ಗರ್ಭಾವಸ್ಥೆಯಲ್ಲಿ ನಿಮ್ಮ ಸ್ಕಿನ್ ಕೇರ್ ರೊಟೀನ್ ನಲ್ಲಿ ಎಂತೆಂಥ ಪ್ರಾಡಕ್ಟ್ಸ್ ಬಳಸಿಕೊಳ್ಳಬೇಕೆಂದು ವಿವರವಾಗಿ ತಿಳಿಯಿರಿ.......!
ನಿಮ್ಮ ಡ್ರೆಸ್ಸಿಂಗ್ ಟೇಬಲ್ ಹಲವಾರು ಮೇಕಪ್ ಸಾಮಗ್ರಿಗಳಿಂದ ತುಂಬಿರಬಹುದು, ಆದರೆ ಪ್ರೆಗ್ನೆನ್ಸಿಯಲ್ಲಿ ಅದು ನಿಮ್ಮ ಸ್ಕಿನ್ ಕೇರ್ ಗೆ ತಕ್ಕಂತಿದೆಯೇ ಎಂಬುದನ್ನು ಗಮನಿಸಿಕೊಳ್ಳಿ. ಏಕೆಂದರೆ ಈ ಸ್ಥಿತಿಯಲ್ಲಿ ನಿಮ್ಮ ದೇಹದಲ್ಲಾಗುವ ಬದಲಾವಣೆಗಳಂತೆಯೇ, ನಿಮ್ಮ ಚರ್ಮದಲ್ಲೂ ಅನೇಕ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹಾರ್ಮೋನ್ಸ್ ಬಿಗಡಾಯಿಸುವ ಪರಿಸ್ಥಿತಿಯೇ ಹೆಚ್ಚು. ಆಗ ಚರ್ಮದಲ್ಲಿ ಆರ್ದ್ರತೆ ತೀವ್ರವಾಗಿ ಕುಸಿದು, ಅದು ಹೆಚ್ಚು ಸೆನ್ಸಿಟಿವ್ ಆಗುತ್ತದೆ.
ಹೀಗಾಗಿ ನೀವು ಹಿಂದಿನಂತೆ ನಿಮ್ಮ ಸ್ಕಿನ್ ಕೇರ್ ರೊಟೀನ್ ನ್ನು ಫಾಲೋ ಮಾಡಲಾಗದು. ಹೀಗಾಗಿ ನೀವೀಗ ನಿಮ್ಮ ಸ್ಕಿನ್ ಕೇರ್ ರೊಟೀನ್ ಗಾಗಿ, ನಿಮ್ಮ ಪ್ರೆಗ್ನೆನ್ಸಿ ಹಾಗೂ ಪ್ರಸವದ ನಂತರ, ತಾಯಿಮಗುವಿನ ಚರ್ಮ ರಕ್ಷಣೆ ಪೋಷಣೆ ಮಾಡುವಂಥ ಪ್ರಾಡಕ್ಟ್ಸ್ ನ್ನು ಮಾತ್ರ ಬಳಸುವಂಥ ಕೆಲಸ ಮಾಡಬೇಕಿದೆ.
ಇಂಥ ಸಂದರ್ಭದಲ್ಲಿ ಯಾವ ಬಗೆಯ ಕಾಸ್ಮೆಟಿಕ್ ಪ್ರಾಡಕ್ಟ್ಸ ನ್ನು ಬಳಸಬೇಕು/ಬಳಸಬಾರದು ಎಂಬುದನ್ನು ವಿವರವಾಗಿ ತಿಳಿಯೋಣ :
ರೆಟಿನಾಲ್ : ಉತ್ತಮ ತ್ವಚೆ, ಪ್ರಜನನ ಸಂಬಂಧಿತ ಹಾಗೂ ಉತ್ತಮ ಆರೋಗ್ಯಕ್ಕಾಗಿ ವಿಟಮಿನ್‌ಬಹಳ ಅತ್ಯಗತ್ಯ. ಆದರೆ ನಾವು ಇದನ್ನು ಚರ್ಮಕ್ಕೆ ಬಳಸಿದಾಗ, ನಮ್ಮ ದೇಹ ವಿಟಮಿನ್ಸ್ ನ್ನು ರೆಟಿನಾಲ್ ಆಗಿ ಬದಲಾಯಿಸಿಕೊಳ್ಳುತ್ತದೆ. ಬಹಳಷ್ಟು ಆ್ಯಂಟಿ ಏಜಿಂಗ್ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ರೆಟಿನಾಯ್ಡ್ ಇರುತ್ತದೆ, ಇದೂ ಒಂದು ಬಗೆಯ ರೆಟಿನಾವೇ ಆಗಿರುತ್ತದೆ. ಇದರಿಂದ ಆ್ಯಕ್ನೆ, ಸುಕ್ಕುಗಳ ಸಮಸ್ಯೆ ನಿವಾರಣೆಯಾಗುತ್ತದೆ. ರೆಟಿನಾಯ್ಡ್ ಡೆಡ್ ಸ್ಕಿನ್ ನ್ನು ಎಕ್ಸ್ ಫಾಲಿಯೇಟ್ ಮಾಡಿ, ವೇಗವಾಗಿ ಕೊಲೋಜೆನ್ ನಿರ್ಮಾಣದಲ್ಲಿ ಸಹಕರಿಸುತ್ತದೆ.
ಆದರೆ ಓವರ್ ದಿ ಕೌಂಟರ್ ಮೆಡಿಸಿನ್ಸ್ ಗೆ ಹೋಲಿಸಿದಾಗ, ಪ್ರಿಸ್ ಕ್ರೈಬ್ಡ್ ಮೆಡಿಸಿನ್ ನಲ್ಲಿ ಬಹಳಷ್ಟು ರೆಟಿನಾಯ್ಡ್, ಇರುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಇದನ್ನು ಬಳಸಿದಾಗ, ಅದು ಮಗುವಿಗೆ ಅನೇಕ ತೊಂದರೆಗಳನ್ನು ಒಡ್ಡಬಹುದು. ಹೀಗಾಗಿ ಪ್ರೆಗ್ನೆನ್ಸಿಯಲ್ಲಿ ಸ್ಕಿನ್ ಕೇರ್ ಸಲುವಾಗಿ ಇಂಥದ್ದನ್ನುಳ್ಳ ಪ್ರಾಡಕ್ಟ್ಸ್ ಬಳಸದಿರಿ.
ಸ್ಯಾಲಿಸಿಲಿಕ್ ಆ್ಯಸಿಡ್ : ಆ್ಯಸ್ಪಿರಿನ್ ಗೆ ಹೋಲಿಸಿದಾಗ ಇದರಲ್ಲಿ ಬಹುತೇಕ ಆ್ಯಂಟಿ ಇನ್ ಫ್ಲಮೇಟರಿ ಪ್ರಾಪರ್ಟೀಸ್ ಹೆಚ್ಚಾಗಿರುತ್ತದೆ. ಇದನ್ನು ಬಹುತೇಕವಾಗಿ ಆ್ಯಕ್ನೆ ಉಪಶಮನಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ, ಇಂಥ ಆ್ಯಸಿಡ್ ವುಳ್ಳ ಕ್ರೀಮ್ಸ್ ನ್ನು ಪ್ರೆಗ್ನೆನ್ಸಿಯಲ್ಲಿ ಬಳಸಲು ಹೋಗಬೇಡಿ. ಏನಾದರೂ ತೀವ್ರ ಅಗತ್ಯವಿದ್ದಾಗ ಮಾತ್ರ, ವೈದ್ಯರು ನಿಮಗೆ 2% ಗಿಂತಲೂ ಕಡಿಮೆ ಇರುವಂಥ ಇಂಥ ಕ್ರೀಮ್ಸ್ ಬಳಸಲು ತಿಳಿಸುತ್ತಾರೆ. ಹೀಗಾಗಿ ನೀವು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸುತ್ತಿದ್ದರೆ, ಇದರಿಂದ ಹಾನಿ ತಪ್ಪಿದ್ದಲ್ಲ.
ಸನ್ ಸ್ಕ್ರೀನ್ : ಇದರಲ್ಲಿ ಅತ್ಯಧಿಕ ಬಳಸಲ್ಪಡುವ ಅಂಶವೆಂದರೆ UVA ಫಿಲ್ಟರ್ ಆಕ್ಸಿಬೆಂಝೋನ್ ಹಾಗೂ ಅದರ ವಿಭಿನ್ನ ಪ್ರಕಾರಗಳು. ಆದರೆ ಇದು ಚರ್ಮವನ್ನು ರಕ್ಷಿಸುವ ಕೆಲಸ ಮಾಡುವುದರಿಂದ, ಸಹಿಸಬೇಕಾಗಿದೆ. ಏನೇ ಆಗಲಿ ಇದು ನಮ್ಮ ಆರೋಗ್ಯ ಹಾಗೂ ಸುತ್ತಲಿನ ಪರಿಸರಕ್ಕೆ ಖಂಡಿತಾ ಒಳ್ಳೆಯದಲ್ಲ. ಏಕೆಂದರೆ ಇದು ಒಂದು ವಿಧದ ಎಂಡೋಕ್ರೈ ಡಿಸರಪ್ಟರ್. ಹೀಗಾಗಿ ಪ್ರೆಗ್ನೆನ್ಸಿಯಲ್ಲಿ ಇದರ ಬಳಕೆಯಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಬಹುದು. ತಾಯಿ-ಮಗು ಇಬ್ಬರಿಗೂ ಹಾನಿ ತಪ್ಪಿದ್ದಲ್ಲ.





