ಹಲವಾರು ವರ್ಷಗಳಿಂದ, ಭಾರತೀಯ ಪ್ರಾಂತೀಯ ಭಾಷೆಗಳ ಚಿತ್ರಗಳು, ಹೆಂಗಸರ ಜೀವನದ ಹಲವು ಮಜಲುಗಳನ್ನು ಚಿತ್ರಿಸುವಲ್ಲಿ ಅತಿ ಯಶಸ್ವಿ ಎನಿಸಿವೆ. ಹೆಣ್ಣಿನ ಜೀನನದ ವಿವಿಧ ಘಟ್ಟಗಳು, ಭಾನನೆಗಳು, ಮನೋವೈಜ್ಞಾನಿಕ ಸಿಕ್ಕುಗಳು, ಹೇಳಲಾರದ ಸಂಘರ್ಷಗಳನ್ನು ಅತಿ ಕುಶಲತೆಯಿಂದ ಬಿಂಬಿಸಲ್ಪಟ್ಟಿವೆ. ಈ ರೀತಿ ಪಾತ್ರಗಳ ವೈವಿಧ್ಯಮಯ ಸಂಘರ್ಷ, ಅವರ ವೇದನೆಗಳು, ಅವರ ಜೀವನದ ಅವ್ಯಕ್ತ ರಹಸ್ಯಗಳು, ಮಾನಸಿಕ ಒತ್ತಡಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಿದ್ದರೂ ಏಕೋಭಾವ ಹೊಂದಿವೆ. ಈ ಚಿತ್ರಗಳು ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ, ನಿಜಜೀವನದ ಮೌಲ್ಯಗಳ ಸಾಕ್ಷಾತ್ಕಾರ ಮಾಡಿಸುತ್ತವೆ. ಹೀಗಾಗಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ, ಮರಾಠಿ, ಗುಜರಾತಿ ಭಾಷೆಗಳ ಸೊಗಡನ್ನು ಈ ಚಿತ್ರಗಳಲ್ಲಿ ಗಮನಿಸಬಹುದು. ಇದು ಭಾರತೀಯ ಸಮಾಜದ ಪ್ರತ್ಯಕ್ಷ ಕೈಗನ್ನಡಿ ಎಂದರೂ ಉತ್ಪ್ರೇಕ್ಷಯಲ್ಲ. ಈ ಎಲ್ಲಾ ಭಾಷಾ ಚಿತ್ರಗಳನ್ನೂ ನೋಡಿಯೇ ಸವಿಯಬೇಕು!

 

ಕನ್ನಡ : ಊರಬ್ಬ

02-Kannada-film----OORABBA

ಇತ್ತೀಚಿನ ಅತಿ ಯಶಸ್ವಿ ಚಿತ್ರವಾಗಿ ಗುರುತಿಸಲ್ಪಟ್ಟಿದೆ `ಊರಬ್ಬ.' ಕೌಟುಂಬಿಕ ಪ್ರೇಕ್ಷಕರು ಸೇರಿದಂತೆ ಎಲ್ಲರೂ ಇದನ್ನು ಮೆಚ್ಚಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ 800 ವರ್ಷಗಳ ಇತಿಹಾಸವುಳ್ಳ ಚೌಡೇಶ್ವರಿ ದೇವಿಯ ಗ್ರಾಮೋತ್ಸವ (ಜಾತ್ರೆ)ದ ಹಿನ್ನೆಲೆಯೇ ಇದರ ಕಥಾಹಂದರ. ಹಳ್ಳಿಯ ಅಪ್ಪಟ ಸೊಗಡು, ಸಾಂಸ್ಕೃತಿಕ ಆಯಾಮ ಇಲ್ಲಿನ ಪ್ರಧಾನ ಆಕರ್ಷಣೆ. ಚಿತ್ರದ ಮೇಕಿಂಗ್‌ ಕಂಡು ಬುದ್ಧಿಜೀವಿಗಳು, ಜನಪದ ತಜ್ಞರು ಮುಕ್ತವಾಗಿ ಶ್ಲಾಘಿಸಿದ್ದಾರೆ. ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯನ್ನು ಆಧುನಿಕರಿಗೆ ಪರಿಚಯಿಸುವುದೇ ಚಿತ್ರದ ಗುರಿ.

ಲಕ್ಕಿ ಶಂಕರ್‌ ರ ಮೂಲಕಥೆ, ನಿರ್ದೇಶನ ಚಿತ್ರದ ಜೀವಾಳ. ಪ್ರಮುಖ ಪಾತ್ರದಲ್ಲಿ ನಟಿಸಿ ನಿರ್ಮಾಪಕ ನರೇಶ್‌ ಗೌಡ ಸೈ ಎನಿಸಿದ್ದಾರೆ. ಎಂ.ಡಿ. ಶ್ರೀಧರ್‌ ಚಿತ್ರಕಥೆ, ಎಚ್‌. ವಾಸು ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅಕ್ಷಯ್‌ ರಿಷಬ್‌ ರ ಹಿನ್ನೆಲೆ ಸಂಗೀತ ಚಿತ್ರದ ಗಾಂಭೀರ್ಯ ಹೆಚ್ಚಿಸಿದೆ. ತನಿಷಾ ಕುಪ್ಪಾಂಡ, ಮಿತ್ರಾ, ದೊಡ್ಡಣ್ಣ, ಬಿರಾದರ್‌, ಬಾಲ್ ‌ರಾಜ್‌ ವಾಡಿ, ಸಿದ್ದು, ಮೈಕೋ ನಾಗರಾಜ್‌, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರ ದಂಡೇ ಇದೆ.

ತಮಿಳು : DC

03-Tamil-film---DC

ಇತ್ತೀಚಿನ ಈ ಯಶಸ್ವೀ ತಮಿಳು ಚಿತ್ರ DC ಅಂದ್ರೆ ದೇವದಾಸ್‌/ಚಂದ್ರ, ಕ್ರಿಮಿನಲ್ ಚಟುವಟಿಕೆಗಳ ಕಥಾ ಹಂದರ ಹೊಂದಿದೆ. ದೇವದಾಸ್‌ ತನ್ನ ಗೆಳೆಯರೊಂದಿಗೆ ಗುಂಪು ಕಟ್ಟಿಕೊಂಡು ಗ್ಯಾಂಗ್‌ ವಾರ್‌ ನಡೆಸುತ್ತಿರುತ್ತಾನೆ. ಒಮ್ಮೆ ಪೊಲೀಸರೊಂದಿಗೆ ಹೀಗೆ ತಗಾದೆ ಶುರುವಾಗಿ ಅವರ ಆಯುಧಗಳನ್ನು ವಶಪಡಿಸಿಕೊಂಡು ಗುಲ್ಲೆಬ್ಬಿಸುತ್ತಾನೆ. ಅವರು ಇವನ ಕೌಟುಂಬಿಕ ಜೀವನ ಹಾಳು ಮಾಡುತ್ತಾರೆ. ಹಾಗಾಗಿ ಅಂಥವರ ಕೊಲೆ ಮಾಡುತ್ತಾನೆ. ಅಲ್ಲಿಂದ ಓಡಿಹೋಗಿ ಗೆಳೆಯರೊಂದಿಗೆ ಲಾಡ್ಜ್ ನಲ್ಲಿ ಅಡಗಿ, ಸಂಜನಾಳನ್ನು ಭೇಟಿಯಾಗುತ್ತಾನೆ. ಈ ಹೋರಾಟದಲ್ಲಿ ಇವನ ಸಖಿ ಸಂಜನಾ ಸಾಯುತ್ತಾಳೆ. ಈ ಮಧ್ಯೆ ಸೆಕ್ಸ್ ವರ್ಕರ್‌ ವಾಮಿಕಾ, ಅದೇ ಹೋಟೆಲ್ ‌ರೈಡ್‌ ನಲ್ಲಿ ತಪ್ಪಿಸಿಕೊಳ್ಳುವಾಗ ಅದೇ ಅವಳಿಗೆ ಸಹಾಯ ಮಾಡುತ್ತಾನೆ. ಮುಂದೆ ಹೇಗೆ ಅವರು ಹೋರಾಡಿದರು ಎಂಬುದೇ ಉಳಿದ ಕಥೆ. ನಿರ್ದೇಶಕರಾಗಿ ಗಮನ ಸೆಳೆದಿದ್ದ ಲೋಕೇಶ್‌ ಕನಕರಾಜ್‌ ಇಲ್ಲಿ ನಾಯಕನಾಗಿ ವಿಜೃಂಭಿಸಿದ್ದಾರೆ. ಜೊತೆಗೆ ವಾಮಿಕಾ, ಪಾರ್ವತಿ ಇದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ : ಅರುಣ್‌ ಮಾಥೇಶ್ವರನ್‌. ಸಂಗೀತ : ಅನಿರುದ್ಧ್ ರವಿಚಂದರ್‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ