ಒಂದು ವೇಳೆ ನಿಮ್ಮ ತ್ವಚೆ ಸಂವೇದನಾಶೀಲವಾಗಿದ್ದರೆ ಬದಲಾಗುತ್ತಿರುವ ವಾತಾವರಣದಲ್ಲಿ ಅದು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಮ್ಮಲ್ಲಿ ಅನೇಕರಿಗೆ ಸೆನ್ಸಿಟಿವ್ ಸ್ಕಿನ್‌ (ಅತಿ ಸಂವೇದನಾಶೀಲ ತ್ವಚೆ) ಇರುತ್ತದೆ. ಆದರೆ ನಮಗೆ ಅದು ತಿಳಿಯುವುದೇ ಇಲ್ಲ. ಅಂತಹ ತ್ವಚೆಯನ್ನು ನಾವು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಅದು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಸೆನ್ಸಿಟಿವ್ ಸ್ಕಿನ್ನ್ನು ಗುರುತಿಸುವಿಕೆ

ಒಂದು ವೇಳೆ ನಿಮ್ಮ ತ್ವಚೆಯ ಮೇಲೆ ಕೆಂಪು ಗುರುತು ಬಿದ್ದರೆ ಅದರಿಂದ ಕೆರೆತ ಉಂಟಾಗುತ್ತದೆ. ನೋವು ಇರುತ್ತದೆ. ತ್ವಚೆ ಬೇಗನೆ ಡ್ಯಾಮೇಜ್‌ ಆಗುತ್ತದೆ. ಬದಲಾದ ವಾತಾವರಣ ಮತ್ತು ವಾಯು ಮಾಲಿನ್ಯ ಪ್ರಭಾವ ಬೀರುತ್ತದೆ. ಏಕೆಂದರೆ ತ್ವಚೆ ಬಹಳ ಸೆನ್ಸಿಟಿವ್ ‌ಆಗಿರುತ್ತದೆ. ಮೇಲಿನ ಸಮಸ್ಯೆಗಳಲ್ಲಿ ಒಂದಾದರೂ ಸಮಸ್ಯೆ ನಿಮ್ಮ ತ್ವಚೆಗೆ ಇದ್ದರೆ ಅದರ ಸಂರಕ್ಷಣೆ ಬಹಳ ಅಗತ್ಯ.

ಸೆನ್ಸಿಟಿವ್ ‌ಸ್ಕಿನ್‌ ಯಾವುದೇ ಕಾಯಿಲೆಯ ಲಕ್ಷಣವಲ್ಲ. ಆದರೆ ಅದು ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಸೆನ್ಸಿಟಿವ್ ‌ಸ್ಕಿನ್‌ನವರಿಗೆ ರೊಜೋಸಿಯಾ, ಎಕ್ಸಿಮಾ, ಸೋರಿಯಾಸಿಸ್‌, ಮೊಡವೆಗಳು ಅಥವಾ ಅಲರ್ಜಿ ಉಂಟಾಗುತ್ತದೆ. ಅನೇಕರು ಈ ಲಕ್ಷಣಗಳನ್ನು ಬರೀ ಸೆನ್ಸಿಟಿವಿಟಿ ಎಂದುಕೊಳ್ಳುತ್ತಾರೆ. ಅವರು ನಿಜವಾದ ಸಮಸ್ಯೆಯತ್ತ ಗಮನಿಸುವುದೇ ಇಲ್ಲ. ಇಂತಹ ಯಾವುದೇ ಲಕ್ಷಣ ಕಂಡ ಕೂಡಲೇ ಡರ್ಮಟಾಲಜಿಸ್ಟ್ ರ ಸಲಹೆ ಪಡೆಯಿರಿ.

ಸೆನ್ಸಿಟಿವ್ ‌ಸ್ಕಿನ್‌ನವರಲ್ಲಿ ಇತರ ಲಕ್ಷಣಗಳೂ ಕಂಡುಬರುತ್ತವೆ. ಯಾದಾದರೂ ಪ್ರಾಡಕ್ಟ್ ಉಪಯೋಗಿಸುವುದರಿಂದ ರಾಶೆಸ್‌ಉಂಟಾಗುವುದು, ಉರಿಯುಂಟಾಗುವುದು, ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದರೆ ತ್ವಚೆಯಲ್ಲಿ ಎಳೆತ, ಜೋಮುಂಟಾಗುವುದು ಇತ್ಯಾದಿ ಕಂಡುಬರುತ್ತದೆ. ಇಲ್ಲದೆ ಮುಖದ ಮೇಲೆ ಒಮ್ಮೊಮ್ಮೆ ಕೆಂಪು ಗುರುತು ಬರುವುದು ಬಿಸಿಲಿನ ಕಾರಣವಾಗಿರುತ್ತದೆ. ಶೇವಿಂಗ್‌ ನಂತರ ಗುಳ್ಳೆಗಳುಂಟಾಗುತ್ತವೆ.

ಸೆನ್ಸಿಟಿವ್ ಸ್ಕಿನ್ಗೆ ಕಾರಣ

ಸೆನ್ಸಿಟಿವ್ ‌ಸ್ಕಿನ್‌ಗೆ ಅನೇಕ ಕಾರಣಗಳಿವೆ. ಪ್ರತಿ ವ್ಯಕ್ತಿಗೆ ಇದು ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತದೆ. ಸೆನ್ಸಿಟಿವ್ ‌ಸ್ಕಿನ್ ಆನುವಂಶಿಕ ಕಾರಣದಿಂದಲೂ ಉಂಟಾಗಬಹುದು ಅಥವಾ ವಾತಾವರಣದಲ್ಲೂ ಇದಕ್ಕೆ ಕಾರಣ ಅಡಗಿರಬಹುದು.

ಒಂದು ವೇಳೆ ನಿಮ್ಮ ತ್ವಚೆ ಬೇಗನೆ ಕೆಂಪಾದರೆ ನವೆ ಉಂಟಾಗುತ್ತದೆ, ಕಲೆಗಳು ಉಂಟಾಗಬಹುದು. ಇದಕ್ಕೆ ಆನುವಂಶಿಕತೆ ಕಾರಣ ಇರಬಹುದು. ಕೆಲವು ಅಲರ್ಜಿಕಲ್ ರಿಯಾಕ್ಷನ್‌ ಕೂಡಾ ಕುಟುಂಬದವರಿಂದಲೇ ಉಂಟಾಗುತ್ತದೆ.

ಹಲವು ಬಾರಿ ನೀವು ತಿನ್ನುವ ಆಹಾರ ಸಹ ನಿಮ್ಮ ತ್ವಚೆಯನ್ನು ಸೆನ್ಸಿಟಿವ್ ‌ಆಗಿಸುತ್ತದೆ ಅಥವಾ ಅಲರ್ಜಿಕ್‌ ರಿಯಾಕ್ಷನ್‌ನ್ನು ಹೆಚ್ಚಿಸುತ್ತದೆ. ಕಾಫಿ ಅಥವಾ ಇತರ ಬಿಸಿ ಪಾನೀಯಗಳು ಮತ್ತು ಗರಂ ಮಸಾಲ ಕೂಡ ನಿಮ್ಮ ಸ್ಕಿನ್‌ನಲ್ಲಿ ಉಂಟಾಗುವ ರಿಯಾಕ್ಷನ್‌ಗೆ ಕಾರಣವಾಗುತ್ತವೆ. ಇದಲ್ಲದೆ, ನಿಮ್ಮ ಸ್ಕಿನ್‌ ಕೆಲ ವಿಶೇಷ ಸ್ಕಿನ್‌ ಕೇರ್‌ ಮತ್ತು ಹೆಲ್ತ್ ಪ್ರಾಡಕ್ಟ್ ಗಳಿಂದ ಸೆನ್ಸಿಟಿವ್ ಆಗುತ್ತದೆ. ಅಂತಹ ಸ್ಥಿತಿಯಲ್ಲಿ ಸ್ಕಿನ್‌ಗೆ ಹೆಚ್ಚುವರಿ ಗಮನ ಕೊಡಬೇಕಾಗುತ್ತದೆ.

ತ್ವಚೆ ತಜ್ಞರಿಗೆ ತೋರಿಸಿ

ತ್ವಚೆಯ ಸೆನ್ಸಿಟಿವ್ ನೆಸ್‌ ಬಗ್ಗೆ ನೀವು ತೊಂದರೆ ಅನುಭವಿಸುತ್ತಿದ್ದರೆ ಕೂಡಲೇ ತ್ವಚೆಯ ತಜ್ಞರ ಬಳಿ ಹೋಗಿ ಚೆಕಪ್‌ ಮಾಡಿಸಿ. ಯಾವ ಕಾರಣದಿಂದ ನಿಮ್ಮ ಸ್ಕಿನ್‌ ಇಷ್ಟು ಸೆನ್ಸಿಟಿವ್ ‌ಆಗಿದೆ ಎಂದು ತಿಳಿದುಕೊಳ್ಳಬೇಕು. ತ್ವಚೆಯ ತಜ್ಞರಿಗೆ ತೋರಿಸಿದ ನಂತರ ಈ ಸಮಸ್ಯೆಗಳನ್ನು ಎದುರಿಸಲು ಉತ್ತಮ ವಿಧಾನಗಳು ಹಾಗೂ ಸಾಧನಗಳು ಕಂಡುಬರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ