ಉತ್ತಮ ಕ್ವಾಲಿಟಿಯ ಆ್ಯಂಟಿ ಏಜಿಂಗ್‌ ಪ್ರಾಡಕ್ಟ್ಸ್ ನ್ನು ಸಹ ಬಳಸಬೇಕು. ಇದು ನಿಮ್ಮ ಮುಖದಲ್ಲಿನ ಕಳೆದುಹೋದ ಕಾಂತಿ ವಾಪಸ್ಸು ತರುವುದಲ್ಲದೆ, ನಿಮ್ಮ ತ್ವಚೆಗೆ ಎವರ್‌ ಗ್ರೀನ್‌ ಹೊಳಪನ್ನೂ ನೀಡುತ್ತದೆ. ಬನ್ನಿ, ಇಂಥ ಎವರ್‌ ಗ್ರೀನ್‌ ಸ್ಕಿನ್‌ವುಳ್ಳ ಮಹಿಳೆಯರನ್ನು ಮಾತನಾಡಿಸಿ, ಸರಿಯಾದ ಆ್ಯಂಟಿ ಏಜಿಂಗ್‌ ಪ್ರಾಡಕ್ಟ್ಸ್ ನ್ನು ಆರಿಸಿ, ಬಳಸುವುದು ಹೇಗೆ ಎಂದು ತಿಳಿಯೋಣ.

ತ್ವಚೆ ಗಮನಿಸಿ ಆ್ಯಂಟಿ ಏಜಿಂಗ್ಕ್ರೀಂ ಆರಿಸಿ

35 ವರ್ಷದ ರೇಷ್ಮಾ ಒಬ್ಬ ಯಶಸ್ವಿ ಗೃಹಿಣಿ. ಏಕೆಂದರೆ ಆಕೆಗೆ ಪ್ರತಿ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿಕೊಳ್ಳುವ ಆತ್ಮವಿಶ್ವಾಸವಿದೆ. ಈ ಆತ್ಮವಿಶ್ವಾಸ ಅವರಿಗೆ ಅವರ ಎವರ್‌ ಗ್ರೀನ್‌ ತ್ವಚೆಯಿಂದ ದೊರಕುತ್ತದೆ, ಎನ್ನುತ್ತಾರೆ. ಆದರೆ ರೇಷ್ಮಾ ಹೇಳುವುದು, ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಮುಖದಲ್ಲಿ ಕಾಣುವ ಸುಕ್ಕುಗಳು ಪ್ರೆಸೆಂಟೆಬಲ್ ಆಗಿ ಕಾಣಿಸಿಕೊಳ್ಳಲು ಮುಖ್ಯ ಅಡ್ಡಿ. ಹೀಗಾಗಿ ಕಾಲ ಸರಿಯುವ ಮುನ್ನ, ಇದಕ್ಕೆ ಚಿಕಿತ್ಸೆ ಶುರು ಮಾಡಿದರು. ಆಕೆ ಪ್ರಕಾರ, ತಾನು 30ರ ಗಡಿ ಸಮೀಪಿಸುತ್ತಿದ್ದಂತೆ ಆ್ಯಂಟಿ ಏಜಿಂಗ್‌ ಪ್ರಾಡಕ್ಟ್ ಬಳಸಲು ಶುರು ಮಾಡಿದರು. ಅದರ ಪರಿಣಾಮವಾಗಿ ರೇಷ್ಮಾ, ತಮ್ಮ ಸಮವಯಸ್ಕ ಮಹಿಳೆಯರಿಗಿಂತ 10 ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆ. ನನಗೆ  5 ವರ್ಷದ ಮಗಳಿದ್ದಾಳೆ ಎಂದರೆ ಯಾರೂ ನಂಬುವುದಿಲ್ಲ, ಎನ್ನುತ್ತಾರೆ.

ಸಮರ್ಪಕ ಬಳಕೆಯೂ ಅತ್ಯಗತ್ಯ

ಉತ್ತಮ ಬ್ರಾಂಡ್‌ನ ಮತ್ತು ತ್ವಚೆಯನ್ನು ಸೂಟ್‌ ಮಾಡುವಂಥ ಆ್ಯಂಟಿ ಏಜಿಂಗ್‌ ಕ್ರೀಂ ಕೊಳ್ಳುವುದರ ಜೊತೆಯಲ್ಲೇ, ಅದನ್ನು ಬಳಸುವ ಸರಿಯಾದ ವಿಧಾನ ತಿಳಿದಿರುವುದೂ ಅಷ್ಟೇ ಮುಖ್ಯ.

ಬ್ಯಾಂಕಿಂಗ್‌ ಸೆಕ್ಟರ್‌ನಲ್ಲಿ ಕೆಲಸ ಮಾಡುವ ರೇಣುಕಾ ಸಿಂಗ್‌ರ ವಯಸ್ಸು 40. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ರೇಣುಕಾ ಖುದ್ದಾಗಿ ತಾವೇ ಇದನ್ನು ಹೇಳಿಕೊಳ್ಳುವವರೆಗೂ, ಜನ ಅವರ ವಯಸ್ಸನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಇದರ ರಹಸ್ಯದ ಬಗ್ಗೆ ರೇಣುಕಾ ತಿಳಿಸುತ್ತಾರೆ, ಆಕೆ ತಮ್ಮ ತ್ವಚೆಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರಂತೆ. ಇದಕ್ಕಾಗಿ ಆಕೆ ಅಗತ್ಯವಾಗಿ ಆ್ಯಂಟಿ ಏಜಿಂಗ್‌ ಕ್ರೀಂ ಬಳಸುತ್ತಾರೆ, ಅದೂ ಸರಿಯಾದ ಕ್ರಮದಲ್ಲಿ. ರೇಣುಕಾ ಹೇಳುತ್ತಾರೆ, ನಾನು ಪ್ರತಿ ರಾತ್ರಿ ಮಲಗುವ ಮುನ್ನ ಮುಖದಿಂದ ಮೇಕಪ್‌ನ್ನು ಚೆನ್ನಾಗಿ ತೆಗೆದುಹಾಕಿ, ಆಮೇಲೆ ನೈಟ್‌ ಕ್ರೀಂ ಹಚ್ಚಿ ಮಲಗುತ್ತೇನೆ. ನಾನು ಇದನ್ನು ಲಘುವಾಗಿ ಕೈ ಬೆರಳುಗಳಿಂದ ಮುಖ, ಕೈ ಕಾಲು, ಕುತ್ತಿಗೆಗೆ ಹಚ್ಚಿಕೊಳ್ಳುತ್ತೇನೆ. ಮತ್ತೊಂದು ಮಹತ್ವಪೂರ್ಣ ಸಲಹೆ ನೀಡುತ್ತಾ, ನೀವು ಒಂದು ವರ್ಷದಿಂದ ಪ್ರತಿ ದಿನ ನೈಟ್‌ ಕ್ರೀಂ ಬಳಸುತ್ತಿರುವಿರಾದರೆ, ನಂತರದ ಒಂದು ವರ್ಷ ವಾರಕ್ಕೆ 3-4 ಸಲ ನೈಟ್‌ ಕ್ರೀಂ ಹಚ್ಚಿದರೂ ನಿಮ್ಮ ಕೆಲಸ ಸುಲಭವಾಗುತ್ತದೆ, ಎನ್ನುತ್ತಾರೆ.

ತ್ವಚೆಯ ಅಗತ್ಯ ಅರಿತುಕೊಳ್ಳಿ

ನೀವು ಸಹ ಎವರ್‌ ಗ್ರೀನ್‌ ತ್ವಚೆ ಪಡೆಯಬಹುದು, ಆದರೆ ಸರಿಯಾದ ಸಮಯದಲ್ಲಿ ಆ್ಯಂಟಿ ಏಜಿಂಗ್‌ ಉತ್ಪನ್ನಗಳನ್ನು ಬಳಸಲು ಆರಂಭಿಸಬೇಕು. ರೇಷ್ಮಾ ಹೇಳುತ್ತಾರೆ, ಮಾರ್ಕೆಟ್‌ನಲ್ಲಿ ಬೇಕಾದಷ್ಟು ಆ್ಯಂಟಿ ಏಜಿಂಗ್‌ ಕ್ರೀಮುಗಳಿವೆ, ಆದರೆ ನಿಮ್ಮ ತ್ವಚೆಗೆ ಯಾವ ಕ್ರೀಂ ಸರಿಹೊಂದುತ್ತದೋ ಅದನ್ನು ತಿಳಿದೇ ಕ್ರೀಂ ಆರಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ