ಹೆಲ್ದಿ ಸ್ಕಿನ್ಬೇಕಿದ್ದರೆ ಸ್ಕ್ರಬಿಂಗ್ ವಿಧಾನಗಳನ್ನು ಅಗತ್ಯ ಅನುಸರಿಸಿ......!

ನೀವು ನಿಮ್ಮ ಮುಖವನ್ನು ಬಹಳ ದಿನಗಳ ಕಾಲ ಗಮನವಿಟ್ಟು ಶುಚಿಗೊಳಿಸದಿದ್ದರೆ, ಚರ್ಮ ಡಲ್ ಆಗುವುದರೊಂದಿಗೆ ಅದರಲ್ಲಿ ಬ್ಲ್ಯಾಕ್‌ ಹೆಡ್ಸ್, ವೈಟ್‌ ಹೆಡ್ಸ್, ಪಿಗ್ಮೆಂಟೇಶನ್‌ ಗಳ ದೂರು ಕಂಡುಬರುತ್ತವೆ. ಹೀಗಾಗಿ ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ ನಲ್ಲಿ ಅಗತ್ಯವಾಗಿ ಸ್ಕ್ರಬಿಂಗ್‌ ಸೇರಿಸಿ. ಆದರೆ ಸ್ಕ್ರಬಿಂಗ್‌ ಮಾಡುವಾಗ ನಾವು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡುತ್ತೇವೆ.

ಅದರಿಂದ ನಮ್ಮ ಚರ್ಮಕ್ಕೆ ತರುಚುಗಾಯ, ಕಟ್ಸ್, ರೆಡ್‌ ನೆಸ್‌, ಉರಿ ಉರಿ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಈ ಕುರಿತು ಕೆಲವು ವಿಷಯಗಳನ್ನು ನೆನಪಿಡಬೇಕು :

ನ್ಯಾಚುರಲ್ ಸ್ಕ್ರಬರ್

ಗಿಡ, ಬೀಜ, ಕಾಯಿ ಹಣ್ಣುಗಳಿಂದ ಆಗುವ ಸ್ಕ್ರಬರ್‌ ನಮ್ಮ ಚರ್ಮಕ್ಕೆ ಬಲು ನೈಸರ್ಗಿಕ ಎನಿಸುತ್ತವೆ. ಕಿವಿ ಬಳಿ ಸ್ಕ್ರಬ್‌ ಮಾಡಲು ಸದಾ ಸಾಫ್ಟ್ ಗ್ರಾನ್ಯುಯೆಲ್ಸ್ ನ್ನು ಬಳಸಿ. ಉದಾ: ವಾಲ್ ‌ನಟ್‌ ಶೆಲ್ ಬಲು ಕಠೋರ ಸ್ಕ್ರಬರ್‌ ಎನಿಸಿದೆ. ಇದನ್ನು ಮೃದು ಚರ್ಮದ ಮೇಲೆ ಜೋರಾಗಿ ಉಜ್ಜಿದರೆ ಸ್ಕಿನ್‌ ಕೆಂಪಾಗುವ ಸಾಧ್ಯತೆಗಳಿವೆ.

ದಾಳಿಂಬೆ, ಪರಂಗಿ ಬೀಜದ ಪುಡಿ, ಕಿತ್ತಳೆ ಸಿಪ್ಪೆಯ ಪುಡಿ ಬಲು ಮೈಲ್ಡ್ ಸ್ಕ್ರಬರ್ಸ್‌ ಎನಿಸಿವೆ. ಇವು ಮುಖವನ್ನು ಕ್ಲೀನ್‌ ಮಾಡುವುದರ ಜೊತೆಗೆ ಯಾವ ಹಾನಿಯನ್ನೂ ಮಾಡುವುದಿಲ್ಲ. ಇವುಗಳ ಬಳಕೆ ಎಲ್ಲಾ ಬಗೆಯ (ನಾರ್ಮಲ್, ಆಯ್ಲಿ, ಡ್ರೈ) ಚರ್ಮಕ್ಕೂ ಸೂಕ್ತ. ಸದಾ ಸಲ್ಫೇಟ್‌ಪ್ಯಾರಾಬೀನ್‌ ಫ್ರೀ ನ್ಯಾಚುರ್‌ ಇನ್‌ ಗ್ರೀಡಿಯೆಂಟ್ಸ್ ನಿಂದ ತಯಾರಾದ ಸ್ಕ್ರಬ್‌ ನ್ನೇ ಬಳಸಿರಿ. ಜೆಂಟ್ಲಿ ಎಕ್ಸ್ ಫಾಲಿಯೇಟ್‌ ಯಾವಾಗ ಮುಖವನ್ನು ಸ್ಕ್ರಬ್‌ ಮಾಡಿದರೂ ನಿಮ್ಮ ಬೆರಳುಗಳ ಚಲನೆಯತ್ತ ವಿಶೇಷ ಗಮನ ಕೊಡಿ. ನಿಮ್ಮ ಮುಖದ ಮೇಲೆ ಬೆರಳ ಸಹಾಯದಿಂದ ಸರ್ಕ್ಯುಲರ್‌ ಮೋಶನ್‌ ನಲ್ಲಿ ಆರಾಮವಾಗಿ ಮಸಾಜ್‌ ಮಾಡಿ. ಹೀಗೆ ಮಾಡುವುದರಿಂದ ಡೆಡ್‌ ಸ್ಕಿನ್‌ ಸಹ ತಂತಾನೇ ತೊಲಗುತ್ತದೆ, ಅದಕ್ಕೆ ಯಾವ ಹಾನಿಯೂ ಆಗುವುದಿಲ್ಲ. ನೀವು ಗಡಿಬಿಡಿಯಲ್ಲಿ ಚರ್ಮದ ಸ್ಕ್ರಬಿಂಗ್‌ ಮಾಡಿದರೆ, ಇದರಿಂದ ಚರ್ಮದ ಮೇಲೆ ಕಟ್ಸ್ ಆಗುವುದರ ಜೊತೆಗೆ ರೆಡ್‌ ನೆಸ್‌ ಸಹ ಮೂಡುತ್ತದೆ.

ಸ್ಕಿನ್ಟೈಪ್ತಿಳಿದಿರಲಿ

ನಿಮ್ಮ ಸ್ಕಿನ್‌ ಟೈಪ್‌ ಯಾವುದು ಎಂದು ಗುರುತಿಸಿ, ಅದರ ಪ್ರಕಾರವೇ ಸ್ಕಿನ್‌ ಮೇಲೆ ಸ್ಕ್ರಬ್‌ ಮಾಡಿ. ಅದರಿಂದ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಜೊತೆಗೆ ಪರಿಣಾಮ ಬೆಟರ್‌ ಆಗಿರುತ್ತದೆ. ಕೆಲವು ಬಗೆಯ ಸ್ಕ್ರಬ್ಸ್ ಡ್ರೈ ಸ್ಕಿನ್‌ ಗೆ ಸರಿಹೋಗದು, ಏಕೆಂದರೆ ಅದರಿಂದಾಗಿ ಸ್ಕಿನ್‌ ಮತ್ತಷ್ಟು ಡ್ರೈ ಆಗುವ ಸಾಧ್ಯತೆಗಳಿವೆ.

ಹಾಗೆಯೇ ಕೆಲವೊಂದು ಆಯ್ಲಿ ಸ್ಕಿನ್‌ ಗೆ ಸರಿಹೊಂದವು, ಏಕೆಂದರೆ ಅದರಿಂದ ಚರ್ಮದಲ್ಲಿ ಸೀಬಂ ಉತ್ಪಾದನೆ ಮತ್ತಷ್ಟು ಹೆಚ್ಚು ಸಾಧ್ಯತೆಗಳಿವೆ. ಹೀಗಾಗಿ ತಜ್ಞರ ಸಲಹೆ ಎಂದರೆ, ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ, ನೀವು ಸದಾ ಜೆಲ್ ಬೇಸ್ಡ್ ಪ್ರಾಡಕ್ಟ್ಸ್ ಮಾತ್ರ ಬಳಸಬೇಕು. ನಿಮ್ಮ ಚರ್ಮ ಬಹಳ ಡ್ರೈ ಆಗಿದ್ದರೆ, ನೀವು ಕ್ರೀಂ ಯಾ ಆಯ್ಲಿ ಪ್ರಾಡಕ್ಟ್ಸ್ ಮಾತ್ರ ಬಳಸಬೇಕು. ನೀವು ಸ್ಕಿನ್‌ ಟೈಪ್ ಗೆ ಅನುಸಾರ ನ್ಯಾಚುರಲ್ ಸ್ಕ್ರಬರ್‌ ಬಳಸುವಿರಾದರೆ, ನಿಮ್ಮ ಚರ್ಮ ಹೆಚ್ಚಿನ ಹೊಳಪು ಗಳಿಸುವುದರಲ್ಲಿ ಸಂದೇಹವಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ