ಇದೀಗ ಕೊರೋನಾ ಮಹಾಮರಿಯ ಕಾಟದಿಂದ ಹಬ್ಬಗಳಲ್ಲಿ ಹಿಂದಿನ ಆ ಕಳೆ ಉಳಿದಿಲ್ಲ. ಸೋಶಿಯಲ್ ಡಿಸ್ಟೆನ್ಸಿಂಗ್‌, ಮಾಸ್ಕ್, ವೈರಸ್‌ ಭಯದಿಂದಾಗಿ ಅತಿಥಿಗಳು ಯಾ ಎಲ್ಲಿಗೂ ಬರುವುದಿಲ್ಲ. ಹಾಗಿರುವಾಗ ಹಬ್ಬಗಳಲ್ಲಿ ಯಾರಿಗಾಗಿ ಅಲಂಕರಿಸಿಕೊಳ್ಳಬೇಕು? ಹೀಗೆ ಯೋಚಿಸುವುದನ್ನು ಬಿಡಿ, ನಿಮಗಾಗಿ ನೀವು ಅಲಂಕರಿಸಿಕೊಂಡು ಆತ್ಮವಿಶ್ವಾಸ ಹಚ್ಚಿಸಿಕೊಳ್ಳಿ. ಹೀಗಾಗಿ ನಿಮ್ಮ ಅಚ್ಚುಮೆಚ್ಚಿನ ಉಡುಗೆ ಧರಿಸಿ, ಲೈಟ್‌ ಮೇಕಪ್‌ ಮಾಡಿ ಬಜೆಟ್‌ ಉಳಿಸಿ! ಪಾರ್ಲರ್‌ಗೆ ಹೋಗುವ ಬದಲು ಮನೆಯಲ್ಲೇ ಮೇಕಪ್‌ ಮಾಡಿಕೊಂಡು ಹಬ್ಬದ ಮಜಾ ಪಡೆಯಿರಿ. ಬನ್ನಿ, ಇದಕ್ಕಾಗಿ ರಾಷ್ಟ್ರೀಯ ಖ್ಯಾತಿವೆತ್ತ ಸೌಂದರ್ಯ ತಜ್ಞೆಯರ ಸಲಹೆ ಪಡೆಯೋಣ.

ಕಾಜಲ್ ಪೆನ್ಸಿಲ್ ಜೆಲ್ ಐಲೈನರ್

10-tips-festive-makeup-ke-4

ಕಾಜಲ್ ನಿಂದ ಕಂಗಳನ್ನು ಹೈಲೈಟ್‌ ಮಾಡಿ, ಅದರ ಸೌಂದರ್ಯ ಹೆಚ್ಚಿಸಿ. ಹೇಳಲಾಗದ ಮಾತನ್ನು ಕಂಗಳೇ ನುಡಿಯುತ್ತವೆ. ಎಲ್ಲಾ ಹೆಂಗಸರ ಮೇಕಪ್‌ ಕಿಟ್‌ ನಲ್ಲಿ ಕಾಜಲ್ ಇದ್ದೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಹಬ್ಬಗಳಲ್ಲಿ ಕಂಗಳ ಹೈಲೈಟ್‌ಗಾಗಿ, ಐಲೈನರ್‌ ಎಳೆಯಲು ಹಿಂಜರಿಯದಿರಿ. ನಿಮ್ಮ ಬಳಿ ಐಲೈನರೇ ಇರುವಾಗ ಇದೇಕೆ ಅಂತೀರಾ? ಕಾಜಲ್ ಈ ಮೋಡಿ ಹೇಗೆ ಮಾಡುತ್ತದೆ ನೋಡಿ.

ಕಾಜಲ್ ಪೆನ್ಸಿಲ‌ನ್ನು ಪೆನ್ಸಿಲ್ ಲೈನರ್‌ ತರಹ ಬಳಸಿ. ಇದರಿಂದ ಬೋಲ್ಡ್ ಲುಕ್ಸ್ ಜೊತೆಗೆ ಲೈನರ್‌ ಹರಡಿಕೊಳ್ಳುವ ಟೆನ್ಶನ್‌ ಸಹ ಇಲ್ಲ. ಹೊಸದಾಗಿ ಮೇಕಪ್‌ ಮಾಡಿಕೊಳ್ಳುವವರಿಗಂತೂ ಇದು ವರದಾನ. ಇದೇ ತರಹ ಕಂಗಳ ಮೇಲ್ಘಾಗದಲ್ಲಿ ಜೆಲ್ ‌ಐಲೈನರ್ ಹಚ್ಚಬೇಕೇ? ನಿಮ್ಮ ಕಾಜಲ್ ಪೆನ್ಸಿಲ‌ನ್ನು ಮೈಕ್ರೋವೇವ್‌ನಲ್ಲಿ 3 ಕ್ಷಣ ಬಿಸಿ ಮಾಡಿ, ಕೂಲ್ ‌ಆದಾಗ ಕಂಗಳ ಮೇಲೆ ತೀಡಿ. ಇದು ಜೆಲ್ ‌ಐಲೈನರ್‌ ಫೀಲ್ ನೀಡುತ್ತದೆ.

ಸಲಹೆ :

ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ ಇದುವೇ ಬೆಸ್ಟ್ ವಿಧಾನ. ಆಗದು ಬಹಳ ಹೊತ್ತು ಬಾಳಿಕೆ ಬರುತ್ತದೆ.

ಐಲೈನರ್‌ನಿಂದ ಬಿಂದಿ ಐ ಲೈನರ್‌ ಕೇವಲ ಕಂಗಳ ಅಂದ ಹೆಚ್ಚಿಸುವುದಲ್ಲದೆ, ಕಲರ್‌ ಫಲ್ ಲೈನರ್‌ನಿಂದ ವಾಟರ್‌ ಪ್ರೂಫ್‌ ಬಿಂದಿ ಸಹ ಇಡಬಹುದು. ಅದೂ ಬೇಕಾದ ಡಿಸೈನಿನಲ್ಲಿ! ದೀರ್ಘ ಬಾಳಿಕೆಯೂ ಬರುತ್ತದೆ.

ಬ್ಯೂಟಿ ಸ್ಪಾಟ್ಸ್ ಕ್ರಿಯೇಟ್ಮಾಡಿ

ಸಲಹೆ :

ಲೈನರ್‌ ಸದಾ ವಾಟರ್‌ ಪ್ರೂಫ್‌ ಇರಲಿ, ಆಗದು ಹರಡದು.

ಪೌಡರ್‌ನಿಂದ ಲೈಟ್‌ನಿಂಗ್‌ ಎಫೆಕ್ಟ್ ಪೌಡರ್‌ ಕೇವಲ ಸುವಾಸನೆ ನೀಡುವುದಲ್ಲದೆ, ಕೆಲವು ಗಂಟೆಗಳಿಗಾಗಿ ನಿಮ್ಮ ಚರ್ಮದ ಟೋನ್‌ ಸುಧಾರಿಸಿ ಲೈಟ್‌ನಿಂಗ್‌ ಎಫೆಕ್ಟ್ ನೀಡಬಲ್ಲದು ಸಾವಿರಾರು ವರ್ಷಗಳಿಂದ ಪೌಡರ್‌ ಕಾಸ್ಮೆಟಿಕ್ಸ್ ನಲ್ಲಿ ಬಳಕೆಯಾಗುತ್ತಿದೆ. ಗೌರವರ್ಣ ಹೊಂದಬೇಕೆಂಬುದೇ ಇದರ ಮೂಲ ಗುರಿ.

ಇತ್ತೀಚೆಗೆ ಇದನ್ನು ಬ್ಲಶ್‌, ಐ ಶ್ಯಾಡೋ, ಫೌಂಡೇಶನ್‌ ಅನೇಕ ಬ್ಯೂಟಿ ಪ್ರಾಡಕ್ಟ್ಸ್ ಗಳಲ್ಲೂ ಬಳಸುತ್ತಾರೆ. ಇದು ಆಯ್ಲಿ ಚರ್ಮದ ತೈಲ ಹೀರಿಕೊಂಡು, ಉತ್ತಮ ಸ್ಕಿನ್‌ ಟೆಕ್ಸ್ ಚರ್‌ ನೀಡಿ, ಟೋನ್‌ ಸಹ ಸುಧಾರಿಸುತ್ತದೆ.

ಇದಕ್ಕಾಗಿ ವಿಶೇಷ ಬಗೆಯ ಪೌಡರ್‌ ಖರೀದಿಸಬೇಕೇ ಎಂದುಕೊಂಡಿರಾ? ಹಾಗೇನಿಲ್ಲ. ನಿಮ್ಮ ಬಳಿ ಇರುವಂಥ ಟಾಲ್ಕಂ ಪೌಡರ್‌ನ್ನೇ ಬಳಸಿ ಇನ್‌ಸ್ಟೆಂಟ್‌ ಗ್ಲೋ  ಲೈಟ್‌ನಿಂಗ್‌ ಎಫೆಕ್ಟ್ ಪಡೆಯಬಹುದು. ಸ್ಮೂತ್‌ ಟೆಕ್ಸ್ಚರ್‌ ಸಿಗುವುದರಿಂದ ಮೇಕಪ್‌ ಮಾಡುವುದು ಸುಲಭವಾಗುತ್ತದೆ.

ಸಲಹೆ :

ಮುಖಕ್ಕೆ ಪೌಡರ್‌ ಹಚ್ಚುವಾಗ ನೇರ ಕೈ ಬಳಸದೆ, ಬಫ್‌ ಬಳಸಿರಿ. ಆಗದು ಒಂದೇ ಸಮನಾಗಿ ಹರಡುತ್ತದೆ.

ಲಿಪ್‌ ಗ್ಲಾಸ್‌ನಿಂದ ಮಲ್ಟಿಮೇಕಪ್‌ ಲಿಪ್‌ ಗ್ಲಾಸ್‌ ತುಟಿಗಳಿಗೆ ಗ್ಲಾಸಿ ಟೆಕ್ಸ್ಚರ್‌ ನೀಡುವುದಷ್ಟೇ ಅಲ್ಲ, ತುಟಿಗಳಿಗೆ ಆರ್ದ್ರತೆ ನೀಡಿ, ಬಣ್ಣ ಸಹ ಒದಗಿಸುತ್ತದೆ. ಅಂದ್ರೆ ನಿಮ್ಮ ಪೌಟ್‌ಗೆ ಶೈನ್‌ ನೀಡುತ್ತದೆ. ಹಾಗೆಯೇ ಇದನ್ನು ಹೈಲೈಟರ್‌ ಆಗಿಯೂ ಬಳಸಬಹುದು. ಇದಕ್ಕಾಗಿ ಬೆರಳ ತುದಿಗೆ ತುಸು ಲಿಪ್‌ ಗ್ಲಾಸ್‌ ಹಾಕಿಕೊಂಡು, ಐಬ್ರೋ ಚೀಕ್‌ ಬೋನ್ಸ್ ಬಳಿ ಹೆಚ್ಚಿ, ಹೈಲೈಟಿಂಗ್‌ ಎಫೆಕ್ಟ್ ಸಹ ನೀಡಬಹುದು. ಆದರೆ ಹೈಶೈನ್‌ ಯಾ ಶಿಮರಿ ಲಿಪ್‌ ಗ್ಲಾಸ್‌ ಮಾತ್ರವೇ ಹೈಲೈಟರ್‌ಗೆ ಬೆಸ್ಟ್ ಎಂದು ನೆನಪಿಡಿ.

ನೀವು ನಿಮ್ಮ ಗ್ಲಾಸ್‌ನ್ನು ಕ್ರಿಂ ಬ್ಲಶ್‌  ಆಗಿಯೂ ಬಳಸಬಹುದು. ಇದಕ್ಕಾಗಿ ಕೆನ್ನೆಗೆ ಗ್ಲಾಸ್‌ ತೀಡಿ, ಆ ಭಾಗದಲ್ಲಿ ಚೆನ್ನಾಗಿ ಹರಡಿಕೊಳ್ಳಿ. ತಕ್ಷಣ ಕಾಂತಿಯುತ ಮುಖ ನಿಮ್ಮದಾಗುತ್ತದೆ. ನಿಮ್ಮದು ಪಿಂಕ್‌, ಪೀಚ್‌ ಗ್ಲಾಸಾಗಿದ್ದರೆ ಅದರಿಂದ ಪಿಂಕಿಶ್‌ ಟಚ್‌ಪಡೆಯಿರಿ. ಇದೇ ತರಹ ಇದನ್ನು ಗ್ಲಾಸಿ ಐಲಿಡ್ಸ್ ಆಗಿಯೂ ಬಳಸಬಹುದು. ಲಿಪ್‌ ಗ್ಲಾಸ್‌ನ ತುಸುವೇ ಟಚ್‌ ಗ್ಲಾಸಿ ಐ ಲುಕ್ ನೀಡುತ್ತದೆ.

ಸಲಹೆ :

ಲಿಪ್‌ ಗ್ಲಾಸ್‌ನ್ನು ನೀವು ಹೈಲೈಟರ್‌ ಅಥವಾ ಬ್ಲಶರ್‌ ಆಗಿ ಬಳಸಿರಿ. ಪ್ರತಿ ಸಲ ತುಸು ಮಾತ್ರವೇ ಬಳಸಬೇಕು, ಹೆಚ್ಚಿನ ಪ್ರಮಾಣ ಖಂಡಿತಾ ಬೇಡ.

ಗ್ಲಾಸಿ ಲಿಪ್ಸ್ಟಿಕ್ಮ್ಯಾಟ್ಫಿನಿಶ್

10-tips-festive-makeup-ke-3

ಯಾವುದೇ ಪಾರ್ಟಿ ಇರಲಿ, ಫೈನ್‌ ಮೇಕಪ್‌ ಟಚ್‌ಗೆ ಲಿಪ್‌ ಸ್ಟಿಕ್‌ ಅನಿವಾರ್ಯ. ಹೆಂಗಸರು ಯಾವ ವಿಧದ ಮೇಕಪ್‌ ಮಾಡದಿದ್ದರೂ, ಲಿಪ್‌ ಸ್ಟಿಕ್‌ ತೀಡುವುದನ್ನು ಬಿಡುವುದಿಲ್ಲ. ಇದು ಹೆಚ್ಚಿನ ಜೀವಂತಿಕೆ ನೀಡುತ್ತದೆ. ಹಿಂದೆಲ್ಲ ಗ್ಲಾಸಿ ಲಿಪ್‌ ಸ್ಟಿಕ್‌ ಗೆ ಹೆಚ್ಚಿನ ಬೇಡಿಕೆ ಇತ್ತು. ಈಗ ಆ ಸ್ಥಾನವನ್ನು ಮ್ಯಾಟ್‌ ಲಿಪ್‌ ಸ್ಟಿಕ್‌ ಪಡೆದಿದೆ. ಇದು ದೀರ್ಘ ಬಾಳಿಕೆ ಹೊಂದಿದೆ, ಅಂಟಂಟಲ್ಲ. ಇದರಿಂದ ಮುಖ ಹೆಚ್ಚು ಹೈಲೈಟಾಗುತ್ತದೆ. ಆದರೆ ಈಗಾಗಲೇ ಕೊಂಡಿರುವ ಗ್ಲಾಸಿ ಲಿಪ್‌ ಸ್ಟಿಕ್‌ನ್ನ ಮ್ಯಾಟ್‌ ಮಾಡುವುದನ್ನು ಹೇಗೆಂಬುದೇ ಸವಾಲು.

ಇದಕ್ಕಾಗಿ ಮೊದಲು ತುಟಿಗಳಿಗೆ ಗ್ಲಾಸಿ ಲಿಪ್‌ ಸ್ಟಿಕ್‌ ತೀಡಿರಿ. ನಂತರ ತುಟಿಗಳ ಮಧ್ಯೆ ಟಿಶ್ಯು ಪೇಪರ್‌ ಇರಿಸಿ ಒತ್ತಿರಿ. ಆಗ ಅದರ ಎಕ್ಸ್ ಟ್ರಾ ಶೈನ್‌ ಹೋಗಿ ಮ್ಯಾಟ್‌ ಲುಕ್‌ ಬೀರುತ್ತದೆ. ಇದರ ಬದಲು ಬೆರಳ ಮೇಲೆ ಪೌಡರ್‌ ಉದುರಿಸಿಕೊಂಡು ಗ್ಲಾಸ್‌ ಲಿಪ್‌ ಮೇಲೆ ಸವರಿಕೊಳ್ಳಿ ನಂತರ ಟಿಶ್ಯು ಪೇಪರ್‌ ಬಳಸಿ ಪೌಡರ್‌ ತೊಲಗಿಸಿ. ಇದರಿಂದ ಗ್ಲಾಸಿ ಟಚ್‌ಹೋಗಿ ಬೋಲ್ಡ್ ಮ್ಯಾಟ್‌ ಫಿನಿಶ್‌ ಲಭಿಸುತ್ತದೆ.

ಸಲಹೆ :

ಮೇಲಿನ ರೀತಿ ಪೌಡರ್‌ ವಿಧಾನ ಅನುಸರಿಸುವಾಗ ಹೆಚ್ಚಿನ ಪ್ರಮಾಣದ ಪೌಡರ್‌ ಖಂಡಿತಾ ಬೇಡ, ಇಲ್ಲದಿದ್ದರೆ ಅಂದಗೇಡಿ ಎನಿಸುವಿರಿ.

ಲಿಪ್‌ ಸ್ಟಿಕ್‌ನಿಂದ ನೇಲ್ ಪೇಂಟ್‌ ಹಬ್ಬದ ಮೇಕಪ್‌ ನಲ್ಲಿ ಉಗುರಿಗೆ ಪಾಲಿಶ್‌ ಹಚ್ಚದವರುಂಟೇ? ಆದರೆ ಹಬ್ಬದ ಗಡಿಬಿಡಿ, ಹೊರಗೆ ಹೋಗಲಾಗದ ಪರಿಸ್ಥಿತಿಗಳಿಂದಾಗಿ, ನೇಲ್‌ ಪಾಲಿಶ್‌ ಇಲ್ಲದಿದ್ದರೇನಂತೆ ಎಂದು ಸಮಾಧಾನ ತಂದುಕೊಳ್ಳುವಿರಿ. ಸ್ವಲ್ಪ ಜಾಗೃತರಾಗಿ ಯೋಚಿಸಿದರೆ ಮನೆಯಲ್ಲೇ ನೇಲ್ ‌ಪೇಂಟ್‌ ರೆಡಿ!

ಬಳಸಿದ ಲಿಪ್‌ ಸ್ಟಿಕ್‌ನ್ನೇ ಬಳಸಿ ಬೇಸರವಾದಾಗ, ಹಳೆಯ ಲಿಪ್‌ ಸ್ಟಿಕ್‌ಗೆ ಬೈಬೈ ಹೇಳುತ್ತೇವೆ. ಆದರೆ ಅದೇ ಹಳೆಯ ಲಿಪ್‌ ಸ್ಟಿಕ್ ಇದೀಗ ನೇಲ್ ಪೇಂಟ್‌ ಆಗಬಾರದೇಕೆ? ಒಂದು ಸಣ್ಣ ಬಟ್ಟಲಿಗೆ ತುಸು ಟ್ರಾನ್ಸ್ ಪರೆಂಟ್‌ ನೇಲ್ ‌ಪೇಂಟ್‌ ಹಾಕಿ, ಅದರಲ್ಲಿ ನಿಮ್ಮ ಹಳೆ ಲಿಪ್‌ ಸ್ಟಿಕ್‌ ಕದಡಿಕೊಳ್ಳಿ. ಇದಕ್ಕೆ ಬ್ರಶ್‌ ಅದ್ದಿ ನೀಟಾಗಿ ನಿಮ್ಮ ಉಗುರಿಗೆ ಬಳಿಯಿರಿ. ಬೇಕಾದರೆ ಗ್ಲಿಟರ್‌ ಆ್ಯಡ್‌ ಮಾಡಿ. ಇದರಿಂದ ನೇಲ್ ‌ಪಾಲಿಶ್‌ ಆಯ್ತು, ಹಳೆಯ ಲಿಪ್‌ ಸ್ಟಿಕ್‌ನ ಮರುಬಳಕೆಯೂ ಆಯ್ತು! ಇದೇ ತರಹ ಐ ಶ್ಯಾಡೋದಿಂದಲೂ ನೇಲ್ ಪೇಂಟ್‌ ಮಾಡಿಕೊಳ್ಳಬಹುದು. ಅದಕ್ಕೂ ಮೇಲಿನ ಇದೇ ಪ್ರಕ್ರಿಯೆ ರಿಪೀಟ್‌ ಮಾಡಿ.

ಸಲಹೆ :

ಈ ರೀತಿ ಲಿಪ್‌ ಸ್ಟಿಕ್‌, ಐ ಶ್ಯಾಡೋದಿಂದ ನೇಲ್ ‌ಪೇಂಟ್‌ ಸಿದ್ಧಪಡಿಸುವಾಗ, ಬ್ರಶ್‌ ನಿಂದ ಆ ಮಿಶ್ರಣವನ್ನು ನೀಟಾಗಿ ಗೊಟಾಯಿಸಿ, ಗಂಟಿಲ್ಲದಂತೆ ಮಾಡಿ. ಇಲ್ಲದಿದ್ದರೆ ನಿಮ್ಮ ನೇಲ್ ‌ಪಾಲಿಶ್‌ ಗಬ್ಬೆದ್ದು ಹೋದೀತು.

ಫೌಂಡೇಶನ್ನಿಂದ ಕನ್ಸೀಲರ್

images11 (1)

ಪ್ರತಿ ಸಲ ಎಲ್ಲರಿಗೂ ವಿಭಿನ್ನ ಲುಕ್ಸ್ ಬೇಕೇಬೇಕು, ಆದರೆ ಅದಕ್ಕಾಗಿ ಎಲ್ಲರೂ ಎಲ್ಲಾ ಪ್ರಾಡಕ್ಟ್ ಕೊಳ್ಳಲಾಗದು, ಅಲ್ಲವೇ? ಹೀಗಾಗಿ ನಿಮ್ಮ ಫೌಂಡೇಶನ್‌ ಕೇವಲ ನಿಮ್ಮ ಮುಖದ ಲೋಪದೋಷ ಮರೆ ಮಾಡುವುದಲ್ಲದೆ, ಲಿಪ್‌ ಸ್ಟಿಕ್‌ ಐಶ್ಯಾಡೋ ಬೆರೆಸಿಕೊಂಡು ಹೈಲೈಟರ್‌ ಆಗಿಯೂ ಬಳಸಿಕೊಳ್ಳಬಹುದು. ಆಗ ಸೆಲೆಬ್ರಿಟಿಯಂಥ ಲುಕ್ಸ್ ಸಿಗುತ್ತದೆ. ಹೈಲೈಟರ್‌ನ ಬಳಕೆಯಿಂದ ಚರ್ಮದ ಹೊಳಪು ತಂತಾನೇ ತೇಲುವುದಲ್ಲದೆ, ಚೀಕ್‌ ಬೋನ್‌, ಮತ್ತಷ್ಟು ಕಳೆಗೊಳ್ಳುತ್ತವೆ. ಜೊತೆಗೆ ಇದನ್ನು ನೀವು ಕನ್ಸೀಲರ್ ಆಗಿಯೂ ಬಳಸಬಹುದು.

ಇದಕ್ಕಾಗಿ ಫೌಂಡೇಶನ್‌ನ್ನು ಥಿಕ್‌ ಆಗಿ ತೀಡಿ, ನಂತರ ಡಬ್‌ ಮಾಡಿ. ಮುಂದಿನ ಪರಿಣಾಮ ನೀವೇ ಗುರುತಿಸಿ!

ಸಲಹೆ :

ಯಾವುದೇ ಹೈಲೈಟರ್‌ ಆರಿಸುವಾಗಲೂ, ಅದು ನಿಮ್ಮ ಸ್ಕಿನ್‌ ಟೋನ್‌ ಸೂಕ್ತವೇ ಎಂದು ಅಗತ್ಯ ಪರೀಕ್ಷಿಸಿ.

ಬ್ಲಶರ್ನಿಂದ ಲಿಪ್ಸ್ಟಿಕ್ಶೇಡ್

MEIS-Makeup-Cheek-Blush-Powder-2-Color-blusher-different-color-Powder-pressed-Foundation-Face-Makeup-Blusher (1)

ಬ್ಲಶರ್‌ನ್ನು ನೀವು ಬ್ಲಶ್‌ ಆನ್‌ ತರಹ ಖಂಡಿತಾ ಬಳಸುವಿರಿ, ಆಗ ಕೆನ್ನೆ ಕೆಂಪು ಕೆಂಪಾಗುತ್ತದೆ. ಆದರೆ ನೀವು ಲೈಟ್‌ ಮೇಕಪ್ ಬಯಸಿದಾಗ, ಇದನ್ನೇ ನೀವು ಐ ಶ್ಯಾಡೋ ಆಗಿಯೂ ಬಳಸಬಹುದು. ನಿಮಗೆ ಬಿಲ್‌ಕುಲ್ ‌ಲಿಪ್‌ ಸ್ಟಿಕ್‌ ಬೇಡ ಎನಿಸಿದರೆ, ಮ್ಯಾಟ್‌ಲುಕ್‌ ಬಯಸಿದರೆ,  ಆಗ ಮ್ಯಾಟ್‌ ಬ್ಲಶರ್‌ನ್ನು ನಿಮ್ಮ ತುಟಿಗಳಿಗೆ ತೀಡಿ. ಇದು ಬಹಳ ಲೈಟ್‌ ಲಿಪ್‌ಸ್ಟಿಕ್‌ ಆಗುತ್ತದೆ. ಇಷ್ಟು ಮಾತ್ರವಲ್ಲ, ನಿಮ್ಮ ಬಳಿ ಸರಿಯಾದ ಮ್ಯಾಚಿಂಗ್‌ ಲಿಪ್‌ ಸ್ಟಿಕ್‌ ಶೇಡ್‌ ಇಲ್ಲದಿದ್ದರೆ, ನೀವು ಯಾವುದೇ ಲಿಪ್‌ ಸ್ಟಿಕ್‌ ಬಳಸಿದರೂ ಸರಿ, ಅದರ ಮೇಲೆ ಇನ್ನೊಂದು ಶೇಡ್‌ ಬ್ಲಶರ್‌ ತೀಡಿರಿ. ಇದು ಬೇರೊಂದು ಲಿಪ್‌ ಸ್ಟಿಕ್‌ ಶೇಡ್‌ ಆಗಿ ಹೈಲೈಟ್‌ ಆಗುತ್ತದೆ. ನಿಮ್ಮದು ಗ್ಲಾಸಿ ಬ್ಲಶರ್‌ ಆಗಿದ್ದರೆ, ನೀವು ಮ್ಯಾಟ್‌ ಲಿಪ್‌ ಸ್ಟಿಕ್‌ಗೆ ಗ್ಲಾಸಿ ಟಚ್‌ ನೀಡಬಹುದು. ನೀವು ಕಂಗಳ ಮೇಲೂ ಬ್ಲಶರ್‌ ತೀಡಿ ಲೈಟ್‌ ಮೇಕಪ್‌ ಆಗಿ ಇದನ್ನೇ ಬಳಸಿಕೊಳ್ಳಬಹುದು.

ಸಲಹೆ :

10-tips-festive-makeup-ke-1

 

ತುಟಿಗೆ ತೀಡಿದ ಲಿಪ್‌ ಸ್ಟಿಕ್‌ ಬದಲಿಸಬೇಕೇ? ಇದಕ್ಕಾಗಿ ಬೇರೆ ವಿಭಿನ್ನ ಬಣ್ಣದ ಬ್ಲಶರ್‌ ಬಳಸಿಕೊಳ್ಳಿ. ಐಶ್ಯಾಡೋದಿಂದ ಬ್ರೋ ಕಲರಿಂಗ್‌ ನಿಮ್ಮ ಐ ಶ್ಯಾಡೋನ್ನು ಬಹು ವಿಧದಲ್ಲಿ ಬಳಸಬಹುದು. ನೀವು ಪಿಂಕಿಶ್‌, ರೆಡ್ಡಿಶ್‌ ಐ ಶ್ಯಾಡೋವನ್ನು ತುಟಿಗಳಿಗೆ ತೀಡಿ, ಅದನ್ನು ಚಂದಗೊಳಿಸಿ. ಜೊತೆಗೆ ಬ್ಲಶರ್‌ ಆಗಿಯೂ ಇದನ್ನೇ ಬಳಸಬಹುದು. ನಿಮ್ಮ ಬಳಿ ಗೋಲ್ಡನ್‌, ಸಿಲ್ವರ್‌, ಗ್ಲಾಸಿ, ಬ್ರಾಂಝ್ ಬಣ್ಣಗಳ ಐ ಶ್ಯಾಡೋ ಇದ್ದರೆ, ಅದನ್ನು ಲಿಪ್‌ ಗ್ಲಾಸ್‌ಆಗಿಯೂ ಬಳಸಬಹುದು. ಚೀಕ್‌ ಬೋನ್ಸ್ ಹೈಲೈಟ್‌ ಗೊಳಿಸಲು ಸಹ ಇದನ್ನೇ ಬಳಸಿಕೊಳ್ಳಿ. ನೇಲ್ ‌ಪಾಲಿಶ್‌ ಆಗಿಯೂ ಇದನ್ನು ಬಳಸಿ ಅದಕ್ಕೆ ಗ್ಲಾಸಿ, ಶಿಮರಿ ಲುಕ್‌ ನೀಡಬಹುದು. ಆದರೆ ಇದು ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ.

ನಿಮ್ಮ ಬಳಿ ಬ್ರೌನ್‌, ಬ್ಲ್ಯಾಕ್‌ ಐ ಶ್ಯಾಡೋಗಳಿದ್ದರೆ, ಎರಡನ್ನೂ ಬೆರೆಸಿ, ನಿಮ್ಮ ಐ ಬ್ರೋಸ್‌ಗೆ ಹಚ್ಚಿರಿ. ಇದು ಮುಖದ ಫೀಚರ್ಸ್‌ಬದಲಿಸಲಿಕ್ಕೂ ಸಹ ಹೈಲೈಟಿಂಗ್‌ ಯಾ ಕಂಟ್ರೋಲಿಂಗ್‌ ಮಾಡುತ್ತದೆ. ನಿಮ್ಮ ಕೂದಲು ನೆರೆಗಟ್ಟುತ್ತಿದ್ದರೆ, ಅದನ್ನು ಕಲರಿಂಗ್‌ಮಾಡಲು ಸಮಯವಿಲ್ಲದಿದ್ದರೆ, ಟೆಂಪರರಿಯಾಗಿ ಐ ಶ್ಯಾಡೋ ಬಳಸಿ ಮೇಲಿನ ಭಾಗಕ್ಕೆ ಬಣ್ಣ ತೀಡಬಹುದು.

ಸಲಹೆ :

ಹೈಲೈಟ್‌ ಮಾಡಲು ಐ ಶ್ಯಾಡೋದ ಅಲ್ಪ ಪ್ರಮಾಣವೇ ಸಾಕು. ಮಸ್ಕರಾದಿಂದ ಸುಂದರ ಐ ಬ್ರೋಸ್‌ ಮಸ್ಕರಾ ಬಳಸುವುದೇ ಐ ಲ್ಯಾಶೆಸ್‌ನ್ನು ದೊಡ್ಡದಾಗಿ ತೋರಿಸಲು. ಆದರೆ ನೀವು ಇದನ್ನು ಐ ಬ್ರೋಸ್‌ನ ಸುಧಾರಣೆಗಾಗಿಯೂ ಬಳಸಬಹುದು. ನಿಮ್ಮದು ಟ್ರಾನ್ಸ್ ಪರೆಂಟ್‌ ಮಸ್ಕರಾ ಆಗಿದ್ದರೆ, ನೀವು ಇದನ್ನು ಡಾರ್ಕ್‌ ಐ ಬ್ರೋಸ್‌ ಗಾಗಿ ಬಳಸಿಕೊಳ್ಳಿ. ಒಂದು ವೇಳೆ ನಿಮ್ಮದು ಲೈಟ್‌ ಐ ಬ್ರೋಸ್‌ ಆಗಿದ್ದರೆ, ನೀವು ಅದರ ಮೇಲೆ ಬ್ರೌನ್‌/ ಬ್ಲ್ಯಾಕ್‌ ಮಸ್ಕರಾ ತೀಡಿ ಕಲರ್‌ಗೊಳಿಸಬಹುದು. ನಿಮ್ಮದು ಬಿಳಿ ಕೂದಲಾಗಿದೆಯೇ? ದಿಢೀರ್‌ ಪಾರ್ಟಿಗೆ ಹೊರಟಿರಾ? ಆಗ ಕೂದಲಿನ ಬುಡಭಾಗದಿಂದ ಈ ಮಸ್ಕರಾ ಬ್ರಶ್‌ನಿಂದ ಕಲರ್‌ ಮಾಡಬಹುದು.

ಸಲಹೆ :

ಈ ರೀತಿ ಕೂದಲನ್ನು ಎಂದೋ ಅವಸರಕ್ಕೆ ಒಮ್ಮೆ ಮಾತ್ರ ಕಲರ್‌ ಮಾಡಬೇಕಷ್ಟೆ, ಮತ್ತೆ ಮತ್ತೆ ಅಲ್ಲ.

ಪಾರ್ವತಿ ಭಟ್

ಬಜೆಟ್ಗೆ ತಕ್ಕಂತೆ ಮೇಕಪ್ಕಿಟ್ಲೈಟ್ಆಗಿರಲಿ

DLP_5308

ನಾವು ಮಾರ್ಕೆಟ್‌ನಲ್ಲಿ ಏನೇ ಕಾಸ್ಮೆಟಿಕ್ಸ್ ಕೊಂಡರೂ, ಅದು ದುಬಾರಿಯೇ ಆಗಿರುತ್ತದೆ. ಈ ಪ್ರಾಡಕ್ಟ್ಸ್ ಕುರಿತು ಹೆಚ್ಚಿನ ತಿಳಿವಳಿಕೆ ಇರದ ಕಾರಣ, ನಾವು ಚರ್ಮ ಸೌಂದರ್ಯ ಹೆಚ್ಚಿಸು ಎಲ್ಲಾ ಸಾಧನ ಖರೀದಿಸಿಬಿಡುತ್ತೇವೆ. ಆದರೆ ಇಂಥ ಉತ್ಪನ್ನಗಳ ಮಲ್ಟಿಪರ್ಪಸ್‌ ಯೂಸ್‌ ಕುರಿತು ಸೂಕ್ತ ಮಾಹಿತಿ ಇದ್ದರೆ, ಕೇವಲ 2-3 ಪ್ರಾಡಕ್ಟ್ಸ್ ಖರೀದಿಸಿಯೇ ಬೇಕಾದಂತೆ ಮೇಕಪ್ ಮಾಡಿಕೊಳ್ಳಬಹುದು. ಹೀಗಾಗಿ ಇವು ನಿಮಗೆ ದುಬಾರಿ ಖರ್ಚು ಎನಿಸುವುದಿಲ್ಲ. ಪಾರ್ಲರ್‌ಗೆ ಹೋಗದೆ ಮನೆಯಲ್ಲೋ ಅಥವಾ ಫಂಕ್ಷನ್‌ಗೆ ಹೊರಗೆ ಹೋಗಿದ್ದಾಗಲೂ ಸಹ ನೀಟಾಗಿ ಮೇಕಪ್‌ ಮಾಡಿಕೊಳ್ಳಬಹುದು. ಹೆಚ್ಚಿನ ಹಣ ಖರ್ಚು ಮಾಡದೆ ಮಿತವ್ಯಯ ಮಾಡಬಹುದು.

ನಿಮಗಾಗಿ ನೀವು ಸಿಂಗರಿಸಿಕೊಳ್ಳಿ

ಕೊರೋನಾ ಕಾರಣ ಹಿಂದಿನ ವರ್ಷಗಳ ಹಬ್ಬದ ಸಡಗರ, ಸಂಭ್ರಮ ಇರದೇ ಇದ್ದರೂ ಸಹ, ಹಿಂದಿನಷ್ಟು ಹೆವಿ ಶಾಪಿಂಗ್‌ಮಾಡಲಾಗದಿದ್ದರೂ, ಅತಿಥಿಗಳ ಓಡಾಟ ಅತಿ ಕನಿಷ್ಠ ಎನ್ನಬಹುದು. ಹೀಗಿರುವಾಗ ಅಲಂಕಾರ ಬೇಡ ಎನಿಸಬಹುದು. ಆದರೆ ಈ ಸಲ ಇದೇನೂ ಇಲ್ಲದ ಕಾರಣ ಯಾರಿಗಾಗಿ ಅಲಂಕರಿಸಿಕೊಳ್ಳಬೇಕು ಎಂದು ಹಬ್ಬಗಳಲ್ಲಿ ಡಲ್ ಆಗಿರಬೇಡಿ. ಆದ್ದರಿಂದ ಹಿಂದಿನ ತರಹವೇ ಗೃಹಾಲಂಕಾರ, ನಿಮ್ಮ ಉಡುಗೆತೊಡುಗೆ, ಮೇಕಪ್‌ ಜೋರಾಗಿರಲಿ. ಯಾರೂ ಬರದಿದ್ದರೇನಂತೆ, ಸೆಲ್ಛಿ ಫೋಟೋ ತೆಗೆದು FB‌ಗೆ ಅಪ್‌ ಲೋಡ್‌ ಮಾಡಬಹುದಲ್ಲವೇ, ಎಂದು ಸಕಾರಾತ್ಮಾಕಗಿ ಯೋಚಿಸಿ. ಇದರಿಂದ ನಮ್ಮ ಮನೆಯಲ್ಲಿ ಹಬ್ಬ ಹೇಗೆ ನಡೆಯಿತು ಎಂದು FB‌ನಲ್ಲಿ ಎಲ್ಲರೊಂದಿಗೆ ಹಂಚಿಕೊಂಡ ಹಾಗೂ ಆಗುತ್ತದೆ. ಇದರಿಂದ ಬೇರೆಯವರಿಗೂ ಮುಂದಿನ ಹಬ್ಬ ಆಚರಿಸಲು ಹೆಚ್ಚಿನ ಉತ್ಸಾಹ ಮೂಡುತ್ತದೆ.

ಕಾಸ್ಮೆಟಿಕ್ಸ್ ಪ್ರಾಡಕ್ಟ್ಸ್ ಜೊತೆ ಪ್ರಯೋಗ ನಡೆಸಿ ಯಾವ ರೀತಿ ಜೀವನದಲ್ಲಿ ನಾನಾ ಪ್ರಯೋಗಗಳಿಂದ ಯಶಸ್ಸು ಸಿಗುತ್ತದೋ, ಅದೇ ರೀತಿ ನೀವು ನಿಮ್ಮ ಲುಕ್ಸ್ ಸುಧಾರಿಸ ಬಯಸಿದರೆ, ನೀವು ನಿಮ್ಮ ಕಾಸ್ಮೆಟಿಕ್ಸ್ ಪ್ರಾಡಕ್ಟ್ಸ್ ಜೊತೆ ಪ್ರಯೋಗ ನಡೆಸಿ. ಇದರಿಂದ ನಿಮ್ಮ ಒಂದೇ ತೆರನಾದ ಲುಕ್‌ ಬದಲಾಗುತ್ತದೆ! ಖಂಡಿತಾ ಇದರಿಂದ ನಿಮಗೆ ಹೊಸ ಬೆಟರ್‌ ಲುಕ್ಸ್ ಲಭಿಸುತ್ತದೆ. ಆ ಕುರಿತಾಗಿ ಯೋಚಿಸಿರದ ನೀವು, ಪಾರ್ಟಿಯಲ್ಲಿ ಇತರರು ಹೊಗಳಿದಾಗ ಸಂಭ್ರಮಿಸುವಿರಿ. ಉದಾ : ಲಿಪ್‌ ಸ್ಟಿಕ್‌ ನಿಂದ ಹೈಲೈಟರ್‌, ಕಂಗಳ ಮೇಲ್ಭಾಗದಲ್ಲಿ ಶೈನ್‌ ತನ್ನಿ. ಕಾಜ್‌ ನಿಂದ ಲೈಟರ್‌ ತೀಡಿರಿ…. ಹೀಗೆ ವಿವಿಧ ಪ್ರಯೋಗಗಳನ್ನು ಮಾಡಿ ನೋಡಿ. ಒಂದು ಪ್ರಯೋಗ ಮಾಡುವಾಗ ಮತ್ತೊಂದು ಹೊಸತರ ಐಡಿಯಾ ತಂತಾನೇ ಹೊಳೆಯುತ್ತದೆ. ಹೀಗೆ ಹಬ್ಬಗಳಲ್ಲಿ ಸಿಂಗರಿಸಿಕೊಂಡು ಎಲ್ಲರಿಂದ ಪ್ರಶಂಸೆ ಪಡೆಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ