ಮಲ್ಟಿಪಲ್ ಮೇಕಪ್ ಪ್ರಾಡಕ್ಟ್ಸ್, ಮಲ್ಟಿ ಟಾಸ್ಕಿಂಗ್‌ ಆಗುವುದರ ಜೊತೆ ಜೊತೆಯಲ್ಲೇ ಹೆಚ್ಚು ಲಾಭಕಾರಿಯಾಗಿದೆ.

ಈ ಪ್ರಾಡಕ್ಟ್ಸ್ ಏಕೆ ಖರೀದಿಸಬೇಕು?

ಇಂಥ ಪ್ರಾಡಕ್ಟ್ಸ್ ನ ಆಯ್ಕೆ ಎಲ್ಲಾ ವಿಧದಲ್ಲೂ ಲಾಭಕರ. ಒಂದರ ಬೆಲೆಯಲ್ಲಿ ಎರಡನ್ನು ಕೊಳ್ಳಬಹುದು. ಉದಾ : ಮಾಯಿಶ್ಚರೈಸರ್‌ ರೂ.120 ಮತ್ತು ಸನ್‌ಸ್ಕ್ಕೀನ್‌ ರೂ.100 ಇದ್ದರೆ, ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್‌ನ್ನು ರೂ.150ಕ್ಕೇ ಖರೀದಿಸಬಹುದು. ಹೀಗೆ 70/ ರೂ. ಉಳಿತಾಯ ಮಾಡಿ ಸನ್‌ಸ್ಕ್ರೀನ್‌+ ಮಾಯಿಶ್ಚರೈಸರ್‌ ಎರಡನ್ನೂ ಪಡೆದುಕೊಳ್ಳಬಹುದು.

ಒಂದು ಮೇಕಪ್‌ ಪ್ರಾಡಕ್ಟ್ ಬಳಸುವ ಅವಧಿಯಲ್ಲೇ (ಅದೇ ಸಮಯದಲ್ಲಿ) ಎರಡು ಪ್ರಾಡಕ್ಟ್ಸ್ ಬಳಸಿಕೊಳ್ಳಬಹುದು. ರೆಗ್ಯುಲರ್‌ ಆಗಿ ಮೊದಲು ಮಾಯಿಶ್ಚರೈಸರ್‌ ಹಚ್ಚಿ ನಂತರ ಫೌಂಡೇಶನ್‌ ಹಚ್ಟುತ್ತೀರಿ. ಇದಕ್ಕೆ 1+2 ನಿಮಿಷ ಬೇಕು. ಇದರ ಬದಲು ಫೌಂಡೇಶನ್‌ಯುಕ್ತ ಮಾಯಿಶ್ಚರೈಸರ್‌ನ್ನು ಕೇವಲ 1 ನಿಮಿಷದಲ್ಲಿ ಇಡೀ ಮುಖಕ್ಕೆ ಹಚ್ಚಿಕೊಳ್ಳಬಹುದು.

ಇಂಥ ಪ್ರಾಡಕ್ಟ್ಸ್ ಕ್ಯಾರಿ ಮಾಡುವುದೂ ಸುಲಭ. ಬೇರೆ ಬೇರೆಯಾಗಿ ಲಿಪ್‌ಸ್ಟಿಕ್‌ ಮತ್ತು ಐಶ್ಯಾಡೋಗಳ ಪಿಲ್ಯಾಟ್‌ ಕ್ಯಾರಿ ಮಾಡುವುದರಿಂದ ಹ್ಯಾಂಡ್‌ ಬ್ಯಾಗ್‌ ಬೇಗ ತುಂಬಿಕೊಳ್ಳುತ್ತದೆ. ಅದೇ ಲಿಪ್‌ಸ್ಟಿಕ್‌ ಕಮ್ ಐ ಶ್ಯಾಡೋ ಪಿಲ್ಯಾಟ್‌ ಕಡಿಮೆ ಜಾಗದಲ್ಲಿ ಸುಲಭವಾಗಿ ಅಡ್ಜಸ್ಟ್ ಆಗುವುದರ ಜೊತೆಯಲ್ಲೇ ಲಿಪ್‌ ಮತ್ತು ಐ ಮೇಕಪ್‌ ಎರಡರ ಕೆಲಸಕ್ಕೂ ಬರುತ್ತದೆ.

ಎಂಥ ಪ್ರಾಡಕ್ಟ್ಸ್ ಖರೀದಿಸಬೇಕು?

ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಈ ಮಲ್ಟಿಪಲ್ ಮೇಕಪ್‌ ಪ್ರಾಡಕ್ಟ್ ಮರೆಯದೆ ಇರಿಸಿಕೊಳ್ಳಿ : ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್‌ ಇವೆರಡನ್ನು ಪ್ರತಿದಿನ ಹಚ್ಚಿಕೊಳ್ಳ ಬೇಕಾದುದು ಅನಿವಾರ್ಯ. ಮಾಯಿಶ್ಚರೈಸರ್‌ ಚರ್ಮಕ್ಕೆ ಕೋಮಲತೆ ಒದಗಿಸಿದರೆ, ಸನ್‌ಸ್ಕ್ರೀನ್‌ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ಕಾಪಾಡುತ್ತದೆ.  ಹೀಗಿರುವಾಗ ಬೇರೆ ಬೇರೆಯಾಗಿ ಮಾಯಿಶ್ಚರೈಸರ್‌ ಮತ್ತು ಸನ್‌ಸ್ಕ್ರೀನ್‌ ಖರೀದಿಸಿ ಹಚ್ಚುವುದರ ಬದಲಾಗಿ, ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್‌ ಖರೀದಿಸಿ. ಇದು ಮಾಯಿಶ್ಚರೈಸರ್‌ ಜೊತೆಯಲ್ಲೇ ಸನ್‌ಸ್ಕ್ರೀನ್‌ನ ಕೆಲಸ ಮಾಡುತ್ತದೆ. ಓಲೇ ಕಂಪ್ಲೀಟ್‌, ವಾರಿಯರ್ ಪ್ಯಾರಿಸ್‌, ಗಾರ್ನಿಯರ್‌ ಸ್ಕಿನ್‌ ರಿನ್ಯೂನಂಥ ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್ಸ್‌ನ್ನು ಖರೀದಿಸಬಹುದು.

ಕ್ಲೆನ್ಸರ್‌ ಕಮ್ ಟೋನರ್‌

ಸ್ವಸ್ಥ ಚರ್ಮಕ್ಕಾಗಿ ಕ್ಲೆನ್ಸರ್‌ನ ಅಗತ್ಯ ಎಷ್ಟಿದೆಯೋ ಟೋನರ್‌ನ ಅಗತ್ಯ ಅಷ್ಟೇ ಇದೆ. ಹೀಗಿರುವಾಗ ಕೆನ್ಸರ್‌ ಟೋನರ್‌ನ್ನು ಬೇರೆ ಬೇರೆಯಾಗಿ ಕೊಳ್ಳುವ ಬದಲು, ಕ್ಲೆನ್ಸರ್‌ ಕಮ್ ಟೋನರ್‌ ಖರೀದಿಸಿ. ಅಂದರೆ, ಟೋನರ್‌ ಗುಣಗಳೂ ಅಡಕವಾಗಿರುವಂಥ ಕ್ಲೆನ್ಸರ್‌ನ್ನು ಕೊಳ್ಳಬೇಕೆಂಬುದೇ ತಾತ್ಪರ್ಯ. ಆಗ ಕ್ಲೆನ್ಸರ್‌ ಮುಖದಲ್ಲಿನ ಕಲ್ಮಶಗಳನ್ನು ಚೂರು ಇಲ್ಲದಂತೆ ತೆಗೆಯುತ್ತದೆ ಹಾಗೂ ಅದರಲ್ಲಿ ಟೋನರ್‌ ತ್ವಚೆಯ ರೋಮರಂಧ್ರಗಳನ್ನು ಕ್ಲೋಸ್‌ ಮಾಡಿ ಚರ್ಮದಲ್ಲಿ ಹೆಚ್ಚಿನ ಕಸುವು ತರಲಿದೆ.

ಟಿಂಟೆಡ್‌ ಮಾಯಿಶ್ಚರೈಸರ್‌

ಮೊದಲು ಮುಖಕ್ಕೆ ಮಾಯಿಶ್ಚರೈಸರ್‌, ಅದಾದ ಮೇಲೆ ಫೌಂಡೇಶನ್‌ ಎಂದು ಬೇರೆ ಬೇರೆಯಾಗಿ ಹಚ್ಚುವುದನ್ನು ತಪ್ಪಿಸಲು ಬಯಸುವಿರಾ? ಹಾಗಿದ್ದರೆ ಮೇಕಪ್‌ ಬ್ಯಾಗಿನಲ್ಲಿ ಟಿಂಟೆಡ್‌ ಮಾಯಿಶ್ಚರೈಸರ್‌ನ್ನು ಅಗತ್ಯವಾಗಿ ಇರಿಸಿಕೊಳ್ಳಿ. ಇದರಲ್ಲಿ ಮಾಯಿಶ್ಚರೈಸರ್‌ ಜೊತೆಯಲ್ಲೇ ಫೌಂಡೇಶನ್ನಿನ ಗುಣಗಳೂ ಅಡಗಿರುತ್ತವೆ. ಇದು ಶುಷ್ಕ ತ್ವಚೆಯನ್ನು ಮೃದುಗೊಳಿಸುತ್ತದೆ ಹಾಗೂ ಇದರಲ್ಲಿನ ಫೌಂಡೇಶನ್‌ ಮೇಕಪ್‌ಗಾಗಿ ಪರ್ಫೆಕ್ಟ್ ಬೇಸ್‌ನ್ನೂ ರೆಡಿ ಮಾಡುತ್ತದೆ. ಕೆಲವು ಬಗೆಯ ಟಿಂಟೆಡ್‌  ಮಾಯಿಶ್ಚರೈಸರ್‌ಗಳಲ್ಲಿ ಸನ್‌ಸ್ಕ್ರೀನ್‌ ಸಹ ಇರುತ್ತದೆ. ಉತ್ತಮ ಪರಿಣಾಮಕ್ಕಾಗಿ ಕ್ಲಿನಿಕ್‌, ಮೆರೀಕೆ, ನಾರ್ಸ್‌ ಮುಂತಾದ ಬ್ರ್ಯಾಂಡ್‌ನ ಪ್ರಾಡಕ್ಟ್ ಕೊಳ್ಳಿರಿ. AA/BB/CC  ಕ್ರೀಂ ಮಾಯಿಶ್ಚರೈಸರ್‌, ಸೀರಂ, ಸನ್‌ಸ್ಕ್ರೀನ್‌. ಪ್ರೈಮರ್‌, ಕನ್ಸೀಲರ್‌, ಫೌಂಡೇಶನ್‌ ಇತ್ಯಾದಿಗಳನ್ನು ಒಂದೊಂದಾಗಿ ಹಚ್ಚುವುದನ್ನು ತಪ್ಪಿಸಬೇಕೇ? ಹಾಗಿದ್ದರೆ ಎಲ್ಲವನ್ನೂ ಒಟ್ಟಾಗಿ AA/BB ಕ್ರೀಂ ರೂಪದಲ್ಲಿ ಹಚ್ಚಿರಿ. ಇವೆರಡರಲ್ಲಿ ಯಾವುದಾದರೂ ಒಂದನ್ನು ಬಳಸಿದ ನಂತರ ಆ್ಯಂಟಿ ಏಜಿಂಗ್‌ ಕ್ರೀಂ ಹಚ್ಚಬೇಕಾಗಿ ಬಂದಲ್ಲಿ, ಆಗ ಅಗತ್ಯ cc ಕ್ರೀಂ ಕೊಳ್ಳಿರಿ. ಇದರ ಬಳಕೆಯಿಂದ ಸೆಪರೇಟ್‌ ಆಗಿ ಆ್ಯಂಟಿಏಜಿಂಗ್‌ ಕ್ರೀಂ ಹಚ್ಚಬೇಕಾದ ಅಗತ್ಯವಿಲ್ಲ. ಈ ಕ್ರೀಮುಗಳಿಗಾಗಿ ನೀವು ಪಾಂಡ್ಸ್, ಮೊಬಿಲಿನ್‌, ಲ್ಯಾಕ್ಮೆ ಇತ್ಯಾದಿ ಬ್ರ್ಯಾಂಡ್ಸ್ ಟ್ರೈ ಮಾಡಿ.

ಪೆನ್ಸಿಲ್‌ ಐ ಲೈನರ್‌

ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಐ ಲೈನರ್‌ ಕಾಟನ್‌ ಎರಡನ್ನೂ ಇರಿಸಿಕೊಳ್ಳುವ ಬದಲು, ಒಂದು ಪೆನ್ಸಿಲ್‌ ಐ ಲೈನರ್‌ ಕೊಳ್ಳಿರಿ. ಇದನ್ನು ಕಾಜಲ್ ತರಹ ಕೆಳಗಿನ ಭಾಗದ ಐ ಲೈನರ್‌ಗಾಗಿ ಬಳಸಬಹುದು ಹಾಗೂ ಐ ಲೈನರ್‌ ತರಹವೇ ಕಂಗಳ ಕೆಳ ಮತ್ತು ಮೇಲ್ಭಾಗದ ಎರಡೂ ಐ ಲಿಡ್ಸ್ ಗೂ ಬಳಸಬಹುದು. ಈ ರೀತಿ ಒಂದೇ ಕಾಸ್ಮೆಟಿಕ್ಸ್ ನಿಂದ 2 ಕೆಲಸ ಮಾಡಿಕೊಳ್ಳಿ.

ಟೂ ಸೈಡೆಡ್‌ ಪೆನ್ಸಿಲ್

‌ಇತ್ತೀಚೆಗೆ ಮಾರುಕಟ್ಟೆಯಲ್ಲಿ ಡ್ಯುಯೆಟ್ ಪೆನ್ಸಿಲ್‌‌ಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಈ ಪೆನ್ಸಿಲ್‌ 2 ಮೇಕಪ್‌ ಪ್ರಾಡಕ್ಟ್ಸ್ ನ ಕೆಲಸ ಮಾಡುತ್ತದೆ. ಇದರ ಒಂದು ಬದಿ ಲಿಪ್‌ಲೈನರ್‌ ಇದ್ದರೆ, ಮತ್ತೊಂದು ಬದಿ ಐ ಬ್ರೋ ಪೆನ್ಸಿಲ್‌ ಇರುತ್ತದೆ. ಇದೇ ತರಹ ಕೆಲವು ಪೆನ್ಸಿಲ್‌‌ಗಳಿಗೆ, ಒಂದು ಕಡೆ ಲಿಪ್‌ಲೈನರ್‌ ಇದ್ದರೆ ಮತ್ತೊಂದು ಕಡೆ ಐ ಲೈನರ್‌ ಇರುತ್ತದೆ. ಅಂದ್ರೆ ಒಂದರಿಂದ 2 ಕೆಲಸ ಆಗುತ್ತದೆ.

ಗ್ಲಾಸಿ ಲಿಪ್‌ಸ್ಟಿಕ್‌

ನಿಮಗೆ ಮೇಕಪ್‌ನ ಗ್ಲಾಸಿ ಎಫೆಕ್ಟ್ ಇಷ್ಟವಾಗುವುದಾದರೆ, ನೀವು ತುಟಿಗಳಿಗೆ ಲಿಪ್‌ಸ್ಟಿಕ್‌ ನಂತರ ಲಿಪ್‌ ಗ್ಲಾಸ್‌ ಹಚ್ಚುವಿರಿ. ಅಂದರೆ ನಿಮ್ಮ ತುಟಿಗಳಿಗೆ 2 ಮೇಕಪ್‌ ಪ್ರಾಡಕ್ಟ್ ಹಚ್ಚುವ ಸಮಯ ಉಳಿಸುವುದಕ್ಕಾಗಿ ಗ್ಲಾಸಿ ಲಿಪ್‌ಸ್ಟಿಕ್‌ ಕೊಳ್ಳಿರಿ. ಇದನ್ನು ಹಚ್ಚಿದ ನಂತರ, ನೀವು ಲಿಪ್‌ಸ್ಟಿಕ್‌ ಮೇಲೆ ಮತ್ತೆ ಗ್ಲಾಸ್‌ ಹಚ್ಚಬೇಕಾದ ಅಗತ್ಯವಿಲ್ಲ.

ಕಲರ್‌ ಟಿಂಟ್‌

ಲಿಪ್‌ಸ್ಟಿಕ್‌ ಜೊತೆ ಬ್ಲಶರ್‌ನ ಕೆಲಸ ಮಾಡುವ ಕಲರ್‌ ಟಿಂಟ್‌ಗಳೂ ಕೂಡ ಮಾರುಕಟ್ಟೆಯಲ್ಲಿ ಧಾರಾಳ ವೆರೈಟಿಗಳಲ್ಲಿ ಸಿಗುತ್ತವೆ. ಇದು ನಿಮಗೆ ಬೇರೆ ಬೇರೆ ಕಲರ್ಸ್‌ ಜೊತೆ ಮ್ಯಾಟ್‌ ಗ್ಲಾಸಿ 2 ವಿಭಿನ್ನ ಟೆಕ್ಸ್ ಚರ್‌ಗಳಲ್ಲಿ ಸುಲಭವಾಗಿ ಲಭಿಸುತ್ತದೆ. ಹೀಗಾದಾಗ, ನೀವು ಸಮಯ ಸಂದರ್ಭಕ್ಕೆ ತಕ್ಕಂತೆ ಶೇಡ್‌ ಟೆಕ್ಸ್ ಚರ್‌ ಆರಿಸಿಕೊಳ್ಳಬಹುದು.

ಮಲ್ಟಿಪರ್ಪಸ್‌ ಪಿಲ್ಯಾಟ್

ನಿಮಗೆ ವಿಭಿನ್ನ ಶೇಡ್ಸ್ ಲಿಪ್‌ಸ್ಟಿಕ್‌ ಯಾ ಐ ಶ್ಯಾಡೋ ಪಿಲ್ಯಾಟ್‌ ಖರೀದಿಸುವ ಮನಸ್ಸಿದ್ದರೆ, ಆಗ ಕೇವಲ ಲಿಪ್‌ಸ್ಟಿಕ್‌ ಪಿಲ್ಯಾಟ್‌ ಯಾ ಐ ಶ್ಯಾಡೋ ಪಿಲ್ಯಾಟ್‌ ಕೊಳ್ಳುವ ಬದಲು, ಮಲ್ಟಿಪರ್ಪಸ್‌ ಪಿಲ್ಯಾಟ್‌ ಖರೀದಿಸಿ. ಇದನ್ನು ನೀವು ಲಿಪ್‌ಸ್ಟಿಕ್‌ ಯಾ ಐ ಶ್ಯಾಡೋ ಎರಡಕ್ಕೂ ಬಳಸಬಹುದಾಗಿದೆ.

ಕಲರ್‌ ಲಿಪ್‌ಸ್ಟಿಕ್‌

ಇಂದಿನ ಮಾರುಕಟ್ಟೆಯಲ್ಲಿ ತ್ರೀ ಇನ್‌ ಒನ್‌ ಎಂದು ಹೇಳಬಹುದಾದ ಮಲ್ಟಿಪರ್ಪಸ್‌ ಮೇಕಪ್‌ ಪ್ರಾಡಕ್ಟ್ಸ್ ಕೂಡ ಲಭ್ಯವಿವೆ. ಅಂದರೆ ತುಟಿಗಳಿಗೆ ಲಿಪ್‌ಸ್ಟಿಕ್‌, ಚೀಕ್ಸ್ ಗೆ ಬ್ಲಶ್‌ಆನ್‌, ಕಂಗಳಿಗೆ ಐ ಶ್ಯಾಡೋ ತರಹ ಮೂರಕ್ಕೂ ಇದೊಂದನ್ನೇ ಬಳಸಬಹುದು. ಇದನ್ನು ಕಲರ್‌ ಸ್ಟಿಕ್‌ ಎನ್ನುತ್ತಾರೆ. ಹೆಚ್ಚಿಲ್ಲದಿದ್ದರೂ ಕನಿಷ್ಠ ಒಂದು ಕಲರ್‌ ಸ್ಟಿಕ್‌ ಆದರೂ ನೀವು ಕೊಳ್ಳಲೇಬೇಕು. ಆದರೆ ಆ ಕಲರ್‌ ಸ್ಟಿಕ್‌ ಲೈಟ್‌ ಶೇಡ್‌ ಆಗಿರಬೇಕೆಂದು ಗಮನವಿರಲಿ. ಏಕೆಂದರೆ ಡಾರ್ಕ್‌ ಶೇಡ್‌ನ್ನು ಲಿಪ್‌ಸ್ಟಿಕ್‌ಗಾಗಿ ಬಳಸಿಕೊಳ್ಳಿ. ಆದರೆ ಐ ಶ್ಯಾಡೋ ಮತ್ತು ಬ್ಲಶ್‌ಆನ್‌ಗಾಗಿ ಡಾರ್ಕ್‌ ಶೇಡ್‌ ನಿಮಗೆ ಸೂಟ್‌ ಆಗುತ್ತದೆ ಎಂಬ ಗ್ಯಾರಂಟಿ ಇಲ್ಲ.

– ಪ್ರತಿನಿಧಿ

Tags:
COMMENT