ಫ್ಯಾಷನ್‌, ಮಾಡೆಲಿಂಗ್‌ ಮತ್ತು ಅಭಿನಯಕ್ಕೆ ಮಹಿಳೆಯರ ವಯಸ್ಸು 20 ರಿಂದ 30 ಪರ್ಫೆಕ್ಟ್ ಎಂದು ಹೇಳಲಾಗುತ್ತಿತ್ತು. ಆದರೆ ಈಗ 35 ದಾಟಿದ ಬಳಿಕ ಮಹಿಳೆಯರು ಮಾಡೆಲ್‌ ಅಥವಾ ನಟಿಯರಿಗಿಂತ ತಮ್ಮನ್ನು ತಾವು ಕಡಿಮೆ ಎಂದು ಭಾವಿಸುವುದಿಲ್ಲ. ಅವಕಾಶ ಸಿಕ್ಕರೆ ಬೆಳ್ಳಿ ಪರದೆಯಿಂದ ರಾಂಪ್‌ ಶೋ, ಕ್ಯಾಟ್‌ವಾಕ್‌ ಮತ್ತು ಮಾಡೆಲಿಂಗ್‌ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲೂ ಸಾಕಷ್ಟು ಎಂಜಾಯ್‌ ಮಾಡುತ್ತಿದ್ದಾರೆ.

ಈ ಬದಲಾಣೆಯ ಪರಿಣಾಮ ಬಾಲಿವುಡ್‌ಗಷ್ಟೇ ಸೀಮಿತಗೊಂಡಿಲ್ಲ. ದೊಡ್ಡ ಹಾಗೂ ಚಿಕ್ಕ ನಗರಗಳ ಮಹಿಳೆಯರು ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣದಿಂದ ದೇಶದಲ್ಲಿ ಬ್ಯೂಟಿ ಮತ್ತು ಫ್ಯಾಷನೆಬಲ್ ಡ್ರೆಸ್‌ ಮತ್ತು ವೆಲ್‌ನೆಸ್‌ನ ಬಿಸ್‌ನೆಸ್‌ ಬಹಳ ಜೋರಾಗಿ ನಡೆಯುತ್ತಿದೆ.

ಇದು ಹೇಮಾಮಾಲಿನಿ, ಮಾಧುರಿದೀಕ್ಷಿತ್‌, ಮಲೈಕಾ ಅರೋರಾ, ಕಾಜೋಲ್‌, ಜೂಹಿ ಚಾವ್ಲಾ ಮುಂತಾದವರಿಗಷ್ಟೇ ಸೀಮಿತವಾಗುಳಿದಿಲ್ಲ. ಚಿಕ್ಕಪುಟ್ಟ ನಗರಗಳ ಮಹಿಳೆಯರು ಕೂಡ ಎರಡನೇ ಇನ್ನಿಂಗ್ಸ್ ನಲ್ಲೂ ಮೊದಲಿಗಿಂತಲೂ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಟ್‌ನೆಸ್‌ ಹಾಗೂ ಸೌಂದರ್ಯದ ಬಾಬತ್ತಿನಲ್ಲೂ ಅವರು ಮೊದಲಿಗಿಂತಲೂ ಹೆಚ್ಚು ಸುಂದರ ಮತ್ತು ಗ್ಲಾಮರ್‌ ಆಗಿ ಕಂಡುಬರುತ್ತಿದ್ದಾರೆ. ಇದೇ ಕಾರಣವೆಂಬಂತೆ ಚಿಕ್ಕಪುಟ್ಟ ನಗರಗಳಲ್ಲೂ ಕೂಡ `ಶ್ರೀಮತಿ'ಯರಿಗೆ ಅನೇಕ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಮದುವೆಯ ಬಳಿಕ ಮಹಿಳೆಯರ ಕ್ರಿಯಾಶೀಲತೆ ಮೊದಲು ಒಂದಿಷ್ಟು ಸಾಮಾಜಿಕ ಕೆಲಸ ಕಾರ್ಯಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಈಗ ಅವರ ಗಮನ ಫ್ಯಾಷನ್‌, ಬ್ಯೂಟಿ, ರಾಂಪ್‌ ಶೋ ಮುಂತಾದವುಗಳ ಕಡೆಯೂ ಹೋಗುತ್ತಿದೆ. ಅದರಲ್ಲಿ ಅವರು ತಮ್ಮ ಸೌಂದರ್ಯ ಮತ್ತು ಫಿಟ್‌ನೆಸ್‌ನ ಮಿಂಚು ಹರಿಸುತ್ತಿದ್ದಾರೆ.

ಈ ಕುರಿತಂತೆ ದೊರೆತ ಮಾಹಿತಿಗಳಿಂದ ತಿಳಿದುಬರುವುದೇನೆಂದರೆ, ಮದುವೆಯ ಬಳಿಕ ಕೆರಿಯರ್‌, ಕುಟುಂಬ, ಮಕ್ಕಳ ಒತ್ತಡ ಬಹಳಷ್ಟು ಸ್ವಾತಂತ್ರ್ಯದಲ್ಲಿ ಅಡೆತಡೆಯುಂಟು ಮಾಡುತ್ತವೆ. 35ನೇ ವರ್ಷದ ಬಳಿಕ ಎಲ್ಲ ತಮ್ಮ ತಮ್ಮ ಲೆಕ್ಕಾಚಾರದಲ್ಲಿ ನಡೆಯತೊಡಗಿದಾಗ ಒಂದು ರೀತಿಯ ಮಾನಸಿಕ ನಿರಾಳತೆಯ ಭಾವನೆ ಮೂಡುತ್ತದೆ. ಇದೇ ಕಾರಣವೆಂಬಂತೆ ಮಹಿಳೆಯರು ಮದುವೆಗೂ ಮುಂಚಿನ ದಿನಗಳ ಹಾಗೆಯೇ ಎರಡನೇ ಇನ್ನಿಂಗ್ಸ್ ನಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ರಾಂಪ್‌ ಶೋ ಮತ್ತು ಬ್ಯೂಟಿ ಶೋಗಳಿಗಷ್ಟೇ ಅವರ ಸಕ್ರಿಯತೆ ಸೀಮಿತವಾಗಿಲ್ಲ. ಈಚೆಗೆ ಹೋಟೆಲ್‌ಗಳಲ್ಲಿ ನಡೆಯುತ್ತಿರುವ ಪಾರ್ಟಿಗಳ ಮೇಲೆ ಗಮನಹರಿಸಿದರೆ, ಈ ತೆರನಾದ ಮಹಿಳೆಯರೇ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿರುವುದು ತಿಳಿದುಬರುತ್ತದೆ. ಅವರೇ ಈ ತೆರನಾದ ಪಾರ್ಟಿಗಳ ಭಾಗವಾಗಿರುತ್ತಾರೆ. ಮೊದಲು ಕಿಟಿಪಾರ್ಟಿಗಳು ತಂಬೋಲಾದಂತಹ ಆಟಗಳಿಗಷ್ಟೇ ಸೀಮಿತವಾಗಿರುತ್ತಿದ್ದವು. ಈಗ ಕಿಟಿಪಾರ್ಟಿಗಳು ಗ್ಲಾಮರಸ್‌ ಆಗಿವೆ. ಇದರಲ್ಲಿ ಥೀಮ್ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಪಾರ್ಟಿಯ ಥೀಮ್ ಹೇಗಿರುತ್ತದೆ ಎಂದರೆ, ಅದರಲ್ಲಿ ಮಹಿಳೆಯರು ತಮ್ಮ ಫಿಟ್‌ನೆಸ್‌ ಮತ್ತು ಬ್ಯೂಟಿಯನ್ನು ಬಿಂಬಿಸುವಂತಿರುತ್ತವೆ. ಥೀಮ್ ಪಾರ್ಟಿಯಲ್ಲಿ ಪೂಲ್‌ ಪಾರ್ಟಿ ಕೂಡ ಇರುತ್ತದೆ. ಅದರಲ್ಲಿ ಮಹಿಳೆಯರು ಈಜುಡುಗೆ ಧರಿಸಿ ಬರಬೇಕಾಗುತ್ತದೆ. ಇನ್ನೊಮ್ಮೆ ಸ್ಕರ್ಟ್‌ ಧರಿಸಿ ಬರಬೇಕಾಗಿರುತ್ತದೆ. ಥೀಮ್ ಪಾರ್ಟಿಯ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದರೆ, ಯಾರ ಸ್ಕರ್ಟ್‌ ಎಷ್ಟು ಮೇಲೆ ಇದೆ ಹಾಗೂ ಮಹಿಳೆ ಎಂತಹ ಸ್ವಿಮ್ ವೇರ್‌ ಧರಿಸಿದ್ದಳು ಎಂಬುದನ್ನು ಗಮನಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ