ಮುಖವನ್ನು ಆಕರ್ಷಕಗೊಳಿಸಲು ನೀವು ಬಹಳಷ್ಟು ಪ್ರಯತ್ನಿಸುತ್ತೀರಿ. ಹೊಸ ಹೊಸ ಸೌಂದರ್ಯ ಪ್ರಸಾಧನಗಳು ಮತ್ತು ಉಪಕರಣಗಳನ್ನು ಉಪಯೋಗಿಸುತ್ತೀರಿ. ಆದರೆ ಸರಿಯಾದ ಮೇಕಪ್‌ ಮಾಡಿಕೊಳ್ಳುವ ವಿಧಾನ ತಿಳಿಯದಿರುವುದರಿಂದ ಏನಾದರೂ ಕೊರತೆ ಉಳಿಯುತ್ತದೆ.

ಕೆಳಗೆ ಕೊಟ್ಟಿರುವ ಮೇಕಪ್‌ ಮಾಡುವ 9 ಮುಖ್ಯ ವಿಧಾನಗಳನ್ನು ಅನುಸರಿಸಿದರೆ ನೀವು ಯಾವುದೇ ಪಾರ್ಟಿಯಲ್ಲೂ ಮಿಂಚಬಹುದು.

ಅಪ್ಲಿಕೇಶನ್

ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಇಡೀ ಮುಖದ ಕವರೇಜ್‌ಗಾಗಿ ಹಣೆ, ಮೂಗು, ಗದ್ದ ಹಾಗೂ ಕೆನ್ನೆಗಳ ಮೇಲೆ ಮಾಯಿಶ್ಚರೈಸರ್‌ನ ಡಾಟ್ಸ್ ಹಚ್ಚಿ. ನಂತರ ಸರ್ಕ್ಯುಲರ್‌ ಮೋಶನ್‌ನಲ್ಲಿ ಬೆರಳುಗಳಿಂದ ಬ್ಲೆಂಡ್‌ ಮಾಡಿ.

ಬ್ಲೆಂಡಿಂಗ್

ನೀವು ಮಾಯಿಶ್ಚರೈಸರ್‌ ಅಥವಾ ಫೌಂಡೇಶನ್‌ ಹಚ್ಚಿ, ಎರಡನ್ನೂ ಚೆನ್ನಾಗಿ ಬ್ಲೆಂಡ್‌ ಮಾಡುವುದು ಅಗತ್ಯ. ಹೀಗೆಯೇ ಐ ಶ್ಯಾಡೋ ಹಚ್ಚುವಾಗ ಬ್ಲೆಂಡಿಂಗ್‌ ವಿಧಾನವನ್ನು ಗಮನಿಸಿ. ಏಕೆಂದರೆ ಕಣ್ಣುಗಳ ಮೇಲೆ ಐ ಶ್ಯಾಡೋ ಲೈನ್‌ಗಳು ಕೆಟ್ಟದಾಗಿ ಕಾಣುತ್ತವೆ.

ಫೌಂಡೇಶನ್

ಬ್ಲೆಂಡಿಂಗ್‌ ಮಾಡುವಾಗ ಮುಖದ ಜೊತೆ ಜೊತೆಗೆ ಕತ್ತನ್ನು ಕವರ್‌ ಮಾಡಲು ಮರೆಯದಿರಿ. ಪ್ರಾಬ್ಲಮ್ ಏರಿಯಾ ಕವರ್‌ ಮುಖದ ಮೇಲಿನ ಕಲೆಗಳು, ಕಪ್ಪು ವರ್ತುಲಗಳು ಮತ್ತು ಮೊಡವೆಗಳ ಗುರುತುಗಳ ಮೇಲೆ ಕನ್ಸೀಲರ್‌ ಹಚ್ಚಿ ಅವನ್ನು ಕವರ್‌ ಮಾಡಿ. ಸಣ್ಣ ಬ್ರಶ್‌ನಿಂದ ಕನ್ಸೀಲರ್‌ನ್ನು ಈ ಜಾಗಗಳ ಮೇಲೆ ಹಾಕಿದ ನಂತರ ಸ್ಕಿನ್‌ ಟೋನ್‌ನೊಂದಿಗೆ ಮ್ಯಾಚಿಂಗ್‌ ಫೌಂಡೇಶನ್‌ ಹಚ್ಚಿ.

ಟ್ರಾನ್ಸ್ ಲೂಸೆಂಟ್ಪೌಡರ್

ಅಪ್ಲಿಕೇಶನ್‌ ಫೌಂಡೇಶನ್‌ ಮತ್ತು ಕನ್ಸೀಲರ್‌ ಹಚ್ಚಿದ ನಂತರ ಬೇಸ್‌ನ್ನು ಲಾಕ್‌ ಮಾಡಲು ಟ್ರಾನ್ಸ್ ಲೂಸೆಂಟ್‌ ಪೌಡರ್‌ನ್ನು ಅಗತ್ಯವಾಗಿ ಉಪಯೋಗಿಸಿ. ಇಲ್ಲದಿದ್ದರೆ ನಿಮ್ಮ ಮುಖ ಚೆನ್ನಾಗಿ ಕಾಣುವುದಿಲ್ಲ. ಟ್ರಾನ್ಸ್ ಲೂಸೆಂಟ್‌ ಪೌಡರ್‌ನ್ನು ಕೈಗಳಿಂದ ಹಗುರವಾಗಿ ಅಥವಾ ಬ್ರಶ್‌ನಿಂದ ಮುಖ ಮತ್ತು ಕತ್ತಿನ ಮೇಲೆ ಒಂದೇ ರೀತಿಯಾಗಿ ಹಚ್ಚಿ.

ಕಣ್ಣುಗಳು ಮತ್ತು ತುಟಿಗಳ ಮೇಕಪ್

ಕಣ್ಣುಗಳನ್ನು ಡಿಫೈನ್‌ ಮಾಡಲು ಐ ಶೇಡ್ಸ್ ನ್ನು ಮಿಕ್ಸ್ ಮ್ಯಾಚ್‌ ಮಾಡಿ ಹಚ್ಚಬಹುದು. ಆದರೆ, ನಿಮ್ಮ ಸೌಂದರ್ಯ ಹೆಚ್ಚಿಸುವ ಶೇಡ್‌ಗಳನ್ನೇ ಆಯ್ಕೆ ಮಾಡಿ. ಏಕೆಂದರೆ ಯಾರದೋ ಐ ಮೇಕಪ್‌ ಮತ್ತು ಲಿಪ್‌ಸ್ಟಿಕ್‌ನ ಶೇಡ್‌ ನಿಮ್ಮ ಮುಖದ ಮೇಲೂ ಸುಂದರವಾಗಿ ಕಾಣಬೇಕೆಂದಿಲ್ಲ.

ಮೇಕಪ್ಟೂಲ್ಸ್

ಮುಖದ ಸೌಂದರ್ಯದಲ್ಲಿ ಕಾಂತಿ ತರಲು ಮೇಕಪ್‌ ಜೊತೆಗೆ ಮೇಕಪ್‌ ಬ್ರಶ್‌ಗಳೂ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಏಕೆಂದರೆ, ಅವುಗಳ ಸಹಾಯದಿಂದಲೇ ಮುಖಕ್ಕೆ ಮೇಕಪ್‌ ಪ್ರಾಡಕ್ಟ್ ಹಚ್ಚಬಹುದಾಗಿದೆ. ಮೇಕಪ್‌ ಬ್ರಶ್‌ನ ಕೂದಲುಗಳು ಮೃದು ನ್ಯಾಚುರಲ್ ಫೈಬರ್‌ನಿಂದ ನಿರ್ಮಾಣವಾಗಿರಬೇಕು ಹಾಗೂ ಮೇಕಪ್‌ ಹಚ್ಚುವಾಗ ಕಿತ್ತುಹೋಗುವಂತಿರಬಾರದು.

ಮೇಕಪ್ಪ್ರಾಡಕ್ಟ್ಸ್

ಯಾವಾಗಲೂ ಬ್ರ್ಯಾಂಡೆಡ್‌ ಕಾಸ್ಮೆಟಿಕ್ಸ್ ಗಳನ್ನೇ ಉಪಯೋಗಿಸಿ. ಯಾವುದೇ ಕಾಸ್ಮೆಟಿಕ್‌ ಪ್ರಾಡೆಕ್ಟ್ ಕೊಳ್ಳುವಾಗ ಅದರ ಮ್ಯಾನುಫ್ಯಾಕ್ಚರಿಂಗ್‌ ಹಾಗೂ ಎಕ್ಸ್ ಪೈರಿ ಡೇಟ್‌ ಅಗತ್ಯವಾಗಿ ನೋಡಿ. ಹರ್ಬಲ್ ಕಾಸ್ಮೆಟಿಕ್‌ ಪ್ರಾಡಕ್ಟ್ ಗಳು ಉಪಯೋಗಿಸುವುದು ಸುರಕ್ಷಿತ.

ಸ್ಕಿನ್ಗೆ ಅನುಗುಣವಾಗಿ

ನಿಮ್ಮ ಸ್ಕಿನ್‌ ಟೋನ್‌ಗೆ ಅನುಗುಣವಾಗಿ ಮೇಕಪ್‌ ಪ್ರಾಡಕ್ಟ್ ಗಳನ್ನು ಆಯ್ಕೆ ಮಾಡಿ. ಅದಕ್ಕೆ ನೀವು ಒಳ್ಳೆಯ ಮೇಕಪ್‌ ಎಕ್ಸ್ ಪರ್ಟ್‌ರಿಂದ ಸಲಹೆ ಪಡೆಯಿರಿ. ಸ್ಕಿನ್‌ ಟೋನ್‌ಗೆ ವಿರುದ್ಧವಾಗಿ ಮಾಡಿದ ಮೇಕಪ್‌ ಸೌಂದರ್ಯವನ್ನು ಹಾಳು ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ