ಸಮಾರಂಭ ಯಾವುದೇ ಇರಲಿ, ಪಾರ್ಟಿಗಳಂತೂ ಇದ್ದೇ ಇರುತ್ತವೆ. ಈ ಪಾರ್ಟಿಗಳಿಗಾಗಿ ಮಹಿಳೆಯರು ತಮ್ಮ ಔಟ್‌ ಫಿಟ್‌ ಜೊತೆ ಜೊತೆಗೆ ಮೇಕಪ್‌ನ್ನು ಕೂಡ ಹಗಲು ಹಾಗೂ ರಾತ್ರಿಯನ್ನು ಗಮನದಲ್ಲಿಟ್ಟುಕೊಂಡು ಬದಲಿಸಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸೌಂದರ್ಯತಜ್ಞರು ಇಲ್ಲಿ ವಿವರಿಸಿದ್ದಾರೆ.

ಹಗಲು ಪಾರ್ಟಿ ಮೇಕಪ್

ಇದರ ಆರಂಭವನ್ನು ಮುಖದ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸರ್‌ ಮುಖಾಂತರ ಮಾಡಿ. ಇದರಿಂದ ತ್ವಚೆ ಮೃದುತ್ವ ಪಡೆದುಕೊಳ್ಳುತ್ತದೆ. ಜೊತೆಗೆ ಮೇಕಪ್‌ಗಾಗಿ ಒಳ್ಳೆಯ ಕ್ಯಾನ್ವಾಸ್‌ ಕೂಡ ತಯಾರಾಗುತ್ತದೆ.

ನಂತರ ನಿಮ್ಮ ತ್ವಚೆಯನ್ನು ಗಮನದಲ್ಲಿಟ್ಟುಕೊಂಡು ಸ್ಕಿನ್‌ ಪ್ರೈಮರ್‌ನ್ನು ಆಯ್ದುಕೊಳ್ಳಿ. ಸ್ವಲ್ಪ ಪ್ರೈಮರ್‌ನ್ನು ಬೆರಳಿಗೆ ಹಚ್ಚಿಕೊಂಡು ಮುಖದ ತುಂಬ ಪಸರಿಸಿ. ನಿಮ್ಮ ತ್ವಚೆ ಶುಷ್ಕವಾಗಿದ್ದರೆ ಕ್ರೀಮ್ ಬೇಸ್ಡ್ ಪ್ರೈಮರ್‌ ತೆಗೆದುಕೊಳ್ಳಿ. ನಿಮ್ಮದು ತೈಲ ತ್ವಚೆಯಾಗಿದ್ದರೆ ಮ್ಯಾಟ್‌ ಫಿನಿಶ್‌ ಇರುವ ಪ್ರೈಮರ್‌ ತೆಗೆದುಕೊಳ್ಳಿ.

ಈಗ ಗ್ಲೋಯಿಂಗ್‌ ಲುಕ್‌ ಕೊಡಲು ಫೌಂಡೇಶನ್‌ ಲೇಪಿಸಿ.

ಮುಖದ ಕಲೆಗಳು ಹಾಗೂ ಕಣ್ಣಿನ ಕೆಳಭಾಗದ ಕಪ್ಪು ಕಲೆಗಳನ್ನು ಮರೆಮಾಚಲು ಕನ್ಸೀಲರ್‌ನ್ನು ಉಪಯೋಗಿಸಿ.

ಕೆನ್ನೆಗಳ ಮೇಲೆ ಬ್ಲಶರ್‌ ಉಪಯೋಗಿಸಬಹುದು. ಆದರೆ ಇದನ್ನು ಬ್ರಾಂಜರ್‌ನಿಂದ ಬ್ಲೆಂಡ್‌ ಮಾಡಲು ಮರೆಯಬೇಡಿ.

Party-mekup-2

ಕಣ್ಣುಗಳಿಗಾಗಿ ಐ ಶ್ಯಾಡೋ ಆಯ್ಕೆ ಮಾಡುವ ಸಮಯದಲ್ಲಿ ನಿಮ್ಮ ಔಟ್‌ ಫಿಟ್‌ನ ಬಣ್ಣವನ್ನು ಗಮನದಲ್ಲಿಟ್ಟುಕೊಳ್ಳಿ. ಅಂದಹಾಗೆ ಹಗಲು ಹೊತ್ತಿನ ಪಾರ್ಟಿಗಾಗಿ ಬ್ಲೂ, ಪಿಂಕ್‌, ಬ್ರೌನ್‌ನಂತಹ ಬಣ್ಣಗಳು ಸೂಕ್ತವಾಗಿರುತ್ತವೆ.

ಕಣ್ಣುಗಳಿಗೆ ಮೇಕಪ್‌ ಮಾಡುವ ಮುಂಚೆ ಐ ಲಿಡ್‌ ಮೇಲೆ ಸ್ವಲ್ಪ ಕನ್ಸೀಲರ್‌ ಮತ್ತು ಲೂಸ್‌ ಪೌಡರ್‌ ಲೇಪಿಸಿ.

ಕಣ್ಣುಗಳಿಗೆ ಬ್ಲ್ಯಾಕ್‌ ಔಟ್‌ ಲೈನ್‌ ನೀಡಲು ಔಟ್‌ ಲೈನರ್‌ ಲೇಪಿಸಿ.

ತುಟಿಗಳಿಗೆ ನ್ಯಾಚುರಲ್ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚಿ. ಮೇಲ್ಭಾಗದಲ್ಲಿ ಟ್ರಾನ್ಸ್ ಪರೆಂಟ್‌ ಗ್ಲಾಮರ್‌ ಹಚ್ಚಿ.

ಸಂಜೆಯ ಪಾರ್ಟಿಗಾಗಿ

ಸಂಜೆ ಪಾರ್ಟಿಯ ಮೇಕಪ್‌ನ್ನು ಕೂಡ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸರ್‌ನಿಂದಲೇ ಮಾಡಲಾಗುತ್ತದೆ.

ಅದರ ಬಳಿಕ ನಿಮ್ಮ ತ್ವಚೆಯ ಟೋನನ್ನು ಗಮನದಲ್ಲಿಟ್ಟುಕೊಂಡು ಪ್ರೈಮರ್‌ನ್ನು ಆಯ್ದುಕೊಳ್ಳಿ.

ಫೌಂಡೇಶನ್‌ನನ್ನು ಯಾವಾಗಲೂ ಕುತ್ತಿಗೆಯತನಕ ಲೇಪಿಸಿ. ಏಕೆಂದರೆ ಮುಖ ಹಾಗೂ ಕುತ್ತಿಗೆಯ ಬಣ್ಣ ಒಂದೇ ರೀತಿಯಾಗಿರುವಂತೆ ಕಾಣಿಸಲಿ.

ಕಾಂಪ್ಯಾಕ್ಟ್ ಪೌಡರ್‌ನಿಂದ ಬೇಸ್‌ ತಯಾರಿಸಿಕೊಳ್ಳಿ.

ಚೀಕ್‌ ಬೋನ್‌ನ್ನು ಹೈಲೈಟ್‌ ಮಾಡಲು ಬ್ಲಶರ್‌ನ್ನು ಉಪಯೋಗಿಸಿ.

ಬ್ಲ್ಯಾಕ್‌ ಐ ಲೈನರ್‌ನಿಂದ ಕಣ್ಣುಗಳಿಗೆ ಐ ಲೈನರ್‌ ಕೊಟ್ಟು ಬಳಿಕ ಬ್ಲ್ಯಾಕ್‌ ಮತ್ತು ಗ್ರೇ ಕಲರ್‌ನ ಐ ಶ್ಯಾಡೋ ಲೇಪಿಸಿ. ಅಂದಹಾಗೆ ಸಂಜೆಯ ಪಾರ್ಟಿಗೆ ಗೋಲ್ಡನ್‌ ಹಾಗೂ ಬ್ರಾಂಜ್‌ಕಲರ್‌ ಹೆಚ್ಚು ಸೂಕ್ತ ಎನಿಸುತ್ತದೆ.

ರೆಪ್ಪೆಗಳಿಗೆ ಬ್ಲ್ಯಾಕ್‌ ಮಸ್ಕರಾದಿಂದ ಕಲರ್‌ ಮಾಡಿ.

ತುಟಿಗಳಿಗೆ ಆರೆಂಜ್‌ ಕಲರ್‌ನ ಲಿಪ್‌ ಲೈನರ್‌ ಅಥವಾ ಆರೆಂಜ್‌ ವರ್ಣದ ಲಿಪ್‌ಸ್ಟಿಕ್‌ ಲೇಪಿಸಿ.

ಮೇಲ್ಭಾಗದಲ್ಲಿ ಟ್ರಾನ್ಸ್ ಪರೆಂಟ್‌ ಗ್ಲಾರ್‌ ಹಚ್ಚಿ.

- ಸರಳಾ ಮೂರ್ತಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ