ಹಬ್ಬದ ಸಮಯದಲ್ಲಿ ಹೆಂಗಸರು ಪರ್ಫೆಕ್ಟ್, ಗ್ಲಾಮರಸ್ ಆಗಿ ಕಾಣಿಸ ಬಯಸುತ್ತಾರೆ. ಸೆಲೆಬ್ರಿಟಿ ಫ್ಯಾಷನ್ ಸದಾ ಟ್ರೆಂಡ್‌ನಲ್ಲಿರುತ್ತದೆ. ಆಂತರಿಕ ಸೌಂದರ್ಯದಿಂದಲೇ ನಮ್ಮ ನಿಜವಾದ ವ್ಯಕ್ತಿತ್ವ ಹೊರಹೊಮ್ಮುವುದು ಎಂಬುದು ಸತ್ಯ. ಆದರೆ ಹಬ್ಬಗಳಲ್ಲಿ ನಾಲ್ವರಂತೆ ಉಟ್ಟುತೊಟ್ಟು, ಟಿಪ್ ಟಾಪ್ ಎನಿಸಿದರೆ ಎಷ್ಟು ಚೆಂದ ಅಲ್ಲವೇ? ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು ಇಂಥ ಆಕರ್ಷಕ ಉಡುಗೆಗಳು ಬೇಕೇಬೇಕು.
ಹೀಗಾಗಿ ಸ್ಕಿನ್ ಕೇರ್‌ನಿಂದ ಹಿಡಿದು, ಮೇಕಪ್, ಡ್ರೆಸ್ಸಿಂಗ್ ಸೆನ್ಸ್..... ಎಲ್ಲವೂ ಮುಖ್ಯವಾಗುತ್ತದೆ. ಅಂದವಾಗಿ ಕಂಡುಬರಲು ಕೇವಲ ಧಾರಾಳ ಹಣ ಖರ್ಚು ಮಾಡಿದರೆ ಸಾಲದು, ಬದಲಿಗೆ ಕನಿಷ್ಠ ಖರ್ಚಿನಲ್ಲೇ ಎಲ್ಲರಿಗಿಂತ ವಿಭಿನ್ನ ಲುಕ್ಸ್ ಪಡೆಯಬೇಕು. ಇದಕ್ಕಾಗಿ ನಿಮ್ಮ ಕ್ರಿಯೇಟಿವಿಟಿ ಹೆಚ್ಚಿಸಿ
ಬಣ್ಣ ಬಣ್ಣದ ಟ್ರೌಸರ್ಸ್ ಪ್ರತಿಯೊಬ್ಬರೂ ಜೀನ್ಸ್ ಧರಿಸುತ್ತಾರೆ. ನಿಮ್ಮ ಬಳಿಯೂ ಸಾಕಷ್ಟು ಇರಬಹುದು, ಹೀಗಾಗಿ ಮುಂದಿನ ಸಲ ಜೀನ್ಸ್ ಖರೀದಿಸುವ ಬದಲು, ಬಣ್ಣಬಣ್ಣದ ಟ್ರೌಸರ್ಸ್ ಕೊಂಡುಕೊಳ್ಳಿ. ಇದರಿಂದ ಸ್ಟೈಲಿಶ್ ಲುಕ್ಸ್ ಸಿಗುತ್ತದೆ, ಯಾವುದೇ ಟಾಪ್ ಗೂ ಹೊಂದಿಕೊಳ್ಳುತ್ತದೆ. ಆಫೀಸಿಗೆ ಇವು ಹೆಚ್ಚು ಆರಾಮದಾಯಕ. ಆ್ಯಂಕ್ ಲೆಂಥ್ ಟ್ರೌಸರ್‌ನ್ನು ಕುರ್ತಿ ಜೊತೆ ಟ್ರೈ ಮಾಡಿ. ಇದು ಫಾರ್ಮಲ್ ಲುಕ್ಸ್ ಜೊತೆ ಲೇಟೆಸ್ಟ್ ಫ್ಯಾಷನ್ ಗೂ ಹೇಳಿ ಮಾಡಿಸಿದಂತಿರುತ್ತದೆ.
ಪ್ಲೀಟೆಡ್ ಸ್ಕರ್ಟ್ ನಿಮ್ಮ ವಾರ್ಡ್ ರೋಬ್ ನಲ್ಲಿ ಕನಿಷ್ಠ ಒಂದಾದರೂ ಪ್ಲೀಟೆಡ್ ಸ್ಕರ್ಟ್ ಇರಿಸಿಕೊಳ್ಳಿ. ಇದು ನಿಮ್ಮ ಬಜೆಟ್ ಫ್ರೆಂಡ್ಲಿ ಆಗಿರುವುದರ ಜೊತೆ ಸುಪರ್ಬ್ ಸ್ಟೈಲಿಶ್ ಲುಕ್ಸ್ ಸಹ ನೀಡುತ್ತದೆ. ಪಾರ್ಟ್‌ನರ್ ಜೊತೆ ಡೇಟ್, ಫ್ರೆಂಡ್ಸ್ ಜೊತೆ ಪಾರ್ಟಿ, ಆಫೀಸ್ ಫಂಕ್ಷನ್..... ಯಾವುದೇ ಇರಲಿ, ಇದು ಫಾರ್ಮಲ್ ಕ್ಯಾಶ್ಯುಯೆಲ್ ಎರಡಕ್ಕೂ ಪರ್ಫೆಕ್ಟ್ ಆಯ್ಕೆ ಆಗಿರುತ್ತದೆ. ಯಾವುದೇ ಟಾಪ್ ಜೊತೆ ಈ ಸ್ಕರ್ಟ್ ನ್ನು ಕ್ಯಾರಿ ಮಾಡಿ, ಬೊಂಬಾಟ್ ಲುಕ್ಸ್ ಪಡೆಯಿರಿ.
ಸ್ಟ್ರಿಪ್ ಡ್ರೆಸ್ ಯಾವ ತರುಣಿಯೇ ಇರಲಿ, ಸಿನಿಮಾ ನಟಿಯಂಥ ಲುಕ್ಸ್ ಪಡೆಯಲು ಬಯಸಿದರೆ, ಅವಳ ಬಳಿ ಕನಿಷ್ಠ ಒಂದಾದರೂ ಸ್ಟ್ರಿಪ್ ಡ್ರೆಸ್ ಇರಲೇಬೇಕು. ನೀವು ನಿಮಗೆ ವಿಶೇಷ ಎನಿಸುವಂಥ ಯಾವುದೇ ದಿನ ವಿಭಿನ್ನ ಲುಕ್ಸ್ ಬಯಸಿದರೆ, ಇದನ್ನು ಧರಿಸಿ ನೋಡಿ. ಇದೂ ನಿಮಗೆ ಬಜೆಟ್ ಫ್ರೆಂಡ್ಲಿ ಆಗಿದ್ದು, ಮತ್ತೆ ಮತ್ತೆ ಶಾಪಿಂಗ್ ಮಾಡುವ ಗೋಜನ್ನು ತಪ್ಪಿಸುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದರ ಲೆಂಥ್ ಬದಲಾಯಿಸಿಕೊಳ್ಳಿ.
ಸೀಕ್ವೆನ್ಸ್ ಸೀರೆ
ತರುಣಿಯರ ಬಳಿ ಎಷ್ಟೇ ವೆಸ್ಟರ್ನ್ ಡ್ರೆಸ್ ಇರಲಿ, ಸೀರೆಯ ವಿಷಯ ಬಂದಾಗ ಎಲ್ಲರೂ `ವಾವ್!' ಎಂದು ತಲೆದೂಗಿ ಒಪ್ಪುತ್ತಾರೆ. ಹೀಗಾಗಿ ನೀವು ಸೀರೆಗಳಲ್ಲಿ ಹೊಸತನ್ನು ಟ್ರೈ ಮಾಡಬಯಸಿದರೆ, ನಿಮ್ಮ ಅಚ್ಚುಮೆಚ್ಚಿನ ಬಣ್ಣದ ಸೀಕ್ವೆನ್ಸ್ ಸೀರೆ (ಮೇಲಿನ ಚಿತ್ರ ನೋಡಿ) ಒಂದನ್ನು ಅಗತ್ಯ ಇರಿಸಿಕೊಳ್ಳಿ. ಇದನ್ನು ಉಟ್ಟಾಗ ನೀವು ಇತರ ಎಲ್ಲಾ ಉಡುಗೆಗಳಿಗಿಂತ ಅತಿ ಸುಂದರವಾಗಿ ಕಾಣುವಿರಿ. ಮದುವೆಯಂಥ ಶುಭ ಸಮಾರಂಭ ಅಥವಾ ಕಾಕ್ ಟೇಲ್ ಪಾರ್ಟಿ, ಇಂಥ ಸೀರೆಯ ಮೋಡಿ ಅದ್ಛುತ ಪರಿಣಾಮ ಬೀರುತ್ತದೆ. ಭಾರತೀಯ ಯಾವ ಭಾಷೆಯ ಸಿನಿಮಾ ಆದರೂ ಸರಿ, ಆ ಕಾಲದಿಂದ ಈ ಕಾಲಕ್ಕೂ ನಟೀಮಣಿಯರು ಸೀರೆಯಲ್ಲಿ ಮಿಂಚುವುದೇ ಹೆಚ್ಚು! ಅಂಥ ನಟಿಯರ ಅಚ್ಚುಮೆಚ್ಚಿನ ಆಯ್ಕೆ ಈ ಸೀಕ್ವೆನ್ಸ್ ಸೀರೆ! ವಿಶೇಷ ಸಲಹೆ ನಿಮ್ಮ ಲುಕ್ಸ್ ಕಂಪ್ಲೀಟ್ ಆಗಬೇಕೇ? ಫುಟ್ ವೇರ್ ಡ್ರೆಸ್ಸಿಗೆ ಖಂಡಿತಾ ಮ್ಯಾಚಿಂಗ್ ಆಗಿರುವಂತಿರಬೇಕು. ಶೂಸ್, ಹೀಲ್, ಫ್ಲಾಟ್ ಸ್ಲಿಪರ್.... ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುತ್ತಿರಿ.