ಏನೇ ಇರಲಿ, ಹೆಣ್ಣು ಗೌರವರ್ಣ ಹೊಂದಿದ್ದರೆ ಸೌಂದರ್ಯವತಿ ಎನಿಸುವಲ್ಲಿ ಒಂದು ಕೈ ಮಿಗಿಲು ಎಂಬುದು ಅನಾದಿ ಕಾಲದಿಂದಲೂ ವಿಶ್ವಾದ್ಯಂತ ಬೆಳೆದು ಬಂದಿರುವ ನಂಬಿಕೆ. ಆದರೆ ಇದು ಹೆಣ್ಣಿನ  ವ್ಯಕ್ತಿತ್ವದ ಒಂದು ಮುಖ ಮಾತ್ರ. ಇಂದಿನ ಕಾಲದಲ್ಲಿ ಗೌರವರ್ಣಕ್ಕಿಂತ ಹೆಚ್ಚಾಗಿ ಫ್ಯಾಷನ್‌ ಸೆನ್ಸ್, ಸ್ಮಾರ್ಟ್‌ ನೆಸ್‌, ಕಾನ್ಛಿಡೆನ್ಸ್, ಮೇಕಪ್‌, ಓವರಾಲ್ ‌ಆ್ಯಟಿಟ್ಯೂಡ್ ಇತ್ಯಾದಿಗಳನ್ನೇ ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ನಿಮ್ಮ ಸ್ಕಿನ್‌ ಟೋನ್‌ ಡಸ್ಕಿ ಆಗಿದ್ದರೆ, ನಿಮ್ಮ ಇತರ ರೂಪಗಳು ಹೊಳೆಯುವಂತೆ ಮಾಡಿ. ನಿಮ್ಮದು ತುಸು ಕಪ್ಪು ಬಣ್ಣ ಎಂದು ನಿರಾಶರಾಗಬೇಡಿ. ನಿಮ್ಮ ಪರ್ಸನಾಲಿಟಿ ಈ ರೀತಿ ಮಿರಿಮಿರಿ ಮಿಂಚಬೇಕೆಂದು ನಿರ್ಧರಿಸಿ:

ಬೋಲ್ಡ್ ಆಗಿರಿ

ನಿಮ್ಮ ವ್ಯಕ್ತಿತ್ವದಲ್ಲಿ ಸದಾ ಬೋಲ್ಡ್ ನೆಸ್‌ಸ್ಮಾರ್ಟ್‌ನೆಸ್‌ ಇರುವಂತೆ ನೋಡಿಕೊಳ್ಳಿ. ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯದಿರಿ, ಉತ್ಸಾಹದಿಂದ ಪೈಪೋಟಿ ಎದುರಿಸಿ. ಯಾವುದೇ ಚಾಲೆಂಜ್‌ ಇರಲಿ, ಕೂಡಲೇ ಸ್ವೀಕರಿಸಿ. ಒಂದು ಕೋಣೆಯ ಮೂಲೆಯಲ್ಲಿ ಅಳುತ್ತಾ ಮುದುರಿ ಕೂರುವ ಕರಿ ಹುಡುಗಿ ಎನಿಸಿಕೊಳ್ಳುವ ಬದಲು, ಸದಾ ಮುನ್ನುಗ್ಗುವ ಲೀಡರ್‌ ಗುಣ ಬೆಳೆಸಿಕೊಳ್ಳಿ. ಯಾರೂ ತಾವಾಗಿ ನಿಮ್ಮನ್ನು ಮುಂದೆ ಬರಲು ಆಹ್ವಾನಿಸುವುದಿಲ್ಲ, ಹೀಗಾಗಿ ನೀವಾಗಿಯೇ ಅವಕಾಶ ಬಳಸಿಕೊಂಡು ಮುನ್ನುಗ್ಗುವಂತಿರಬೇಕು, ಪ್ರತಿಯೊಂದು ಮಹತ್ವಪೂರ್ಣ ಕೆಲಸಕ್ಕೂ ಜನ ನಿಮ್ಮತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾದರೆ, ನೀವು 50% ಯುದ್ಧ ಗೆದ್ದಂತೆ!

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ

ಯಾರೊಂದಿಗೇ ಮಾತನಾಡಲಿ, ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಅತ್ತ ಇತ್ತ ಎತ್ತಲೋ ನೋಡುತ್ತಾ, ಮಾತನಾಡುವವರನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ದೃಷ್ಟಿ ತಗ್ಗಿಸಿ ಮಾತನಾಡುವವರು ಸದಾ ಹಿಂದುಳಿಯುತ್ತಾರೆ. ಹೀಗಾಗಿ ನೀವು ಆತ್ಮವಿಶ್ವಾಸದಿಂದ ಎದುರಿಗಿರುವವರನ್ನು ಮಾತನಾಡಿಸಿ.

ಇತರರೊಂದಿಗೆ ಹೋಲಿಸಿಕೊಳ್ಳಬೇಡಿ

ಬೇರೆಯವರ ಜೊತೆ ಸದಾ ನಿಮ್ಮನ್ನು ಹೋಲಿಸಿ ನೋಡಿಕೊಳ್ಳುತ್ತಿದ್ದರೆ, ನಿಮ್ಮ ಆತ್ಮವಿಶ್ವಾಸ ಸಹಜವಾಗಿ ಕುಗ್ಗುತ್ತದೆ. ನೀವು ಸದಾ ನಿಮ್ಮ + ಪಾಯಿಂಟ್ಸ್ ಬಗ್ಗೆ ಯೋಚಿಸಬೇಕೇ ಹೊರತು, ನಿಮ್ಮ ಎದುರಿಗಿರುವವರು ನಿಮಗಿಂತ ಎಷ್ಟು ಬೆಟರ್ ಅಂದುಕೊಳ್ಳುತ್ತಿರಬೇಡಿ. ನಿಮ್ಮನ್ನು ನೀವು ದುರ್ಬಲರು ಅಂತ ಅಂದುಕೊಳ್ಳಲೇಬೇಡಿ.

ಭಯದ ಮೇಲೆ ಜಯ

ಯಾವ ವಿಷಯದಿಂದ ನಮಗೆ ಭಯ ಎನಿಸುತ್ತದೋ ಅದನ್ನು ಮತ್ತೆ ಮತ್ತೆ ಎದುರಿಸುತ್ತಾ ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕು. ಅದನ್ನು ಕಂಡು ದೂರದಿಂದಲೇ ನಮಸ್ಕಾರ ಹಾಕಿ ಓಡಿಹೋಗಬಾರದು. ಇನ್ನೂ ಕೆಲವರಿಗೆ ಸಭಾಕಂಪನದ ಭಯ ತಪ್ಪದು. ಕೆಲವರಿಗೆ ಈಜು, ಅತಿ ಎತ್ತರದ ಕಟ್ಟಡದ ಮಹಡಿ ಮೇಲೆ ನಿಲ್ಲುವುದು, ಕತ್ತಲೆಯಲ್ಲಿ ಇರುವುದು, ಒಬ್ಬಂಟಿ ಪ್ರಯಾಣ.... ಹೀಗೆ ಅನೇಕ ಬಗೆಯ ಭಯಗಳಿರುತ್ತವೆ. ಹೀಗಾಗಿ ನೀವು ಇಂಥ ಭಯದ ವಿರುದ್ಧ ಗೆಲ್ಲಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಆಗ ನೀವು ಹೆಚ್ಚು ಬೋಲ್ಡ್ ಕಾನ್ಛಿಡೆಂಟ್‌ ಲುಕ್ಸ್ ಗಳಿಸುವಿರಿ.

ನಿಮ್ಮ ಸ್ಟ್ರೆಂತ್ನತ್ತ ಫೋಕಸ್

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದೋ ಒಂದು ಕೆಲಸದಲ್ಲಿ ನಿಪುಣರಾಗಿರುತ್ತಾರೆ. ಯಾರೋ ಅಂದ ಚಂದ, ಸಂಗೀತ, ನೃತ್ಯ, ಕಲೆ, ಅಡುಗೆ, ಕುಶಲ ಕೆಲಸ....  ಹೀಗೆ ನಾನಾ ರಂಗಗಳಲ್ಲಿ ತಮ್ಮ ಹಿರಿಮೆ ಸಾಧಿಸಿರುತ್ತಾರೆ. ನಿಮ್ಮ ಬಣ್ಣ ಕಪ್ಪಾಗಿದ್ದ ಮಾತ್ರಕ್ಕೆ ನೀವು ಈ ಮೇಲಿನ ವಿಷಯಗಳಲ್ಲಿ ಮಿಂಚಬಾರದು ಎಂದೇನಿಲ್ಲ. ಹೀಗಾಗಿ ಯಾವ ಒಂದು ವಿಷಯದಲ್ಲಿ ನಿಮಗೆ ಹೆಚ್ಚಿನ ನೈಪುಣ್ಯತೆ ಇದೆಯೋ, ಅದನ್ನು ನಾಲ್ವರು ಗುರುತಿಸಿ ಹೊಗಳುವಂತೆ ನಡೆದುಕೊಳ್ಳಿ. ನಿಮ್ಮಲ್ಲಿರುವ ಈ ಜಾಣ್ಮೆ ಬೇರೆಯವರಲ್ಲಿ ಇಲ್ಲದಿರಬಹುದು, ಆದ್ದರಿಂದ ಅದಕ್ಕೆ ಹೆಚ್ಚಿನ ಮೆರುಗು ಕೊಡಿ. ನಿಮ್ಮ ಸ್ಮಾರ್ಟ್‌ನೆಸ್‌, ಸಾಮರ್ಥ್ಯ, ಉತ್ತಮ ನಡವಳಿಕೆಯಿಂದ ಬೇರೆಯವರ ದೃಷ್ಟಿಯಲ್ಲಿ ಮೇಲೇರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ