ನಿಮ್ಮ ತನುಮನಗಳ ಸೌಂದರ್ಯದಲ್ಲಿ ಯಾವಾಗಲೂ ಚಿರಯೌವನ ಉಳಿಯುವಂತೆ ಮಾಡಿಕೊಳ್ಳಿ.

ಇಂದಿನ ನಾಗಾಲೋಟದ ಜೀವನದಲ್ಲಿ ಮಹಿಳೆಯರಿಗೆ ತಮ್ಮ ಮೇಲೆ ಗಮನ ಕೊಡುವುದಕ್ಕೂ ಸಮಯ ಇರುವುದಿಲ್ಲ. ನೀವು ನಿಮ್ಮ ಬಗ್ಗೆ ಗಮನ ಕೊಡದಿದ್ದರೆ ನೀವು ಎಷ್ಟೇ ಸೌಂದರ್ಯವತಿಯಾಗಿದ್ದರೂ ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಮಹಿಳೆ ಮೊದಲು ತನ್ನನ್ನು ಪ್ರೀತಿಸುವುದರ ಅಗತ್ಯವಿದೆ. ದಿನದಲ್ಲಿ ನೀವು ನಿಮಗಾಗಿ 10 ನಿಮಿಷ ಬಿಡುವು ಮಾಡಿಕೊಂಡು, ನಿಮ್ಮನ್ನು ಶಾಂತವಾಗಿಟ್ಟುಕೊಂಡರೆ ನಿಮ್ಮ ಚರ್ಮ ಮತ್ತು ಮುಖ ಯಾವಾಗಲೂ ಅರಳಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಬಹಳ ಅಗತ್ಯ. ಇದು ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದರೆ ಸಾಧ್ಯವಾಗುತ್ತದೆ. ನೀವು ಇದ್ದಕ್ಕಿದ್ದ ಹಾಗೆ ರೂಪತಿಯಾಗುತ್ತೀರ ಅಥವಾ ಮೇಕಪ್‌ ಮಾಡಿ ಯಾರಾದರೂ ನಿಮ್ಮನ್ನು ಸುಂದರಿಯಾಗಿ ಕಾಣಿಸುವಂತೆ ಮಾಡುತ್ತಾರೆ ಅಂತ ಅಂದುಕೊಂಡಿದ್ದೀರಾ? ಈ ತರಹ ಏನೂ ಆಗುವುದಿಲ್ಲ. ನೀವು ನಿರಂತರಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಬಂದಹಾಗೆ ನಿಮಗಿಷ್ಟವಾದ ರೀತಿಯಲ್ಲಿ ಹಾಯಾಗಿ ಜೀವಿಸುವ ಸಲುವಾಗಿ ನಿಮಗಾಗಿ ಸಮಯವನ್ನು ಮಾಡಿಕೊಳ್ಳಬೇಕು. ಈ ಸಮಯ ಕೇವಲ ನಿಮ್ಮದಾಗಿರಬೇಕು. ಸಂತೋಷವಾಗಿರುವುದು ಒಂದು ಅಭ್ಯಾಸವಾಗಿದೆ. ನೀವು ಇದನ್ನು ಬೆಳೆಸಿಕೊಳ್ಳಬೇಕು. ಒಳಗಿನ ಸಂತೋಷವೇ ಮುಖದ ಮೇಲೆ ಹೊಳೆಯುತ್ತದೆ.

ಸ್ವಲ್ಪ ಸಮಯ ನಿಮಗಾಗಿ

ನೀವು ಬಹಳ ವ್ಯಸ್ತರಾಗಿದ್ದು ನಿಮಗೆ ಯಾವುದಾದರೂ ಪಾರ್ಟಿ ಅಥವಾ ಸಮಾರಂಭಕ್ಕೆ ಹೋಗಬೇಕಾಗಿದೆ. ಆಗ ನೀವು ಕೆಲವು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಾಗುತ್ತದೆ.

ಮೊದಲು ಫ್ರೆಶ್‌ ಆಗಲು ಸ್ನಾನ ಮಾಡಿ. ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ನಂತರ ತಣ್ಣೀರಿನಿಂದ ಮಾಡಿ. ಸ್ನಾನ ಮಾಡುವ ನೀರಿನಲ್ಲಿ ಯೂಡಿಕೊಲೋನ್‌ ನ ಕೆಲವು ಹನಿಗಳನ್ನು ಹಾಕಿ. ಇದರಿಂದ ನೀವು ಬಹಳ ತಾಜಾತನ ಅನುಭವಿಸುವಿರಿ.

ಸ್ನಾನ ಮಾಡುವುದು ಸಾಧ್ಯವಾಗದಿದ್ದರೆ ಟವೆಲ್ ‌ಗೆ ಕೆಲವು ಯೂಡಿಕೊಲೋನ್‌ ಹನಿಗಳನ್ನು ಹಾಕಿ, ಕಣ್ಣುಗಳನ್ನು ಮುಚ್ಚಿಕೊಂಡು ಅವುಗಳ ಮೇಲೆ ಟವೆಲ್ ‌ನ್ನು 5 ನಿಮಿಷಗಳ ಕಾಲ ಇಟ್ಟುಕೊಳ್ಳಿ. ಹೀಗೆ ಮಾಡುವಾಗ ಆಳವಾಗಿ ಉಸಿರೆಳೆದುಕೊಳ್ಳಿ. 6 ಸಲ ಉಸಿರುಬಿಟ್ಟು ಮತ್ತು 6 ಸಲ ಉಸಿರನ್ನು ಎಳೆದುಕೊಂಡು ಉಸಿರಾಟವನ್ನು ವ್ಯವಸ್ಥಿತಗೊಳಿಸಿ.

ಟಬ್‌ ನಲ್ಲಿ ನಸು ಬೆಚ್ಚಗಿನ ನೀರು ತುಂಬಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಾಲುಗಳನ್ನು ಆ ನೀರಿನಲ್ಲಿ ಇಳಿಬಿಟ್ಟು ಸ್ವಲ್ಪ ಹೊತ್ತು ಕುಳಿತಿರಿ. ಇದರಿಂದ ಆಯಾಸ ಪೂರ್ಣವಾಗಿ ದೂರವಾಗುತ್ತದೆ.

ನಂತರ ತಣ್ಣೀರು ಅಥವಾ ಮಂಜುಗಡ್ಡೆ ತುಂಡಿನಿಂದ ಮುಖವನ್ನು ಮಸಾಜ್‌ ಮಾಡಿಕೊಳ್ಳಿ ಅಥವಾ ಕಣ್ಣುಗಳನ್ನು ಮುಚ್ಚಿಕೊಂಡು ಮುಖದ ಮೇಲೆ ನೀರನ್ನು ಚಿಮುಕಿಸಿಕೊಳ್ಳಿ.

ಉಡುಪಿನ ಆಯ್ಕೆ

ಹಾಕಿಕೊಂಡಾಗ ನಿಮಗೆ ಆರಾಮ ಎನಿಸುವಂತಹ ಉಡುಪನ್ನೇ ಆಯ್ದುಕೊಳ್ಳಿ. ನೀವು ಯಾವ ಬಣ್ಣದ ಬಟ್ಟೆ ಹಾಕಿಕೊಳ್ಳಲು ಇಷ್ಟಪಡುತ್ತೀರೋ ಅದೇ ಬಣ್ಣದ ಉಡುಪನ್ನು ಧರಿಸಿ. ಜೊತೆಗೆ ಆರಾಮ ಎನಿಸುವ ಚಪ್ಪಲಿಗಳು ಅಥವಾ ಹಿಮ್ಮಡಿ ಇವರು ಸ್ಯಾಂಡಲ್ ಗಳನ್ನು ಆಯ್ದುಕೊಳ್ಳಿ. ಅನುಕೂಲದ ಜೊತೆ ಗ್ಲಾಮರ್‌ ಯಾವಾಗಲೂ ಯಶಸ್ಸು ಪಡೆಯುತ್ತದೆ. ನೀವು ಬಹಳ ಚೆನ್ನಾಗಿರುವ ಉಡುಗೆ ಧರಿಸಿದ್ದೀರಿ. ಆದರೆ ಅದು ನಿಮಗೆ ಆರಾಮ ಎನಿಸುತ್ತಿಲ್ಲವೆಂದರೆ ನೀವು ಕೂಡ ಗ್ಲಾಮರಸ್‌ ಆಗಿ ಕಾಣುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ