ನಿಮ್ಮ ಕೂದಲು ಸಹ ನಿರ್ಜೀವ, ಡ್ರೈ ಯಾ ಉದುರುತ್ತಿದ್ದರೆ, ಅಂಥ ಅನಾರೋಗ್ಯಕರ ಕೂದಲನ್ನು ಸಶಕ್ತಗೊಳಿಸಲು ಇಲ್ಲಿವೆ ಹಲವು ಸಲಹೆಗಳು…..

ಯಾವ ಹೆಣ್ಣಿಗಾದರೂ ಸರಿ, ತನ್ನ ಕೂದಲು ಕಡು ಕಪ್ಪಾಗಿ, ನೀಳ, ದಟ್ಟ, ಒತ್ತಾಗಿ ಕಂಡುಬರಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ನಿಮ್ಮ ಕೂದಲನ್ನು ತುಸು ಪ್ರೀತಿಯಿಂದ ಆರೈಕೆ ಮಾಡಿ, ಸೂಕ್ತ ಪ್ರಾಡಕ್ಟ್ಸ್ ಬಳಸಿರಿ. ಕೆರಾಟಿನ್‌ಆರ್ಗನ್‌ ಆಯಿಲ್ ‌ಎರಡರ ಕಾಂಬೋ ಈ ನಿಟ್ಟಿನಲ್ಲಿ ಅತ್ಯುತ್ತಮ ಆಯ್ಕೆ. ಇದು ನಿಮ್ಮ ಕೂದಲನ್ನು ಸುದೀರ್ಘ ಕಾಲ ಮೇಲಿನ ಎಲ್ಲಾ ಗುಣಗಳೊಂದಿಗೆ ನೀವು ಹೆಮ್ಮೆ ಪಡುವಂತೆ ಆರೋಗ್ಯಕರವಾಗಿ ಇಡುತ್ತದೆ.

ನಿಮ್ಮ ಕೂದಲು ಸಹ ನಿರ್ಜೀವ, ಡ್ರೈ, ಸಿಕ್ಕುಸಿಕ್ಕಾಗಿ, ಸೀಳುತುದಿ ಹೊಂದಿ ಆಗಾಗ ಉದುರುತ್ತಿದ್ದರೆ, ಅಗತ್ಯವಾಗಿ ನೀವು ಉತ್ತಮ ಪ್ರಾಡಕ್ಟ್ಸ್ ಬಳಸಿ ಇದನ್ನು ರಿಪೇರಿ ಮಾಡಬೇಕು. ಆ ಪ್ರಾಡಕ್ಟ್ಸ್ ಆಂತರಿಕವಾಗಿ ನಿಮ್ಮ ಕೂದಲನ್ನು ಸಶಕ್ತಗೊಳಿಸುವಂತೆ ಇರಬೇಕು, ಜೊತೆಗೆ ಮೇಲಿನ ಎಲ್ಲಾ ಗುಣಗಳನ್ನೂ ಒದಗಿಸಬೇಕು. ಹೀಗಾಗಿ ಕೆರಾಟಿನ್‌ಆರ್ಗನ್‌ ಆಯಿಲ್ ‌ಕಾಂಬೋ ಇಂಥ ಕೂದಲಿಗೆ ಹೊಸ ಆರೋಗ್ಯ ತಂದುಕೊಡಲಿದೆ, ಹೀಗಾಗಿ ಇದು ಸೂಪರ್‌ ಕಾಂಬೋ ಎನಿಸಿದೆ. ಇವೆರಡೂ ಜೊತೆಯಲ್ಲಿ ಬೆರತು, ಅನಾರೋಗ್ಯಕರ ಕೂದಲಿನ ಆರೈಕೆಗೆ ತೊಡಗಿ, ಯಾವುದೇ ಸೈಡ್‌ ಎಫೆಕ್ಟ್ಸ್ ಇಲ್ಲದೆ, ಕೂದಲಿಗೆ ಜೀವ ತುಂಬುತ್ತದೆ.

ಕೆರಾಟಿನ್‌ ಅಸಲಿಗೆ ಒಂದು ಬಗೆಯ ಪ್ರೋಟೀನ್‌ ಆಗಿದ್ದು, ನಮ್ಮ ಕೂದಲು, ಉಗುರು, ಚರ್ಮದಲ್ಲಿ ನೈಸರ್ಗಿಕವಾಗಿಯೇ ಬೆರೆತಿರುತ್ತದೆ. ಆದರೆ ಹೀಟ್‌ ಸ್ಟೈಲಿಂಗ್‌, ಕಲರಿಂಗ್‌, ಪೊಲ್ಯೂಶನ್‌, ಸ್ಟ್ರೆಸ್‌ ಕಾರಣದಿಂದ ನಮ್ಮ ಕೂದಲಿನ ನ್ಯಾಚುರಲ್ ಕೆರಾಟಿನ್‌ ಕ್ರಮೇಣ ಕಡಿಮೆ ಆಗತೊಡಗುತ್ತದೆ.

ಕೂದಲಿನಲ್ಲಿ ಈ ತರಹ ಕೆರಾಟಿನ್‌ ಕಡಿಮೆ ಆದಾಗ ಅದು ಡ್ರೈ ಆಗಿ ನಿರ್ಜೀವ ಆಗಿಬಿಡುತ್ತದೆ. ಸಿಕ್ಕು ಹೆಚ್ಚಾಗಿ, ಸೀಳುತುದಿ ಹೆಚ್ಚಿ ಬೇಗ ಉದುರತೊಡಗುತ್ತದೆ. ಫ್ರಿಝಿ ಆಗಿಬಿಟ್ಟರೆ ಮತ್ತೊಂದು ರಗಳೆ. ಹೀಗಾದಾಗ ಹೊರಗಿನಿಂದ ನಾವು ಕೆರಾಟಿನ್‌ ಅಂಶ ಒದಗಿಸಿದರೆ, ಅದಕ್ಕೆ ಮರುಜೀವ ಮೂಡುತ್ತದೆ. ಆಗ ಕೂದಲು ಸ್ಮೂತ್‌, ಸ್ಟ್ರಾಂಗ್‌, ಒತ್ತಾಗಿ, ಹಿತಕರ ಎನಿಸುತ್ತದೆ.

ಆರ್ಗನ್‌ ಆಯಿಲ್ ‌ನ ಮಹತ್ವ : ಆರ್ಗನ್‌ ಆಯಿಲ್ ‌ನ್ನು `ಲಿಕ್ವಿಡ್‌ ಗೋಲ್ಡ್’ ಎನ್ನುತ್ತಾರೆ. ಇದು ಮೊರ್ಯಾಕ್ಕೋ ದೇಶದಲ್ಲಿನ ಆರ್ಗನ್‌ ಟ್ರೀಯ ಬೀಜಗಳಿಂದ ತೆಗೆದ ತೈಲ. ಇದರಲ್ಲಿ ವಿಟಮಿನ್‌, ಆ್ಯಂಟಿ ಆಕ್ಸಿಡೆಂಟ್ಸ್, ಫ್ಯಾಟಿ ಆ್ಯಸಿಡ್ಸ್ ಅಡಗಿದ್ದು ಕೂದಲಿಗೆ ಆಳವಾದ ಪೋಷಣೆ ನೀಡುತ್ತದೆ. ಇದರಿಂದ ಕೂದಲು ಸಾಫ್ಟ್ ಶೈನಿ ಆಗುತ್ತದೆ. ಸ್ಕಾಲ್ಪ್ ನ್ನು ಮಾಯಿಶ್ಚರೈಸ್‌ ಗೊಳಿಸುತ್ತದೆ. ಡ್ರೈನೆಸ್‌, ಡ್ಯಾಂಡ್ರಫ್‌ ನಿಂದ ರಕ್ಷಿಸುತ್ತದೆ. ಹೀಟ್‌ಮತ್ತು ಡ್ಯಾಮೇಜ್‌ ನಿಂದ ಕಾಪಾಡುತ್ತದೆ. ಸೀಳುತುದಿಯ ಸಮಸ್ಯೆ ದೂರಾಗುತ್ತದೆ.

ಕೆರಾಟಿನ್‌ ಕೂದಲಿನ ಆಂತರಿಕ ಒಡಕುಗಳನ್ನು ಸರಿಪಡಿಸುತ್ತದೆ. ಆರ್ಗನ್‌ ಆಯಿಲ್ ‌ಹೊರಭಾಗದಿಂದ ಕೂದಲಿನ ಮೇಲೆ ಕೋಟ್ ಆಗಿ, ಮೃದು, ಸಿಲ್ಕಿ ಹೆಲ್ದಿ ಆಗಿಸುತ್ತದೆ. ಈ ಡಬ್ಬಲ್ ಆ್ಯಕ್ಷನ್‌ ನಿಂದ ಕೂದಲು ಅತ್ಯಾಕರ್ಷಕವಾಗಿ ಕಾಣಿಸುವುದೇ ಅಲ್ಲದೆ, ಆಂತರಿಕವಾಗಿ ಸಶಕ್ತಗೊಳ್ಳುತ್ತದೆ. ಕೂದಲಿನ ಬೌನ್ಸ್, ಶೈನ್‌, ಸ್ಟ್ರೆಂತ್‌ ಎಲ್ಲವೂ ಮರಳಿ ಬರುತ್ತದೆ.

ಬಳಸುವುದು ಹೇಗೆ? : ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೆರಾಟಿನ್‌ + ಆರ್ಗನ್‌ ಆಯಿಲ್ ‌ಅಂಶವುಳ್ಳ ಶ್ಯಾಂಪೂ, ಕಂಡೀಶನರ್‌, ಸೀರಮ್, ಹೇರ್‌ ಮಾಸ್ಕ್ ಬಲು ಸುಲಭ ಲಭ್ಯ. ವಾರದಲ್ಲಿ 2-3 ಸಲ ಈ ಕಾಂಬೋ ಬಳಸಿರಿ. 2-3 ವಾರಗಳ ನಂತರ ಪರಿಣಾಮ ನಿಮಗೆ ಚೆನ್ನಾಗಿ ಗೊತ್ತಾಗುತ್ತದೆ. 2-3 ವಾರಗಳ ಸತತ ಬಳಕೆಯ ನಂತರ, ಮೊದಲ ವಾಶ್‌ ನಲ್ಲೇ ಕೂದಲು ಸಾಫ್ಟ್ ಎನಿಸುತ್ತದೆ, ಹೇರ್‌ ಫಾಲ್ ‌ತಗ್ಗುತ್ತದೆ, 1 ತಿಂಗಳ ಹೊತ್ತಿಗೆ ಕೂದಲಿಗೆ ಹೊಸ ಕಾಂತಿ ಮೂಡುತ್ತದೆ.

ಕಿವಿಮಾತು : ಸಲ್ಫೇಟ್‌ ಫ್ರೀ ಪ್ಯಾರಾಬೇನ್‌ ಫ್ರೀ ಪ್ರಾಡಕ್ಟ್ಸ್ ಮಾತ್ರ ಬಳಸಿರಿ. ಹೇರ್‌ ವಾಶ್‌ ನಂತರ ಕಂಡೀಶನರ್‌ ಬಳಸಲು ಮರೆಯದಿರಿ. ತಿಂಗಳಿಗೆ 1-2 ಸಲ ಡೀಪ್‌ ಕಂಡೀಶನಿಂಗ್‌ ಮಾಡಿಸಿ. ಕೊತ ಕೊತ ಕುದಿವ ನೀರು ಬೇಡ, ಸಾಧಾರಣ ಬಿಸಿ ನೀರು ಸಾಕು.

ನಿಮ್ಮ ಕೂದಲು ಯಾವುದೇ ಬಗೆಯಲ್ಲಿ ಹಾನಿಗೆ ಒಳಗಾಗಿದ್ದರೂ, ಈ ಕಾಂಬೋ ಬಳಸಿ, ನಿಮ್ಮ ಹಾಳಾದ ಕೂದಲಿಗೆ ಮರುಜೀವ ನೀಡಿರಿ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ