ಎಷ್ಟೋ ಕಷ್ಟಪಟ್ಟು ಹಿರಿಯರ ವಿರೋಧದ ನಡುವೆಯೂ ಮೆಚ್ಚಿದವನನ್ನೇ ಮದುವೆಯಾದ ವಿಜಯಾ, ಅಂಗವಿಕಲ ಮಗುವಿನ ತಾಯಿಯಾಗಿ ಪಟ್ಟ ಪಾಡೇನು.....?

ಮುಂದಿನ ಸ್ಪರ್ಧಿ.... ಮೂರು ತೀರ್ಪುಗಾರರೂ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು 12ನೇ ನಂಬರಿನ ಸ್ಪರ್ಧಿಯ ಹಾಡು ಕೇಳಲು ಅಣಿಯಾದರು.

ಮೊದಲ ಆಲಾಪಕ್ಕೆ ಮಹಾ ಗುರುಗಳ ಎದೆ ಝಲ್ ಎಂದಿತು. ಆಯ್ಕೆಯಾದ ಪ್ರತಿಸ್ಪರ್ಧಿಗಳು, ಮೆಂಟರ್‌ ಗಳು ತಲ್ಲೀನರಾಗಿ ಆಶ್ಚರ್ಯದಿಂದ ಅವನ ಧ್ವನಿ ಕೇಳುತ್ತಿದ್ದರೆ.... ಒಂದೊಂದೇ ಶಬ್ದಗಳ ರಾಗ ಕೇಳುಗರಿಗೆ ತಂಪನ್ನು ಕೊಡುತ್ತಿದ್ದರೆ, ತೀರ್ಪುಗಾರರ ಕೈ ಅನಾಯಾಸವಾಗಿ ಮುದ್ರೆಯನ್ನು (ಬಝರ್‌) ಒತ್ತಿತ್ತು.

ಅದರೊಂದಿಗೆ ಯಾರು ಆ ಹಾಡುಗಾರ ಎಂದು ಬಟ್ಟೆ ಬಿಚ್ಚಿ ನೋಡಲು ಅತ್ಯಾಶ್ಚರ್ಯದಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿದರು. ಕುಳಿತವರೆಲ್ಲರ ಕಣ್ಣು ಆಗಲೇ ಹನಿಗೂಡಿದ್ದವು. ಮೂವರು ತೀರ್ಪುಗಾರರಲ್ಲಿ ಇಬ್ಬರ ಗಂಟಲು ಬಿಗಿಯಾದರೆ, ಇನ್ನೊಬ್ಬರ ಕಣ್ಣಾಲಿಗಳು ತುಂಬಿದ್ದವು.

ಹೊರಗಡೆ ಮಗನ ಹಾಡು ಕೇಳುತ್ತಾ, ದೇವರಲ್ಲಿ ಕೈ ಮುಗಿಯುತ್ತಾ ಕಣ್ಣೀರ ಧಾರೆ ಸುರಿಸುತ್ತಿರುವ ಆ ತಾಯಿಯನ್ನು ಆ್ಯಂಕರ್ ತನುಜಾ ಸಂತೈಸುವುದರಲ್ಲಿ ಸೋತಿದ್ದಳು. ಅವಳಿಗೂ ತನ್ನ ಅಳು ಹತ್ತಿಕ್ಕಾಗಲಿಲ್ಲ. ಮೂವರು ಬಝರ್‌ ಒತ್ತಿ ಮುಂದಿನ ಸುತ್ತಿಗೆ ಆಯ್ಕೆ ಅಂತ ಗೊತ್ತಾದಾಗ ವೀಲ್ ಚೇರ್‌ ಮೇಲೆ ಆ ಹುಡುಗ ಖುಷಿಯಿಂದ ಎರಡು ಡೊಂಕಾದ ಕೈಗಳನ್ನು ಮೇಲೆತ್ತಿ ಕುಣಿಯುತ್ತಿದ್ದ.

ಎಲ್ಲರ ಕಣ್ಣು ಜೊತೆ ಜೊತೆಗೆ ಎದೆ ತುಂಬಿತು. ಅಲ್ಲಿ ಮಾತುಗಳಿಗೆ ಜಾಗವಿರಲಿಲ್ಲ. ಮೌನಕ್ಕಷ್ಟೇ ಜಾಗ. ಆ ಮಗುವಿನ ಖುಷಿ ಅಲ್ಲಿ ಹೊರಗಡೆ ನಿಂತ ತಾಯಿಯ ಖುಷಿ ನೋಡಿ ಇಡೀ ಕಾರ್ಯಕ್ರಮದ ತಂಡ ಎದ್ದು ನಿಂತು ಖುಷಿಪಟ್ಟಿತು, ಆನಂದಬಾಷ್ಪ ಸುರಿಸಿತ್ತು. ತುಂಬಾ ಪ್ರಯಾಸದಿಂದ ತನ್ನ ಅಳುವನ್ನು ತಹಬದಿಗೆ ತಂದು ತನುಜಾ ಆ ಹುಡುಗನ ವೀಲ್ ‌ಚೇರ್‌ ಪಕ್ಕದಲ್ಲಿ ಮಂಡಿಯೂರಿ ಕುಳಿತಳು.

ಆ ಮಗುವಿನ ಕಣ್ಣಲ್ಲಿದ್ದ ಖುಷಿಯಲ್ಲಿ ಒಂದು ನಿಮಿಷ ಕಳೆದುಹೋದಳು. ವಾಸ್ತವಕ್ಕೆ ಬಂದು, ಅಮ್ಮ ಬನ್ನಿ..... ಎಂದು ಕುಳಿತಲ್ಲಿಂದ ಕರೆದಳು. ಕಣ್ಣೀರು ಒರೆಸಿಕೊಳ್ಳುತ್ತಾ ಮಿನುಗುವ ಕಣ್ಣುಗಳಿಂದ ಮಗನನ್ನು ನೋಡುತ್ತಾ ಬಂದು ನಿಂತಳು ಆ ತಾಯಿ. ಮಗ ತಾಯಿಯನ್ನು ನೋಡಿ ಕೊರಳಲ್ಲಿ ಮೆಡಲ್ ತೋರಿಸಿ ಖುಷಿಯಿಂದ ನಕ್ಕರೆ ಆ ತಾಯಿ ಮಗನ ತಲೆ ನೇವರಿಸುತ್ತಾ ಕೈ ಮುಗಿದು ನಿಂತಳು.

ತನುಜಾ ಸ್ವಲ್ಪ ಗಂಟಲು ಸರಿ ಮಾಡಿಕೊಂಡು, ``ಅಮ್ಮಾ  ನಿಮ್ಮ ಹೆಸರೇನು?''

``ವಿಜಯಾ.....''

``ನಿನ್ನ ಹೆಸರೇನು ಪುಟ್ಟ....?''

``ನನ್ನ ಹೆಸರು ವಿಜಯೇಂದ್ರ....''ಎಲ್ಲರೂ ಚಪ್ಪಾಳೆ ತಟ್ಟಿದರೆ ಮಹಾಗುರುಗಳು, ``ನಿಜ ಕಣೋ. ವಿಜಯಾಳ ಸುಪುತ್ರ ವಿಜಯೇಂದ್ರ, ನಿನಗೆ ವಿಜಯ ಸದಾ ಕಟ್ಟಿಟ್ಟ ಬುತ್ತಿ! ಆ ತಾಯಿ ಸರಸ್ವತಿ ಆಶೀರ್ವಾದ ನಿನ್ನ ಮೇಲಿದೆ. ನೀನು ಯಾವಾಗಲೂ ಜಯಶಾಲಿ,'' ಎಂದರು.

ಎಲ್ಲರೂ ಮತ್ತೊಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟಿದರು.

``ಹೇಳೀಮ್ಮಾ, ಇವನಿಗೆ ಹಾಡಿನ ಬಗ್ಗೆ ಆಸಕ್ತಿ ಹೇಗೆ ಬಂತು? ನೀವು ಅದನ್ನು ಯಾವಾಗ ಅರಿತಿರಿ? ಈಗ ಇವನ ವಯಸ್ಸು.....''

ಅಷ್ಟರಲ್ಲಿ, ``12 ವರ್ಷ. ನಾಳೇನೇ ನನ್ನ ಹುಟ್ಟಿದ ಹಬ್ಬ!'' ಎಂದು ಖುಷಿಯಿಂದ ಆ ಹುಡುಗ ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ