ಮುಟ್ಟಿನಲ್ಲಿ ಏರುಪೇರಾಗಿ ಅನಿಯಮಿತವಾದರೆ, ಅದಕ್ಕೆ ವೈಜ್ಞಾನಿಕ ಕಾರಣಗಳೇನು ಎಂದು ತಿಳಿದುಕೊಳ್ಳಿ.....

ನಮ್ಮ ದೇಶದಲ್ಲಿ 33% ಹೆಂಗಸರು ಅನಿಯಮಿತ ಮುಟ್ಟಿನ ಸಮಸ್ಯೆಗೆ ತುತ್ತಾಗಿ ಕಷ್ಟಪಡುತ್ತಿರುತ್ತಾರೆ. ಒಮ್ಮೆ ಬಹಳ ತಡವಾಗಿ ಮುಟ್ಟು ಆರಂಭವಾದರೆ, ಮತ್ತೊಮ್ಮೆ ಅತಿ ಬೇಗ ಶುರುವಾಗಿ ಬಿಡುತ್ತದೆ. ಇದರಿಂದಾಗಿ  ಅವರ ಸ್ಟ್ರೆಸ್‌ ಲೆವೆಲ್ ಸಾಕಷ್ಟು ಹೆಚ್ಚಾಗುತ್ತದೆ. ಇಂಥ ಅನಿಯಮಿತ ಮುಟ್ಟಿಗೆ ಕಾರಣವೇನೆಂದು ತಿಳಿಯೋಣವೇ? :

ಸ್ಟ್ರೆಸ್ದೊಡ್ಡ ಕಾರಣ : ಇಂದಿನ ಬಿಡುವಿಲ್ಲದ ಓಡುಯುಗದಲ್ಲಿ, ದಿನೇ ದಿನೇ ಹೆಚ್ಚುತ್ತಿರುವ ಪೈಪೋಟಿ ಕಾರ್ಯ ಚಟುವಟಿಕೆಗಳಿಂದಾಗಿ, ಹೆಂಗಸರು ತಮ್ಮ ಊಟ ತಿಂಡಿ ಕಡೆ ಸರಿಯಾಗಿ ಗಮನಹರಿಸುತ್ತಿಲ್ಲ. ಇದರಿಂದಾಗಿ ಸಹಜವಾಗಿಯೇ ಅವರ ಸ್ಟ್ರೆಸ್‌ ಲೆವೆಲ್ ‌ಹೆಚ್ಚಿ, ತೀವ್ರ ಟೆನ್ಶನ್‌ ಗೆ ತುತ್ತಾಗುತ್ತಾರೆ. ಇದರಿಂದ ದೇಹದಲ್ಲಿ ಹಾರ್ಮೋನ್ಸ್ ಲೆವೆಲ್ ಏರುಪೇರಾಗುತ್ತದೆ. ಅದರಲ್ಲಿ ಪ್ರಮುಖ ಎಂದರೆ ಪ್ರೊಜೆಸ್ಟೆರಾನ್‌, ಈಸ್ಟ್ರೋಜನ್‌ ಇತ್ಯಾದಿ. ಇದರಿಂದಾಗಿಯೇ ಮುಟ್ಟು ಅನಿಯಮಿತ ಆಗುತ್ತದೆ. ಸ್ಟ್ರೆಸ್‌, ಟೆನ್ಶನ್‌ ಗಳಿಂದಾಗಿ ಇದರ ಮಟ್ಟ ಕುಸಿಯುತ್ತದೆ. ಪ್ರೊಜೆಸ್ಟೆರಾನಿನ ಹೆಚ್ಚು ಮಟ್ಟ ಪೀರಿಯಡ್ಸ್ ನ್ನು ರೆಗ್ಯುಲರ್‌ ಆಗಿಸುತ್ತದೆ. ಈ ಹಾರ್ಮೋನಿನ ಕಾರಣದಿಂದ ಯೂಟರಸ್‌ ನ ಲೈನಿಂಗ್‌ ಥಿಕ್‌ ಆಗಿ, ಪ್ರೆಗ್ನೆನ್ಸಿಗೆ ಅದು ಸಿದ್ಧಗೊಳ್ಳುತ್ತದೆ. ಇದರಲ್ಲಿ ಎಂದೂ ಏರುಪೇರಾಗಬಾರದು.

ಪಾಲಿಸಿಸ್ಟಿಕ್ಓವರಿ ಸಿಂಡ್ರೋಮ್ :  PCOC ಬಗ್ಗೆ ನಿಮಗೆ ಗೊತ್ತಿರುತ್ತದೆ, ಏಕೆಂದರೆ ಈ ಸಮಸ್ಯೆ ಇತ್ತೀಚೆಗೆ ಪ್ರತಿ ಎರಡನೇ ಹೆಂಗಸನ್ನೂ ಕಾಡುತ್ತಿರುತ್ತದೆ. ಇದರ ಕಾರಣದಿಂದಾಗಿ ಮುಟ್ಟು ಏರುಪೇರಾಗುವುದಲ್ಲದೆ, ಕಿಬ್ಬೊಟ್ಟೆ ಅಸಹನೀಯವಾಗಿ ನೋಯಲು ಶುರುವಾಗುತ್ತದೆ. ತಕ್ಷಣ ಚಿಕಿತ್ಸೆ ನಡೆಯದಿದ್ದರೆ, ಅದು ಬಂಜೆತನಕ್ಕೆ ದಾರಿ ಆದೀತು. ಇದರಿಂದ ದೇಹ ತೂಕ ವಿಪರೀತ ಹೆಚ್ಚುತ್ತದೆ, ಮುಖದಲ್ಲಿ ಅನಗತ್ಯ ಕೂದಲು ಸಹ ಹೆಚ್ಚುತ್ತದೆ. ಇದರಿಂದ ಹೆಣ್ಣಿನ ಆತ್ಮವಿಶ್ವಾಸ ತಂತಾನೇ ಕುಗ್ಗುತ್ತದೆ.

ಫೈಬ್ರಾಯ್ಡ್ : ಇದು ಸಾಮಾನ್ಯವಾಗಿ ಗರ್ಭಕೋಶದ ಲೈನಿಂಗ್‌ ನ ಒಳಗೆ ಯಾ ಹೊರಗೆ ಆಗುತ್ತದೆ. ಇದು ಮುಂದೆ ಕ್ಯಾನ್ಸರ್‌ ಗೆ ತಿರುಗಬಹುದು ಅಂತ ಅಲ್ಲ, ಆದರೆ ಪ್ರತಿ ಸಲ ನಿಮ್ಮ ಮುಟ್ಟು ತಡವಾಗುತ್ತಿದ್ದರೆ, ಆ ಸಂದರ್ಭದಲ್ಲಿ ಬಹಳ ಹೊಟ್ಟೆ ನೋವಿದ್ದರೆ, ಅನೀಮಿಯಾ (ರಕ್ತಹೀನತೆ) ಕಾಡುತ್ತಿದ್ದರೆ, ಸಮಾಗಮದಲ್ಲಿ ಅಥವಾ ಮುಟ್ಟಿಗೆ ಮುನ್ನ ಕಿಬ್ಬೊಟ್ಟೆ ನೋಯ ತೊಡಗಿದರೆ ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ. ಏಕೆಂದರೆ ಇವೆಲ್ಲದರ ಕಾರಣ ಫೈಬ್ರಾಯ್ಡ್ ಆಗಿರಬಹುದು. ಇದಕ್ಕೂ ಸಕಾಲಕ್ಕೆ ಚಿಕಿತ್ಸೆ ಒದಗಿಸಿದರೆ, ಮುಂದೆ ಸಮಸ್ಯೆ ಕಾಡದು.

ಎಂಡೋಮೆಟ್ರಿಯೋಸಿಸ್‌ : ಇದರಲ್ಲಿ ಸಾಮಾನ್ಯವಾಗಿ ಗರ್ಭಕೋಶದಲ್ಲಿ ಅಲ್ಲದೆ ಹೊರಭಾಗದಲ್ಲಿ ಟಿಶ್ಯು ಬೆಳೆದುಬಿಡುತ್ತದೆ. ಈ ಕಾರಣದಿಂದಾಗಿ ಮುಟ್ಟಾದಾಗ ಹೆಚ್ಚಿನ ಮಟ್ಟದ ರಕ್ತಸ್ರಾವ, ಸೊಂಟ ನೋವು, ಕಿಬ್ಬೊಟ್ಟೆಯ ನುಲಿಯುವಿಕೆ ಇತ್ಯಾದಿ ಮಾತ್ರವಲ್ಲದೆ, ಮುಟ್ಟಿನ ದಿನಗಳು ಎಂದಿನಂತಿರದೆ ಆಗಾಗ ಕ್ರಮ ತಪ್ಪುತ್ತದೆ. ಇದಕ್ಕೆ ಸಕಾಲಕ್ಕೆ ಚಿಕಿತ್ಸೆ ಆಗದಿದ್ದರೆ ಮುಂದೆ ಬಂಜೆತನಕ್ಕೆ ತಿರುಗಬಹುದು.

ಥೈರಾಯ್ಡ್ ತೊಂದರೆಗಳು : ಹೆಚ್ಚು ಮಂದಿ ಹೆಂಗಸರಲ್ಲಿ ಅನಿಯಮಿತ ಮುಟ್ಟಿಗೆ ಪ್ರಧಾನ ಕಾರಣ, ಅವರನ್ನು ಕಾಡುತ್ತಿರುವ ಥೈರಾಯ್ಡ್ ಸಮಸ್ಯೆ. ಈ ಸ್ಥಿತಿಯಲ್ಲಿ ಮುಟ್ಟಿನ ಏರುಪೇರು ಮಾಮೂಲಿ. ದೇಹ ತೂಕ ಹೆಚ್ಚುವಿಕೆ ಮತ್ತೊಂದು ಸಮಸ್ಯೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ