕ್ಕೆ ಮೆಟಾಲಿಕ್‌ ಗೋಲ್ಡ್, ಕಾಪರ್‌, ಬ್ರೌನ್‌ ಮುಂತಾದ ಶೇಡ್ಸ್ ಚೆನ್ನಾಗಿ ಸೂಟ್‌ ಆಗುತ್ತದೆ. ನೀವು ತಿಳಿ ಬಣ್ಣದವರಾಗಿದ್ದರೆ ಮೆಟಾಲಿಕ್‌ ಬ್ಲೂ ಮತ್ತು ಗ್ರೀನ್ ಕಲರ್‌ ಬಳಸಬೇಕು.

ನೀವು ಬ್ರೈಟ್‌ ಶೇಡ್ಸ್ ನ ಐ ಶ್ಯಾಡೋ ಆರಿಸಿದ್ದರೆ, ಬಾಕಿ ಮೇಕಪ್‌ ಪ್ಲೇನ್‌ಸಿಂಪಲ್ ಆಗಿರಲಿ.

ಐ ಶ್ಯಾಡೋ ಆರಿಸುವಾಗ, ಅದು ನಿಮ್ಮ ಕಲರ್‌ಗೆ ಸೂಟ್‌ ಆಗುವಂತಿರಲಿ. ಆದರೆ ಪರ್ಫೆಕ್ಟ್ ಮ್ಯಾಚ್‌ ಆಗುವಂಥ ಬಣ್ಣಗಳು ಬೇಡ. ಏಕೆಂದರೆ ಆಗ ಎಲ್ಲರ ಕಂಗಳು ನಿಮ್ಮ ಕಣ್ಣ ಮೇಲಿರದು.

ನಿಮ್ಮ ಕಂಗಳು ಗ್ರೀನ್‌ ಅಥವಾ ಬ್ಲೂ ಇದ್ದರೆ, ಡೀಪ್‌ ಪ್ಲಮ್ ಅಥವಾ ಲ್ಯಾಕ್‌ ಶೇಡ್ಸ್ ನಿಮಗೆ ಸೂಟ್‌ ಆಗುತ್ತದೆ. ಬ್ರೌನ್‌ ಐಸ್‌ ಜೊತೆ ಸಾಫ್ಟ್ ಗೋಲ್ಡ್ ಅಥವಾ ಕಾಪರ್‌ ಟೋನ್ಸ್ ಬಳಸಿ ನೋಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ