ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಹೋಗಬೇಕಾದಾಗ, ನೀವು ಧರಿಸುವ ಡ್ರೆಸ್ಗೆ ತಕ್ಕಂತೆ ಸ್ವರ್ಣಾಭರಣಗಳು ಸ್ಟೈಲಿಶ್ಆಗಿರುವಂತೆ, ನಿಮ್ಮ ಸ್ಮಾರ್ಟ್ನೆಸ್ಹೆಚ್ಚಿಸಲು ಏನು ಮಾಡಬೇಕು ಎಂದು ವಿವರವಾಗಿ ಗಮನಿಸೋಣವೇ.....?

ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ. ಹೀಗಾಗಿ ಹೆಂಗಸರ ದಂಡು ಸಹಜವಾಗಿ ಒಡವೆಗಳ ಅಂಗಡಿಗಳತ್ತ ಮುತ್ತುತ್ತದೆ. ವಿವಿಧ ಸ್ವರ್ಣಾಭರಣ ಖರೀದಿಸುವ ನಮ್ಮ ಓದುಗರಿಗೆಂದೇ ನಗರದ ಹಲವಾರು ಜ್ಯೂವೆಲರಿಯ ಮಾಲೀಕರು, ಜ್ಯೂವೆಲರಿ ಡಿಸೈನರ್ಸ್‌ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸೋಣವೇ? ಮುಖ್ಯವಾಗಿ ದೊಡ್ಡ ಹಬ್ಬಗಳಿಗಾಗಿ ಖರೀದಿಸುವ ಭಾರಿ ಬಜೆಟ್ ನ ಉಡುಗೆಗೆ ತಕ್ಕಂತೆ, ಒಡವೆಗಳ ಸ್ಟೈಲ್ ಸ್ಟೇಟ್‌ ಮೆಂಟ್‌ ಇರಬೇಕು.

ಬೇರೆ ಬೇರೆ ಡ್ರೆಸ್‌ ಗಳಿಗೆ ತಕ್ಕಂತೆ ಸ್ಟೈಲಿಶ್‌ ಜ್ಯೂವೆಲರಿ ಧರಿಸಬೇಕು. ನವರಾತ್ರಿಯ ಗುಜರಾತಿ ಡ್ಯಾನ್ಸ್ ಗರ್ಬಾ ಸ್ಟೈಲಿನ ಲೆಹಂಗಾ ಚೋಲಿ ಜೊತೆ, ನೀವು ಬೆಳ್ಳಿಯ ಆಭರಣ ಧರಿಸಿದರೆ ಚಂದ. ಮೆಟಲ್ ನ ಆಕ್ಸಿಡೈಸ್ಡ್ ಬಲು ಕಾಂಪ್ಲಿಮೆಂಟ್‌ ಆಗಿರುತ್ತದೆ. ಲೆಹಂಗಾ ಜೊತೆ ನೀವು ಸಿಲ್ವರ್‌ ಜ್ಯೂವೆಲರಿ ಸಹ ಧರಿಸಬಹುದು, ಅಂದ್ರೆ ಜುಮಕಿ, ಬೈತಲೆ ಆಭರಣ ಇತ್ಯಾದಿ ಬಹಳ ಪ್ರಿಟಿ ಎನಿಸುತ್ತದೆ.

ಲೆಹಂಗಾ ಜೊತೆ ನೀವು ಹೆವಿ ಲುಕ್ಸ್ ಸಹ ಪಡೆಯಬಹುದು. ಇದಕ್ಕಾಗಿ ನೀವು ಉ.ಭಾರತದ ಕಡೆ ಫೇಮಸ್‌ ಎನಿಸಿರುವ ರಾಣಿ ಹಾರ ಸಹ ಧರಿಸಿರಿ. ಮೊದಲು ಚೋಕರ್‌ ಧರಿಸಿ, ನಂತರ ರಾಣಿ ಹಾರ, ಕೊನೆಗೆ ಕೈಗಳಿಗೆ ಬಂಗಾರ, ವಜ್ರದ, ಪೀಲ್ಕಿ ಬಳೆಗಳನ್ನು ಧರಿಸಲು ಮರೆಯದಿರಿ.

ನೀವು ಹಬ್ಬದ ಈ ಸಂದರ್ಭದಲ್ಲಿ ಕಾಂಜೀವರಂ, ಮೈಸೂರು ಸಿಲ್ಕ್ ಸೀರೆ ಆರಿಸುವುದು ಸಹಜ. ಹೀಗಾಗಿ ಇದಕ್ಕೆ ಹೊಂದುವಂತೆ ಅಚ್ಚುಕಟ್ಟಾದ ಬಂಗಾರದ ಆಭರಣ, ಸ್ವರ್ಣಾಭರಣ, ಮುತ್ತುರತ್ನಗಳ ಒಡವೆ ಧರಿಸಿರಿ. ಗೋಲ್ಡನ್‌ ಬೈತಲೆ ಬೊಟ್ಟು, ಚೋಕರ್‌, ಕಿವಿಯ ಓಲ್, ಮಾಟ್ಲು, ಬಳೆಗಳು ಇತ್ಯಾದಿ. ರೇಷ್ಮೆ ಸೀರೆ ಜೊತೆ ಬಂಗಾರಕ್ಕೆ ಹುದುಗಿಸಲಾದ ನವರತ್ನಗಳ ಚೋಕರ್‌ ಸೆಟ್‌ ಸಹ ಅತ್ಯಂತ ಬ್ಯೂಟಿಫುಲ್ ಸ್ಟೈಲಿಶ್‌ ಎನಿಸುತ್ತದೆ.

ಇದರಿಂದ ನಿಮಗೆ ಅಚ್ಚುಕಟ್ಟಾದ ಸಾಂಪ್ರದಾಯಿಕ ಲುಕ್‌ ಸಿಗುತ್ತದೆ. ಇದರ ಜೊತೆ ನೀವು ಕಲರ್‌ ಫುಲ್ ಲುಕ್ಸ್ ಕ್ಯಾರಿ ಮಾಡಿ. ಆರ್ಗೆಂಝಾ ಸೀರೆ ಜೊತೆ ಡೈಮಂಡ್‌ ಸೆಟ್‌ ಇರಲಿ. ಲೈಟ್‌/ಗ್ರೇ ಯಾ ಪಿಂಕ್‌ ಆರ್ಗೆಂಝಾ ಸೀರೆ ಉಟ್ಟಿದ್ದರೆ, ಅದರ ಜೊತೆ ಬ್ಲೂ ಸಫೈರ್‌ಡೈಮಂಡ್‌ ಸೆಟ್‌ ಬಲು ಮುದ್ದಾಗಿ ಒಪ್ಪುತ್ತದೆ. ಗ್ರೀನ್‌ ಎಮರಾಲ್ಡ್ ಡೈಮಂಡ್‌ ನ ಕಾಂಬಿನೇಶನ್‌ ಸಹ ಅತಿ ಬ್ಯೂಟಿಫುಲ್ ಎನಿಸುತ್ತದೆ.

ಸ್ವಾರ್ಸೂಟ್ಜೊತೆ ಧರಿಸಲು : ಬಾಟ್‌ ಗ್ರೀನ್‌ ಕಲರಿನ ಸಲ್ವಾರ್‌ ಸೂಟ್‌ ಜೊತೆ ನಿಮ್ಮ ಅಚ್ಚುಮೆಚ್ಚಿನ ಡೈಮಂಡ್‌ ನೆಕ್ಲೇಸ್‌(ಸ್ಟ್ರಿಂಗ್‌ ಸ್ಟೈಲ್ ‌ಯಾ ಚೋಕರ್‌ ಸ್ಟೈಲ್‌) ಧರಿಸಿ ಅಥವಾ ಮನೆಯಲ್ಲಿ ಉಳಿದು ಅತಿಥಿಗಳನ್ನು ಆಹ್ವಾನಿಸಿದಾಗ, ಪೆಂಡೆಂಟ್ ಸ್ಟೈಲಿನ ನೆಕ್ಲೇಸ್‌ ಧರಿಸಿರಿ. ಅನಾರ್ಕಲಿ ಸೂಟ್‌ ಹೆವಿ ಆಗುತ್ತದೆ. ಇದರ ಜೊತೆ ಪೋಲ್ಕಿ/ ಕುಂದಣ/ ಡೈಮಂಡ್‌ ನ ದೊಡ್ಡ ದೊಡ್ಡ ಜುಮಕಿ ಧರಿಸಬಹುದು. ಸಿಂಗಲ್ ಸೂಟ್‌ ಜೊತೆ ಪ್ರಾಪರ್‌ ಸೆಟ್‌ ಧರಿಸಿರಿ. ಸೂಟ್‌ ಹೆವಿ ಎನಿಸಿದರೆ, ಜ್ಯೂವೆಲರಿ ತುಸು ಲೈಟ್ ಆಗಿರಲಿ. ಸಣ್ಣಪುಟ್ಟ ಗೆಟ್‌ ಟು ಗೆದರ್‌ ಫಂಕ್ಷನ್‌ ಗಳಿಗೆ, ಇಂಥ ಭಾರಿ ಭಾರಿ ಜ್ಯೂವೆಲರಿ ಧರಿಸಬೇಡಿ. ಆದರೆ ನೂರಾರು ಜನ ಬರುವಂಥ ಮುಂಜಿ, ಮದುವೆ ಅಥವಾ ದೊಡ್ಡ ಶುಭ ಸಮಾರಂಭಗಳಿಗೆ ಅಗತ್ಯ ಇಂಥವನ್ನು ಧರಿಸಿರಿ. ಆದರೆ ಇದನ್ನು ಗ್ರೇಸ್‌ ಪಲಿ ಕ್ಯಾರಿ ಮಾಡಿ, ಏಕೆಂದರೆ ನಿಮ್ಮ ಡ್ರೆಸ್‌ ಮತ್ತು ಜ್ಯೂವೆಲರಿ ಮ್ಯಾಚ್‌ ಆಗುವಂತಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ